ಫ್ಯಾಕ್ಟ್‌ಚೆಕ್‌: ಅಮಿತಾಬ್‌ ಬಚ್ಚನ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸುದ್ದಿಯ ಅಸಲಿಯತ್ತೇನು?

ಅಮಿತಾಬ್‌ ಬಚ್ಚನ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸುದ್ದಿಯ ಅಸಲಿಯತ್ತೇನು?

Update: 2024-01-17 16:00 GMT

ಇದೀಗ ʼಬಿಗ್‌ಬಿ 24ʼ ವೆಬ್‌ಸೈಟ್‌ನ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಗಿದೆ. ವೈರಲ್‌ ಆದ ಫೋಟೋವಿಗೆ ಶೀರ್ಷಿಕೆಯಾಗಿ "ಅಮಿತಾಬ್‌ ಬಚ್ಚನ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಇದರಿಂದಾಗಿ ಬಗ್‌ಬಿ ಕುಟುಂಬದ ಸದಸ್ಯರು ದುಃಖದಲ್ಲಿದ್ದಾರೆ" ಎಂದು ಬರೆದು ಪೊಸ್ಟ್‌ ಮಾಡಿದ್ದರು. ಈ ಫೋಟೋದಲ್ಲಿ ಬಿಗ್‌ಬಿ ಅಮಿತಾಬ್‌ರವರು ಅಸ್ವಸ್ಥರಾಗಿ ಕಾಣಿಸಿದ್ದರೆ, ಪಕ್ಕದಲ್ಲಿ ಅಭಿಷೇಕ್‌ ಬಚ್ಚನ್‌ ದುಃಖ ಪಡುತ್ತಿರುವುದನ್ನು ನೋಡಬಹುದು.

ʼಬಿಗ್‌ಬಿ 24ʼ ವೆಬ್‌ಸೈಟ್‌ನಲ್ಲಿ ಎರಡು ಪ್ಯಾರಾಗ್ರಾಫ್‌ನಲ್ಲಿರುವ ವರದಿ ಕಂಡುಬಂದಿತು. ಇದರಲ್ಲಿರುವ ವರದಿಯೇನೆಂದರೆ "ಅಮಿತಾಬ್‌ರವರ ಆರೋಗ್ಯದಲ್ಲಿ ಯಾವುದೇ ಚೇತರಿಕೆಯ ಕಂಡುಬರುತ್ತಿಲ್ಲ, ಅಭಿಷೇಕ್‌ ಬಚ್ಚನ್‌ ಸಹ ತಂದೆ ಬದುಕುಳಿಯುವ ಆಸೆಯನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿ ಮಾಡಿದ್ದರು.

ನಾಲ್ಕನೇ ಪ್ಯಾರಾದಲ್ಲಿ "ಅಮಿತಾಬ್‌ರವರು ಚಿತ್ರದ ಚಿತ್ರೀಕರಣದ ವೇಳೆ ಪಾಶ್ವವಾಯುವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಅಮಿತಾಬ್‌ರವರನ್ನು ಪರೀಕ್ಷಿಸಿದ ನಂತರ ವೈದ್ಯರು ಸಹ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿಲ್ಲ" ಎಂದು ವರದಿ ಮಾಡಿದ್ದರು.

https://big24.in/the-bachchan-family-is-not-able-to-amitabh-bachchan/

ಫ್ಯಾಕ್ಟ್‌ಚೆಕ್‌

ವೈರಲ್‌ ಅದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.

ನಾವು ಗೂಗಲ್‌ನಲ್ಲಿ ಹಲವಾರು ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಯಾವುದೇ ಫಲಿತಾಂಶವಿಲ್ಲ. ಅಷ್ಟೇ ಅಲ್ಲ ಅಮಿತಾಬ್‌ರವರ ಆರೋಗ್ಯದಲ್ಲಿ ಏರಿಳಿತವಾಗಿದ್ದರೆ ಪ್ರಮುಖ ಸುದ್ದಿ ಮಾಧ್ಯಮಗಳು ಈ ವಿಷಯವನ್ನು ಪ್ರಕಟಿಸುತ್ತಿದ್ದರು. ನಮಗೆ ಪತ್ರಿಕೆಯಲ್ಲಾಗಲೀ, ವೆಬ್‌ಸೈಟ್‌ಗಳಲ್ಲಾಗಲಿ ಅಥವಾ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಾಗಲೀ ಈ ಸುದ್ದಿಯ ಕುರಿತು ಯಾವುದೇ ಸುಳಿವು ಸಿಗಲಿಲ್ಲ.

ವೈರಲ್‌ ಆದ ಫೋಟೋವನ್ನು ನಾವು ಲೇಖನದಲ್ಲಿ ಕಾಣುವ ಥಂಬ್‌ನೈಲ್‌ನ ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದಾಗ ನಮಗೆ ʼದಾಸ್ವಿʼ ಚಿತ್ರದ ಟ್ರೈಲರ್‌ ಕಂಡುಬಂದಿತು. ಚಿತ್ರದ ಥಂಬ್‌ನೈಲ್‌ ಮತ್ತು ಬಿಗ್‌ಬಿ 24 ವೆಬ್‌ಸೈಟ್‌ನಲ್ಲಿ ಕಾಣಿವ ಎರಡೂ ಥಂಬ್‌ನೈಲ್‌ ಇಂದೇ ಆಗಿತ್ತು.

Full View

ವೈರಲ್‌ ಆದ ಅಮಿತಾಬ್‌ರವರ ಚಿತ್ರವನ್ನು ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ ಮೂಲಕ ಹುಡುಕಾಟ ನಡೆಸಿದಾಗ ನಮಗೆ ನಮಗೆ ನವಂಬರ್‌29,2005ರಲ್ಲಿ ಅಮಿತಾಬ್‌ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪೋಟೋ ಕಂಡುಬಂದಿತು.

ವೈರಲ್‌ ಆದ ಅಮಿತಾಬ್‌ರ ಚಿತ್ರಕ್ಕೂ ಬಿಗ್‌ಬಿ 24 ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಚಿತ್ರಕ್ಕೂ ಬಹುಪಾಲು ಹೊಂದಿಕೆಯಾಗುತ್ತಿತ್ತು.

ಹೀಗಾಗಿ ವೈರಲ್‌ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಮಿತಾಬ್‌ರ ಚಿತ್ರ 2005ರದ್ದು ಮತ್ತು ಅಭಿಷೇಕ್‌ ಬಚ್ಚನ್‌ ಚಿತ್ರ ʼದಾಸ್ವಿʼ ಚಿತ್ರದ್ದು ಎಂದು ಸಾಭೀತಾಗಿದೆ

Claim :  The news includes a photograph of a visibly unwell Amitabh Bachchan, accompanied by a somber image of his son Abhishek Bachchan, causing distress to everyone.
Claimed By :  online news report
Fact Check :  False
Tags:    

Similar News