ಫ್ಯಾಕ್ಟ್‌ಚೆಕ್‌: 2019ರಲ್ಲಿ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯ ಫೋಟೋವನ್ನು ಇತ್ತೀಚಿನದು ಎಂದು ಹಂಚಿಕೆ

2019ರಲ್ಲಿ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯ ಫೋಟೋವನ್ನು ಇತ್ತೀಚಿನದು ಎಂದು ಹಂಚಿಕೆ

Update: 2025-06-20 02:30 GMT

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸದ ಪೈಕಿ ಮೊದಲನೆಯದಾಗಿ ಸೈಪ್ರಸ್​ ಭೇಟಿ ಯಶಸ್ವಿಯಾಗಿ ಮುಗಿಸಿದ್ದಾರೆ. ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಅಲ್ಲಿಂದ ಕೆನಡಾದತ್ತ ಪ್ರಯಾಣ ಆರಂಭಿಸಿದ್ದಾರೆ. ಭಾನುವಾರ ಸಂಜೆ ಸೈಪ್ರಸ್​​ಗೆ ಬಂದಿಳಿದ ಪ್ರಧಾನಿ ಮೋದಿ ಮತ್ತು ಭಾರತದ ಅಧಿಕಾರಿಗಳ ನಿಯೋಗ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಬೃಹತ್ ದಾಳಿ ನಡೆಸಿದ ನಡುವೆಯೇ ಈ ವರ್ಷದ ಜಿ7 ಶೃಂಗಸಭೆ ನಡೆಯುತ್ತಿದೆ. ಭಾರತವು ಈ ಶೃಂಗದ ಸದಸ್ಯ ರಾಷ್ಟ್ರವಲ್ಲವಾದರೂ, ಈ ಸಭೆಯ ಅಧ್ಯಕ್ಷತೆ ವಹಿಸಿರುವ ಕೆನಡಾದ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಭಾಗವಹಿಸುತ್ತಿದ್ದಾರೆ. ವಿಶೇಷವೆಂದರೆ, ಮೋದಿ ಅವರಿಗೆ ಇದು ಸತತ 6ನೇ ಜಿ7 ಶೃಂಗಸಭೆಯಾಗಿದೆ.

ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ G7 ಶೃಂಗಸಭೆಯ ಒಂದು ಫೋಟೋ ವೈರಲ್ ಆಗಿದೆ, ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇತರ ನಾಯಕರು ಕಡೆಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ. G7 ಶೃಂಗಸಭೆಯಲ್ಲಿ ಮೋದಿಯವರಿಗೆ ಯಾವುದೇ ಮಾನ್ಯತೆ ಸಿಗಲಿಲ್ಲ ಎಂದು ಹಲವರು ವಿವಿಧ ಬರಹಗಳೊಂದಿಗೆ ವೈರಲ್‌ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜೂನ್‌ 17, 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼकई मित्र लिख रहे हैं के मोदीजी इस तस्वीर में दिखाई नहीं दे रहे। तो दोस्तों मोदीजी वरिष्ठ नेता हैं विश्व के, उन्हें सब मानते हैं, जब की ये फोटो खिंचवाना टीवी पर आना ये सब नए उभरते हुए नेताओं के या कम वरिष्ठ नेताओं के काम होते हैं, क्यूंकि उन्हें नोटिस होना होता है, जबकि मोदीजी को आलरेडी सब जानते हैं और मानते भी हैं, इसलिए उन्हें फोटो वोटो का शौक नहीं है। आप ब्याह शादियों में भी देखते होंगे के जिम्मेदार बुजुर्ग लोग पीछे ही रहते हैं फोटो खिंचवाने में जबकि बच्चे कैमरा के आगे ही कूदते पाए जाते हैं।ʼ ಎಂಬ ಶೀರ್ಷಿಕೆಯೊಂದಿಗೆ ಫೊಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ಚಿತ್ರದಲ್ಲಿ ಮೋದಿಜಿ ಕಾಣಿಸುತ್ತಿಲ್ಲ ಎಂದು ಅನೇಕ ಸ್ನೇಹಿತರು ಬರೆಯುತ್ತಿದ್ದಾರೆ. ಆದ್ದರಿಂದ ಸ್ನೇಹಿತರೇ, ಮೋದಿಜಿ ವಿಶ್ವದ ಹಿರಿಯ ನಾಯಕರು, ಎಲ್ಲರೂ ಅವರನ್ನು ಗೌರವಿಸುತ್ತಾರೆ, ಆದರೆ ಛಾಯಾಚಿತ್ರ ತೆಗೆಯುವುದು ಮತ್ತು ಟಿವಿಯಲ್ಲಿ ಕಾಣಿಸಿಕೊಳ್ಳುವುದು ಹೊಸದಾಗಿ ಉದಯೋನ್ಮುಖ ನಾಯಕರು ಅಥವಾ ಕಡಿಮೆ ಹಿರಿಯ ನಾಯಕರ ಕೆಲಸಗಳು, ಏಕೆಂದರೆ ಅವುಗಳನ್ನು ಗಮನಿಸಬೇಕು, ಆದರೆ ಎಲ್ಲರೂ ಈಗಾಗಲೇ ಮೋದಿಜಿಯನ್ನು ತಿಳಿದಿದ್ದಾರೆ ಮತ್ತು ಗೌರವಿಸುತ್ತಾರೆ, ಆದ್ದರಿಂದ ಅವರು ಫೋಟೋ ಶೂಟ್‌ಗಳನ್ನು ಇಷ್ಟಪಡುವುದಿಲ್ಲ. ಮದುವೆಗಳಲ್ಲಿಯೂ ಸಹ ಜವಾಬ್ದಾರಿಯುತ ವೃದ್ಧರು ಛಾಯಾಚಿತ್ರ ತೆಗೆದುಕೊಳ್ಳುವಾಗ ಹಿಂದೆ ಉಳಿಯುತ್ತಾರೆ ಮತ್ತು ಮಕ್ಕಳು ಕ್ಯಾಮೆರಾ ಮುಂದೆ ಜಿಗಿಯುವುದನ್ನು ನೀವು ನೋಡಿರಬೇಕುʼ ಎಂದು ಬರೆದಿರುವುದನ್ನು ನೋಡಬಹುದು

Full View

ವೈರಲ್‌ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


ಈ ವೈರಲ್ ಫೋಟೋ ಜನ ಸಾಮಾನ್ಯರಲ್ಲಿ ಗೊಂದಲವನ್ನು ಉಂಟುಮಾಡಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಫೋಟೋವನ್ನು ನಂಬಿ, ಮೋದಿಯವರನ್ನು G7 ಶೃಂಗಸಭೆಯಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ವೈರಲ್‌ ಫೋಟೋ ಹಲವು ಚರ್ಚೆಗಳಿಗೆ ಕೂಡ ದಾರಿ ಮಾಡಿಕೊಟ್ಟಿದ್ದು, ಇದರಲ್ಲಿ ಸಾಕಷ್ಟು ಮಂದಿ ತಪ್ಪು ಗ್ರಹಿಕೆಯೊಂದಿಗೆ ವಿವಿಧ ದೇಶಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಪೊಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಡೆಗಣಿಸಲಾಗಿದೆ. ಅವರನ್ನು ಒಳಗೊಂಡಂತೆ ಫೋಟೊ ತೆಗೆಯಲು ಇತರೆ ರಾಷ್ಟ್ರಗಳು ಬಿಡಲಿಲ್ಲ ಎಂಬುದು ಸುಳ್ಳು. ವೈರಲ್‌ ಫೋಟೋವನ್ನು ಸುಳ್ಳು ನಿರೂಪಣೆಯೊಂದಿಗೆ ಮತ್ತು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ನಾವು ವೈರಲ್‌ ಆದ ಪೊಸ್ಟ್‌ನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್‌ ಆದ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವೈರಲ್‌ ಫೋಟೋಗೆ ಸಂಬಂಧಿಸಿದಂತೆ 2019ರ ಹಲವಾರು ವರದಿಗಳು ಕಂಡು ಬಂದವು. ಆಗಸ್ಟ್‌ 26, 2019ರಂದು ವಿಶ್ವಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಶ್ವಸಂಸ್ಥೆಯ ವೆಬ್‌ಸೈಟ್‌ನಲ್ಲಿ ʼUN chief appeals to G7 leaders for ‘strong commitment’ and political will to tackle climate emergencyʼ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ವರದಿಯ ಪ್ರಕಾರ, ಈ ಫೋಟೋ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯದ್ದಾಗಿದೆ.


G-7 ಶೃಂಗಸಭೆಯು ಫ್ರಾನ್ಸ್‌ನ ಬೆರ್ರಿಸ್‌ನಲ್ಲಿ ಆಗಸ್ಟ್ 24-26, 2019 ರ ನಡುವೆ ನಡೆಯಿತು. ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 16 ರಂದು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಕ್ಕೆ ಆಗಮಿಸಿದರು. ಶೃಂಗಸಭೆಯ ಹೊರತಾಗಿ, ಅವರು ಅನೇಕ ದೇಶಗಳ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.


ಜೂನ್‌ 18, 2025ರಂದು ಪ್ರಧಾನಿ ನರೇಂದ್ರ ಮೋದಿ ʼTogether for global progress! Productive exchanges with G7 leaders on key global challenges and shared aspirations for a better planet. @G7ʼ ಎಂಬ ಶೀರ್ಷಿಕೆಯೊಂದಿಗೆ, ಈ ಸಭೆಯಲ್ಲಿ ಭಾಗವಹಿಸುವ ಮತ್ತು ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಚಿತ್ರಗಳನ್ನು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಂಡಿದ್ದಾರೆ.

ಏಪ್ರಿಲ್ 2025ರಂದು IMF ನ ವಿಶ್ವ ಆರ್ಥಿಕ ದೃಷ್ಟಿಕೋನ () ವರದಿಯ ಪ್ರಕಾರ , ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು 2025 ಮತ್ತು 2026 ವರ್ಷಗಳಲ್ಲಿ 1.2 ಮತ್ತು 1.5 ಪ್ರತಿಶತದಷ್ಟು ಬೆಳವಣಿಗೆಯ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ದೇಶಗಳಲ್ಲಿ US, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಜಪಾನ್, ಬ್ರಿಟನ್, ಕೆನಡಾ ಮತ್ತು ಇತರವು ಸೇರಿವೆ. ಜೂನ್‌ 07, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼWhy PM Modi Was Invited To The G7 Summit By Canadian PM Mark Carney #modi #canada #trumpʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ಜೂನ್‌ 17, 2025ರಂದು G7 ಎಂಬ ಎಕ್ಸ್‌ ಖಾತೆಯಲ್ಲಿʼ #G7 leaders stand united in front of the Canadian Rockies, the perfect backdrop for this hallmark momentʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇನ್ನು 2019ರಲ್ಲಿ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯ ಚಿತ್ರ ಮತ್ತು 2025ರಲ್ಲಿ ಕೆನಡಾದಲ್ಲಿ ನಡೆಯಲಿರುವ G-7 ಶೃಂಗಸಭೆಯ ಫೋಟೋವನ್ನು ನೀವಿಲ್ಲಿ ನೋಡಬಹುದು


ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಪೊಸ್ಟ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಡೆಗಣಿಸಲಾಗಿದೆ. ಅವರನ್ನು ಒಳಗೊಂಡಂತೆ ಫೋಟೊ ತೆಗೆಯಲು ಇತರೆ ರಾಷ್ಟ್ರಗಳು ಬಿಡಲಿಲ್ಲ ಎಂಬುದು ಸುಳ್ಳು. 

Claim :  2019ರಲ್ಲಿ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯ ಫೋಟೋವನ್ನು ಇತ್ತೀಚಿನದು ಎಂದು ಹಂಚಿಕೆ
Claimed By :  Social Media Users
Fact Check :  Unknown
Tags:    

Similar News