ಫ್ಯಾಕ್ಟ್‌ಚೆಕ್: ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆಯ ಬಳಿಕ ಸೈನಿಕನ ಕುಟುಂಬ ಸ್ವಾಗತಿಸಿದರು ಎಂದು 2023ರ ವಿಡಿಯೋವನ್ನು ಹಂಚಿಕೆ
ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆಯ ಬಳಿಕ ಸೈನಿಕನ ಕುಟುಂಬ ಸ್ವಾಗತಿಸಿದರು ಎಂದು 2023ರ ವಿಡಿಯೋವನ್ನು ಹಂಚಿಕೆ
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಪಾಕಿಸ್ತಾನದ ಎದೆ ನಡುಗಿಸಿತ್ತು. ಸೇನಾ ದಾಳಿಗೆ ತತ್ತರಿಸಿ ಭಾರತದ ಮುಂದೆ ಮಂಡಿಯೂರಿ ಕದನ ವಿರಾಮ ಕೋರಿತ್ತು. ಭಾರತ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆಪರೇಷನ್ ಸಿಂಧೂರ್ ನಂತರ ಸೈನಿಕನ ಭವ್ಯ ಸ್ವಾಗತ ಕೋರಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಭಾರತೀಯ ಸೇನೆಯ ಒಬ್ಬ ಸಿಬ್ಬಂದಿಯನ್ನು ಅವರ ಕುಟುಂಬವು ರೆಡ್ ಕಾರ್ಪೆಟ್ ಹಾಸಿ, ಸಲಾಂ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸುತ್ತಿರುವ ದೃಶ್ಯವನ್ನು ನಾವಿಲ್ಲಿ ನೋಡಬಹುದು.
ಮೇ 27, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ʼThe Proud Family Welcoming The Sapoot on his return Home after OPERATION SINDOORʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ, ಸೈನಿಕನು ತನ್ನ ಮನೆಗೆ ಬರುವಾಗ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು, ಅವರಿಗೆ ನಮಸ್ಕರಿಸಿ ಅಪ್ಪಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೊವನ್ನು ಹಂಚಿಕೊಂಡ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ಆಪರೇಷನ್ ಸಿಂಧೂರ್ ನಂತರ ಸೈನಿಕನ ಭವ್ಯ ಸ್ವಾಗತವನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 29, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼక్షేమంగా యుద్ధం నుంచి ఇంటికి వచ్చిన జవాన్ కి ఘన స్వాగతం #india #army #crpfʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಆಪರೇಶನ್ ಸಿಂಧೂರ್ ಮುಗಿಸಿ ಹಿಂತಿರುಗಿ ಮನೆಗೆ ಬಂದಾಗ ಸಂತಸ ಪಟ್ಟ ಕುಟುಂಬಸ್ಥರುʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
24, ಮೇ 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ʼಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆಯ ನಂತರ ಮನೆಗೆ ಮರಳಿದ ಸೈನಿಕ, ಅವನ ಕುಟುಂಬ ಅವನನ್ನು ಹೇಗೆ ಸ್ವಾಗತಿಸಿತು ಎಂಬುದನ್ನು ನೋಡಿ. ಜೈ ಹಿಂದ್ ಜೈ ಭಾರತ್ 🇮🇳ʼ ಎಂಬ ಶೀರ್ಷಿಕೆಯೊಂದಿಗೆ ಭಾರತೀಯ ಸೇನೆಯ ಒಬ್ಬ ಸಿಬ್ಬಂದಿಯನ್ನು ಅವರ ಕುಟುಂಬವು ರೆಡ್ ಕಾರ್ಪೆಟ್ ಹಾಸಿ, ಸಲಾಂ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸುತ್ತಿರುವ ದೃಶ್ಯವನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 24, 2025ರಂದು ಎಕ್ಸ್ ಖಾತೆದಾರರೊಬ್ಬರು ʼऑपरेशन सिंदूर से लौटकर जब फ़ौजी अपने घर पहुंचा तो देखिए किस तरह परिवार व गाँव के लोगों ने किया स्वागत| जय हिंद जय भारत ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಆಪರೇಷನ್ ಸಿಂಧೂರ್ ನಿಂದ ಸೈನಿಕ ಮನೆಗೆ ಹಿಂದಿರುಗಿದಾಗ, ಅವನ ಕುಟುಂಬ ಮತ್ತು ಗ್ರಾಮಸ್ಥರು ಅವನನ್ನು ಹೇಗೆ ಸ್ವಾಗತಿಸಿದರು ಎಂಬುದನ್ನು ನೋಡಿ. ಜೈ ಹಿಂದ್ ಜೈ ಭಾರತ್ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
22 ಮೇ 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು ʼಆಪರೇಶನ್ ಸಿಂಧೂರ್ ಮುಗಿಸಿ ಹಿಂತಿರುಗಿ ಮನೆಗೆ ಬಂದಾಗ ಸಂತಸ ಪಟ್ಟ ಕುಟುಂಬಸ್ಥರುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಮತ್ತೋಂದು ಕ್ಲೈಮ್‌ನ್ನು ನಾವಿಲ್ಲಿ, ಇಲ್ಲಿ ನೋಡಬಹುದು.ವಿಶೇಷವಾಗಿ ಎಕ್ಸ್‌ನಲ್ಲಿ, ವ್ಯಾಪಕವಾಗಿ ಹರಡಿದ್ದು, ಜನರಲ್ಲಿ ಭಾವನಾತ್ಮಕ ಒಲವನ್ನು ಮೂಡಿಸಿದ್ದಾರೆ. ಈ ವೈರಲ್ ವೀಡಿಯೊ ಜನರಲ್ಲಿ ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಭಾವನಾತ್ಮಕ ಕಥೆಯೊಂದಿಗೆ ಸೇನೆಯ ಸಾಹಸವನ್ನು ಜೋಡಿಸುವ ಮೂಲಕ ಗೊಂದಲವನ್ನು ಸೃಷ್ಟಿಸಿದೆ. ಹಲವರು ವೈರಲ್ ವಿಡಿಯೋದಲ್ಲಿನ ಪ್ರತಿಪಾದನೆ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ 2023ರಂದು ದೇಶವು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ ತರಬೇತಿಯಿಂದ ಮನೆಗೆ ಹಿಂದಿರುಗಿದ ಸಿಖ್ ಸೈನಿಕನನ್ನು ಅವರ ಕುಟುಂಬವು ಭವ್ಯ ಸ್ವಾಗತ ಮಾಡಿದ ದೃಶ್ಯವದು.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, 16 ಆಗಸ್ಟ್ 2023ರಂದು ʼಇಂಡಿಯನ್ ಎಕ್ಸ್‌ಪ್ರಸ್ʼ ವೆಬ್‌ಸೈಟ್‌ನಲ್ಲಿ ʼSikh soldier returns home to grand welcome by family. Video goes viral on Independence Dayʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ದೇಶವು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲೇ ತರಬೇತಿಯಿಂದ ಮನೆಗೆ ಹಿಂದಿರುಗಿದ ಸಿಖ್ ಸೈನಿಕನನ್ನು, ಆತನ ಪರಿವಾರ ಸ್ವಾಗತಿಸಿದೆ. ಈಗ ದಿನಾಂಕವಿಲ್ಲದ ವೀಡಿಯೊವೊಂದು ವೈರಲ್ ಆಗಿದೆ” ಎಂದು ಉಲ್ಲೇಖಿಸಿರುವುದು ಕೂಡ ಕಂಡು ಬಂದಿದೆ.
ಆಗಸ್ಟ್ 15, 2023ದು ʼಇಂಡಿಯಾ ಟುಡೆʼ ವೆಬ್‌ಸೈಟ್‌ನಲ್ಲಿ ʼOn Independence Day, video of Sikh family welcoming their soldier son goes viralʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಸ್ವಾತಂತ್ರ್ಯ ಸಂಭ್ರಮದ ವೇಳೆ ಸಿಖ್ ಪರಿವಾರ ತಮ್ಮ ಸೈನಿಕ ಪುತ್ರನನ್ನು ಸ್ವಾಗತಿಸುವ ದೃಶ್ಯಗಳು ವೈರಲ್ ಆಗಿವೆʼ ಎಂದು ಬರೆದುಕೊಂಡಿದೆ. ಈ ವರದಿಗಳ ಮೂಲಕ ವೈರಲ್ ಆಗಿರುವ ವಿಡಿಯೋಗೂ ಇತ್ತೀಚೆಗೆ ನಡೆದ ಅಪರೇಷನ್ ಸಿಂಧೂರ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ
ಆಗಸ್ಟ್ 15, 2023ರಂದು ಆನಂದ್ ಮಹಿಂದ್ರಾ ತನ್ನ ಎಕ್ಸ್ ಖಾತೆಯಲ್ಲಿ ʼIf you want to understand the emotional connect between Indians and our Jawans who protect us, look no further than this video…. I salute this familyʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತೀಯರು ಮತ್ತು ನಮ್ಮನ್ನು ರಕ್ಷಿಸುವ ನಮ್ಮ ಸೈನಿಕರ ನಡುವಿನ ಭಾವನಾತ್ಮಕ ಸಂಪರ್ಕವನ್ನು ನೀವು ಅರ್ಥಮಾಡಿಕೊಳ್ಳಲು ಬಯಸಿದರೆ, ಈ ವೀಡಿಯೊವನ್ನು ನೋಡಿ. ನಾನು ಈ ಕುಟುಂಬಕ್ಕೆ ವಂದಿಸುತ್ತೇನೆʼ ಎಂದು ಬರೆದು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಆಗಸ್ಟ್ 17, 2023 ರಂದು ಬ್ರೂಟ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈ ವೈರಲ್ ಕ್ಲಿಪ್‌ನ ಸಣ್ಣ ಆವೃತ್ತಿ ಹಂಚಿಕೊಂಡಿರುವುದು ಸಿಕ್ಕಿದ್ದು ʼThis is how a soldier was welcomed by his family after he came back to his villageʼ ಎಂಬ ಶೀರ್ಷಿಕೆಯನ್ನು ನೀಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಹಳ್ಳಿಗೆ ಹಿಂತಿರುಗಿದ ನಂತರ ಆತನ ಕುಟುಂಬವು ಅವರನ್ನು ಹೇಗೆ ಸ್ವಾಗತಿಸಿತು ಎಂಬುದು ಇಲ್ಲಿದೆ” ಎಂದು ಕ್ಯಾಪ್ಶನ್ ಬರೆಯಲಾಗಿದೆ. ಈ ಮೂಲಕ ವೈರಲ್ ವೀಡಿಯೊ ಹಳೆಯದು ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಆಗಸ್ಟ್ 17, 2023ರಂದು ಝೀ ನ್ಯೂಸ್ ವೆಬ್‌ಸೈಟ್‌ನಲ್ಲಿ ʼIndian Soldier Receives Heartwarming Welcome As He Returns To His Villageʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಇತ್ತೀಚೆಗಿನ ಅಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದ ಸೈನಿಕನದ್ದು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ 2023ರಂದು ದೇಶವು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ ತರಬೇತಿಯಿಂದ ಮನೆಗೆ ಹಿಂದಿರುಗಿದ ಸಿಖ್ ಸೈನಿಕನನ್ನು ಅವರ ಕುಟುಂಬವು ಭವ್ಯ ಸ್ವಾಗತ ಮಾಡಿದ ದೃಶ್ಯವದು.