ಫ್ಯಾಕ್ಟ್‌ಚೆಕ್‌: 2024 ರ ಸಾರ್ವತ್ರಿಕ ಚುನಾವಣೆ ಚುನಾವಣೆಗೂ ಮೊದಲು ಉಚಿತ ರೀಚಾರ್ಜ್‌ ನೀಡುತ್ತೇವೆ ಎಂದು ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ಹೇಳಿರಲಿಲ್ಲ.

2024 ರ ಸಾರ್ವತ್ರಿಕ ಚುನಾವಣೆ ಚುನಾವಣೆಗೂ ಮೊದಲು ಉಚಿತ ರೀಚಾರ್ಜ್‌ ನೀಡುತ್ತೇವೆ ಎಂದು ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ಹೇಳಿರಲಿಲ್ಲ.

Update: 2023-12-18 08:29 GMT

congress offers mobile recharge

ಭಾರತೀಯ ಕಾಂಗ್ರೇಸ್‌ ಪಕ್ಷ ಕಾಮಗ್ರೇಸಿಗೆ ಬೆಂಬಲ ಸೂಚಿಸುವವರಿಗೆ ಮೂರು ತಿಂಗಳಿ ಉಚಿತ ರೀಚಾರ್ಜ್‌ನ್ನು ನೀಡುತ್ತೇವೆ ಎಂಬ ಸುದ್ದಿ ವಾಟ್ಸ್‌ಪ್‌ನಲ್ಲಿ ಸಂದೇಶದ ಮೂಲಕ ರವಾನಿಸಲಾಗುತ್ತಿದೆ. ವಾಟ್ಸ್‌ಪ್‌ನ ಸಂದೇಶದಲ್ಲಿ ಒಂದು ಯುಆರ್‌ಎಲ್‌ ಲಿಂಕ್‌ನ್ನು ಸಹ ಒದಗಿಸಲಾಗಿದೆ. ಉಚಿತ ರಿಚಾರ್ಜ್‌ನ್ನು ಪಡೆಯಲು ಸಂದೇಶದಲ್ಲಿ ಬಂದಂತಹ ಲಿಂಕಿನ ಮೇಲೆ ಕ್ಲಿಕ್‌ ಮಾಡಿ ಎಂದು ಹೇಳಲಾಗಿದೆ. ಈ ಉಚಿತ ರೀಚಾರ್ಜ್‌ನ ಸೌಲಭ್ಯವನ್ನು ಪಡೆಯಲು ನಿಮಗೆ ಕೇವಲ ಡಿಸಂಬರ್‌ 15ರ ವರೆಗೆ ಮಾತ್ರ ಕಾಲಾವಕಾಶ ಎಂದು ರವಾನಿಸಿದ ಮೆಸೇಜ್‌ನಲ್ಲಿ ಬರೆಯಲಾಗಿದೆ.

“Rahul Gandhi is giving 3 months Free recharge to all Indian users so that more and more people can vote for Congress in 2024 elections and Congress government can be formed again. Click on the link given below to get 3 months free recharge ( Last date - 15 December 2023).” ಎಂದ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಈ ಸಂದೇಶದಲ್ಲಿ 2024ರ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಎಲ್ಲರೂ ಮತವನ್ನು ಚಲಾಯಿಸಿ ಕಾಂಗ್ರೇಸ್‌ನ್ನು ಗೆಲುವಂತೆ ಮಾಡಿ ಎಂದು ಬರೆಯಲಾಗಿತ್ತು.

“Rahul Gandhi is giving 3 months Free recharge to all Indian users so that more and more people can vote for Congress in 2024 elections and Congress government can be formed again. Click on the link given below to get 3 months free recharge ( Last date - 15 December 2023).”


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ಕಾಂಗ್ರೇಸ್‌ ಪಕ್ಷ ಇಂತಹ ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ. ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ಕಾಂಗ್ರೇಸ್‌ ಪಕ್ಷವಾಗಲಿ ಅಥವಾ ರಾಹುಲ್‌ ಗಾಂಧಿಯ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಯಾವುದೇ ಮಾಹಿತಿ ಹೊರಬಂದಿಲ್ಲ. ಜೊತೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ (INC) ಸಹ ಗ್ರಾಹಕರಿಗೆ ಮೂರು ತಿಂಗಳು ಉಚಿತ ರೀಚಾರ್ಜ್‌ ನೀಡುವುದಾಗಿ ಎಲ್ಲಿಯೂ ಸಹ ಪ್ರಸ್ತಾಪಿಸಿಲ್ಲ. ಜೊತೆಗೆ ನಮಗೆ ತಿಳಿದಿರುವಂತಹ ಅನೇಕ ಕಾಂಗ್ರೇಸ್‌ನ ವಿಶ್ವಾಸ ಸಂಸ್ಥೆಗಳನ್ನು ವಿಚಾರಿಸಿದಾಗ ನಮಗೆ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಜೊತೆಗೆ ವೈರಲ್‌ ಆದ ಸುದ್ದಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯೂ ಸಹ ಪ್ರಕಟಗೊಂಡಿಲ್ಲ.

ಇತ್ತೀಚೆಗೆ ಡೇಟಾವನ್ನು ಕದಿಯಲು ಸಾಕಷ್ಟು ಹ್ಯಾಕರ್ಸ್‌ ವಿವಿಧ ರೀತಿಯ ಉಪಾಯಗಳೊಂದಿಗೆ ಬರುತ್ತಿದ್ದಾರೆ. ಅದರಲ್ಲಿ ಇದೂ ಒಂದು. ವೈರಲ್‌ ಆದ ಸಂದೇಶದಲ್ಲಿ ಕಂಡುಬರುವ ಸಂದೇಶದಲ್ಲಿರುವ ಲಿಂಕ್‌ಗೂ ಕಾಂಗ್ರೇಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಕ್‌ನ್ನು ಒತ್ತಿದಾಗ ಆ ಲಿಂಕ್‌ ಯಾವ ಪೇಜಿಗೂ ಸಹ ವರ್ಗಾಯಿಸಲಿಲ್ಲ.

ಹಾಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.2024 ರ ಸಾರ್ವತ್ರಿಕ ಚುನಾವಣೆ ಚುನಾವಣೆಗೂ ಮೊದಲು ಉಚಿತ ರೀಚಾರ್ಜ್‌ ನೀಡುತ್ತೇವೆ ಎಂದು ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿರಲಿಲ್ಲ.

Claim :  Rahul Gandhi announced free mobile recharge offer to citizen ahead of the 2024 General Elections
Claimed By :  whatsapp users
Fact Check :  False
Tags:    

Similar News