ಫ್ಯಾಕ್ಟ್‌ಚೆಕ್‌: ರಸ್ತೆಯಲ್ಲಿ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷರು ಬಿಜೆಪಿಗೆ ಸಂಬಂಧಿಸಿದವರಲ್ಲ.

ರಸ್ತೆಯಲ್ಲಿ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷರು ಬಿಜೆಪಿಗೆ ಸಂಬಂಧಿಸಿದವರಲ್ಲ.

Update: 2024-04-27 19:20 GMT

BJP workers 

18ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 19, 2024 ರಂದು ನಡೆಯಿತು. 16.63% ಕ್ಕಿಂತ ಹೆಚ್ಚು ಮತದಾರರು ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ ಇತರ ರಾಜ್ಯಗಳಲ್ಲಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಇನ್ನು ಏಪ್ರಿಲ್ 19 ರಿಂದ ಜೂನ್ 1ರ ವರೆಗೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗೆ 543 ಲೋಕಸಭೆಗೆ ಸದಸ್ಯರನ್ನು ಆಯ್ಕೆ ನಡೆಯಲಿದ್ದು, ಫಲಿತಾಂಶವನ್ನು ಜೂನ್ 4 ರಂದು ಪ್ರಕಟಿಸಲಾಗುವುದು.

ಇದೀಗ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಿಜೆಪಿಗೆ ಸಂಬಂಧಿಸದ ವಿಡಿಯೋವೊಂದು ವೈರಲ್‌ ಆಗಿದೆ. ಮಧ್ಯಪ್ರದೇಶದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಕೆಲವು ಪುರುಷರು ಬುಡಕಟ್ಟು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

“బీజేపీ పాలిత మధ్యప్రదేశ్ రాష్ట్రంలో దారుణం. నడి రోడ్డు మీద గిరిజన అమ్మాయిల పై బీజేపీ రౌడీల దౌర్జన్యం. మధ్యప్రదేశ్ లో బీజేపీ గుండాలు గిరిజన అమ్మాయిల మీద బహిరంగంగా లైంగిక వేధింపులకు గురి చేశారు. బీజేపీ రాక్షస రాజ్యంలో దళితులు, గిరిజనుల దీన పరిస్థితి ఇది. సిగులేని బతుకులు.” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದೊಂದಿಗೆ ಸುದ್ದಿ ವೈರಲ್‌ ಆಗಿದೆ.

ಕನ್ನಡಕ್ಕೆ ಅನುವಾದಿಸಿದಾಗ, “ಬಿಜೆಪಿ ಆಡಳಿತ ಪಕ್ಷವಾದ ಮಧ್ಯಪ್ರದೇಶದಲ್ಲಿ ದೌರ್ಜನ್ಯ ನಡೆದಿದೆ. ನಡು ರಸ್ತೆಯಲ್ಲಿ ಆದಿವಾಸಿ ಹೆಣ್ಣು ಮಕ್ಕಳ ಮೇಲೆ ಬಿಜೆಪಿ ರೌಡಿಗಳ ಹಿಂಸಾಚಾರ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಗೂಂಡಾಗಳು ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಬಹಿರಂಗವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬಿಜೆಪಿಯ ಹೀನಾಯ ಆಡಳಿತದಲ್ಲಿ ದಲಿತರು ಮತ್ತು ಆದಿವಾಸಿಗಳ ದುಸ್ಥಿತಿ ಇದು ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವೂದೇ ಸತ್ಯಾಂಶವಿಲ್ಲ. ಬುಡಕಟ್ಟು ಹುಡುಗಿಯರ ಮೇಲೆ ಕೆಲವು ಪುರುಷರು ರಸ್ತೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಇತ್ತೀಚಿನದಲ್ಲ, ಮಾರ್ಚ್ 2022ರದ್ದು.

ಚಿತ್ರದಲ್ಲಿರುವ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು, ಹುಡುಕಾಟದಲ್ಲಿ ನಮಗೆ ವೈರಲ್‌ ವಿಡಿಯೋ 2022 ರಲ್ಲಿ ಸಂಭವಿಸಿದ್ದು ಎಂದು ನಾವು ಕಂಡುಕೊಂಡೆವೆ. ವೈರಲ್‌ ಆದ ಘಟನೆಗೂ ಬಿಜೆಪಿ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.

ಇಂಡಿಯಾ ಟಿವಿ ಸುದ್ದಿಯ ಪ್ರಕಾರ , ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಪುರುಷರ ಗುಂಪೊಂದು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವೀಡಿಯೊ ಎಕ್ಸ್‌ ಖಾತೆಯಲ್ಲಿ ವೈರಲ್ ಆಗಿದೆ. ಹೋಳಿಗೂ ಮುನ್ನ ಅಲಿರಾಜ್‌ಪುರದಲ್ಲಿ ಬುಡಕಟ್ಟು ಸಮುದಾಯದವರು ಭಗೋರಿಯಾ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಿಡಿಯೋವಿನಲ್ಲಿ ಮಹಿಳೆಯೊಬ್ಬರು ವಾಹನದ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋವಿನಲ್ಲಿ ನೋಡಬಹುದು. ಆ ದಾರಿಯಲ್ಲಿ ಹೋಗುತ್ತಿದ್ದ ಇನ್ನೊಬ್ಬ ವ್ಯಕ್ತಿ ಮತ್ತೆ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದಾಗ ಆಕೆ ಸಹಾಯಕ್ಕಾಗಿ ಕಿರುಚುತ್ತಿದ್ದರೂ ಆಕೆಯನ್ನು ಕ್ರೂರವಾಗಿ ಪುರುಷರು ಆಕೆಯನ್ನು ಗುಂಪಿನೊಳಗೆ ಎಳೆದುಕೊಂಡು ಹೋಗುತ್ತಿರುವುದನ್ನು ನಾವು ವಿಡಿಯೋವಿನಲ್ಲಿ ನೋಡಬಹುದು.

ಇದೇ ವಿಡಿಯೋವನ್ನು NDTV.com ಸಹ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದನ್ನು ನಾವು ನೋಡಬಹುದು.

Indiatimes.com ನಲ್ಲಿ ಮಾರ್ಚ್ 2022ರಂದ ಪ್ರಕಟವಾದ ಲೇಖನದಲ್ಲಿ ಬುಡಕಟ್ಟು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪುರುಷರು ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಹೊಂಡಿಲ್ಲ ಎಂದು ಖಚಿತ ಪಡಿಸಿದ್ದಾರೆ. ದೌರ್ಜನ್ಯ ಎಸಗಿದ ಮೂವರು ಪುರಷರ ಮೇಲೆ ಸೆಕ್ಷನ್ 354, 345-ಎ ಮತ್ತು 34 ಅಡಿಯಲ್ಲಿ ಕೇಸನ್ನು ನಮೋದಿಸಲಾಗಿದೆ ಹಾಗೂ ವೈರಲ್ ಆಗಿರುವ ವೀಡಿಯೊವನ್ನು ಆಧರಿಸಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಇತ್ತಿಚಿನದಲ್ಲ, 2022ರಲ್ಲಿ ನಡೆದ ಘಟನೆಯದು. ವಿಡಿಯೋದಲ್ಲಿ ಕಾಣುವ ಆರೋಪಿಗಳು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಸಾಭಿತಾಗಿದೆ.

Claim :  ರಸ್ತೆಯಲ್ಲಿ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷರು ಬಿಜೆಪಿಗೆ ಸಂಬಂಧಿಸಿದವರಲ್ಲ.
Claimed By :  Social Media Users
Fact Check :  False
Tags:    

Similar News