ಫ್ಯಾಕ್ಟ್‌ಚೆಕ್‌: ಮುಖೇಶ್‌ ಅಂಬಾನಿ ಅನಂತ್‌ ಅಂಬಾನಿಯ ಮದುವೆಯ ಖುಷಿಯಲ್ಲಿ ಜನರಿಗೆ ಹಣವನ್ನು ನೀಡಲು ನಿರ್ಧಾರಿಸಿದ್ದಾರಾ?

ಮುಖೇಶ್‌ ಅಂಬಾನಿ ಅನಂತ್‌ ಅಂಬಾನಿಯ ಮದುವೆಯ ಖುಷಿಯಲ್ಲಿ ಜನರಿಗೆ ಹಣವನ್ನು ನೀಡಲು ನಿರ್ಧಾರಿಸಿದ್ದಾರಾ?

Update: 2024-04-09 06:03 GMT

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ರಾಧಿಕಾ ಮರ್ಚೆಂಟ್‌ರೊಂದಿಗೆ ಜನವರಿಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ವಿವಾಹ ಜುಲೈ 12, 2024 ರಂದು ಅದ್ದೂರಿಯಾಗಿ ನಡೆಯಲಿದೆ. ಇತ್ತೀಚಿಗಷ್ಟೇ ಅಂದರೆ,ಮಾರ್ಚ್ 1 ರಂದು ಗುಜರಾತ್‌ನ ಜಾಮ್‌ನಗರದಲ್ಲಿ ಮದುವೆಯ ಪೂರ್ವ ಆಚರಣೆಗಳು ಪ್ರಾರಂಭವಾದವು. ಮಾರ್ಚ್‌ 1ರಿಂದ 3ನೇ ತಾರೀಖಿನವರೆಗೆ ಗುಜರಾತ್ ನ ಜಾಮ್ ನಗರದಲ್ಲಿ ಮದುವೆಯ ಪೂರ್ವ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಹಾಲಿವುಡ್ ಮತ್ತು ಬಾಲಿವುಡ್ ತಾರೆಗಳು ಮತ್ತು ವಿಶ್ವದಾದ್ಯಂತದ ಕ್ರಿಕೆಟಿಗರು ಭಾಗವಹಿಸಿದ್ದರು.

ಮದುವೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ, ಮುಖೇಶ್ ಅಂಬಾನಿ ತನ್ನ ಮಗನ ಮದುವೆಯ ಸಂತೋಷದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ 5000 ರೂಪಾಯಿ ನೀಡುತ್ತಿದ್ದಾರೆ ಎಂಬ ವೈರಲ್‌ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹ್ಯಾಪಿಲೂ ಎಂಬ ಫೇಸ್‌ಬುಕ್ ಬಳಕೆದಾರರು ತನ್ನ ಖಾತೆಯಲ್ಲಿ "ಜಿಯೋ ಭಾರತೀಯರೆಲ್ಲರಿಗೂ ₹5000 ಉಡುಗೊರೆಯನ್ನು ನೀಡುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

“ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಯ ಖುಷಿಯಲ್ಲಿ ಭಾರತೀಯರಿಗೆ 5000 ನೀಡುತ್ತಿದ್ದಾರೆ. ಈ ಹಣವನ್ನು ನಿಮ್ಮ ಖಾತೆಗೆ ಹಿಂಪಡೆಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದರು.

Full View 

ಫ್ಯಾಕ್ಟ್‌ಚೆಕ್‌

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಯ ಸಂತೋಷದಲ್ಲಿ ಜನರಿಗೆ ಹಣವನ್ನು ನೀಡುತ್ತೇನೆ ಎಂದು ಘೊಷಿಸಿಲ್ಲ.

ನಾವು Jio.com ಎಂಬ ಕೀವರ್ಡ್‌ನ ಮೂಲಕ ಹುಡುಕಾಟ ನಡೆಸಿದಾಗ ಈ ಕುರಿತು ನಮಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಬದಲಿಗೆ Xolo ZX ಫೋನ್ ಖರೀದಿಯ ಮೇಲೆ ಕ್ಯಾಶ್‌ಬ್ಯಾಕ್ ಇರುವ ಬಗ್ಗೆ ಮಾಹಿತಿಯನ್ನು ಮಾತ್ರ ಗಮನಿಸುದೆವು. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನಮಗೆ ಜಿಯೋ ಅಥವಾ ಮುಖೇಶ್ ಅಂಬಾನಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಿಲ್ಲ. ವೈರಲ್‌ ಆದ ಲಿಂಕನ್ನು ಕ್ಲಿಕ್‌ ಮಾಡಿದಾಗ https://happilo.xyz/Boss/Telugu/index.html ಎಂಬ ವೆಬ್‌ಸೈಟ್‌ಗೆ ಕರೆದುಕೊಂಡು ಹೋಯಿತು.

ಫೋನ್‌ಪೇ ಬಳಕೆದಾರರಿಗೆ ಹೋಳಿ ಹಬ್ಬದ ಪ್ರಯುಕ್ತ ಕ್ಯಾಶ್‌ಬ್ಯಾಕ್‌ ಜೊತೆಗೆ ಸ್ಕ್ರಾಚ್‌ ಕಾರ್ಡ್‌ನ್ನು ನೀಡಲಾಗುತ್ತಿದೆ ಎಂದು ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದರು. ಸ್ಕ್ರ್ಯಾಚ್ ಮಾಡಿದಾಗ ಫೋನ್‌ಪೇನಲ್ಲಿ ನಿಮಗೆ ರೂ. 1,990 ಅಷೇ ಅಲ್ಲ, 5000 ಹಣವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಕಳುಹಿಸಲು ಈ ಪೇಜ್‌ನಲ್ಲಿ ಕಾಣುವ ಲಿಂಕ್‌ಗೆ ಕ್ಲಿಕ್‌ ಮಾಡಿ ಎಂದು ಬರೆದಿತ್ತು. ಲಿಂಕ್‌ ಮೇಲೆ ಕ್ಲಿಕ್ ಮಾಡಿದಾಗ ಬೇರೆಯ ಪೇಜಿಗೆ ವರ್ಗಾಯಿಸಿತು. ಆ ಲಿಂಕನ್ನು ಕ್ಲಿಕ್‌ ಮಾಡಿದರೆ ನಮ್ಮ ಖಾತೆಯ ಡೇಟಾವನ್ನು ಕಡಿಯುವ ಸಾಧ್ಯತೆಯೂ ಇದೆ.

ಸ್ಕ್ರೀನ್‌ಶಾಟ್‌ನ್ನು ಇಲ್ಲಿ ನೀವು ನೋಡಬಹುದು

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ನಿಜಾಂಶವಿಲ್ಲ. ವೈರಲ್‌ ಆದ ಲಿಂಕನ್ನು ಕ್ಲಿಕ್‌ ಮಾಡಬೇಡಿ. ಅನಂತ್‌ ಅಂಬಾನಿಯಾಗಲೀ, ಮುಖೇಶ್‌ ಅಂಬಾನಿಯಾಯಲೀ ಈ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ.

Claim :  Mukesh Ambani is giving Rs 5000 to all Indians, on the occasion of his son’s marriage
Claimed By :  Facebook Users
Fact Check :  False
Tags:    

Similar News