ಫ್ಯಾಕ್ಟ್ಚೆಕ್: ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿಲ್ಲ.
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿಲ್ಲ.

Claim :
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಭಾರತೀಯ ಹಣಕಾಸು ಸಚಿವ ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿದೆFact :
ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿಲ್ಲ
ಇತ್ತೀಚೆಗೆ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಮಾಡಿದ ಮನವಿಯನ್ನು ಶ್ವೇತಭವನ ನಿರಾಕರಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ ಹೇಳಿಕೊಂಡಿದೆ. ಟ್ರಂಪ್ ಅವರ ‘ಬಿಡುವಿಲ್ಲದ ವೇಳಾಪಟ್ಟಿ’ಯನ್ನು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 04, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼ#BREAKING: White House DENIES Indian FM Jaishankar’s request to meet Donald Trump — cites “busy schedule” A major diplomatic snub? India left waiting…ʼ ಎಂಬ ಶೀರ್ಷಿಕೆಯೊಂದಿಗೆ ಟ್ರಂಪ್ ಮತ್ತು ಜೈಶಂಕರ್ರವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ#BREAKING: ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಭಾರತದ ಹಣಕಾಸು ಸಚಿವ ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿದೆ - "ಕಾರ್ಯನಿರತ ವೇಳಾಪಟ್ಟಿ" ಎಂದು ಉಲ್ಲೇಖಿಸಲಾಗಿದೆ. ಪ್ರಮುಖ ರಾಜತಾಂತ್ರಿಕ ನಿರ್ಲಕ್ಷ್ಯ?ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಜುಲೈ 03, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAnother international humiliation for India, White House denies Indian FM Jaishankar's request to meet Donald Trump.ʼ ಎಂಬ ಶೀರ್ಷಿಕೆಯೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಅನುವಾದಿಸಿದಾಗ ʼಭಾರತಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಅವಮಾನ, ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಭಾರತದ ಸಚಿವ ಜೈಶಂಕರ್ ಅವರ ಮನವಿಯನ್ನು ಶ್ವೇತಭವನ ನಿರಾಕರಿಸಿದೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಈ ಪೋಸ್ಟ್ ನೋಡಿದ ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಕೇಂದ್ರ ಸರ್ಕಾರವನ್ನು ವ್ಯಾಪಕವಾಗಿ ಟೀಕೆ ಕೂಡ ಮಾಡಿದ್ದಾರೆ. ಹೀಗಾಗಿ ವೈರಲ್ ಪೋಸ್ಟ್ ಈಗ ರಾಜಕೀಯ ಟೀಕೆಗಳನ್ನು ಕೂಡ ಎದುರಿಸುತ್ತಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ವಾಸ್ತವವಾಗಿ ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ಸ್ಪಷ್ಟೀಕರಣದ ಆಧಾರದ ಮೇಲೆ ವೈರಲ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭಿತಾಗಿದೆ. ಅಂತಹ ಯಾವುದೇ ಸಭೆಯ ವಿನಂತಿಯನ್ನು ಮಾಡಲಾಗಿಲ್ಲ ಅಥವಾ ನಿರಾಕರಿಸಲಾಗಿಲ್ಲ, ಮತ್ತು ಶ್ವೇತಭವನವು ಯಾವುದೇ ನಿರಾಕರಣೆಯ ಅಧಿಕೃತ ದಾಖಲೆಯೂ ಇಲ್ಲ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕೀ ವರ್ಡ್ಗಳನ್ನು ಉಪಯೋಗಿಸಿಕೊಂಡು ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಈ ವೇಳೆ ನಮಗೆ , ಜೈಶಂಕರ್ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ನೊಂದಿಗೆ ಸಭೆಗೆ ಮನವಿ ಮಾಡಿದ್ದಾರೆ ಅಥವಾ ಅಂತಹ ಭೇಟಿಯನ್ನು ನಿರಾಕರಿಸಲಾಗಿದೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮದಲ್ಲಿ MEA ಅಧಿಕೃತ ಫ್ಯಾಕ್ಟ್-ಚೆಕ್ ಹ್ಯಾಂಡಲ್ನ ಪೋಸ್ಟ್ವೊಂದನ್ನು ನಾವು ಕಂಡುಕೊಂಡಿದ್ದೇವೆ, ಅದು ವೈರಲ್ ಪೋಸ್ಟ್ ಸುಳ್ಳು ಎಂಬುದನ್ನು ಸ್ಪಷ್ಟ ಪಡಿಸಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ಹುಡುಕಾಟವನ್ನು ನಡೆಸಿದಾಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಆಹ್ವಾನದ ಮೇರೆಗೆ ಜೈಶಂಕರ್ ಅವರು ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಿದ್ದರು ಎಂಬುದು ತಿಳಿದು ಬಂದಿದೆ. ಅವರ ಭೇಟಿಯ ಸಮಯದಲ್ಲಿ, ಅವರು ಕ್ವಾಡ್ ಸಭೆಯಲ್ಲಿ ಭಾಗವಹಿಸಿದರು ಮತ್ತು ಅಮೆರಿಕದ ಇತರ ಹಲವಾರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಎಂಬುದು ತಿಳಿದು ಬಂದಿದೆ. ಟ್ರಂಪ್ ಅವರೊಂದಿಗೆ ಯಾವುದೇ ಸಭೆ ಪೂರ್ವ ನಿಗಧಿಯಾಗದ ಕಾರಣ ವೈರಲ್ ಪೋಸ್ಟ್ನಲ್ಲಿನ ಅಂಶ ಸಂಪೂರ್ಣವಾಗಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಜುಲೈ 02, 2025ರಂದು ವಾರ್ತಾ ಭಾರತಿ ವೆಬ್ಸೈಟ್ನಲ್ಲಿ ʼಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವ ಅತ್ಯಂತ ಪರಿಣಾಮಕಾರಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಪಾದನೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಭಾರತ-ಅಮೆರಿಕ ರಕ್ಷಣಾ ಸಂಬಂಧಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಎತ್ತಿತೋರಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇವು ದ್ವಿಪಕ್ಷೀಯ ಸಂಬಂಧದ ಅತ್ಯಂತ ಪರಿಣಾಮಕಾರಿ ಸ್ಥಂಭಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಸ್ಸೆಥ್ ರನ್ನು ವಾಷಿಂಗ್ಟನ್ ನಲ್ಲಿ ಭೇಟಿಯಾದ ಜೈಶಂಕರ್ `ರಕ್ಷಣಾ ಸಹಭಾಗಿತ್ವ ಹಿತಾಸಕ್ತಿಗಳು, ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಮುನ್ನಡೆಸುವ ವಿಷಯದಲ್ಲಿ `ಉತ್ಪಾದಕ' ಮಾತುಕತೆ ನಡೆಸಿದರು. ಪೆಂಟಗಾನ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೈಶಂಕರ್ `ಎರಡೂ ದೇಶಗಳ ನಡುವಿನ ರಕ್ಷಣಾ ಸಹಭಾಗಿತ್ವ ನಿಜಕ್ಕೂ ಅತ್ಯಂತ ಪರಿಣಾಮಕಾರಿಯಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಅವಕಾಶ ಕೇಳಿದ್ದರು, ಆದರೆ ಇದಕ್ಕೆ ಅಮೆರಿಕದ ಶ್ವೇತಭವನ ಅನುಮತಿ ನೀಡಲಿಲ್ಲ ಎಂಬುದು ಸುಳ್ಳು. ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.

