ಫ್ಯಾಕ್ಟ್ಚೆಕ್: ಕೇರಳ ಕಾಲೇಜು ಕುರಾನ್ನೊಂದಿಗೆ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು 2019ರ ಸುತ್ತೋಲೆ ಹಂಚಿಕೆ
ಕೇರಳ ಕಾಲೇಜು ಕುರಾನ್ನೊಂದಿಗೆ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು 2019ರ ಸುತ್ತೋಲೆ ಹಂಚಿಕೆ

Claim :
ಕೇರಳದ ಕಾಲೇಜುಗಳು ಪ್ರಮುಖ ಎಲ್ಲಾ ಪ್ರಮುಖ ಕಾರ್ಯಕ್ರಮಗಳ ಮೊದಲು ಕುರಾನ್ ಓದುವುದನ್ನು ಕಡ್ಡಾಯಗೊಳಿಸಿವೆFact :
ಈ ಸುತ್ತೋಲೆಯನ್ನು 2019 ರಲ್ಲಿ ಕೊಲ್ಲಂನ ಅಜೀಜಿಯಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಹೊರಡಿಸಿದ್ದರೂ, ಮರುದಿನವೇ ಅದನ್ನು ಹಿಂಪಡೆಯಲಾಯಿತು
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೇರಳಾಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗುತ್ತಿದೆ. ಕೇರಳದ ಒಂದು ವೈದ್ಯಕೀಯ ಕಾಲೇಜು ತನ್ನ ಎಲ್ಲಾ ಪ್ರಮುಖ ಕಾರ್ಯಕ್ರಮಗಳಿಗೆ ಮೊದಲು ಕುರಾನ್ ಓದುವುದನ್ನು ಕಡ್ಡಾಯಗೊಳಿಸಿದೆ ಎಂಬ ಆ ಪತ್ರದಲ್ಲಿ ಉಲ್ಲೇಖಿಸಿರವುದನ್ನು ನೋಡಬಹುದು. ಈ ಸುದ್ದಿಯಿಂದ ಕೆಲವರು ಈ ನಿರ್ಧಾರವು ದೇಶದ ಏಕತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ. ಈ ವೈರಲ್ ಪೋಸ್ಟ್ಗಳು ಜನರನ್ನು ದಾರಿತಪ್ಪಿಸುವ ಮೂಲಕ ಧಾರ್ಮಿಕ ಸಾಮರಸ್ಯವನ್ನು ಕದಡುವಂತೆ ಮಾಡಿದೆ
30 ಮೇ 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ʼकेरल के एक मेडिकल कॉलेज का आदेश ...हर फंक्शन की शुरुआत कुरान के पाठ से होगी ...अब इस देश मे धर्म निरपेक्षता खतरे में नही है. #BreakingNews #politics #hindu #kerala ಎಂಬ ಶೀರ್ಷಿಕೆಯೊಂದಿಗೆ ಪತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೇರಳದಲ್ಲಿ ವೈದ್ಯಕೀಯ ಕಾಲೇಜಿನ ಆದೇಶ... ಪ್ರತಿಯೊಂದು ಕಾರ್ಯಕ್ರಮವೂ ಕುರಾನ್ ಪಠಣದೊಂದಿಗೆ ಪ್ರಾರಂಭವಾಗಲಿದೆ... ಈಗ ಈ ದೇಶದಲ್ಲಿ ಜಾತ್ಯತೀತತೆಗೆ ಅಪಾಯವಿಲ್ಲʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 30, 2025ರಂದು ಎಕ್ಸ್ ಖಾತೆದಾರರೊಬ್ಬರು ʼकेरल के एक मेडिकल कॉलेज का आदेश ...हर फंक्शन की शुरुआत कुरान के पाठ से होगी ...अब इस देश मे धर्म निरपेक्षता खतरे में नही हैʼ ಎಂಬ ಶಿರ್ಷಿಕೆಯೊಂದಿಗೆ ಪತ್ರವನ್ನು ಹಂಚಿಕೊಂಡದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೇರಳದಲ್ಲಿ ವೈದ್ಯಕೀಯ ಕಾಲೇಜಿನ ಆದೇಶ... ಪ್ರತಿಯೊಂದು ಕಾರ್ಯಕ್ರಮವೂ ಕುರಾನ್ ಪಠಣದೊಂದಿಗೆ ಪ್ರಾರಂಭವಾಗಲಿದೆ... ಈಗ ಈ ದೇಶದಲ್ಲಿ ಜಾತ್ಯತೀತತೆಗೆ ಅಪಾಯವಿಲ್ಲʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 30, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼOrder of a Medical College in Kerala... Every function will start with the recitation of Quran... Now secularism is not in danger in this countryʼ ಎಂಬ ಶೀರ್ಷಿಕೆಯೊಂದಿಗೆ ಪತ್ರವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ಮತ್ತಷ್ಟು ಪೋಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಪೊಸ್ಟ್ 2019ರದ್ದು. ಈ ಸೂಚನೆಯನ್ನು ಹೊರಡಿಸಿ ದೊಡ್ಡ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಸೂಚನೆಯನ್ನು ಮಾರನೆ ದಿನ ಹಿಂದಕ್ಕೆ ತೆಗೆದುಕೊಂಡಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಹುಡಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, 2019 ರಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ಪೋಸ್ಟ್ ಅನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದು ವೈರಲ್ ಪೋಸ್ಟ್ನಲ್ಲಿರುವ ಸೂಚನಾ ಪತ್ರ ಇತ್ತೀಚಿನದಲ್ಲ ಎಂಬುದನ್ನು ನಮಗೆ ಸ್ಪಷ್ಟ ಪಡಿಸಿದೆ. ಸುತ್ತೋಲೆಯ ಮೇಲ್ಭಾಗದಲ್ಲಿರುವ ದಿನಾಂಕದ ಮುದ್ರೆಯುಲ್ಲಿ '18.04.2019' ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ, ಅದು ಆರು ವರ್ಷ ಹಳೆಯದು ಎಂದು ಸೂಚಿಸುತ್ತದೆ.
ಟೈಮ್ಸ್ ಆಫ್ ಇಂಡಿಯಾ ಮೇ 1, 2019 ರಂದು ʼOnly Quran prayer: Kerala college withdraws controversial circularʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಮತ್ತು ಹಿಂದೂ ಸ್ತುತಿಗೀತೆಗಳ ಕಡ್ಡಾಯ ಪಠಣದ ವಿರುದ್ಧದ ಟೀಕೆ ಮುಂದುವರಿದಿರುವ ಸಮಯದಲ್ಲಿ , ಅಲ್ಪಸಂಖ್ಯಾತ ಸಮುದಾಯದಿಂದ ನಡೆಸಲ್ಪಡುವ ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜು, ಎಲ್ಲಾ ಪ್ರಮುಖ ಕಾರ್ಯಕ್ರಮಗಳಲ್ಲಿ ಕುರಾನ್ ಮಾತ್ರ ಪಠಿಸಬಾರದು ಎಂದು ಸುತ್ತೋಲೆಯನ್ನು ಹೊರಡಿಸಿದೆ. ಆದಾಗ್ಯೂ, ಆಡಳಿತ ಮಂಡಳಿಯು ಒಂದು ದಿನದೊಳಗೆ ಈ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಏಪ್ರಿಲ್ 18 ರಂದು, ಕೊಲ್ಲಂನ ಅಜೀಜಿಯಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮುಹಮ್ಮದ್ ಸಲೀಂ ಸುತ್ತೋಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಇತರ ಅಜೀಜಿಯಾ ಸಂಸ್ಥೆಗಳಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಗೀತೆ ಪಠಣದ ಷರತ್ತು ಕೊರತೆಯಿದೆ ಎಂದು ಗಮನಿಸಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮಗಳಲ್ಲಿ ಘಟಿಕೋತ್ಸವ, ಪ್ರವೇಶ ಸಮಾರಂಭ, ಸಮಾರಂಭ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಒಳಗೊಂಡ ಪ್ರಮುಖ ಸಭೆಗಳು ಸೇರಿವೆ. "ಎಲ್ಲಾ ಪ್ರಮುಖ ಕಾರ್ಯಕ್ರಮಗಳು ... ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭಿಸಲು ಪ್ರಾರ್ಥನಾ ಅಧಿವೇಶನವನ್ನು ಹೊಂದಿರಬೇಕು ಮತ್ತು ಈ ಸಂಸ್ಥೆಯಲ್ಲಿ ಬೇರೆ ಯಾವುದೇ ಪ್ರಾರ್ಥನಾ ಗೀತೆಯನ್ನು ಬದಲಾಯಿಸಬಾರದು" ಎಂದು ಅದು ಹೇಳಿದೆ. ಆಡಳಿತ ಮಂಡಳಿ ಮತ್ತು ಆಡಳಿತ ತಂಡದಿಂದ ಒಮ್ಮತವನ್ನು ಪಡೆದ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಧಾರವನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳುತ್ತಾ, ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನುಮತಿಸಲಾದ ಸವಲತ್ತುಗಳ ಪ್ರಕಾರ ಇದು ಎಂದು ಸುತ್ತೋಲೆಯಲ್ಲಿ ಸೇರಿಸಲಾಗಿದೆ. ಆದಾಗ್ಯೂ, ಏಪ್ರಿಲ್ 19 ರಂದು, ಕಾಲೇಜು ನಿರ್ದೇಶಕರು "ಈ ನಿರ್ಧಾರವು ಅಧ್ಯಕ್ಷರ (ಅಜೀಜಿಯಾ ಗ್ರೂಪ್ ಆಫ್ ಮೆಡಿಕಲ್ ಇನ್ಸ್ಟಿಟ್ಯೂಷನ್ಸ್) ಅನುಮೋದನೆಯಿಲ್ಲದೆ ಬಂದಿದೆ" ಎಂದು ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ಹೊರಡಿಸಿದರುʼ ಎಂದು ವರದಿಯಾಗಿದೆ.
ವೈದ್ಯಕೀಯ ಮತ್ತು ಆರೋಗ್ಯ ಸುದ್ದಿ ವೇದಿಕೆಯಾದ ಮೆಡಿಕಲ್ ಡೈಲಾಗ್ಸ್ ಕೂಡ ಆ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ತನ್ನ ಲೇಖನದಲ್ಲಿ ಅದೇ ಮಾಹಿತಿಯನ್ನು ವರದಿ ಮಾಡಿದೆ. ಸುತ್ತೋಲೆಗೆ ಸಂಬಂಧಿಸಿದ ಸಮಸ್ಯೆಯನ್ನು ಇತರ ವೆಬ್ಸೈಟ್ಗಳು ಸಹ ವರದಿ ಮಾಡಿವೆ .
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ವೈದ್ಯಕಿಯ ಕಾಲೇಜೊಂದು ಇತ್ತೀಚೆಗೆ ತನ್ನ ಪ್ರಮುಖ ಕಾರ್ಯಕ್ರಮಗಳಿಗೆ ಮುನ್ನ ಕುರಾನ್ ಓದುವುದನ್ನು ಕಡ್ಡಾಯಗೊಳಿಸಿದೆ ಎಂಬ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ, ವೈರಲ್ ಆದ ಪೋಸ್ಟ್ 2019ರದ್ದಾಗಿದೆ. ಈ ಸೂಚನೆಯನ್ನು ಹೊರಡಿಸಿ ದೊಡ್ಡ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಸೂಚನೆಯನ್ನು ಮಾರನೆ ದಿನ ಹಿಂದಕ್ಕೆ ತೆಗೆದುಕೊಂಡಿದೆ.

