ಫ್ಯಾಕ್ಟ್‌ ಚೆಕ್‌: ನಟಿ ಸಾಯಿ ಪಲ್ಲವಿ, ನಿರ್ದೆಶಕ ರಾಜ್‌ಕುಮಾರ್ ಪೆರಿಯಾಸಾಮಿ ಅವರನ್ನು ವಿವಾಹವಾಗಿಲ್ಲ

ವೈರಲ್‌ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕತ್ತರಿಸಿ, ಸಾಯಿಪಲ್ಲವಿ ಮತ್ತು ರಾಜ್‌ಕುಮಾರ್‍‌ ಪರಿಯಾಸಾಮಿ ಪದವಿಯಾಗಿದ್ದಾರೆಂದು ಬಿಂಬಿಸಲು ಯತ್ನಿಸಲಾಗಿದೆ.

Update: 2023-09-27 13:12 GMT

ನಟಿ ಸಾಯಿ ಪಲ್ಲವಿ ಮತ್ತು ನಿರ್ದೇಶಕ ರಾಜ್‌ಕುಮಾರ್‍‌ ಪೆರಿಯಾಸಾಮಿ ಜೊತೆಗೆ ನಿಂತಿರುವ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಉಡುಪಿನಲ್ಲಿರುವ ಈ ಇಬ್ಬರೂ ಹಾರತೊಟ್ಟು ನಿಂತಿದ್ದಾರೆ. ಫೇಸ್‌ಬುಕ್‌ ಮತ್ತು ಎಕ್ಸ್‌ (ಈ ಹಿಂದೆ ಟ್ವಿಟರ್‍‌) ನಲ್ಲಿ ಹಲವರು ನಟಿ ಮತ್ತು ನಿರ್ದೇಶಕ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ಪ್ರತಿಪಾದಿಸಿವೆ.

Full View



ಕೆಲವು ಪೋಸ್ಟ್‌ಗಳಲ್ಲಿ," ಕಡೆಗೂ ಮದುವೆಯಾದರು ಮತ್ತು ಪ್ರೀತಿಗೆ ಬಣ್ಣವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ತಲೆಬಾಗುವೆವು ನಿಮಗೆ ಸಾಯಿ ಪಲ್ಲವಿ" ಎಂದು ಬರೆಯಲಾಗಿದೆ.

ಫ್ಯಾಕ್ಟ್‌ಚೆಕ್‌

ಈ ಚಿತ್ರವನ್ನು ಎಸ್‌ಕೆ 21 ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದ್ದು, ವಿವಾಹದ ಸಂದರ್ಭದಲ್ಲಿ ಸೆರೆಹಿಡಿದಿದ್ದು ಎಂಬುದು ತಪ್ಪು ಪ್ರತಿಪಾದನೆ.

ಶಿವಕಾರ್ತಿಕೇಯನ್ ನಾಯಕನಟರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಎಸ್‌ಕೆ 21 ಎಂದು ಹೆಸರಿಡಲಾಗಿದ್ದು, ಮುಹೂರ್ತದ ಸಂದರ್ಭದಲ್ಲಿ ನಟಿ ಸಾಯಿಪಲ್ಲವಿ, ನಿರ್ದೇಶಕ ರಾಜ್‌ಕುಮಾರ್‍‌ ಫೋಟೋ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಕ್ಲಾಪ್‌ಬೋರ್ಡ್‌ ಹಿಡಿದು ನಿಂತಿರುವುದು ಮೂಲ ಫೋಟೋದಲ್ಲಿ ಕಾಣಬಹುದು.


 



ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ, ಮೇ 9ರಂದು ರಾಜ್‌ಕುಮಾರ್‍‌ ಅವರು ಮುಹೂರ್ತದ ಸಂದರ್ಭದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿ ಸಾಯಿಪಲ್ಲವಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು. ಆ ಪೋಸ್ಟ್‌ನಲ್ಲಿ, " ಪ್ರೀತಿಯ ಸಾಯಿಪಲ್ಲವಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬ ಅದ್ಭುತ ವ್ಯಕ್ತಿ ಮತ್ತು ಉತ್ತಮವಾದುದೆಲ್ಲವೂ ಸದಾ ನಿಮಗೆ ದೊರೆಯಲಿದೆ ಎಂದು ಆ ದೇವರು ಹರಸಲಿ. ನೀವು ನಮ್ಮ ಪಕ್ಕದಲ್ಲಿ ನಿಂತಿದ್ದು ನನ್ನ ಭಾಗ್ಯವೆಂದು ಭಾವಿಸುವೆ. ನನ್ನೊಂದಿಗೆ ಇದ್ದುದ್ದಕ್ಕೆ ಧನ್ಯವಾದಗಳು"

ಈ ವೈರಲ್‌ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಕತ್ತರಿಸಿ, ಸಾಯಿಪಲ್ಲವಿ ಮತ್ತು ರಾಜ್‌ಕುಮಾರ್‍‌ ಪರಿಯಾಸಾಮಿ ಪದವಿಯಾಗಿದ್ದಾರೆಂದು ಬಿಂಬಿಸಲು ಯತ್ನಿಸಲಾಗಿದೆ. ಹಾಗಾಗಿ ಸಾಯಿ ಪಲ್ಲವಿ ಮತ್ತು ರಾಜ್‌ಕುಮಾರ್ ಮದುವೆಯಾಗಿದ್ದಾರೆ ಎಂಬುದು ಸುಳ್ಳು. 

Claim :  Actress Sai Pallavi and director Rajkumar Periyasamy are married
Claimed By :  Social Media Users
Fact Check :  False
Tags:    

Similar News