‘ಆ್ಯಪ್ ಕಿ ಅದಾಲತ್’ ಸಂದರ್ಶನದಲ್ಲಿ ಹೈದರಾಬಾದ್‌ನ ಬಿಜೆಪಿ ಸಂಸದೆ ಮಾಧವಿ ಲತಾ ಟೆಲಿಪ್ರಾಂಪ್ಟರ್ ಬಳಸಿದ್ದರಾ?

‘ಆ್ಯಪ್ ಕಿ ಅದಾಲತ್’ ಸಂದರ್ಶನದಲ್ಲಿ ಹೈದರಾಬಾದ್‌ನ ಬಿಜೆಪಿ ಸಂಸದೆ ಮಾಧವಿ ಲತಾ ಟೆಲಿಪ್ರಾಂಪ್ಟರ್ ಬಳಸಿದ್ದರಾ?

Update: 2024-04-15 19:45 GMT

Madhavi Latha

ಹೈದರಾಬಾದ್ ಮೂಲದ ಭಾರತೀಯ ಜನತಾ ಪಕ್ಷದ ಎಂಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಇತ್ತೀಚೆಗೆ ರಜತ್ ಶರ್ಮಾ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್' ನಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ಸಾಕಷ್ಟು ಸೆಲೆಬ್ರಿಟಿಗಳು ಈ ಶೋನಲ್ಲಿ ಭಾಗವಹಿಸಿದ್ದರು. ರಜತ್ ಶರ್ಮಾ ಶೋನಲ್ಲಿ ಸಾಕಷ್ಟು ಕಾಂಟ್ರವರ್ಸಿ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಹಿಂದೆ, ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಇತರ ಸೆಲೆಬ್ರಿಟಿಗಳು ಈ ಹಿಂದೆ ಈ ಶೋನಲ್ಲಿ ಭಾಗವಹಿಸಿದ್ದರು. ಇತ್ತೀಚಿಗೆ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಸಂಚಲನ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆಕೆಯ ಅತ್ಯುತ್ತಮ ಉತ್ತರಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾಧವಿ ಲತಾರನ್ನು ಶ್ಲಾಘಿಸಿದ್ದರು .

ಇತ್ತೀಚಿಗೆ, ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಧವಿ ಲತಾ ಟೆಲಿಪ್ರಾಂಪ್ಟರ್ ರಿಮೋಟ್‌ನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರ ವೈರಲ್‌ ಆಗಿದೆ ಅಷ್ಠ ಅಲ್ಲ, ಶೋನಲ್ಲಿ ಹೋಸ್ಟ್‌ ರಜರ್‌ ಕೇಳಿದ ಪ್ರಶ್ನೆಗಳಿಗೆ ಟೆಲಿಪ್ರೊಂಪ್ಟರ್ ಅನ್ನು ಬಳಸಿ ಉತ್ತರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆಗುತ್ತಿವೆ. ಸಂದರ್ಶನದ ಕೆಲವು ಚಿತ್ರಗಳನ್ನು ಕೊಲಾಜ್ ಮಾಡಿ ಫೋಟೋವಿಗೆ ಶೀರ್ಷಿಕೆಯಾಗಿ "ಟೆಲಿಪ್ರಾಂಪ್ಟರ್ ಬಳಸಿ ಉತ್ತಮ ಉತ್ತರಗಳನ್ನು ನೀಡಿದ್ದಾರೆ, ಬಿಜೆಪಿಯಲ್ಲಿರುವವರೆಲ್ಲ ಮೋಸ ಮಾಡುವವರೆ" ಎಂದು ಬರೆದು ಪೋಸ್ಟ್‌ ಮಾಡಲಾಗಿದೆ

“#MadhaviLatha ji, Aap to apke VishwaGuru #Modi se bhi aage nikal padi”ಎಂದು ಪೋಸ್ಟ್ ಮಾಡಿದ್ದಾರೆ.

ಅಕ್ಬರುದ್ದೀನ್ ಓವೈಸಿ ಫ್ಯಾನ್‌ ಪೇಜ್‌ನಲ್ಲೂ ಓವೈಸಿ ಅಭಿಮಾನಿಗಳು ಅದೇ ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ

ಫ್ಯಾಕ್ಟ್‌ಚೆಕ್‌

ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ಬಿಜೆಪಿ ನಾಯಕಿ ಮಾಧವಿ ಲತಾರ ಕೈಯಲ್ಲಿರುವುದು ಕೌಂಟಿಂಗ್‌ ಮಿಷನ್‌ ಇದೊಂದು ಧ್ಯಾನಕ್ಕೆ ಬಳಸುವ ಎಣಿಕೆ ಯಂತ್ರ. ನಾವು Google ನಲ್ಲಿ ವೈರಲ್ ಆದ ಆ ಸಾದನೆಯ ಕುರಿತು ಹುಡುಕಾಟ ನಡೆಸಿದಾಗ ನಮಗೆ ಆನ್‌ಲೈನ್‌ನಲ್ಲಿ ಇದೇ ರೀತಿಯ ಸಾಧನಗಳನ್ನು ಮಾರಾಟ ಮಾಡುವ ಕೆಲವು ಇ-ಕಾಮರ್ಸ್ ವೆಬ್‌ಸೈಟ್‌ಗಳು ಕಾಣಿಸಿದವು. temu.com ನಲ್ಲಿ ನಾವು ರೋಲರ್ ಕೌಂಟರ್, ಡಿಜಿಟಲ್ ಕೌಂಟರ್, ವೇರ್‌ಹೌಸ್ ಕೌಂಟರ್, ರಿಂಗ್-ಆಕಾರದ ಕೌಂಟರ್, ಹ್ಯಾಂಡ್‌ಹೆಲ್ಡ್ ಎಲೆಕ್ಟ್ರಾನಿಕ್ ಕೌಂಟರ್‌ನಂತಹ ವಿವಿಧ ಸಾಧನಗಳಿರುವುದನ್ನು ನಾವು ಕಂಡುಕೊಂಡೆವು. ನಮಗೆ ದೊರೆತಂತಹ ಫೋಟೋವನ್ನು ಇಲ್ಲಿ ನೋಡಬಹುದು.


Amazon ವೆಬ್‌ಸೈಟ್‌ನಲ್ಲೂ ಸಹ ಮಂತ್ರಗಳನ್ನು ಪಠಿಸುವ ಡಿಜಿಟಲ್ ಎಣಿಕೆಯ ಸಾಧನೆಯನ್ನು ನಾವು ನೋಡಬಹುದು.


ಅಷ್ಟೇ ಅಲ್ಲ , ನಾವು ಮಾಧವಿ ಲತಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಇದೇ ಪರಿಕರವನ್ನು ಹಿಡಿದಿರುವುದನ್ನು ನಾವು ನೋಡಿದ್ದೇವೆ.

Full View



ಇದರಿಂದ ಸಾಭೀತಾಗಿದ್ದೇನೆಂದರೆ, ಬಿಜೆಪಿ ನಾಯಕಿ ಮಾಧವಿ ಲತಾ ಅವರ ಕೈಯಲ್ಲಿರುವ ಸಾಧನ ಟೆಲಿಪ್ರಾಂಪ್ಟರ್ ರಿಮೋಟ್ ಅಲ್ಲ. ಬದಲಿಗೆ ಅದು ಧ್ಯಾನಕ್ಕೆ ಬಳಸುವ ಡಿಜಿಟಲ್ ಎಣಿಕೆ ಯಂತ್ರ.

Claim :  ‘ಆ್ಯಪ್ ಕಿ ಅದಾಲತ್’ ಸಂದರ್ಶನದಲ್ಲಿ ಹೈದರಾಬಾದ್‌ನ ಬಿಜೆಪಿ ಸಂಸದೆ ಮಾಧವಿ ಲತಾ ಟೆಲಿಪ್ರಾಂಪ್ಟರ್ ಬಳಸಿದ್ದರಾ?
Claimed By :  Social Media Users
Fact Check :  False
Tags:    

Similar News