ಫ್ಯಾಕ್ಟ್‌ಚೆಕ್‌: ಮಣಿಪುರದ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಪ್ಯಾನಲಿಸ್ಟ್‌ಗಳ ನಡುವೆ ಜಗಳವಾಗುತ್ತಿದೆ ಎಂದು ವೈರಲ್‌ ಆದ ಸುದ್ದಿಯ ಅಸಲಿಯತ್ತೇನು?

ಮಣಿಪುರದ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಪ್ಯಾನಲಿಸ್ಟ್‌ಗಳ ನಡುವೆ ಜಗಳವಾಗುತ್ತಿದೆ ಎಂದು ವೈರಲ್‌ ಆದ ಸುದ್ದಿಯ ಅಸಲಿಯತ್ತೇನು?

Update: 2024-04-12 19:55 GMT

ಮಣಿಪುರದ ಟಿವಿ ಸುದ್ದಿ ವಾಹಿನಿಯ ಪ್ಯಾನೆಲ್ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪ್ರತಿನಿಧಿಸುವ ವಕ್ತಾರರ ನಡುವೆ ನಡೆದ ನಡೆದ ವಾಗ್ವಾದ ಮತ್ತು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಂಬರುವ ಅಂದರೆ, ಏಪ್ರಿಲ್‌ 19 ಮತ್ತು ಏಪ್ರಿಲ್‌ 26ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ರಾಜ್ಯಗಳು ತಯಾರಿ ನಡೆಸುತ್ತಿರುವಾಗಲೇ ಈ ವಿಡಿಯೋ ವೈರಲ್‌ ಆಗಿದೆ.

ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

ವೈರಲ್‌ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಕೀ ಫ್ರೇಮ್‌ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಫೆಬ್ರವರಿ 21, 2019 ರಂದು TV9 ಭಾರತ್ವರ್ಷ್ ಅಪ್‌ಲೋಡ್ ಮಾಡಿದ YouTube ವೀಡಿಯೊವನ್ನು ನಾವು ಕಂಡುಕೊಂಡೆವು. Kabul TV के शो में Guest Fighting का Video Viral ಎಒಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು.

Full View

ಅಷ್ಟೇ ಅಲ್ಲ, ನಾವು ಫೆಬ್ರವರಿ 19, 2019 ರಂದು ಪಾಕಿಸ್ತಾನದ ದಿ ನ್ಯೂಸ್ ಇಂಟರ್‌ನ್ಯಾಷನಲ್‌ನಲ್ಲಿ ಪ್ರಕಟಣೆಯಾದ ವರದಿಯನ್ನು ನಾವು ಕಂಡುಕೊಂಡೆವು , ಅಷ್ಟೇ ಅಲ್ಲ  ಟಿವಿ ಟಾಕ್‌ ಎಂಬ ಶೋನಲ್ಲಿ ನಡೆದಂತಹ ಚರ್ಚಾ ಕಾರ್ಯಕ್ರಮದಲ್ಲಿ ಕುಳಿತಂತಹ ಪ್ಯಾನಲಿಸ್ಟ್‌ಗಳು ಶೋ ನಡೆಯುವ ಸಮಯದಲ್ಲೇ ಜಗಳವಾಡಿದರು ಎಂದು ವರದಿಯಲ್ಲಿ ಬರೆಯಲಾಗಿದೆ.

ಇದೇ ಸುದ್ದಿಯನ್ನು ಜೂನ್ 2016ರಲ್ಲಿ ಅಫ್ಘಾನಿಸ್ತಾನದ ಸುದ್ದಿ ವಾಹಿನಿ 1 TV ಕಾಬೂಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲೂ ಇಂತಹ ಸನ್ನಿವೇಶವೇ ನಡೆದಿದೆ ಎಂದು ಖಚಿತಪಡಿಸಲಾಗಿದೆ. ವೈರಲ್‌ ಆದ ವಿಡಿಯೋವಿನಲ್ಲಿ ನಾವು 25:20 ಮಾರ್ಕ್‌ನಿಂದ ಪ್ರಾರಂಭವಾಗುವುದನ್ನು ಕಾಣಬಹುದು, ಇದು ಮಣಿಪುರದಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆದಂತಹ ಜಗಳವಲ್ಲ ಎಂದುಖಚಿತವಾಗಿದೆ.

Full View

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್‌ ಆದ ವಿಡಿಯೋ ಮಣಿಪುರದ ನಾಯಕರ ನಡುವೆ ನಡೆದ ಜಗಳವಲ್ಲ. ವೈರಲ್‌ ಆದ ವಿಡಿಯೋ ಆಫ್ಘಾನಿಸ್ತಾನದ ಟಿವಿ ಚಾನೆಲ್‌ಗೆ ಸಂಬಂಧಿಸಿದ್ದು. ವೈರಲ್‌ ಆದ ವಿಡಿಯೋವಿಗೂ ಮಣಿಪುರಲ್ಕೂ ಯಾವುದೇ ಸಂಬಂಧವಿಲ್ಲ.

Claim :  ಮಣಿಪುರದ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಪ್ಯಾನಲಿಸ್ಟ್‌ಗಳ ನಡುವೆ ಜಗಳವಾಗುತ್ತಿದೆ ಎಂದು ವೈರಲ್‌ ಆದ ಸುದ್ದಿಯ ಅಸಲಿಯತ್ತೇನು?
Claimed By :  X users
Fact Check :  False
Tags:    

Similar News