ಫ್ಯಾಕ್ಟ್‌ಚೆಕ್: ರಸ್ತೆಯ ಗುಂಡಿಗೆ ಮಹಿಳೆಯೊಬ್ಬಳು ಬಿದ್ದಿರುವ ವಿಡಿಯೋ ಭಾರತದದಲ್ಲ
ರಸ್ತೆಯ ಗುಂಡಿಗೆ ಮಹಿಳೆಯೊಬ್ಬಳು ಬಿದ್ದಿರುವ ವಿಡಿಯೋ ಭಾರತದದಲ್ಲ
woman falls into pothole
ಭಾರತದ ಸಾಕಷ್ಟು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುಜರಾತ್, ರಾಜಸ್ಥಾನ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮಿಜೋರಾಂ ಮೊದಲಾದೆಡೆ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳನ್ನು ನಿರ್ಬಂಧಿಸಲಾಗಿದೆ, ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿವೆ.
ಈ ನಡುವೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆ ರ‍್ಯಾಂಪ್‌ನಲ್ಲಿ ಮಹಿಳೆಯೊಬ್ಬರು ಗುಂಡಿಗೆ ಬೀಳುತ್ತಿರುವ ವಿಡಿಯೋವನ್ನು ನೆಟ್ಟಿಗರು ತಮ್ಮ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿದ್ದ ಗುಂಡಿಯ ಒಳಗೆ ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರು ತುಂಬಿದ ಗುಂಡಿಯಿಂದ ಆಕೆಯನ್ನು ರಕ್ಷಿಸಲು ಕೆಲವು ಸ್ಥಳೀಯರು ಧಾವಿಸಿವುದನ್ನು ಸಹ ನೋಡಬಹುದು.
‘अयोध्या का शानदार रामपथ। सिर्फ 13 किमी, एक गुजराती कंपनी ने बनाया है, मात्र 844 करोड़ में। प्रति किलोमीटर सिर्फ 66 करोड़! इससे बेहतर टैक्सपेयर्स के पैसे का और क्या सदुपयोग हो सकता था मित्रों? राह चलते स्नान का पुण्य! ಎಂಬ ಪೋಸ್ಟ್‌ಗಳನ್ನು ಹಿಂದಿಯಲ್ಲಿ ಪೋಸ್ಟ್ ಮಾಡಲಾಗಿದೆ. 'ಗುಜರಾತಿ ಕಂಪನಿಯೊಂದು ಅಯೋಧ್ಯೆಯ ಭವ್ಯವಾದ ರಾಮಪಥವನ್ನು, ಕೇವಲ 844 ಕೋಟಿಯಲ್ಲಿ 13 ಕಿ.ಮೀ ರಸ್ತೆ ನಿರ್ಮಿಸಿದೆ. ಪ್ರತಿ ಕಿಲೋಮೀಟರಿಗೆ 66 ಕೋಟಿ ಮಾತ್ರ! ಸ್ನೇಹಿತರೇ, ತೆರಿಗೆ ಪಾವತಿದಾರರ ಹಣದ ಉಪಯೋಗವೇನು? ನಡೆದುಕೊಂಡು ಸ್ನಾನ ಮಾಡುವುದು ಪುಣ್ಯ!' ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
अयोध्या का शानदार रामपथ। सिर्फ 13 किमी, एक गुजराती कंपनी ने बनाया है, मात्र 844 करोड़ में। प्रति किलोमीटर सिर्फ 66 करोड़!
— PAWAN CHOUDHARY (@PAWANCH87454967) July 3, 2024
इससे बेहतर टैक्सपेयर्स के पैसे का और क्या सदुपयोग हो सकता था मित्रों? राह चलते स्नान का पुण्य!
😂😂😂 pic.twitter.com/g2D9F596CD
अयोध्या का शानदार रामपथ, सिर्फ 13 किमी, एक गुजराती कंपनी ने बनाया है, मात्र 844 करोड़ में।
— Satwant Singh Rana (@Satwant_Rana_) July 3, 2024
प्रति किलोमीटर सिर्फ 66 करोड़!
इससे बेहतर टैक्सपेयर्स के पैसे का और क्या सदुपयोग हो सकता था मित्रों?
🤦♂️😂😂😂 pic.twitter.com/jyHMLfYWQK
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಭಾರತ ದೇಶಕ್ಕೆ ಸಂಬಂಧಿಸಿದ್ದಲ್ಲ. ವೈರಲ್ ಆದ ಮೂಲ ವಿಡಿಯೋ ಬ್ರೆಸಿಲ್‌ನದ್ದು.
ನಾವು ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿ ಕಾಣುವ ಕೆವಲು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ವೈರಲ್ ಆದ ವಿಡಿಯೋ ಸಾಕಷ್ಟು ಕಾಲಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನಾವು ಕಂಡುಕೊಂಡೆವು. ಜೂನ್ 25,2024ರಲ್ಲಿ ಇನ್‌ಸ್ಟಾಗ್ರಾಮ್ ಖಾತೆದಾರರ ತಮ್ಮ ಖಾತೆಯಲ್ಲಿ ಈ ವಿಡಿಯಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.
ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇಲ್ಲಿದೆ.
ಮತ್ತಷ್ಟು ಹುಡುಕಿದಾಗ, alagoas24horas.com.br ಎಂಬ ವೆಬ್‌ಸೈಟ್‌ನಲ್ಲಿ ಜೂನ್ 2022 ರಲ್ಲಿ ಪ್ರಕಟವಾದ ಲೇಖನವೊಂದನ್ನು ನಾವು ಕಂಡುಕೊಂಡೆವು. ಬ್ರೆಜಿಲ್‌ನ ಸಿಯಾರಾದಲ್ಲಿನ ಕ್ಯಾಸ್ಕಾವೆಲ್‌ನಲ್ಲಿ ಬೀದಿಯಲ್ಲಿ ವಾಕಿಂಗ್ ಮಾಡುವಾಗ ಸಿಂಕ್‌ಹೋಲ್‌ನಿಂದ ನುಂಗಿದ ಮಹಿಳೆ ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವೊಂದು ಪ್ರಕಡಿಸಿರುವುದನ್ನು ನಾವು ಕಂಡುಕೊಂಡೆವು. ಆ ವರದಿಯ ಪ್ರಕಾರ, ಫೋರ್ಟಲೆಜಾದ ಮೆಟ್ರೋಪಾಲಿಟನ್ ಪ್ರದೇಶದ ಕ್ಯಾಸ್ಕಾವೆಲ್‌ನಲ್ಲಿರುವ ರಸ್ತೆಯಲ್ಲಿ ನೀರು ತುಂಬಿದ ರಂಧ್ರದಿಂದಾಗಿ ಮಹಿಳೆಯೊಬ್ಬರು ಗುಂಡಿಗೆ ಬಿದ್ದಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
istoe.com.br ನಲ್ಲಿ ಪ್ರಕಟವಾದ ಲೇಖನದ ಪ್ರಕಾರ , 48 ವರ್ಷದ ಮರಿಯಾ ರೋಸಿಲೀನ್ ಅಲ್ಮೇಡಾ ಡಿ ಸೋಜಾ ಕ್ಯಾಸ್ಕಾವೆಲ್, ಫೋರ್ಟಲೆಜಾ (CE) ನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಯುಟ್ಯೂಬ್ ಚಾನೆಲ್ CATVE ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಮರಿಯಾ ಪಾದಚಾರಿ ಮಾರ್ಗದಲ್ಲಿ ಛತ್ರಿ ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ರಸ್ತೆಯ ಗುಂಡಿಗೆ ಬಿದ್ದಳು ತಕ್ಷಣ ಆಕೆಗೆ ಸಹಾಯ ಮಾಡಲು ಮೂವರು ಪುರುಷರು ಬರುವುದನ್ನು ನಾವು ವಿಡಿಯೋವಿನಲ್ಲಿ ಕಾಣಬಹುದು.
ಹೀಗಾಗಿ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ವೀಡಿಯೊ ಬ್ರೆಜಿಲ್‌ನ ಕ್ಯಾಸ್ಕಾವೆಲ್‌ಗೆ ಸಂಬಂಧಿಸಿದ್ದು. ಉತ್ತರ ಪ್ರದೇಶದ ಅಯೋಧ್ಯೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.