ಫ್ಯಾಕ್ಟ್ಚೆಕ್: ಏಪ್ರಿಲ್ನಲ್ಲಿ ದಿಲ್ಲಿ ಹಾತ್ನಲ್ಲಿ ನಡೆದ ಬೆಂಕಿಯ ವಿಡಿಯೋವನ್ನು ಭಾರತದಲ್ಲಿ ಪಾಕಿಸ್ತಾನದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ
ಏಪ್ರಿಲ್ನಲ್ಲಿ ದಿಲ್ಲಿ ಹಾತ್ನಲ್ಲಿ ನಡೆದ ಬೆಂಕಿಯ ವಿಡಿಯೋವನ್ನು ಭಾರತದಲ್ಲಿ ಪಾಕಿಸ್ತಾನದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ

Claim :
ಪಾಕಿಸ್ತಾನಿ ಸಶಸ್ತ್ರ ಪಡೆಗಳು ದಿಲ್ಲಿ ಹಾತ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿವೆFact :
ಏಪ್ರಿಲ್ 2025ರಂದು ದಿಲ್ಲಿ ಹಾತ್ನಲ್ಲಿ ನಡೆದ ಬೆಂಕಿಯ ವಿಡಿಯೋವನ್ನು ಭಾರತದಲ್ಲಿ ಪಾಕಿಸ್ತಾನದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಸಶಸ್ತ್ರ ಪಡೆಗಳು ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿದವು. ಇದರ ನಂತರ, ಪಾಕಿಸ್ತಾನಿ ಸಶಸ್ತ್ರ ಪಡೆಗಳು ದಿಲ್ಲಿ ಹಾತ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿವೆ ಎಂದು ಪ್ರಮುಖ ಹಿಂದಿ ಸುದ್ದಿ ವಾಹಿನಿಯ ವೀಡಿಯೊವನ್ನು ಬಳಕೆದಾರರು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಖಾತೆಗಳಲ್ಲಿ ಪ್ರಮುಖ ಹಿಂದಿ ಸುದ್ದಿ ವಾಹಿನಿಯ ಸುದ್ದಿ ವರದಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಪ್ರಮುಖ ಮಾರುಕಟ್ಟೆಯಾದ ದೆಹಲಿ ಹಾತ್ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ನಿರೂಪಕಿ ಹೇಳುವುದನ್ನು ನಾವೀ ವಿಡಿಯೋವಿನಲ್ಲಿ ನೋಡಬಹುದು. ಪಾಕಿಸ್ತಾನಿ ಸಶಸ್ತ್ರ ಪಡೆಗಳು ಇದಕ್ಕೆ ಕಾರಣವಾಗಿದ್ದು, ಗಡಿಯಲ್ಲಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಹಗೆತನಕ್ಕೆ ಇದು ಕಾರಣ ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಹಂಚಿಕೊಂಡಿದ್ದಾರೆ
ಮೇ 08, 2025ರಂದು ಫೇಸ್ಬುಕ್ ಖಾತೆದಾರರರೊಬ್ಬರು ʼDelhi is burning, Pakistan armed forces has done it now live on indiaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಸಶಸ್ತ್ರ ಪಡೆಗಳಿಂದ ದೆಹಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಡಿಯಲ್ಲಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಹಗೆತನಕ್ಕೆ ಇದು ಕಾರಣ ಎಂದು ಹೇಳುವ ಸುದ್ದಿ ವರದಿಯ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮೇ 08, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼ"ದೆಹಲಿ ಹೊತ್ತಿ ಉರಿಯುತ್ತಿದೆ. ಪಾಕಿಸ್ತಾನಿ ಸಶಸ್ತ್ರ ಪಡೆಗಳು ಅದನ್ನು ಮಾಡಿವೆ. #ಪಾಕಿಸ್ತಾನ್ ಜಿಂದಾಬಾದ್" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಎಕ್ಸ್ ಬಳಕೆದಾರರು ಪ್ರಮುಖ ಹಿಂದಿ ಸುದ್ದಿ ವಾಹಿನಿಯ ಸುದ್ದಿ ವರದಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಪ್ರಮುಖ ಮಾರುಕಟ್ಟೆಯಾದ ದೆಹಲಿ ಹಾತ್ನಿಂದ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ನಿರೂಪಕ ಹೇಳುವುದನ್ನು ಕೇಳಬಹುದಿತ್ತು. ಪಾಕಿಸ್ತಾನಿ ಸಶಸ್ತ್ರ ಪಡೆಗಳು ಇದಕ್ಕೆ ಕಾರಣವಾಗಿದ್ದು, ಗಡಿಯಲ್ಲಿ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಹಗೆತನಕ್ಕೆ ಇದು ಕಾರಣ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೋವಿನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಏಪ್ರಿಲ್ನಲ್ಲಿ ದಿಲ್ಲಿ ಹಾತ್ನಲ್ಲಿ ನಡೆದ ಬೆಂಕಿಯ ವಿಡಿಯೋವನ್ನು ಭಾರತದಲ್ಲಿ ಪಾಕಿಸ್ತಾನದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಏಪ್ರಿಲ್ 30, 2025ರಂದು ಎನ್ಡಿಟಿವಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ʼMajor Fire At Popular Delhi Market Dilli Haat, No Casualtiesʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼದೆಹಲಿಯ ಜನಪ್ರಿಯ ಕಲೆ ಮತ್ತು ಕರಕುಶಲ ಮಾರುಕಟ್ಟೆಯಲ್ಲಿ ಬುಧವಾರ ರಾತ್ರಿ 8.55 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ. ಬೆಂಕಿಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ರಾತ್ರಿ 9.51ಕ್ಕೆ ತನ್ನ ಎಕ್ಸ್ ಖಾತೆಯಲ್ಲಿ दिल्ली हाट में लगी आग में कई दुकानें जलकर राख हो गई हैं | प्रभु की कृपा से कोई हताहत नहीं हुआ | अभी मैं दिल्ली हाट में हूँ और पीड़ितों से मिल रहा हूँ | CM @gupta_rekha | जी ने भरोसा दिया है कि दिल्ली सरकार पूरी तरह पीड़ित कारीगरों के साथ है | आगजनी के कारणों की जांच की जाएगी| ಎಂಬ ಶೀರ್ಷಿಕೆಯೊಂದಿಗೆ ದೆಲ್ಲಿಯ ಹತ್ ಘಟನೆಗೆ ಸಂಬಂಧಿಸಿದ ಕೆಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕ ಅನುವಾದಿಸಿದಾಗ ʼದೆಹಲಿ ಹಾತ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅನೇಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ದೇವರ ದಯೆಯಿಂದ ಯಾರಿಗೂ ಗಾಯಗಳಾಗಿಲ್ಲ. ಸದ್ಯಕ್ಕೆ ನಾನು ದೆಹಲಿ ಹಾತ್ನಲ್ಲಿದ್ದು ಸಂತ್ರಸ್ತರನ್ನು ಭೇಟಿಯಾಗುತ್ತಿದ್ದೇನೆ. ದೆಹಲಿ ಸರ್ಕಾರವು ಸಂತ್ರಸ್ತ ಕುಶಲಕರ್ಮಿಗಳ ಜೊತೆಗಿದೆ ಎಂದು ಮುಖ್ಯಮಂತ್ರಿ @gupta_rekha ಅವರು ಭರವಸೆ ನೀಡಿದ್ದಾರೆ. ಬೆಂಕಿಗೆ ಕಾರಣಗಳನ್ನು ತನಿಖೆ ಮಾಡಲಾಗುವುದುʼ ಎಂದು ಬರೆದಿರುವುದನ್ನು ನೋಡಬಹುದು. ಇದರಿಂದ ಸಾಭೀತಾಗಿದ್ದೇನೆಂದರೆ, ದಿಲ್ಲಿ ಹಾತ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಏಪ್ರಿಲ್ 30 ರಂದು, ಅಂದರೆ ಭಾರತೀಯ ಪಡೆಗಳು ಮೇ 7 ರಂದು ಆಪರೇಷನ್ ಸಿಂಧೂರ್ ನಡೆಸುವ ಮುನ್ನ ಎಂದು ಸ್ಪಷ್ಟವಾಗಿದೆ.
ಏಪ್ರಿಲ್ 30, 2025ರಂದು ಐಎಎನ್ಎಸ್ ತನ್ನ ಎಕ್ಸ್ ಖಾತೆಯಲ್ಲಿ ʼದೆಹಲಿ ಹಾತ್ ಅಗ್ನಿ ಅವಘಡದ ಬಗ್ಗೆ ಸಚಿವ ಕಪಿಲ್ ಮಿಶ್ರಾ ಮಾಧ್ಯಮದೊಂದಿಗೆ ಮಾತನಾಡುತ್ತಾ ʼಬೆಂಕಿಯ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ ನಾನು ಇಲ್ಲಿಗೆ ಬಂದೆ. ಇದು ತುಂಬಾ ದುರದೃಷ್ಟಕರ ಘಟನೆ. ಸುಮಾರು 26 ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಅಂಗಡಿಗಳನ್ನು ನಡೆಸುವ ಕುಶಲಕರ್ಮಿಗಳು ಮತ್ತು ಮಾರಾಟಗಾರರು ತೊಂದರೆ ಅನುಭವಿಸಿದ್ದಾರೆʼ ಎಂದು ಹೇಳುವುದನ್ನು ನಾವಿಲ್ಲಿ ನೋಡಬಹುದು.
ಮೇ 2, 2025ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್ಸೈಟ್ನಲ್ಲಿ ʼDelhi: Massive fire breaks out at iconic Dilli Haat, over 25 shops gutted; all details hereʼ ಎಂಬ ಶಿರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯ ಪ್ರಕಾರ, ಏಪ್ರಿಲ್ 30, 2025 ರ ಸಂಜೆ ಐಎನ್ಎ ಪ್ರದೇಶದ ದೆಹಲಿಯ ಜನಪ್ರಿಯ ದಿಲ್ಲಿ ಹಾತ್ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಮಳಿಗೆಗಳು ಮತ್ತು ಅಂಗಡಿಗಳಿಗೆ ಗಮನಾರ್ಹ ಹಾನಿಯಾಗಿದೆ. ರಾತ್ರಿ 8:55 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ದೆಹಲಿ ಅಗ್ನಿಶಾಮಕ ದಳದಿಂದ ತಕ್ಷಣದ ಪ್ರತಿಕ್ರಿಯೆ ಬಂದಿದ್ದು, 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ನಿವಾಸಿಗಳು ಮತ್ತು ಸಂದರ್ಶಕರಿಗೆ ಜನಪ್ರಿಯ ತಾಣವಾದ ದಿಲ್ಲಿ ಹಾತ್ ಕರಕುಶಲ ವಸ್ತುಗಳು ಮತ್ತು ಪ್ರಾದೇಶಿಕ ಪಾಕಪದ್ಧತಿಗಳ ವರ್ಣರಂಜಿತ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಹಲವಾರು ಆಹಾರ ಮಳಿಗೆಗಳು ಮತ್ತು ಕರಕುಶಲ ಅಂಗಡಿಗಳು ಸೇರಿದಂತೆ ಸುಮಾರು 30 ಅಂಗಡಿಗಳು ಬೆಂಕಿಯಲ್ಲಿ ನಾಶವಾದವು. ಅಂಗಡಿ ಮಾಲೀಕರು ಗಮನಾರ್ಹ ನಷ್ಟವನ್ನು ವರದಿ ಮಾಡಿದ್ದಾರೆʼ ಎಂದು ವರದಿ ಮಾಡಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವೀಡಿಯೊ ಏಪ್ರಿಲ್ 30, 2025 ರಂದು ದಿಲ್ಲಿ ಹಾತ್ನಲ್ಲಿ ಬೆಂಕಿ ಕಾಣಿಸಿಕೊಂಡಾಗ ನಡೆದದ್ದು. ವೈರಲ್ ವಿಡಿಯೋವಿಗೂ ಪಾಕಿಸ್ತಾನದ ದಾಳಿಗೂ ಯಾವುದೇ ಸಂಬಂಧಿಸಿಲ್ಲ.