ಫ್ಯಾಕ್ಟ್‌ಚೆಕ್‌: ಮಾರ್ಚ್‌ 24,2024ರಂದು ಹೋಳಿ ಹಬ್ಬದ ದಿನದಂದು ನಾಸಾ ಬಾಹ್ಯಾಕಾಶದಿಂದ ಭಾರತದ ಚಿತ್ರವನ್ನು ತೆಗೆದಿದೆ

ಮಾರ್ಚ್‌ 24,2024ರಂದು ಹೋಳಿ ಹಬ್ಬದ ದಿನದಂದು ನಾಸಾ ಬಾಹ್ಯಾಕಾಶದಿಂದ ಭಾರತದ ಚಿತ್ರವನ್ನು ತೆಗೆದಿದೆ

Update: 2024-04-02 19:23 GMT

ಭಾರತದಲ್ಲಿ ಬಣ್ಣಗಳ ಹಬ್ಬ, ಹೋಳಿ ಹಬ್ಬವನ್ನು ಲಕ್ಷಾಂತರ ಭಾರತೀಯರು ಆಚರಿಸುತ್ತಾರೆ. ಈ ಹಬ್ಬ ವಸಂತಕಾಲ ಆರಂಭವಾಗುತ್ತದೆಂದು ಸೂಚಿಸುತ್ತದೆ, ದುಷ್ಟ ಶಕ್ತಿಗಳ ಮೇಲೆ ಒಳ್ಳೆಯದ ವಿಜಯದ ಸಂಕೇತವೇ ಈ ಹಬ್ಬ. ಹಬ್ಬದ ದಿನದಂದು ಹೋಲಿಕಾ ದಹನವನ್ನು ನೋಡುತ್ತಾ, ಬಂದಂತಹ ಜನರು, ಒಟ್ಟಿಗೆ ಹಾಡುಗಳನ್ನು ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಹಬ್ಬವನ್ನು ಎಲ್ಲರೂ ಉಲ್ಲಾಸ,ಉತ್ಸಾಹದಿಂದ ಆಚರಿಸುತ್ತಾರೆ. ಪರಸ್ಪರ ಬಣ್ಣ ಎರಚುವ ಮೂಲಕ ಪ್ರೀತಿ ವಾತ್ಸಲ್ಯವನ್ನು ತೋರಿಸುತ್ತಾರೆ.

1st time NASA image of India seen from space on Holi. Feel proud in new India. Share in your RWA WhatsApp before Soros makes NASA delete this image from their servers!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ನಾಸಾ ಈ ಫೋಟೋವನ್ನು ಸ್ಯಾಟಿಲೈಟ್‌ನ ಮೂಲಕ ಕ್ಲಿಕ್ಕಿಸಿದೆ. ನಾಸಾ ಈ ಫೋಟೋವನ್ನು ಡಿಲೀಟ್ ಮಾಡುವ ಮುನ್ನ ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿಕೊಳ್ಳಿ ಎಂದು ಪೋಸ್ಟ್‌ ಮಾಡಿದ್ದರು. 


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಚಿತ್ರವನ್ನು ನಾಸಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿಲ್ಲ. ವೈರಲ್‌ ಚಿತ್ರವನ್ನು ಮಾರ್ಫಿಂಗ್‌ ಮಾಡಲಾಗಿದೆ.

ವೈರಲ್‌ ಆದ ಚಿತ್ರದ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್‌ನ ಮೂಲಕ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ನಮಗೆ ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಯಾವುದೇ ವರದಿ ಅಧವಾ ಸುದ್ದಿ ಕಾಣಿಸಲಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ಭೂಪಟಕ್ಕೆ ಕಾಣುವ ಬಣ್ಣಗಳು ಕಂಪ್ಯೂಟರ್‌ನ ಮೂಲಕ ಎಡಿಟ್‌ ಮಾಡಿದಂತಿರುವುದನ್ನು ನಾವು ಕಾಣಬಹುದು. ವೈರಲ್‌ ಆದ ಧ್ವಜದಲ್ಲಿ ಕಾಣುವ ಪ್ರತಿಯೊಂದು ರಾಜ್ಯಕ್ಕೂ ನಿರ್ದಿಷ್ಟ ಬಣ್ಣವಿರುವುದನ್ನು ನಾವು ಕಾಣಬಹುದು. ಆದರೆ ಇದು ವಾಸ್ತವಾಗಿ ಸಾಧ್ಯವಿಲ್ಲ. ಹೋಳಿ ಹಬ್ಬದಲ್ಲಿ ಜನರು ಕೇವಲ ಒಂದೇ ಒಂದು ಬಣ್ಣದಲ್ಲಿ ಆಟವಾಡುವುದಿಲ್ಲ, ವಿವಿಧ ಬಣ್ಣಗಳನ್ನು ಉಪಯೋಗಿಸುತ್ತಾರೆ.

ನಾಸಾ ಅಧಿಕೃತ ವೆಬ್‌ಸೈಟ್‌ನಲ್ಲಿ ವೈರಲ್‌ ಆದ ಚಿತ್ರಕ್ಕೆ ಸಂಬಂಧಿಸಿ ಯಾವುದಾದರೂ ಸುದ್ದಿ ತಿಳಿಯ ಬಹುದೇನೋ ಎಂದು ನಾವು ನಾಸಾ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದಾಗ ನಮಗೆ ಯಾವುದೇ ಫಲಿತಾಂಶ ಸಿಗಲಿಲ್ಲ.

ಅಷ್ಟೇ ಅಲ್ಲ ಹೋಳಿ ಎಂಬ ಕೀವರ್ಡ್‌ನ್ನು ಬಳಸಿ ಹುಡುಕಾಟ ನಡೆಸಿದಾಗಲೂ ನಮಗೆ ವೆಬ್‌ಸೈಟ್‌ಗಳಲ್ಲಿ ಯಾವುದೇ ಸಂಬಂಧಿತ ಚಿತ್ರಗಳು ಸಿಗಲಿಲ್ಲ.

ಇದರಿಂದ ಸಾಭೀತಾಗಿದ್ದೇನೆಂದರೆ, ಹೋಳಿ ಸಮಯದಲ್ಲಿ ವರ್ಣರಂಜಿತ ಭಾರತದ ಚಿತ್ರವನ್ನು ನಾಸಾ ಪ್ರಕಟಿಸಿಲ್ಲ. ವೈರಲ್‌ ಆದ ಚಿತ್ರವನ್ನು ಮಾರ್ಫಿಂಗ್‌ ಮಾಡಲಾಗಿದೆ. ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

Claim :  Viral image was taken by NASA from space on the occasion of Holi on March 25, 2024
Claimed By :  Social Media Users
Fact Check :  False
Tags:    

Similar News