ಫ್ಯಾಕ್ಟ್ಚೆಕ್: ವಿಡಿಯೋ ಗೇಮಿಂಗ್ ದೃಶ್ಯಾವಳಿಯನ್ನು ಅಹಮದಾಬಾದ್ ವಿಮಾನ ಅಪಘಾತ ದೃಶ್ಯಗಳು ಎಂದು ಹಂಚಿಕೆ
ವಿಡಿಯೋ ಗೇಮಿಂಗ್ ದೃಶ್ಯಾವಳಿಯನ್ನು ಅಹಮದಾಬಾದ್ ವಿಮಾನ ಅಪಘಾತ ದೃಶ್ಯಗಳು ಎಂದು ಹಂಚಿಕೆ

Claim :
ಗುಜರಾತ್ನ ಅಹಮದಾಬಾದ್ ನಗರದಿಂದ ಲಂಡನ್ಗೆ ಹೋಗುತ್ತಿದ್ದ ವಿಮಾನ ಅಪಘಾತಕ್ಕೀಡಾದ ದೃಶ್ಯಾವಳಿಗಳುFact :
ವೈರಲ್ ಆದ ವಿಡಿಯೋ ಗೇಮಿಂಗ್ ದೃಶ್ಯಾವಳಿಗೆ ಸಂಬಂಧಿಸಿರುವುದು
242 ಪ್ರಯಾಣಿಕರನ್ನು ಹೊತ್ತು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (AI 171) ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 12ರ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ 241 ಜನರಲ್ಲಿ ಒಬ್ಬರು ಪವಾಡವೆಂಬಂತೆ ಬದುಕುಳಿದರು. ಆದರಲ್ಲಿ ಉಳಿದ 241 ಪ್ರಯಾಣಿಕರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುತ್ತಲಿನವರು ಸೇರಿ ಒಟ್ಟು 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವಿಡಿಯೋಗಳು ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ದೃಶ್ಯಗಳು ಎಂದು ಪ್ರತಿಪಾದಿಸಿ ಅನೇಕ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ಒಂದು ವಿಡಿಯೋದಲ್ಲಿ ಏನಿದೆ ಎಂದರೆ, ವಿಮಾನಕ್ಕೆ ಬೆಂಕಿ ತಗುಲಿರುವುದನ್ನು ನೋಡಬಹುದು. ನಂತರ, ವಿಮಾನ ಒಂದು ಬಿಲ್ಡಿಂಗ್ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಬಳಕೆದಾರರು ಈ ವಿಡಿಯೋವನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ವಿಡಿಯೋ ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ವಿಡಿಯೋ ಎಂದು ಹೇಳಿಕೊಳ್ಳುತ್ತಿದ್ದಾರೆ.
ಜೂನ್ 13, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ವೀಡಿಯೊವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿʼ 242 लोगो को लेकर लंदन जा रहा था| भगवान उनकी आत्मा को शांति दे| Black day for Gujarat, Prayers for the Families, ಎಂದು ಬರೆದಿರುವುದನ್ನು ನೋಡಬಹುದು. ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದಾಗ "ಗುಜರಾತ್ನ ಅಹಮದಾಬಾದ್ ನಗರದಿಂದ ಲಂಡನ್ಗೆ ಹೋಗುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು, 242 ಜನರು ಸಾವನ್ನಪ್ಪಿದರು" ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಯೂಟ್ಯೂಬ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಗುಜರಾತ್ನ ಅಹಮದಾಬಾದ್ ನಗರದಿಂದ ಲಂಡನ್ಗೆ ಹೋಗುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು, 242 ಜನರು ಸಾವನ್ನಪ್ಪಿದರು. ಇದು ಗುಜರಾತ್ಗೆ ಬ್ಲ್ಯಾಕ್ ಡೇ” ಎಂದು ಬರೆದಿದ್ದಾರೆ. ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ಹಂಚಿಕೊಂಡಿರುವುದನ್ನು ನೋಡಬಹದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ಹಂಚಿಕೊಂಡಿರುವುದನ್ನು ನೋಡಬಹದು. ಆರ್ಕೈವ್
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆದ ವಿಡಿಯೋ ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿದ್ದಲ್ಲ. ಇದೊಂದು ಗೇಮಿಂಗ್ ದೃಶ್ಯಾವಳಿ.
ಹುಡುಕಾಟ ಮಾಡುವ ಮೊದಲು, ನಾವು ವಿಡಿಯೋವನ್ನು ನಾವು ಸೂಕ್ಷ್ಮವಾಗಿ ನೋಡಿದ್ದೇವೆ. ವಿಡಿಯೋವನ್ನು ನೋಡದ ಮೊದಲ ನೋಟದಲ್ಲಿ ಇದು ನಿಜವಾಗಿರುವಂತೆ ಕಾಣುತ್ತಿಲ್ಲ. ಸುತ್ತಮುತ್ತಲಿನ ಪ್ರದೇಶ ಮತ್ತು ವಿಡಿಯೋದಲ್ಲಿರುವ ಮನೆಯನ್ನು ನೋಡಿದಾಗ, ಅದು ನಕಲಿ ಎಂಬುದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ ವಿಮಾನ ಕೆಳಗೆ ಬಿದ್ದಾಗಲೂ ಬೆಂಕಿ ಹರಡಲಿಲ್ಲ, ವಿಮಾನ ಸ್ಪೋಟಗೊಂಡಿಲ್ಲ ಮತ್ತು ಯಾವುದೇ ದೊಡ್ಡ ಅಪಘಾತ ಸಂಭವಿಸಿಲ್ಲ. ವೈರಲ್ ವಿಡಿಯೋದಲ್ಲಿ ಕಂಡುಬರುವ ವಿಮಾನದ ಮೇಲೆ ಕ್ವಾಂಟಾಸ್ ಎಂದು ಬರೆಯಲಾಗಿದೆ, ಆದರೆ ಜೂನ್ 13 ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆಗಸ್ಟ್ 25, 2024ರಂದು ಅಪ್ಲೋಡ್ ಮಾಡಲಾದ @hamzagamersz ಎಂಬ ಯೂಟ್ಯೂಬ್ ಚಾನಲ್ನಲ್ಲಿ ನಾವು ವೈರಲ್ ಆದ ವಿಡಿಯೋವನ್ನು ಕಂಡುಕೊಂಡಿದ್ದೇವೆ. ವಿಡಿಯೋದ ವಿವರಣೆಯಲ್ಲಿ, ‘‘Qantas 747 ವಿಮಾನವು ಮನೆಗೆ ಡಿಕ್ಕಿ ಹೊಡೆದಿದೆ #qantas #crashlanding #foryou #airport #gta6 #gta5clips’’ ಎಂದು ಬರೆಯಲಾಗಿದೆ. ವಿಡಿಯೋದಲ್ಲಿ ನೀಡಲಾದ ಹ್ಯಾಶ್ಟ್ಯಾಗ್ಗಳು ಇದು GTA ಆಟದಿಂದ ಬಂದಿದೆ ಎಂದು ಸೂಚಿಸುತ್ತವೆ.
ಮತ್ತಷ್ಟು ಹುಡುಕಾಟದಲ್ಲಿ ನಮಗೆ, ಆಗಸ್ಟ್ 11, 2024 ರಂದು GTA Gameplay Videos ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಅಪ್ಲೋಡ್ ಮಾಡಲಾದ ಅದೇ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಅದು GTA ಆಟದದ್ದಾಗಿದೆ ಎಂದು ಹೇಳಲಾಗಿದೆ.
ಹಲವು ಫೇಸ್ಬುಕ್ ಪುಟಗಳು ಈ ವೀಡಿಯೊವನ್ನು ಹಂಚಿಕೊಂಡಿವೆ . 2024 ರಲ್ಲಿ ಹಂಚಿಕೊಂಡ ವೀಡಿಯೊದಲ್ಲಿ , ಇದನ್ನು ಗೇಮಿಂಗ್ ವೀಡಿಯೊ ಎಂದು ವಿವರಿಸಲಾಗಿದೆ.
ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಹಮದಾಬಾದ್ ವಿಮಾನ ಅಪಘಾತ ಎಂದು ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ನಿಜವಾದ ಅಪಘಾತದ್ದಲ್ಲ, ಬದಲಾಗಿ ಗೇಮಿಂಗ್ ದೃಶ್ಯಾವಳಿಯದ್ದಾಗಿದೆ.