ಫ್ಯಾಕ್ಟ್ಚೆಕ್: ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡುತ್ತಿದ್ದಾರೆ ಎಂದು ಪುರಾವೆಯಿಲ್ಲದ ಹೇಳಿಕೆ ಹಂಚಿಕೆ
ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡುತ್ತಿದ್ದಾರೆ ಎಂದು ಪುರಾವೆಯಿಲ್ಲದ ಹೇಳಿಕೆ ಹಂಚಿಕೆ

Claim :
ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಸಾಮೂಹಿಕ ಗಡೀಪಾರು ಮಾಡುತ್ತಿದ್ದಾರೆFact :
ಭಾರತೀಯ ನಾಗರೀಕರನ್ನು ಹೊರ ಹಾಕುತ್ತಿರುವ ಕುರಿತು ಇದುವರೆಗೂ ಯಾವುದೇ ಅಧಿಕೃತ ವರದಿಗಳಿಲ್ಲ
ʼಜುಲೈ 05, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIran is deporting up to 35,000 immigrants per day, including significant numbers of Indian and Afghan nationals.ʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ವೊಂದನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇರಾನ್ ದಿನಕ್ಕೆ 35,000 ವಲಸಿಗರನ್ನು ಗಡೀಪಾರು ಮಾಡುತ್ತಿದೆ, ಇದರಲ್ಲಿ ಗಮನಾರ್ಹ ಸಂಖ್ಯೆಯ ಭಾರತೀಯ ಮತ್ತು ಅಫಘಾನ್ ಪ್ರಜೆಗಳು ಸೇರಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 05, 2025ರಂದು ಎಕ್ಸ್ ಖಾತೆದಾರರೊಬ್ಬರು ʼಇರಾನ್ ಪ್ರತಿದಿನ 35,000 ವಲಸಿಗರನ್ನು ಗಡೀಪಾರು ಮಾಡಲು ಪ್ರಾರಂಭಿಸಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ಅಫ್ಘಾನ್ ಪ್ರಜೆಗಳು ಸೇರಿದ್ದಾರೆ. ಈ ಸುದ್ದಿಯು ಅಫ್ಘಾನ್ ವಲಸಿಗರನ್ನು ಮಾತ್ರವಲ್ಲದೆ ಭಾರತೀಯ ನಾಗರಿಕರನ್ನು ಸಹ ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ಸಾಮೂಹಿಕ ಗಡೀಪಾರು ಪ್ರಕ್ರಿಯೆಯಿದುʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇದೇ ಪೊಸ್ಟ್ನ್ನು ಮತ್ತೊಬ್ಬ ಎಕ್ಸ್ ಖಾತೆದಾರ ಜುಲೈ 05, 2025ರಂದು ʼ#Iran has started deporting 35,000 immigrants daily, including large numbers of #Indian and #Afghan nationals.ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ “ಇರಾನ್ ಪ್ರತಿದಿನ 35,000 ವಲಸಿಗರನ್ನು ಗಡೀಪಾರು ಮಾಡಲು ಪ್ರಾರಂಭಿಸಿದೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಮತ್ತು ಅಫ್ಘಾನ್ ಪ್ರಜೆಗಳು ಸೇರಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಇರಾನ್ ಪ್ರತಿದಿನ 35,000 ವಲಸಿಗರನ್ನು ಗಡೀಪಾರು ಮಾಡುತ್ತಿದೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಜೆಗಳೂ ಸೇರಿದ್ದಾರೆ ಎಂಬುದು ಸುಳ್ಳಾಗಿದೆ. ಭಾರತೀಯ ನಾಗರೀಕರನ್ನು ಹೊರ ಹಾಕುತ್ತಿರುವ ಕುರಿತು ಇದುವರೆಗೂ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.
ವೈರಲ್ ಆದ ಪೋಸ್ಟ್ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಏಪ್ರಿಲ್ 08, 2025ರಂದು ʼಅಸೋಸಿಯೇಟೆಡ್ ಪ್ರೆಸ್ʼ ವೆಬ್ಸೈಟ್ನಲ್ಲಿ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ʼThousands of Afghans are fleeing Iran every day to escape war and deportationʼ ಎಂಬ ಹೆಡ್ಲೈನ್ನೊಂದಿಗೆ ವರದಿಯೊಂದು ಕಂಡು ಬಂದಿತು. ವರದಿಯಲ್ಲಿ ʼಪ್ರಾದೇಶಿಕ ಸಂಘರ್ಷಗಳ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇರಾನ್ ಪ್ರತಿದಿನ ಹತ್ತಾರು ಸಾವಿರ ಅಫಘಾನ್ ಪ್ರಜೆಗಳನ್ನು ಗಡೀಪಾರು ಮಾಡುತ್ತಿದೆ, ಜೂನ್ ಅಂತ್ಯದ ವೇಳೆಗೆ ದಿನಕ್ಕೆ 30,000 ವ್ಯಕ್ತಿಗಳನ್ನು ಮೀರುವ ಅಂದಾಜಿದೆ. ಆದರೆ ಈ ವರದಿಯಲ್ಲಿ, ಈ ಗಡೀಪಾರುಗಳಲ್ಲಿ ಭಾರತೀಯ ಪ್ರಜೆಗಳೂ ಇದ್ದಾರೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ.
ಜೂನ್ 30, 2025ರಂದು ಅಫ್ಘಾನಿಸ್ತಾನದ ಸುದ್ದಿ ಸಂಸ್ಥೆಯಾದ ʼಅಫ್ಘಾನಿಸ್ತಾನ ಇಂಟರ್ನ್ಯಾಷನಲ್ʼ ವೆಬ್ಸೈಟ್ನಲ್ಲಿ ʼNearly 100000 Afghan Migrants Deported In One Week, Confirms Iranian Officialʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಿದ್ದಾರೆ. ವರದಿಯ ಪ್ರಕಾರ ಅಫ್ಘಾನಿಸ್ತಾನದ ಸುದ್ದಿ ಸಂಸ್ಥೆ ಈ ಅಂಕಿ ಅಂಶವನ್ನು ನಿಜವೆಂದು ಒಪ್ಪಿಕೊಂಡಿದೆ, ಜೂನ್ ಕೊನೆಯ ವಾರದಲ್ಲಿಯೇ ಸುಮಾರು 100,000 ಆಫ್ಘನ್ನರನ್ನು ಗಡೀಪಾರು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಅಂಕಿ ಅಂಶವು ದೈನಂದಿನ ಸರಾಸರಿ 30,000+ ಗಡೀಪಾರುಗಳಿಗೆ ಪುರಾವೆ ಒದಗಿಸುತ್ತಿದೆ, ಆದರೆ ಈ ವರದಿ ಕೂಡ ಅಫ್ಘಾನ್ ನಾಗರಿಕರ ಮೇಲೆ ಮಾತ್ರ ಕೇಂದ್ರೀಕೃತವಾಗಿದೆ. ಇದರಲ್ಲಿ ಎಲ್ಲಿಯೂ ಭಾರತೀಯ ಪ್ರಜೆಗಳನ್ನೂ ಗಡಿಪಾರು ಮಾಡಲಾಗಿದೆ ಎಂಬ ಮಾಹಿತಿ ನಮಗೆ ಸಿಗಲಿಲ್ಲ. ಬಹುತೇಕ ವರದಿಗಳಲ್ಲಿ ಕೂಡ ಇದೇ ಅಂಶಗಳು ಕಂಡು ಬಂದಿವೆ.
ಇದರಿಂದ ಸಾಭೀತಾಗಿದ್ದೇನೆಂದರೆ, ಇರಾನ್ ಪ್ರತಿದಿನ 35,000 ವಲಸಿಗರನ್ನು ಗಡೀಪಾರು ಮಾಡುತ್ತಿದೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಜೆಗಳೂ ಸೇರಿದ್ದಾರೆ ಎಂಬುದು ಸುಳ್ಳು. ಭಾರತೀಯ ನಾಗರೀಕರನ್ನು ಹೊರ ಹಾಕುತ್ತಿರುವ ಕುರಿತು ಇದುವರೆಗೂ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.

