ಫ್ಯಾಕ್ಟ್‌ಚೆಕ್‌: ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ನವಿಲೊಂದು ಹೂ ಮಾಲೆ ಅರ್ಪಿಸಿದೆ ಎಂದು ಎಐ ವಿಡಿಯೋ ಹಂಚಿಕೆ

ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ನವಿಲೊಂದು ಹೂ ಮಾಲೆ ಅರ್ಪಿಸಿದೆ ಎಂದು ಎಐ ವಿಡಿಯೋ ಹಂಚಿಕೆ

Update: 2026-01-08 03:30 GMT

​ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ನವಿಲೊಂದು ಹೂವಿನ ಹಾರವನ್ನು ಅರ್ಪಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳ ಮಧ್ಯೆ, ನವಿಲು ತನ್ನ ಕೊಕ್ಕಿನಿಂದ ಹಾರವನ್ನು ಎತ್ತಿಕೊಂಡು ಭಗವಾನ್ ರಾಮನ ವಿಗ್ರಹಕ್ಕೆ ಅರ್ಪಿಸುವ ದೃಶ್ಯ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಅಪರೂಪದ ಕ್ಷಣವನ್ನು ಅಲ್ಲಿದ್ದ ಅನೇಕ ಭಕ್ತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

ಜನವರಿ 4, 2026ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼರಾಮ ಮಂದಿರದ ಗರ್ಭ ಗುಡಿಯಲ್ಲಿ ನವಿಲು ಕಾಣಿಸಿಕೊಳ್ಳುವ ಮೂಲಕ, ಪ್ರಕೃತಿ ದೈವತ್ವವನ್ನು ಭೇಟಿಯಾದ ಸುಂದರ ಕ್ಷಣʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಡಿಸಂಬರ್‌ 31, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼPeacock came to worship Shri Ram lala at Ayodhya Ram Mandir. Mesmerizing visualsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿಗೆ ಕ್ಯಾಪ್ಷನ್‌ ಆಗಿ ʼA truly wondrous, grand, and divine sight. The arrival of a peacock at Ayodhya's Ram Mandir for darshan of Ram Lalla and a garland of flower at his feetʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀ ರಾಮ ಲಾಲನನ್ನು ಪೂಜಿಸಲು ನವಿಲು ಬಂದಿತು. ಮೋಡಿಮಾಡುವ ದೃಶ್ಯಗಳುʼ ಎಂಬ ಶೀರ್ಷಿಕೆಯನ್ನು ನೋಡಬಹುದು. ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿಜಕ್ಕೂ ಅದ್ಭುತ, ಭವ್ಯ ಮತ್ತು ದೈವಿಕ ದೃಶ್ಯ. ರಾಮಲಲ್ಲಾ ದರ್ಶನಕ್ಕಾಗಿ ಅಯೋಧ್ಯೆಯ ರಾಮ ಮಂದಿರಕ್ಕೆ ನವಿಲಿನ ಆಗಮನ ಮತ್ತು ಅವರ ಪಾದಗಳಿಗೆ ಹೂವಿನ ಹಾರʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಡಿಸಂಬರ್‌ 31, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿʼPeacock Spotted Inside Shree Ram Temple in Ayodhya, Mesmerising Moment. Captured on Videoʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಯೋಧ್ಯೆಯ ಶ್ರೀ ರಾಮ ಮಂದಿರದೊಳಗೆ ನವಿಲು ಪ್ರತ್ಯಕ್ಷ, ಮೋಡಿಮಾಡುವ ಕ್ಷಣ, ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆʼ ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ಡಿಸಂಬರ್‌ 31, 2025ರಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʼWhen faith meets nature, miracles feel closer than ever. A peacock’s divine appearance at the Ram Mandir left devotees completely awestruck. For many, it wasn’t just a sight it felt like a blessing, a moment of pure serenity where devotion, nature, and spirituality merged into one. Jai Shri Ram! Moments like these remind us that the divine often speaks through the simplest yet most powerful signsʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಕ್ತಿಯು ಪ್ರಕೃತಿಯನ್ನು ಭೇಟಿ ಮಾಡಿದಾಗ, ಅದ್ಭುತಗಳು ಇನ್ನಷ್ಟು ಸಮೀಪವಾಗಿರುವಂತೆ ಅನುಭವವಾಗುತ್ತದೆ. ರಾಮ ಮಂದಿರದಲ್ಲಿ ನವಿಲಿನ ದಿವ್ಯ ದರ್ಶನ ಭಕ್ತರನ್ನು ಸಂಪೂರ್ಣವಾಗಿ ಅಚ್ಚರಿ ಮೂಡಿಸಿತು. ಅನೇಕರಿಗೆ ಅದು ಕೇವಲ ದೃಶ್ಯವಲ್ಲ, ಆಶೀರ್ವಾದದ ಅನುಭವವಾಗಿತ್ತು. ಭಕ್ತಿ, ಪ್ರಕೃತಿ ಮತ್ತು ಆಧ್ಯಾತ್ಮಿಕತೆ ಒಂದೇ ಕ್ಷಣದಲ್ಲಿ ಒಂದಾಗಿ ಬೆರೆತ ಶಾಂತಿಯ ಮಧುರ ಕ್ಷಣ. ಜೈ ಶ್ರೀ ರಾಮ್. ಇಂತಹ ಕ್ಷಣಗಳು ದೈವಿಕತೆ ಬಹಳ ಸರಳವಾದರೂ ಅತ್ಯಂತ ಶಕ್ತಿಶಾಲಿ ಸೂಚನೆಗಳ ಮೂಲಕ ನಮ್ಮೊಂದಿಗೆ ಮಾತನಾಡುತ್ತದೆ ಎಂಬುದನ್ನು ಮತ್ತೆ ನೆನಪಿಸುತ್ತವೆ.ʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್‌)


​ವೈರಲ್‌ ಆದ ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವೈರಲ್‌ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಆದರೆ, ಈ ಘಟನೆಗೆ ಸಂಬಂಧಿಸಿದ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್‌ ಆದ ವಿಡಿಯೋವಿನ ಹಲವು ಫ್ರೇಮ್‌ಗಳಲ್ಲಿ ಜರ್ಕ್‌ ಮೋಷನ್‌ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು.

ಈ ವೈರಲ್ ವೀಡಿಯೊವನ್ನು ಜಾಗ್ರತವಾಗಿ ನೋಡಿದರೆ, ವೀಡಿಯೊದಲ್ಲಿ 'Ash_saxena' ಎಂಬ ವಾಟರ್‌ಮಾರ್ಕ್ ಇರುವುದನ್ನು ನಾವಿಲ್ಲಿ ಕಾಣಬಹುದು. ಇದನ್ನು ಸುಳಿವಾಗಿ ಬಳಸಿಕೊಂಡು ನಾವು ಗೂಗಲ್‌ನಲ್ಲಿ ʼಆಶ್ ಸಕ್ಸೇನಾʼ ಎಂಬ ಕೀವರ್ಡ್‌ ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಇದೇ ಹೆಸರಿನ ಒಂದು ಇನ್‌ಸ್ಟಾಗ್ರಾಮ್ ಖಾತೆ ನಮಗೆ ಸಿಕ್ಕಿತು. ಈ ಖಾತೆಯಲ್ಲಿ 29 ಡಿಸೆಂಬರ್ 2025 ರಂದು ವೈರಲ್ ವೀಡಿಯೊವನ್ನು ಶೇರ್ ಮಾಡಿದ್ದೇವೆ. ಈ ಪೋಸ್ಟ್ ವಿವರಣೆಯಲ್ಲಿ #sora2 #sora ಎಂದು ರಾಯಟಂ ಗಮನಿಸಬಹುದು. ಅಂದರೆ, ಸೋರಾ ಓಪನ್ ಎಐ ಯ ವೀಡಿಯೊ ಜನರೇಷನ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು AI ರಚಿತ ವೀಡಿಯೊಗಳನ್ನು ರಚಿಸಲು ಉಪಯೋಗಿಸಲಾಗುತ್ತದೆ.

ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 91% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಹೈವ್‌ ಮಾಡರೇಶನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು 96.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಮತ್ತೋಂದು ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼವಾಸ್‌ ಇಟ್‌ ಎಐʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದಲ್ಲಿ ನವಿಲೊಂದು ಹೂ ಮಾಲೆ ಅರ್ಪಿಸಿದೆ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News