ಫ್ಯಾಕ್ಟ್‌ಚೆಕ್‌: ಬಿಯಾಸ್‌ನಲ್ಲಿರುವ ಮಿಲಿಟರಿ ಸೌಲಭ್ಯದಲ್ಲಿ ವಿಕರಣ ಅಪಾಯಕಾರಿಯಾಗಿ ಸ್ಫೋಟಗೊಂಡಿವೆ ಎಂದು ಪುರಾವೆಯಿಲ್ಲದ ಮಾಹಿತಿ ಹಂಚಿಕೆ

ಬಿಯಾಸ್‌ನಲ್ಲಿರುವ ಮಿಲಿಟರಿ ಸೌಲಭ್ಯದಲ್ಲಿ ವಿಕರಣ ಅಪಾಯಕಾರಿಯಾಗಿ ಸ್ಫೋಟಗೊಂಡಿವೆ ಎಂದು ಪುರಾವೆಯಿಲ್ಲದ ಮಾಹಿತಿ ಹಂಚಿಕೆ

Update: 2025-05-16 02:30 GMT

​ಪಹಲ್ಗಾಮ್ ದಾಳಿಗೆ ಪ್ರತೀಕಾರದ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಹೆಸರಿನ ಕಾರ್ಯಾಚರಣೆ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಭಾರತ ಪಾಕಿಸ್ತಾನದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸದೆ, ಭಯೋತ್ಪಾದಕ ನೆಲೆಗಳನ್ನಷ್ಟೇ ಧ್ವಂಸಗೊಳಿಸಿತ್ತು. ಆದರೆ ಪಾಕಿಸ್ತಾನ ಭಾರತದ ನಾಗರಿಕರನ್ನು ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಹಲವು ಅಮಾಯಕರ ಬಲಿ ತೆಗೆದುಕೊಂಡಿತು. ಗಡಿ ಪ್ರದೇಶಗಳ ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತಾಗಿದೆ. ಪಂಜಾಬ್‌ನ ಬಿಯಾಸ್‌ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಸಂಗ್ರಹಣಾ ಸೌಲಭ್ಯದ ಮೇಲೆ ಪಾಕಿಸ್ತಾನ ನಡೆಸಿದ ನಿಖರ ದಾಳಿಯ ನಂತರ ವಿಕಿರಣ ಸೋರಿಕೆಯಾಗಿದೆ ಎಂಬುದಕ್ಕೆ ಪುರಾವೆಯಾಗಿ ಭಾರತ ಸರ್ಕಾರದ ಮುದ್ರೆ ಮತ್ತು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ (AERB) ಮುದ್ರೆಯನ್ನು ಹೊಂದಿರುವ ದಾಖಲೆಯನ್ನು ಹಲವಾರು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳು ಪ್ರಸಾರ ಮಾಡಿವೆ .

ಮೇ 14 2025ರಂದು ಫೇಸ್‌ಬುಕ್‌ ಖಾತೆದಾರರೊಬ್ಬರು ʼBREAKING – LEAKED INFO FROM INSIDE INDIA'S ATOMIC ENERGY DEPT. Sources confirm that during Pakistan’s precision strike on BrahMos depot in Beas, India’s nuclear-capable warheads meant for active deployment were dangerously explodedʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್ - ಭಾರತದ ಪರಮಾಣು ಇಂಧನ ಇಲಾಖೆಯ ಒಳಗಿನಿಂದ ಮಾಹಿತಿ ಸೋರಿಕೆಯಾಗಿದೆ. ಬಯಾಸ್‌ನಲ್ಲಿರುವ ಬ್ರಹ್ಮೋಸ್ ಡಿಪೋದ ಮೇಲೆ ಪಾಕಿಸ್ತಾನ ನಡೆಸಿದ ನಿಖರವಾದ ದಾಳಿಯ ಸಮಯದಲ್ಲಿ ಸಕ್ರಿಯ ನಿಯೋಜನೆಗಾಗಿ ಪರಮಾಣು ಸಾಮರ್ಥ್ಯವಿರುವ ಸಿಡಿತಲೆಗಳು ಅಪಾಯಕಾರಿಯಾಗಿ ಸ್ಫೋಟಗೊಂಡಿವೆ ಎಂದು ಮೂಲಗಳು ದೃಢಪಡಿಸುತ್ತವೆ. ಭಯಭೀತರಾಗಿ, ಭಾರತ ಸರ್ಕಾರವು ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ವಿರೋಧಿ ತಪ್ಪು ಮಾಹಿತಿಯನ್ನು ಹರಡುತ್ತಿದೆ. ವಿಕಿರಣದ ಬಗ್ಗೆ ಕಾಳಜಿಗಳು ಈಗ ಹೆಚ್ಚುತ್ತಿವೆ. ನಾಗರಿಕ ಚಳುವಳಿ ಸೀಮಿತವಾಗಿದೆ ಮತ್ತು ಸಂಪೂರ್ಣ ಮಾಧ್ಯಮ ಬ್ಲ್ಯಾಕೌಟ್ ಆಂತರಿಕ ಅವ್ಯವಸ್ಥೆಯನ್ನು ನಿಗ್ರಹಿಸಿದೆ" ಎಂಬ ಹೇಳಿಕೆಯೊಂದಿಗೆ ಡಾಕ್ಯುಮೆಂಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Full View

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)


​ವೈರಲ್‌ ಆದ ಡಾಕ್ಯುಮೆಂಟ್‌ನ್ನು ನೀವಿಲ್ಲಿ ನೋಡಬಹುದು




ಮೇ 14, 2025ರಂದು ಇನ್‌ಸ್ಟಾಗ್ರಾಮ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼبریکنگ - ہندوستان کے جوہری توانائی کے محکمے کے اندر سے معلومات لیک ہوئی. ذرائع اس بات کی تصدیق کرتے ہیں کہ بیاس میں برہموس ڈپو پر پاکستان کے درست حملے کے دوران، فعال تعیناتی کے لیے جوہری صلاحیت کے حامل وار ہیڈز خطرناک طور پر پھٹ گئے۔. گھبراہٹ میں، بھارتی حکومت عالمی توجہ ہٹانے کے لیے پاکستان مخالف ڈس انفو پھیلا رہی ہے۔. تابکاری کے خدشات اب بڑھ رہے ہیں۔ شہری نقل و حرکت محدود، اور میڈیا کے مکمل بلیک آؤٹ سے اندرونی افراتفری کو دبا دیا گیا۔ʼ ಎಂದು ಉರ್ದು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್ - ಭಾರತದ ಪರಮಾಣು ಇಂಧನ ಇಲಾಖೆಯ ಒಳಗಿನಿಂದ ಮಾಹಿತಿ ಸೋರಿಕೆಯಾಗಿದೆ. ಬಿಯಾಸ್‌ನಲ್ಲಿರುವ ಬ್ರಹ್ಮೋಸ್ ಡಿಪೋದ ಮೇಲೆ ಪಾಕಿಸ್ತಾನ ನಡೆಸಿದ ನಿಖರ ದಾಳಿಯ ಸಮಯದಲ್ಲಿ, ಸಕ್ರಿಯ ನಿಯೋಜನೆಗಾಗಿ ಪರಮಾಣು ಸಾಮರ್ಥ್ಯವಿರುವ ಸಿಡಿತಲೆಗಳು ಅಪಾಯಕಾರಿಯಾಗಿ ಸ್ಫೋಟಗೊಂಡಿವೆ ಎಂದು ಮೂಲಗಳು ದೃಢಪಡಿಸುತ್ತವೆ. ಭೀತಿಯಲ್ಲಿ, ಭಾರತ ಸರ್ಕಾರ ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ವಿರೋಧಿ ತಪ್ಪು ಮಾಹಿತಿಯನ್ನು ಹರಡುತ್ತಿದೆ. ವಿಕಿರಣದ ಬಗ್ಗೆ ಈಗ ಕಳವಳಗಳು ಹೆಚ್ಚುತ್ತಿವೆ. ನಾಗರಿಕರ ಚಲನವಲನಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಮಾಧ್ಯಮಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಮೂಲಕ ಆಂತರಿಕ ಅವ್ಯವಸ್ಥೆಯನ್ನು ಹತ್ತಿಕ್ಕಲಾಯಿತುʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ ಮಾಡಿದ್ದಾರೆ.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)


ಮೇ 13,2025ರಂದು ​ಎಕ್ಸ್‌ ಖಾತೆದಾರರೊಬ್ಬರು ʼURGENT ALERT – LEAK FROM INDIA’S ATOMIC ENERGY DEPT. Insider sources reveal that Pakistan’s targeted strike on the BrahMos depot in Beas triggered explosions of nuclear-capable warheads prepped for deployment. The Indian government is allegedly pushing anti-Pakistan propaganda to divert global scrutiny. Radiation risks are spiking, civilian movement is locked down, and a media blackout is hiding internal turmoilʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼತುರ್ತು ಎಚ್ಚರಿಕೆ - ಭಾರತದ ಪರಮಾಣು ಶಕ್ತಿ ಇಲಾಖೆಯಿಂದ ಸೋರಿಕೆ. ಬಿಯಾಸ್‌ನಲ್ಲಿರುವ ಬ್ರಹ್ಮೋಸ್ ಡಿಪೋದ ಮೇಲೆ ಪಾಕಿಸ್ತಾನ ನಡೆಸಿದ ಗುರಿ ದಾಳಿಯು ನಿಯೋಜನೆಗೆ ಸಿದ್ಧವಾಗಿರುವ ಪರಮಾಣು ಸಾಮರ್ಥ್ಯದ ಸಿಡಿತಲೆಗಳ ಸ್ಫೋಟಗಳಿಗೆ ಕಾರಣವಾಯಿತು ಎಂದು ಆಂತರಿಕ ಮೂಲಗಳು ಬಹಿರಂಗಪಡಿಸಿವೆ. ಜಾಗತಿಕ ಪರಿಶೀಲನೆಯನ್ನು ಬೇರೆಡೆಗೆ ತಿರುsaಗಿಸಲು ಭಾರತ ಸರ್ಕಾರ ಪಾಕಿಸ್ತಾನ ವಿರೋಧಿ ಪ್ರಚಾರವನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ನಾಗರಿಕ ಚಳುವಳಿ ಸೀಮಿತವಾಗಿದೆ ಮತ್ತು ಸಂಪೂರ್ಣ ಮಾಧ್ಯಮ ಬ್ಲ್ಯಾಕೌಟ್ ಆಂತರಿಕ ಅವ್ಯವಸ್ಥೆಯನ್ನು ನಿಗ್ರಹಿಸಿದೆ.ʼ ಎಂದು ಬರೆದಿರುವುದನ್ನು ನಾವು ನೋಡಬಹುದು.

ವೈರಲ್‌ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್‌)


​ವೈರಲ್‌ ಆದ ಮತ್ತೊಂದು ಪೊಸ್ಟ್‌ನ್ನು ನೀವಿಲ್ಲಿ ನೋಡಬಹುದು

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಬಿಯಾಸ್‌ನಲ್ಲಿ ಪರಮಾಣು ಸಾಮರ್ಥ್ಯದ ಸಿಡಿತಲೆಗಳು ಸ್ಫೋಟಗೊಂಡು ವಿಕಿರಣ ಸೋರಿಕೆಗೆ ಕಾರಣವಾಯಿತು ಎಂಬ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಪೊಸ್ಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲಿ, ಅದರ “ಇತ್ತೀಚಿನ ಸುದ್ದಿ” ಮತ್ತು ಪತ್ರಿಕಾ ಪ್ರಕಟಣೆ ವಿಭಾಗಗಳನ್ನು ಒಳಗೊಂಡಂತೆ, 12 ಮೇ 2025 ರಂದು ಅಥವಾ ನಂತರ ಬಿಯಾಸ್‌ಗೆ ಸಂಬಂಧಿಸಿದ ಯಾವುದೇ ವಿಕಿರಣ ಅಪಾಯ ಅಥವಾ ತುರ್ತು ಸೂಚನೆಯ ಯಾವುದೇ ದಾಖಲೆಯನ್ನು ಹೊರಡಿಸಿಲ್ಲ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ನಿಯಮಿತವಾಗಿ ತನ್ನ ಸೈಟ್‌ನಲ್ಲಿ ಸಲಹೆಗಳನ್ನು ಪ್ರಕಟಿಸುತ್ತದೆ. ಆದರೆ ನಮಗೆ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


​ಕೊನೆಯ ಪತ್ರಿಕಾ ಪ್ರಕಟಣೆಗಳು ಮೇ 8 ಮತ್ತು ಮೇ 13 ರಂದು ಬಂದವು. ವೈರಲ್ ಆಗಿರುವ ಹಕ್ಕುಗಳನ್ನು ಉಲ್ಲೇಖಿಸಿ, ದಾಖಲೆಯಲ್ಲಿ ಒದಗಿಸಲಾದ ವಿವರಗಳ ಸಂಪೂರ್ಣ ಪರಿಶೀಲನೆಯನ್ನು ನಾವು ನಡೆಸಿದ್ದೇವೆ. ಹೇಳಲಾದ ಪತ್ರಿಕಾ ಪ್ರಕಟಣೆಯಲ್ಲಿ ಹಾಟ್‌ಲೈನ್ ಸಂಖ್ಯೆ (91-11-3000-EVV/247 ಮೇಲ್ವಿಚಾರಣೆ ಮಾಡಲಾಗಿದೆ)ಮತ್ತು ಇಮೇಲ್‌ ವಿಳಾಸ inrsd-envr@gov.in ಸೇರಿವೆ, ಇವುಗಳಲ್ಲಿ ಯಾವುದೂ AERB ಅಥವಾ ಯಾವುದೇ ಅಧಿಕೃತ ಸರ್ಕಾರಿ ಘಟಕಕ್ಕೆ ಸಂಬಂಧಿಸಿದಲ್ಲ ಎಂದು ಸಾಭೀತಾಗಿದೆ.


​ವೈರಲ್‌ ಆದ ಚಿತ್ರದಲ್ಲಿ ʼಎಂಜಿನಿಯರ್ ಆರ್.ಕೆ. ಸುಬ್ರಮಣಿಯಂʼರನ್ನು ಭಾರತೀಯ ರಾಷ್ಟ್ರೀಯ ವಿಕಿರಣ ಸುರಕ್ಷತಾ ವಿಭಾಗದ ಮಹಾನಿರ್ದೇಶಕರನ್ನಾಗಿಯೂ ಪಟ್ಟಿ ಮಾಡಿದೆ. ಆದರೆ ನಮಗೆ ಸುದ್ದಿಯಲ್ಲಿ ಹೇಳಿರುವ ಹಾಗೆ ಮಹಾನಿರ್ದೇಶಕ ಎನ್ನುವ ಸ್ಥಾನ ಅಥವಾ ವಿಭಾಗ ಅಸ್ತಿತ್ವದಲ್ಲಿದೆ ಎಂಬುದಕ್ಕೆ ನಮಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. AERB ಯ ಅಧಿಕೃತ ವೆಬ್‌ಸೈಟ್ INRSDನ್ನು ಉಲ್ಲೇಖಿಸಿಲ್ಲ ಮತ್ತು ಅಧಿಕೃತ ದಾಖಲೆಗಳು ಅಥವಾ ಡೈರೆಕ್ಟರಿಗಳಲ್ಲಿ 'ಎಂಜಿನಿಯರ್ ಆರ್.ಕೆ. ಸುಬ್ರಮಣಿಯಂ'ಗಾಗಿ ಹುಡುಕಾಟ ನಡೆಸಿದಾಗ ಅಲ್ಲಿಯೂ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


​ನಾವು ವೈರಲ್‌ ಆದ ಪೊಸ್ಟ್‌ನಲ್ಲಿ ಕಾಣುವ ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಡಾಕ್ಯುಮೆಂಟ್‌ನಲ್ಲಿರುವ ಲೋಗೋ ಅಧಿಕೃತ AERB ಲೋಗೋಗೆ ಹೊಂದಿಕೆಯಾಗುವುದಿಲ್ಲ. ಎರಡು ಲೋಗೋಗಳ ಹೋಲಿಕೆಯು ವಿನ್ಯಾಸ ಮತ್ತು ಅಂಶಗಳಲ್ಲಿನ ವಿಭಿನ್ನ ವ್ಯತ್ಯಾಸಗಳನ್ನು ಬಹಿರಂಗಪಡಿಸುತ್ತದೆ, ಇದು ಡಾಕ್ಯುಮೆಂಟ್‌ನ ತಯಾರಿಕೆಯನ್ನು ದೃಢೀಕರಿಸುತ್ತದೆ. AERB ಯ ಅಧಿಕೃತ ಸಂಪರ್ಕ ಮಾಹಿತಿ ಮತ್ತು ಸಾಂಸ್ಥಿಕ ರಚನೆಯು ಸಾರ್ವಜನಿಕವಾಗಿ ಲಭ್ಯವಿದೆ ಮತ್ತು ವೈರಲ್ ಡಾಕ್ಯುಮೆಂಟ್‌ ನಲ್ಲಿರುವ ಯಾವುದೇ ಅಂಶಗಳು ಈ ದಾಖಲೆಗಳಿಗೆ ಹೊಂದಿಕೆಯಾಗುವುದಿಲ್ಲ.


ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ವ್ಯಾಪಕ ತಪ್ಪು ಮಾಹಿತಿ ಅಭಿಯಾನವನ್ನು ಬಹಿರಂಗವಾಗಿ ಬಹಿರಂಗಪಡಿಸಿತು, ಭಾರತದ S-400 ಮತ್ತು ಬ್ರಹ್ಮೋಸ್ ಸ್ಥಾಪನೆಗಳು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿನ ವಾಯುನೆಲೆಗಳು ಮತ್ತು ಮದ್ದುಗುಂಡು ಡಿಪೋಗಳಿಗೆ ಹಾನಿಯನ್ನು ನಿರಾಕರಿಸಿತು, ಅಂತಹ ಹಕ್ಕುಗಳು "ಸಂಪೂರ್ಣವಾಗಿ ತಪ್ಪು" ಎಂದು ಪ್ರತಿಪಾದಿಸಿತು. ಬಿಯಾಸ್‌ನಲ್ಲಿ ಯಾವುದೇ ವಿಕಿರಣ ಘಟನೆಯನ್ನು ಭಾರತೀಯ ಅಧಿಕಾರಿ ಅಥವಾ ಮಿಲಿಟರಿ ವಕ್ತಾರರು ವರದಿ ಮಾಡಿಲ್ಲ.

​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆಗಿರುವ ಪತ್ರಿಕಾ ಪ್ರಕಟಣೆಯು ಕಟ್ಟುಕಥೆಯಾಗಿದೆ, ಪ್ರಕಟಣೆಯಲ್ಲಿರುವ ಹಾಟ್‌ಲೈನ್ ಸಂಖ್ಯೆ, ಇಮೇಲ್ ಐಡಿ ಮತ್ತು ಮಹಾನಿರ್ದೇಶಕರ ಹೆಸರು ಮತ್ತು ಭಾರತೀಯ ರಾಷ್ಟ್ರೀಯ ವಿಕಿರಣ ಸುರಕ್ಷತಾ ವಿಭಾಗ (INRSD) ನಂತಹ ಪ್ರಮುಖ ವಿವರಗಳು ಅಸ್ತಿತ್ವದಲ್ಲಿಲ್ಲ. ಅಧಿಕೃತ AERB ಲೋಗೋಗೆ ಹೋಲಿಸಿದರೆ ದಾಖಲೆಯಲ್ಲಿರುವ ಲೋಗೋ ತಪ್ಪಾಗಿದೆ. ಮೇ 12ರಂದು AERB ಯಾವುದೇ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ. ಕೊನೆಯ ಪತ್ರಿಕಾ ಪ್ರಕಟಣೆಗಳು ಮೇ 8 ಮತ್ತು ಮೇ 13ರಂದು ಬಂದಿವೆ. ಮೇ 10ರಂದು ವರದಿಯಾದ ಯಾವುದೇ ಕ್ಷಿಪಣಿ ದಾಳಿಯ ನಂತರ ಬಿಯಾಸ್ ಸೌಲಭ್ಯದಲ್ಲಿ ವಿಕಿರಣ ತುರ್ತುಸ್ಥಿತಿಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಹೇಳಿಕೆಗಳಿಲ್ಲ.

Claim :  ಬಿಯಾಸ್‌ನಲ್ಲಿರುವ ಮಿಲಿಟರಿ ಸೌಲಭ್ಯದಲ್ಲಿ ವಿಕರಣ ಅಪಾಯಕಾರಿಯಾಗಿ ಸ್ಫೋಟಗೊಂಡಿವೆ ಎಂದು ಪುರಾವೆಯಿಲ್ಲದ ಮಾಹಿತಿ ಹಂಚಿಕೆ
Claimed By :  Social Media Users
Fact Check :  Unknown
Tags:    

Similar News