ಫ್ಯಾಕ್ಟ್‌ಚೆಕ್‌: ದೈನಿಕ್ ಭಾಸ್ಕರ್ ಸಮೀಕ್ಷೆಯ ವರದಿ ಪ್ರಕಾರ ಭಾರತ ಮೈತ್ರಿಕೂಟ 200 ಸೀಟುಗಳನ್ನು ದಾಟಲಿದೆ ಎಂದು ಪ್ರಕಟಿಸಿದೆಯಾ?

ದೈನಿಕ್ ಭಾಸ್ಕರ್ ಸಮೀಕ್ಷೆಯ ವರದಿ ಪ್ರಕಾರ ಭಾರತ ಮೈತ್ರಿಕೂಟ 200 ಸೀಟುಗಳನ್ನು ದಾಟಲಿದೆ ಎಂದು ಪ್ರಕಟಿಸಿದೆಯಾ?

Update: 2024-04-19 19:39 GMT

ದೇಶದಲ್ಲಿ ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನಕಲಿ ಮಾಹಿತಿಗಳು ಹರಿದಾಡುತ್ತಿವೆ. ದೈನಿಕ್ ಭಾಸ್ಕರ್ ಚುನಾವಣೆಯ ಕುರಿತು ಸಮೀಕ್ಷೆಯನ್ನು ನಡೆಸಿದೆ ಎಂಬ ಸಿದ್ದಿಯ ಕೆಲವು ವರದಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ವೈರಲ್‌ ಆದ ಫೋಟೋವಿನೊಂದಿಗೆ ಶೀರ್ಷಿಕೆಯಾಗಿ "ದೈನಿಕ್ ಭಾಸ್ಕರ್-ನೆಲ್ಸನ್ ಸಮೀಕ್ಷೆ: ಭಾರತ ಮೈತ್ರಿಕೂಟ 10 ರಾಜ್ಯಗಳಲ್ಲಿ ಮುನ್ನಡೆಯನ್ನು ಸಾಧಿಸಲಿದೆ. ಹೀಗಾಗಿ 10 ರಾಜ್ಯಗಳಲ್ಲಿ 200 ಸೀಟು ದಾಟಬಹುದು ಅಷ್ಟೇ ಅಲ್ಲ, ಹಿಂದಿ ರಾಷ್ಟ ಭಾಷೆಯಾಗಿರುವ ರಾಜ್ಯಗಳಲ್ಲಿ ಮತಗಳನ್ನು ಗಳಿಸಲು ಮೋದಿಯ ಇಮೇಜ್‌ ಸಾಕಾಗುವುದಿಲ್ಲ . ಬಿಹಾರ, ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಡಿಎ ಪಕ್ಷ ಇರುವುದಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂಬ ಪೋಸ್ಟ್‌ನ್ನು ಸಾಮಾನ್ಯ ಜನರು ಮತ್ತು ಅನೇಕ ರಾಜಕೀಯ ಮುಖಂಡರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಏಪ್ರಿಲ್ 13, 2024 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಪೋಸ್ಟ್ ಅನ್ನು ದೈನಿಕ್ ಭಾಸ್ಕರ್ ಪ್ರಕಟಿಸಲಿಲ್ಲ ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ನಾವು ಪತ್ರಿಕೆಯ ವರದಿಯನ್ನು ಪರಿಶೀಲಿಸಿದಾಗ ಕಂಡುಕೊಂಡೆವು.

ನಾವು ಏಪ್ರಿಲ್ 13ರ ಭೋಪಾಲ್ ಆವೃತ್ತಿಯ ದೈನಿಕ್ ಭಾಸ್ಕರ್‌ ದಿನಪತ್ರಿಕೆನ್ನು ಹುಡುಕಿದೆವು. ಅದರಲ್ಲಿ ನಮಗೆ ದೈನಿಕ್ ಭಾಸ್ಕರ್ -ನೆಲ್ಸನ್ ಸಮೀಕ್ಷೆ ಕುರಿತು ಯಾವುದೇ ಸಮೀಕ್ಷಾ ವರದಿ ಸಿಕ್ಕಿಲ್ಲ.


ಮತ್ತಷ್ಟು ಮಾಹಿತಿಯನ್ನು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಟ ನಡೆಸಿದಾಗ, ನಮಗೆ ಏಪ್ರಿಲ್ 13, 2024 ರಂದು ದೈನಿಕ್ ಭಾಸ್ಕರ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪೋಸ್ಟ್ ಮಾಡಿದ್ದರು.

“#FakeNews : यह सर्वे फेक है, जिसे कुछ असामाजिक तत्वों ने तैयार किया है... दैनिक भास्कर ऐसे किसी भी कंटेंट का दावा नहीं करता है... ऐसे लोगों पर सख्त कार्रवाई होनी चाहिए” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದರು

ಕನ್ನಡಕ್ಕೆ ಅನುವಾದಿಸಿದಾಗ "#FakeNews : ವೈರಲ್‌ ಆದ ಸಮೀಕ್ಷೆಯು ನಕಲಿಯದ್ದು, ಕೆಲವು ಸಮಾಜ ವಿರೋಧಿಗಳು ಸಿದ್ಧಪಡಿಸಿದ್ದಾರೆ.. ದೈನಿಕ್ ಭಾಸ್ಕರ್ ಯಾವುದೇ ಸಮೀಕ್ಷೆಯನ್ನು ಮಾಡಿಲ್ಲ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು," ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಲಾಗಿತ್ತು. ಇದರಿಂದ ಸಾಭೀತಾಗಿದ್ದೇನಂದರೆ, ದೈನಿಕ್ ಭಾಸ್ಕರ್ ಯಾವುದೇ ಸಮೀಕ್ಷೆಯನ್ನು ಮಾಡಿಲ್ಲ. ನಕಲಿ ಸಮೀಕ್ಷೆಯ ವರದಿಯನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಮಾಡಲಾಗಿದೆ.

ದೈನಿಕ್ ಭಾಸ್ಕರ್ ಪತ್ರಿಕೆಯ (ಡಿಜಿಟಲ್) ರಾಜಸ್ಥಾನ ರಾಜ್ಯ ಸಂಪಾದಕ ಕಿರಣ್ ರಾಜಪುರೋಹಿತ್ ಸಹ ವೈರಲ್‌ ಆದ ಪೇಪರ್ ಕ್ಲಿಪ್ ನಕಲಿಯದ್ದು ಎಂದು ಖಚಿತ ಪಡಿಸಿದ್ದಾರೆ. ದೈನಿಕ್‌ ಭಾಸ್ಕರ್ ಹೆಸರಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ನಕಲಿ ಸಮೀಕ್ಷೆ ವೈರಲ್ ಆಗುತ್ತಿದೆ ವೈರಲ್‌ ಆದ ಕ್ಲಿಪ್ಪಿಂಗ್‌ಗೂ ದೈನಿಕ್‌ ಭಾಸ್ಕರ್‌ ದಿನಪತ್ರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನ್ನು ಹಂಚಿಕೊಂಡು ಖಚಿತಪಡಿಸಿದ್ದಾರೆ

ಕಿರಣ್ ರಾಜಪುರೋಹಿತ್ ಹಂಚಿಕೊಂಡಿರುವ ಲಿಂಕ್‌ನ್ನು ಕ್ಲಿಕ್ ಮಾಡಿದಾಗ ವೈರಲ್ ಫೋಟೋ ನಕಲಿ ಎಂದು ದೈನಿಕ್ ಭಾಸ್ಕರ್ ಅವರು ಪ್ರಕಟಿಸಿದ ವಿವರವಾದ ಲೇಖನವನ್ನು ನಾವು ಕಂಡುಕೊಂಡೆವು.


ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ದೈನಿಕ್ ಭಾಸ್ಕರ್‌ ಯಾವುದೇ ಸಮೀಕ್ಷೆಯ ವರದಿಯನ್ನು ಪ್ರಕಟಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

Claim :  ದೈನಿಕ್ ಭಾಸ್ಕರ್ ಸಮೀಕ್ಷೆಯ ವರದಿ ಪ್ರಕಾರ ಭಾರತ ಮೈತ್ರಿಕೂಟ 200 ಸೀಟುಗಳನ್ನು ದಾಟಲಿದೆ ಎಂದು ಪ್ರಕಟಿಸಿದೆಯಾ?
Claimed By :  Social Media Users
Fact Check :  False
Tags:    

Similar News