ಫ್ಯಾಕ್ಟ್‌ಚೆಕ್: ಕನ್ಹಯ್ಯಾ ಕುಮಾರ್‌ರವರು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ ಎಂದು ಎಡಿಟ್ ಮಾಡಿರುವ ವಿಡಿಯೋ ಹಂಚಿಕೆ
ಕನ್ಹಯ್ಯಾ ಕುಮಾರ್‌ರವರು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ ಎಂದು ಎಡಿಟ್ ಮಾಡಿರುವ ವಿಡಿಯೋ ಹಂಚಿಕೆ
ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್‌ರವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. 24 ಸೆಕೆಂಡ್‌ಗಳನ್ನು ಒಳಗೊಂಡ ಈ ವಿಡಿಯೋದಲ್ಲಿ, ಕನ್ಹಯ್ಯಾ ಕುಮಾರ್ "ಈ ದೇಶದಲ್ಲಿ ಜನಿಸಿದ ಯಾರಾದರೂ, ಅವರ ಜಾತಿ, ಲಿಂಗ ಮತ್ತು ಧರ್ಮ ಏನೇ ಇರಲಿ, ಅವರು ಈ ದೇಶದ ನಾಗರಿಕರು. ಮತ್ತು ನಾಗರಿಕನಾಗಿರುವುದು ಎಂದರೆ ರಾಜನ ಮಗ ರಾಜನಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ನಮ್ಮ ಆಡಳಿತಗಾರ ಯಾರಾಗಬೇಕೆಂದು ಮತದಾರರು ನಿರ್ಧರಿಸುತ್ತಾರೆ" ಎಂದು ಹೇಳುವುದನ್ನು ಕೇಳಬಹುದು. ಬಿಹಾರ ಬಂದ್ ಸಮಯದಲ್ಲಿ ವೇದಿಕೆ ಏರಲು ಅವಕಾಶ ನೀಡದ ನಂತರ ರಾಹುಲ್ ಗಾಂಧಿ ವಿರುದ್ಧ ಕನ್ಹಯ್ಯಾ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜುಲೈ 14, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼमंच से कुत्ते की तरह दुरदुरा कर लात मार कर नीचे उतारे जाने के बाद कन्हैया कुमार राहुल गांधी और तेजस्वी यादव पर हमलावर हैʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಾಯಿಯಂತೆ ವೇದಿಕೆಯಿಂದ ಹೊರದಬ್ಬಿದ ನಂತರ, ಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 15, 2025ರಂದು ಇನ್‌ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼये राहुल गांधी को क्यूँ गरिया रहे हैं कन्हैया कुमार ?? पार्टी बदलने वाले हैं क्या ?? अब राहुल गांधी भी समझ गए होंगे... हर लाल झंडा वाला वफादार नहीं होता!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿಯವರನ್ನು ಏಕೆ ಶಪಿಸುತ್ತಿದ್ದಾರೆ?? ಅವರು ಪಕ್ಷ ಬದಲಾಯಿಸಲಿದ್ದಾರೆಯೇ?? ಈಗ ರಾಹುಲ್ ಗಾಂಧಿ ಅರ್ಥಮಾಡಿಕೊಂಡಿರಬೇಕು. ಕೆಂಪು ಬಾವುಟ ಹಿಡಿದವರೆಲ್ಲರೂ ನಿಷ್ಠರಲ್ಲʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 15,2025ರಂದು ಮತ್ತೊಂದು ಎಕ್ಸ್ ಖಾತೆಯಲ್ಲಿ ʼ"राजा का बेटा राजा नहीं बनेगा" कन्हैया कुमार का यही सुनने के बाद ही | राहुल गांधी और तेजस्वी यादव को बुरा लगा होगा। तभी तो तेजस्वी ने बस की छत पर भी चढ़ने नहीं दिया कहीं वंशवाद की दुकान में जनता सच का बोर्ड टांग न दे। असल में दिक्कत विचारधारा से नहीं कुर्सी से है, विरासत में चाहिए, मेहनत से नहीं।" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ"ರಾಜನ ಮಗ ರಾಜನಾಗುವುದಿಲ್ಲ. ಕನ್ಹಯ್ಯಾ ಕುಮಾರ್ ಹೇಳಿದ್ದು ಇದನ್ನೇ, ಮತ್ತು ಅದನ್ನು ಕೇಳಿದ ನಂತರ, ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರಿಗೆ ಬೇಸರವಾಗಿರಬಹುದು. ಅದಕ್ಕಾಗಿಯೇ ತೇಜಸ್ವಿ ಅವರನ್ನು ಬಸ್ಸಿನ ಛಾವಣಿಯ ಮೇಲೆ ಹತ್ತಲು ಬಿಡಲಿಲ್ಲ, ಸಾರ್ವಜನಿಕರು ವಂಶಪಾರಂಪರ್ಯ ರಾಜಕೀಯದ ಅಂಗಡಿಯಲ್ಲಿ ಸತ್ಯದ ಫಲಕವನ್ನು ನೇತುಹಾಕಬಾರದು. ವಾಸ್ತವದಲ್ಲಿ, ಸಮಸ್ಯೆ ಸಿದ್ಧಾಂತದಲ್ಲಿಲ್ಲ, ಕುರ್ಚಿಯಲ್ಲಿ, ಅವರು ಅದನ್ನು ಆನುವಂಶಿಕತೆಯ ಮೂಲಕ ಬಯಸುತ್ತಾರೆ, ಕಠಿಣ ಪರಿಶ್ರಮದ ಮೂಲಕ ಅಲ್ಲ" ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 15, 2025ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು “ಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿಯನ್ನು ಏಕೆ ಶಪಿಸುತ್ತಿದ್ದಾರೆ?? ಅವರು ಪಕ್ಷ ಬದಲಾಯಿಸಲಿದ್ದಾರೆಯೇ?? ಈಗ ರಾಹುಲ್ ಗಾಂಧಿ ಅರ್ಥಮಾಡಿಕೊಂಡಿರಬೇಕು… ಕೆಂಪು ಬಾವುಟ ಹೊಂದಿರುವ ಎಲ್ಲರೂ ನಿಷ್ಠಾವಂತರಲ್ಲ!” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯಾಗಿ ಹಲವರು ವಿವಿಧ ಆಯಾಮಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್‌ರವರು ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜುಲೈ 28, 2023ರಂದು ನವಭಾರತ್ ಟೈಮ್ಸ್ ಯೂಟ್ಯೂಬ್ ಖಾತೆಯಲ್ಲಿ ʼKanhaiya Kumar Full Speech : कन्हैया कुमार ने PM Modi को समझाया I.N.D.I.A का मतलब | NBTʼ ಎಂಬ ಶೀರ್ಷಿಕೆಯೊಂದಿಗೆ 14.57 ನಿಮಿಷಗಳನ್ನು ಒಳಗೊಂಡ ವಿಡಿಯೋವನ್ನು ನಾವು ಕಂಡುಕೊಂಡೆವು. ವೈರಲ್ ಆಗುತ್ತಿರುವ ವಿಡಿಯೋ ಎರಡು ವರ್ಷ ಹಳೆಯದು ಎಂಬುದು ಸ್ಪಷ್ಟವಾಯಿತು. ಭಾಷಣದ ಸಮಯದಲ್ಲಿ ಕನ್ಹಯ್ಯಾ ಕುಮಾರ್ ರಾಹುಲ್ ಗಾಂಧಿ ವಿರುದ್ಧ ಯಾವುದೇ ಹೇಳಿಕೆ ನೀಡಿರಲಿಲ್ಲ.
ಮತ್ತಷ್ಟು ಹುಡುಕಾಟದ ಸಮಯದಲ್ಲಿ ನಮಗೆ ಜುಲೈ 28, 2023ರಂದು ವೈರಲ್ ವಿಡಿಯೋ ಕುರಿತು ಒನ್ ಇಂಡಿಯಾ ಹಿಂದಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದ ದೀರ್ಘ ಆವೃತ್ತಿ ಕಂಡು ಬಂದಿದೆ. ವೀಡಿಯೊದಲ್ಲಿ 26.47 ನಿಮಿಷಗಳವರೆಗೆ, ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಮಾತನಾಡುವುದನ್ನು ಕೇಳಬಹುದು.
ಜುಲೈ 27, 2023ರಂದು ಭಾರತೀಯ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ʼLive - 𝗕𝗲𝗵𝘁𝗮𝗿 𝗕𝗵𝗮𝗿𝗮𝘁 𝗞𝗶 𝗕𝘂𝗻𝗶𝘆𝗮𝗮𝗱 IYC Youth Convention, Bengaluru , Day 2 #BuniyaadIndiaKiʼ ಎಂಬ ಶೀರ್ಷಿಕೆಯೊಂದಿಗಿರುವ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇಲ್ಲಿರುವ ಮಾಹಿತಿಯ ಪ್ರಕಾರ, ಈ ವೀಡಿಯೊ ಬೆಂಗಳೂರಿನಲ್ಲಿ ನಡೆದ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕ್ರಮದಿಂದ ಬಂದಿದೆ. ವಿಡಿಯೋ ನೋಡಿದಾಗ, ಇಂಡಿಯಾ ಮೈತ್ರಿಕೂಟದ ಹೆಸರಿನ ಬಗ್ಗೆ ಪ್ರಧಾನಿ ಮೋದಿ ಮಾಡಿದ ಟೀಕೆಗೆ ಕನ್ಹಯ್ಯಾ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ ಎಂದು ನಮಗೆ ಕಂಡುಬಂದಿದೆ. ವಿಡಿಯೋದಲ್ಲಿ ಎಲ್ಲಿಯೂ ರಾಹುಲ್ ಗಾಂಧಿ ವಿರುದ್ಧ ಕನ್ಹಯ್ಯಾ ಕುಮಾರ್ ಯಾವುದೇ ಹೇಳಿಕೆ ನೀಡಿಲ್ಲ.
ಮತ್ತಷ್ಟು ಹುಡುಕಾಟದಲ್ಲಿ ನಮಗೆ ಜುಲೈ 28, 2023ರಂದು ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡೆವು, ಇದರಲ್ಲೂ ಸಹ ವೈರಲ್ ವೀಡಿಯೊದ ಅದೇ ದೃಶ್ಯವನ್ನು ಹೊಂದಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್‌ರವರು ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.