ಫ್ಯಾಕ್ಟ್‌ಚೆಕ್: ಜಾತಿ ತಾರತಮ್ಯದಿಂದಾಗಿ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಭಾರತನ್ನು ಬಿಟ್ಟು ಹೋಗಿಲ್ಲ
ಜಾತಿ ತಾರತಮ್ಯದಿಂದಾಗಿ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಭಾರತನ್ನು ಬಿಟ್ಟು ಹೋಗಿಲ್ಲ
Rachin Ravindra, left India, faced, Caste Discrimination, New Zealand, Cricketer, ICC World Cup 2023
ನ್ಯೂಜಿಲೆಂಡ್‌ನ ಎಟಗೈ ಬ್ಯಾಟರ್ ಹಾಗೂ ಎಡಗೈ ಸ್ಪಿನ್ ಬೌಲರ್ ರಚಿನ್ ರವೀಂದ್ರ ಹುಟ್ಟಿದ್ದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ. ರಚಿನ್ ತಂದೆ-ತಾಯಿ ಭಾರತದಿಂದ ನ್ಯೂಜಿಲೆಂಡ್‌ಗೆ ಹೋಗಿ ನೆಲಸಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ರಚಿನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಭಾರತದಲ್ಲಿ ಜಾತಿ ತಾರತಮ್ಯದಿಂದಾಗಿ ರಚಿನ್ ರವೀಂದ್ರ 3 ವರ್ಷಗಳ ಹಿಂದೆ ಭಾರತವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾರೆಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಟೀಮ್ ಪಂಡಿತ್ ರವಿ ಬಯ್ಯಾ ಎಂಬ ಫೇಸ್‌ಬುಕ್ ಖಾತೆದಾರ ರಚಿನ್ ರವೀಂದ್ರನ ಬಗ್ಗೆ.. “ब्राह्मण रत्न रचिन रविंद्र कृष्णमूर्ति का पाकिस्तान के खिलाफ 100. विश्व कप में अब तक 500 से ज्यादा रन । 3 शतक, 3 अर्धशतक, 8 विकेट। भविष्य का क्रिकेट जगत का सुपरस्टार। अच्छा किया भाई तुमने 3 साल पहले भारत छोड़ दिया क्योंकि यहां तो तुम्हारी जाति देखकर कह देते की ब्राह्मणवाद है। मत खिलाओ। आज उसी बैंगलोर की धरती पर जहां जाति का भेदभाव झेलकर रविंद्र ने भारत छोड़ा था उसपर पाकिस्तान के खिलाफ़ शतक लगा दिया है।“ ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.
ಪೋಸ್ಟನ್ ಅನುವಾದಿಸಿದಾಗ ನಮಗೆ ತಿಳಿದಿದ್ದು "ರಾಚಿನ್ ರವೀಂದ್ರ ಕೃಷ್ಣಮೂರ್ತಿ ಮೂಲತಃ ಬ್ರಾಹ್ಮಣ, ಇದುವರೆಗೆ ವಿಶ್ವಕಪ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಈತ ಪಾಕಿಸ್ತಾನದ ವಿರುದ್ಧ 100 ರನ್ ಗಳಿಸಿದ್ದಾರೆ. 3 ಶತಕ, 3 ಅರ್ಧ ಶತಕ ಹಾಗೂ 8 ವಿಕೆಟ್ ಪಡೆದು ಕ್ರಿಕೆಟ್ ಲೋಕದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಾಚಿನ್ 3 ವರ್ಷಗಳ ಹಿಂದೆ ಭಾರತವನ್ನು ಬಿಟ್ಟು ಹೋಗಿದ್ದರು. ಜಾತಿ ತಾರತಮ್ಯದಿಂದ ಭಾರತವನ್ನು ತೊರೆದಿದ್ದ ರವೀಂದ್ರ ಇಂದು ಇದೇ ಬೆಂಗಳೂರಿನ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದ್ದಾರೆ. ಎಂದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್
ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಚಿನ್ ರವೀಂದ್ರ ಹುಟ್ಟಿದ್ದು ನ್ಯೂಜಿಲೆಂಡ್‌ನಲ್ಲಿ.
cricbuzz.com ವೆಬ್‌ಸೈಟ್ ಪ್ರಕಾರ , ರಚಿನ್ ರವೀಂದ್ರ 18 ನವಂಬರ್ 1999ರಲ್ಲಿ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದರು. ಅವರ ತಂದೆ ರವಿ ಕೃಷ್ಣಮೂರ್ತಿ, ಸಾಫ್ಟ್‌ವೇರ್ ಆರ್ಕಿಟೆಕ್ಟ್ , 1997 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನೆಲೆಸುವ ಮೊದಲು ಬೆಂಗಳೂರಿನಲ್ಲಿ ಕ್ಲಬ್-ಮಟ್ಟದ ಕ್ರಿಕೆಟ್ ಆಡಿದ್ದರು. ಎಡಗೈ ಬ್ಯಾಟ್ಸ್‌ಮ್ಯಾನ್ ಆತ ಈತ ಎಡಗೈ ಸ್ಪಿನ್ ಬೌಲಿಂಗ್ ಅಷ್ಟೇ ಅಲ್ಲ ಈತ ಆಲ್ ರೌಂಡರ್.ನ್ಯೂಜಿಲೆಂಡ್ U-19, ನ್ಯೂಜಿಲೆಂಡ್ A ಪರ ಆಡಿ ರಾರಾಜಿಸಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ವೆಬ್‌ಸೈಟ್ ಪ್ರಕಾರ , ರಚಿನ್ ಮೊದಲ ಹೆಸರನ್ನು ಭಾರತೀಯ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಸ್ಪೂರ್ತಿಯಿಂದಾಗಿ ರಚಿನ್ ತಂದೆ ಆತನಿಗೆ ಆ ಹೆಸರಿಟ್ಟರಂತೆ. ಏಕದಿನ ವಿಶ್ವಕಪ್ನಲ್ಲಿ 25 ವಯಸ್ಸಿಗೂ ಮುನ್ನ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ರಚಿನ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಈಗ ರಚಿನ್ ರವೀಂದ್ರನ ಹೆಸರಿನಲ್ಲಿದೆ.
crereads.com ಪ್ರಕಾರ, ರಚಿನ್ ರವೀಂದ್ರ ಅವರ ತಂದೆ, ಸಾಫ್ಟ್‌ವೇರ್ ಆರ್ಕಿಟೆಕ್ಟ್ ರವಿ ಕೃಷ್ಣಮೂರ್ತಿ ಅವರು 1997 ರಲ್ಲಿ ನ್ಯೂಜಿಲೆಂಡ್‌ಗೆ ವಲಸೆ ಬಂದಿದ್ದರು. ರವಿ ಕೃಷ್ಣಮೂರ್ತಿ ಅವರು ತಮ್ಮ ಹುಟ್ಟೂರಾದ ಬೆಂಗಳೂರಿನಲ್ಲಿ ಕ್ಲಬ್ ಮಟ್ಟದ ಕ್ರಿಕೆಟ್ ಆಡಿದ್ದರುರು. ರಚಿನ್ ರವೀಂದ್ರ ತಾಯಿಯ ಹೆಸರು ದೀಪಾ ಕೃಷ್ಣಮೂರ್ತಿ.
ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಭಾರತದಲ್ಲಿ ಜಾತಿ ತಾರತಮ್ಯ ಎದುರಿಸಿದ್ದರಿಂದ 3 ವರ್ಷಗಳ ಹಿಂದೆ ಭಾರತ ಬಿಟ್ಟು ಹೋಗಿದ್ದರು ಎಂಬ ಹೇಳಿಕೆ ಸುಳ್ಳು. ರಚಿನ್ ರವೀಂದ್ರ ಹುಟ್ಟಿ ಬೆಳೆದಿದ್ದೆಲ್ಲಾ ನ್ಯೂಜಿಲೆಂಡ್‌ನಲ್ಲೇ. 1997 ರಲ್ಲೇ ರಚಿನ್ ಪೋಷಕರು ಭಾರತದಿಂದ ನ್ಯೂಜಿಲೆಂಡ್‌ಗೆ ಹೋಗಿದ್ದರು.