ಫ್ಯಾಕ್ಟ್ಚೆಕ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬೆಂಬಲಿಸಲು ರಷ್ಯಾ ನಿರಾಕರಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೆ
ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬೆಂಬಲಿಸಲು ರಷ್ಯಾ ನಿರಾಕರಿಸಿದೆ ಎಂದು ಸುಳ್ಳು ಸುದ್ದಿ ಹಂಚಿಕೆ

Claim :
ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಬೆಂಬಲಿಸಲು ರಷ್ಯಾ ನಿರಾಕರಿಸಿದೆ.Fact :
ರಷ್ಯಾ ಭಾರತಕ್ಕೆ ಮಿಲಿಟರಿ ಬೆಂಬಲವನ್ನು ನಿರಾಕರಿಸಿದೆ ಅಥವಾ ಪಾಕಿಸ್ತಾನದ ಪರವಾಗಿ ನಿಂತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಪಹಲ್ಗಾಮ್ ದಾಳಿಗೆ ಪ್ರತೀಕಾರದ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಹೆಸರಿನ ಕಾರ್ಯಾಚರಣೆ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನತೆ ತಲೆದೋರಿದೆ. ಭಾರತ ಪಾಕಿಸ್ತಾನದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸದೆ, ಭಯೋತ್ಪಾದಕ ನೆಲೆಗಳನ್ನಷ್ಟೇ ಧ್ವಂಸಗೊಳಿಸಿತ್ತು. ಭಾರತ-ಪಾಕಿಸ್ತಾನ ಸಂಘರ್ಷಮಯ ವಾತಾವರಣದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತಕ್ಕೆ ಬೆಂಬಲ ಘೋಷಿಸಿದ್ದಾರೆ. ಇತ್ತೀಚಿಗೆ ರಷ್ಯಾ-ಭಾರತ ಸಂಬಂಧಗಳ ಕುರಿತು ಸಾಮಾಝಿಕ ಜಾಲತಾಣವಾದ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತವನ್ನು ಬೆಂಬಲಿಸಲು ರಷ್ಯಾ ನಿರಾಕರಿಸಿದೆ ಮತ್ತು ಭಾರತಕ್ಕೆ ಬಾಂಬರ್ಗಳನ್ನು ಪೂರೈಸಲು ಮಾಸ್ಕೋ ನಿರಾಕರಿಸಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಜುಲೈ 06, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼRussia refused to back India against Pakistan. Moscow has now declined to supply bombers to New Delhi. Growing Russia-China ties increasingly sideline India’s interestsʼ ಎಂಬ ಶಿರ್ಷಿಕೆಯೊಂದಿಗೆ ಪೊಸ್ಟ್ವೊಂದನ್ನು ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪಾಕಿಸ್ತಾನದ ವಿರುದ್ಧ ಭಾರತವನ್ನು ಬೆಂಬಲಿಸಲು ರಷ್ಯಾ ನಿರಾಕರಿಸಿದೆ. ಮಾಸ್ಕೋ ಈಗ ನವದೆಹಲಿಗೆ ಬಾಂಬರ್ಗಳನ್ನು ಪೂರೈಸಲು ನಿರಾಕರಿಸಿದೆ. ಬೆಳೆಯುತ್ತಿರುವ ರಷ್ಯಾ-ಚೀನಾ ಸಂಬಂಧಗಳು ಭಾರತದ ಹಿತಾಸಕ್ತಿಗಳನ್ನು ಹೆಚ್ಚು ಹೆಚ್ಚು ಬದಿಗಿಡುತ್ತಿವೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 06, 2025ರಂದು ಮತ್ತೊಬ್ಬ ಎಕ್ಸ್ ಖಾತೆದಾರ ʼ#BREAKING: Russia for the first time, rejected India's request to buy its Tu-160 bomber after concerns raised by China.ʼ ಎಂಬ ಶಿರ್ಷಿಕೆಯೊಂದಿಗೆ ಪೊಸ್ಟ್ ಮಾಡಿದ್ದಾನೆ. ಪೊಸ್ಟ್ನ್ನು ಕನ್ನಡಕ್ಕೆ ಅನುವಾದಿಸಿದಾಗ ʼ#BREAKING: ಚೀನಾದ ಕಳವಳಗಳ ನಂತರ, ತನ್ನ Tu-160 ಬಾಂಬರ್ ಖರೀದಿಸುವ ಭಾರತದ ಮನವಿಯನ್ನು ರಷ್ಯಾ ಮೊದಲ ಬಾರಿಗೆ ತಿರಸ್ಕರಿಸಿತುʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜುಲೈ 06, 2025ರಂದು ಎಕ್ಸ್ ಖಾತೆದಾರರೊಬ್ಬರು ʼRussia didn’t back India against Pakistan. No bombers. No loud support. Just silence and deeper ties with China. Delhi watches as Moscow drifts East.ʼ ಎಂಬ ಶಿರ್ಷಿಕೆಯೊಂದಿಗೆ ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಷ್ಯಾ ಪಾಕಿಸ್ತಾನದ ವಿರುದ್ಧ ಭಾರತವನ್ನು ಬೆಂಬಲಿಸಲಿಲ್ಲ. ಬಾಂಬರ್ಗಳನ್ನು ನೀಡಲಿಲ್ಲ. ಯಾವುದೇ ಬಲವಾದ ಬೆಂಬಲವಿಲ್ಲ. ಮೌನ ಮತ್ತು ಚೀನಾದೊಂದಿಗೆ ಆಳವಾದ ಸಂಬಂಧಗಳನ್ನು ಮಾತ್ರ ರಷ್ಯಾ ಬಲ ಪಡಿಸಿಕೊಳ್ಳುತ್ತಿದೆ. ಮಾಸ್ಕೋ ಪೂರ್ವ ದೇಶಗಳತ್ತ ವಾಲುತ್ತಿರುವುದನ್ನು ಭಾರತ ಕೇವಲ ವೀಕ್ಷಿಸುತ್ತಿದೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ರಷ್ಯಾ ಭಾರತಕ್ಕೆ ಮಿಲಿಟರಿ ಬೆಂಬಲವನ್ನು ನಿರಾಕರಿಸಿದೆ ಅಥವಾ ಪಾಕಿಸ್ತಾನದ ಪರವಾಗಿ ನಿಂತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. 2025 ರಲ್ಲಿ, ರಷ್ಯಾ ತನ್ನ Su-57 ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಅನ್ನು ಭಾರತದಲ್ಲಿ ತಯಾರಿಸಲು ಸಜ್ಜಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಆದ ಪೊಸ್ಟ್ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್ 24, 2023ರಂದು ಸಿಎನ್ಎನ್ ಸುದ್ದಿ ಸಂಸ್ಥೆಯ ವೆಬ್ಸೈಟ್ನಲ್ಲಿ ʼRussia can’t meet India arms deliveries due to Ukraine war, Indian Air Force saysʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. 2023ರಲ್ಲಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ರಷ್ಯಾ ಕೆಲವು ಶಸ್ತ್ರಾಸ್ತ್ರ ವಿತರಣಾ ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಭಾರತೀಯ ವಾಯುಪಡೆಯು ಅಧಿಕೃತವಾಗಿ ಒಪ್ಪಿಕೊಂಡಿತು. ಮಾಸ್ಕೋ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದರಿಂದ ತನ್ನ ಅತಿದೊಡ್ಡ ರಕ್ಷಣಾ ಪೂರೈಕೆದಾರರೊಂದಿಗಿನ ನವದೆಹಲಿಯ ಸಂಬಂಧದ ಮೇಲೆ ಸಂಭಾವ್ಯ ಒತ್ತಡವನ್ನುಂಟುಮಾಡುತ್ತದೆ. ಐಎಎಫ್ ಪ್ರತಿನಿಧಿಯೊಬ್ಬರು ಸಂಸದೀಯ ಸಮಿತಿಗೆ ಮಾಸ್ಕೋದಿಂದ ಪ್ರಮುಖ ಆಯುಧ ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾದೆ. ಹಾಗೆ ಭಾರತವು 2018ರಲ್ಲಿ $5.4 ಬಿಲಿಯನ್ಗೆ ಖರೀದಿಸಿದ S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಘಟಕಗಳು ನಡೆಯುತ್ತಿರುವ ಅತಿದೊಡ್ಡ ವಿತರಣೆಯಾಗಿದೆ. ಈ ವ್ಯವಸ್ಥೆಗಳಲ್ಲಿ ಮೂರು ವ್ಯವಸ್ಥೆಗಳನ್ನು ವಿತರಿಸಲಾಗಿದೆ ಮತ್ತು ಇನ್ನೂ ಎರಡು ನಿರೀಕ್ಷಿಸಲಾಗುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆʼ ಎಂದು ವರದಿಯಾಗಿದೆ
ಫೆಬ್ರವರಿ 11, 2025ರಂದು ʼರಾಯಿಟರ್ಸ್ʼ ವೆಬ್ಸೈಟ್ನಲ್ಲಿ ʼRussia offers India its most advanced Su-57 stealth fighter jetʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೊಡಬಹುದು. ವರದಿಯಲ್ಲಿ ʼ2025 ರಲ್ಲಿನ ಇತ್ತೀಚಿನ ಬೆಳವಣಿಗೆಗಳು, ಹಿಂದಿನ ಪೂರೈಕೆ ಅಡಚಣೆಗಳ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಸಂಬಂಧವು ಸಕ್ರಿಯವಾಗಿದೆ ಎಂದು ಸೂಚಿಸುತ್ತದೆ. ಫೆಬ್ರವರಿ 2025 ರಲ್ಲಿ, ರಷ್ಯಾ ತನ್ನ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಸುಖೋಯ್ ಸು -57 ಅನ್ನು ಭಾರತೀಯ ವಾಯುಪಡೆಗಾಗಿ ಭಾರತದಲ್ಲಿ ತಯಾರಿಸಲು ಮುಂದಾಯಿತು. ಈ ಪ್ರಸ್ತಾಪವನ್ನು ರಷ್ಯಾ ಮತ್ತು ಭಾರತೀಯ ಅಧಿಕಾರಿಗಳು ದೃಢಪಡಿಸಿದರು ಮತ್ತು ನವದೆಹಲಿಗೆ ಪ್ರಮುಖ ರಕ್ಷಣಾ ಪಾಲುದಾರನಾಗಿ ತನ್ನ ಪಾತ್ರವನ್ನು ಪುನರುಚ್ಚರಿಸಲು ಮಾಸ್ಕೋ ಪ್ರಯತ್ನಿಸಿದೆ. ಉಕ್ರೇನ್ ಯುದ್ಧದಿಂದ ರಷ್ಯಾದ ರಫ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದ್ದರೂ, ಈ ಹೊಸ ಕೊಡುಗೆಯು ಮಾಸ್ಕೋ ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯ ಮೂಲಕ ಭಾರತದೊಂದಿಗೆ ರಕ್ಷಣಾ ಸಂಬಂಧಗಳನ್ನು ಗಾಢವಾಗಿಸಲು ಪ್ರಯತ್ನಿಸುತ್ತಿದೆ ಎಂದು ಸೂಚಿಸುತ್ತದೆʼ ಎಂಬುದು ಕೂಡ ಇದೇ ವರದಿಯಲ್ಲಿ ಕಂಡು ಬಂದಿದೆ.
ಇದಲ್ಲದೆ, ರಷ್ಯಾ ಪಾಕಿಸ್ತಾನದ ವಿರುದ್ಧ ಭಾರತವನ್ನು ಬೆಂಬಲಿಸಲು ನಿರಾಕರಿಸಿದೆ ಅಥವಾ ಪಾಕಿಸ್ತಾನವನ್ನು ಬೆಂಬಲಿಸುವ SCO ಹೇಳಿಕೆಗೆ ಸಹಿ ಹಾಕಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಜೂನ್ 26 ರಂದು ನಡೆದ SCO ರಕ್ಷಣಾ ಸಚಿವರ ಸಭೆಯ ನಂತರ ಅಂತಹ ಯಾವುದೇ ಹೇಳಿಕೆಯನ್ನು ನೀಡಲಾಗಿಲ್ಲ ಮತ್ತು ಯಾವುದೇ ವಿಶ್ವಾಸಾರ್ಹ ಮಾಧ್ಯಮ ಅಥವಾ ಅಧಿಕೃತ ಮೂಲಗಳು ಅಂತಹ ಯಾವುದೇ ಬೆಳವಣಿಗೆಯನ್ನು ವರದಿ ಮಾಡಿಲ್ಲ.
ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ರಷ್ಯಾ ಭಾರತಕ್ಕೆ ಮಿಲಿಟರಿ ಬೆಂಬಲವನ್ನು ನಿರಾಕರಿಸಿದೆ ಅಥವಾ ಪಾಕಿಸ್ತಾನದ ಪರವಾಗಿ ನಿಂತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. 2025 ರಲ್ಲಿ, ರಷ್ಯಾ ತನ್ನ Su-57 ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಅನ್ನು ಭಾರತದಲ್ಲಿ ತಯಾರಿಸಲು ಸಜ್ಜಾಗಿದೆ.

