ಫ್ಯಾಕ್ಟ್ಚೆಕ್: ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಎಂದು ಫ್ರಾನ್ಸ್ಗೆ ಸೇರಿದ ಫೋಟೋ ಹಂಚಿಕೆ
ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಎಂದು ಫ್ರಾನ್ಸ್ಗೆ ಸೇರಿದ ಫೋಟೋ ಹಂಚಿಕೆ

Claim :
ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರಗಳುFact :
ಫ್ರಾನ್ಸ್ ಜಾಕೋಬಿನ್ ಕಾನ್ವೆಂಟ್ನಲ್ಲಿ ಸಮಾಧಿ ಮಾಡಲಾದ ಸೈನಿಕರ ಅಸ್ಥಿಪಂಜರಗಳನ್ನು ಧರ್ಮಸ್ಥಳದ್ದು ಎಂದು ಹಂಚಿಕೆ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ-ಸಾಕ್ಷಿ ಗುರುತಿಸಿದ 13ನೇ ಸ್ಥಳದಲ್ಲಿ ವಿಶೇಷ ತನಿಖಾ ತಂಡಕ್ಕೆ ಯಾವುದೇ ಮಾನವ ಅವಶೇಷಗಳನ್ನು ಸಿಗಲಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ 1000ದಿಂದ 1,500 ವರೆಗೆ ಶವಗಳನ್ನು ಹೂತಿದ್ದೇನೆ. ಸಿಗುತ್ತಿದ್ದ ಮಹಿಳೆಯರ ಮೃತದೇಹಗಳ ಮೇಲೆ ಬಟ್ಟೆ ಇರುತ್ತಿರಲಿಲ್ಲ, ಹುಂಡಿಗೆ ಹಣ ಬೀಳುವುದಿಲ್ಲ ಎಂದು ಭಿಕ್ಷುಕರನ್ನು ಕೊಲೆ ಮಾಡಲಾಗುತ್ತಿತ್ತು. ಸೌಜನ್ಯ ಅತ್ಯಾಚಾರ, ಕೊಲೆ ಬಳಿಕ ಎಲ್ಲಿ ಈ ವಿಷಯವನ್ನು ಹೊರಗಡೆ ಹೇಳುತ್ತಾನೆ ಎಂಬ ಭಯಕ್ಕೆ ನನ್ನನ್ನು ಊರು ಬಿಡಿಸಿದರು ಎಂದು ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿ ಸದ್ಯ ಬಂಧನಕ್ಕೊಳಗಾಗಿರುವ ಚಿನ್ನಯ್ಯ ಯೂಟ್ಯೂಬ್ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾನೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿ ನ್ಯಾಯಾಲಯದ ಕದ ತಟ್ಟಿದ್ದ ಸಾಕ್ಷಿ ಹಾಗೂ ದೂರುದಾರನಾಗಿದ್ದ ಚಿನ್ನಯ್ಯ ಪ್ರಕರಣದ ಹಿಂದೆ ಕೆಲವರ ಷಡ್ಯಂತ್ರ ಇದೆ ಎಂದು ಹೇಳಿದ್ದ ಬೆನ್ನಲ್ಲೇ ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದಾರೆ. ಎಸ್ಐಟಿ ಅಧಿಕಾರಿಗಳು, ಫೋರೆನ್ಸಿಕ್ ತಜ್ಞರ ಮೇಲ್ವಿಚಾರಣೆಯಲ್ಲಿ 29 ಜುಲೈ 2025 ರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದರ ಮಧ್ಯೆ ಉತ್ಖನನ ಪ್ರಕ್ರಿಯೆಯಲ್ಲಿರುವ ಹಲವಾರು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದು ಧರ್ಮಸ್ಥಳದ ಉತ್ಖನನ ಸ್ಥಳಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ 2001 ರಲ್ಲಿ ಧರ್ಮಸ್ಥಳದ ದೌರ್ಜನ್ಯದ ಬಗ್ಗೆ ಪ್ರಕಟಿಸಿದ್ದರು, ಅದು ಅವರ ಹತ್ಯೆಗೆ ಕಾರಣವಾಯಿತು ಎಂದು ಕೂಡ ಫೇಸ್ಬುಕ್ ಬಳಕೆದಾರರು ಆರೋಪಿಸಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ.
ಉತ್ಖನನ ಪ್ರಕ್ರಿಯೆಯಲ್ಲಿರುವ ಕೆಲವು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಧರ್ಮಸ್ಥಳದ ಉತ್ಖನನ ಸ್ಥಳಗಳದ್ದು ಎಂದು ಹೇಳಲಾಗುತ್ತಿದೆ. ‘‘ಈ ಅಸ್ಥಿಪಂಜರಗಳಲ್ಲಿ ಕನಿಷ್ಠ ಒಂದು ಪ್ರಾಣಿಯಾದರೂ ಇದ್ದರೆ ಒಳ್ಳೆಯದು, ಅವೆಲ್ಲವೂ ರಸ್ತೆಗಳಲ್ಲಿ ಬರುತ್ತವೆ. ಆದರೆ ಇಲ್ಲಿ ಎಲ್ಲರೂ ಮನುಷ್ಯರೇ. #ಧರ್ಮಸ್ಥಳ’’ ಎಂದು ಫೇಸ್ಬುಕ್ನಲ್ಲಿ ತೆಲುಗು ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಆಗಸ್ಟ್ 04, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼజై భీమ్. వందలాది హిందూ మహిళలను మానభంగం చేసి చంపితే కనీసం హిందులు కూడా స్పందించరా?ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡದಲ್ಲಿ ಅನುವಾದಿಸಿದಾಗ ʼಈ ಅಸ್ಥಿಪಂಜರಗಳಲ್ಲಿ ಕನಿಷ್ಠ ಒಂದು ಪ್ರಾಣಿಯಾದರೂ ಇದ್ದರೆ ಒಳ್ಳೆಯದು, ಅವೆಲ್ಲವೂ ರಸ್ತೆಗಳಲ್ಲಿ ಬರುತ್ತವೆ. ಆದರೆ ಇಲ್ಲಿ ಎಲ್ಲರೂ ಮನುಷ್ಯರೇ. #ಧರ್ಮಸ್ಥಳʼ ಎಂಬ ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಆಗಸ್ಟ್ 05, 2025ರಂದು, ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼగౌరీ లంకేశ్ ధర్మస్థల అత్యాచారాల గురించి 2001లోనే తన "లంకేశ్" పత్రికలో ప్రచురించింది. అప్పటి నుండి ఆమెను మృత్యువు వేటాడి ధర్మస్థల మాఫియా చంపేసిందిʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಗೌರಿ ಲಂಕೇಶ್ 2001 ರಲ್ಲೇ ತಮ್ಮ ‘ಲಂಕೇಶ್’ ಪತ್ರಿಕೆಯಲ್ಲಿ ಧರ್ಮಸ್ಥಳದ ದೌರ್ಜನ್ಯಗಳ ಬಗ್ಗೆ ಪ್ರಕಟಿಸಿದ್ದರು. ಅಂದಿನಿಂದ, ಸಾವು ಅವರನ್ನು ಬೆನ್ನಟ್ಟುತ್ತಲೇ ಇತ್ತು ಮತ್ತು ಅಂತಿಮವಾಗಿ ಅವರನ್ನು ಧರ್ಮಸ್ಥಳ ಮಾಫಿಯಾ ಕೊಂದಿತು" ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ ಬಳಕೆದಾರರುಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಮತ್ತಷ್ಟು ಪೊಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಈ ಫೋಟೋವು 2011 ಮತ್ತು 2013ರ ನಡುವೆ ಫ್ರಾನ್ಸ್ನ ರೆನ್ನೆಸ್ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದ ಚಿತ್ರವದು.
ನಾವು ವೈರಲ್ ಆದ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಹುಡುಕಾಟದಲ್ಲಿ ನಮಗೆ ಆಗಸ್ಟ್ 5 ರಂದು ಪ್ರಜಾವಾಣಿ ಪ್ರಕಟಿಸಿದ ವರದಿಯನ್ನು ಕಂಡುಕೊಂಡೆವು. ವರದಿಯ ಪ್ರಕಾರ, ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 11ನೇ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ನೆಲದ ಮೇಲೆ ಅವಶೇಷಗಳು ಸಿಕ್ಕಿವೆ. ಕೇವಲ ಒಂದು ತಲೆಬುರುಡೆ, ಬೆನ್ನು ಮೂಳೆ ಸೇರಿ ಸುಮಾರು 100 ಮೂಳೆ ಸಿಕ್ಕಿವೆ ಎಂದು ಎಸ್ಐಟಿ ಮೂಲಗಳು ಪ್ರಜಾವಾಣಿಗೆ ತಿಳಿಸಿದೆ ಎಂಬ ಮಾಹಿತಿ ಇದರಲ್ಲಿದೆ. ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವ ಕುರಿತು ಧರ್ಮಸ್ಥಳ ಗ್ರಾಮದಲ್ಲಿ ಒಟ್ಟು 15 ಜಾಗಗಳನ್ನು ತೋರಿಸಿದ್ದು ಅವುಗಳಲ್ಲಿ 14 ಜಾಗಗಳ ಶೋಧಕಾರ್ಯ ಪೂರ್ಣಗೊಂಡಿದೆ. ಇವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ’’ ಎಂಬ ಮಾಹಿತಿ ಇದೆ. ಆದರೆ, ವೈರಲ್ ಫೋಟೋವು ತಲೆಬುರುಡೆಗಳನ್ನು ಹೊಂದಿರುವ ಹಲವಾರು ಅಸ್ಥಿಪಂಜರಗಳನ್ನು ತೋರಿಸುತ್ತಿದೆ. ಅಲ್ಲದೆ ಎಸ್ಐಟಿ ಈವರೆಗೆ ಉತ್ಖನನದ ಕುರಿತು ಯಾವುದೇ ಫೋಟೋ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದು ಧರ್ಮಸ್ಥಳ ಉತ್ಖನನಗಳಿಗೆ ಸಂಬಂಧಿಸಿದ್ದಲ್ಲ ಎಂದು ದೃಢಪಡಿಸುತ್ತದೆ.
ನಂತರ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಮೇ 5, 2021 ರಂದು ಫ್ರೆಂಚ್ ದಿನಪತ್ರಿಕೆ ಲೆಮೊಂಡೆಯ ಇದೇ ರೀತಿಯ ಛಾಯಾಚಿತ್ರವನ್ನು ಹೊಂದಿರುವ ಲೇಖನ ಪ್ರಕಟಿಸಿರುವುದು ಕಂಡುಬಂತು. ವರದಿಯ ಪ್ರಕಾರ, ಈ ಚಿತ್ರವು ಫ್ರಾನ್ಸ್ನ ರೆನ್ನೆಸ್ನಲ್ಲಿರುವ ಜಾಕೋಬಿನ್ ಕಾನ್ವೆಂಟ್ನಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನವನ್ನು ಚಿತ್ರಿಸುತ್ತದೆ. ಆ ಸ್ಥಳದಲ್ಲಿ ಪತ್ತೆಯಾದ ಎರಡು ಸಾಮೂಹಿಕ ಸಮಾಧಿಗಳಲ್ಲಿ ಒಂದರಲ್ಲಿ ಸಮಾಧಿ ಮಾಡಲಾದ ರಾಜ ಸೈನ್ಯದ ಸೈನಿಕರ ಅವಶೇಷಗಳನ್ನು ಇದು ತೋರಿಸುತ್ತದೆ. ಈ ಅಸ್ಥಿಪಂಜರಗಳು 15 ನೇ ಶತಮಾನದ ಅಂತ್ಯದ್ದಾಗಿದ್ದು, 1488 ರಲ್ಲಿ ಸೇಂಟ್-ಆಬಿನ್-ಡು-ಕಾರ್ಮಿಯರ್ ಕದನದಲ್ಲಿ ಮಡಿದ ಸೈನಿಕರ ಅವಶೇಷಗಳು ಎಂದು ನಂಬಲಾಗಿದೆ ಎಂದು ಲೆ ಮಾಂಡೆ ಲೇಖನವು ವಿವರಿಸಿದೆ. ಈ ಯುದ್ಧವು ಬ್ರಿಟಾನಿಯ ಡಚಿ ಮತ್ತು ಫ್ರೆಂಚ್ ಕಿರೀಟದ ನಡುವೆ ನಡೆದಿತ್ತು. ಹಾಗೆಯೆ ಮೇ 5, 2021 ರಂದು ಮತ್ತೊಂದು ಫ್ರೆಂಚ್ ಮಾಧ್ಯಮವಾದ ಲೆ ಪ್ಯಾರಿಸಿಯನ್ ವರದಿಯಲ್ಲಿ ಇದೇ ವೈರಲ್ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. 2011 ಮತ್ತು 2013 ರ ನಡುವೆ, ಫ್ರೆಂಚ್ ರಾಷ್ಟ್ರೀಯ ಪ್ರಿವೆಂಟಿವ್ ಆರ್ಕಿಯಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (INRAP) ನ ತಂಡವು ರೆನ್ನೆಸ್ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್ನಿಂದ ನೂರಾರು ಮಾನವ ಅವಶೇಷಗಳನ್ನು ಉತ್ಖನನ ಮಾಡಿದೆ ಎಂದು ವರದಿ ಹೇಳಿದೆ. 15 ನೇ ಶತಮಾನದ ಅಂತ್ಯದಲ್ಲಿ ಬ್ರಿಟಾನಿಯ ಸ್ವಾತಂತ್ರ್ಯವು ಮರೆಯಾಗಿರುವ ಸ್ಥಳ, ಐತಿಹಾಸಿಕವಾಗಿ ಮಹತ್ವದ್ದಾಗಿರುವ ಈ ಪ್ರದೇಶವು ರೆನ್ನೆಸ್ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್ನಿಂದ ನೂರಾರು ಮಾನವ ಅವಶೇಷಗಳನ್ನು ಹೊರತೆಗೆದಿದೆ.
ಮೇ 5, 2021 ರಂದು PLOS ONE ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಅಸ್ಥಿಪಂಜರಗಳು 1491 ರಲ್ಲಿ ರೆನ್ನೆಸ್ ಮುತ್ತಿಗೆಯ ಸಮಯದಲ್ಲಿ ಮಡಿದ ಎದುರಾಳಿ ಸೈನ್ಯದ ಸೈನಿಕರದ್ದಾಗಿವೆ ಎಂದು ನಂಬಲಾಗಿದೆ, ಇದು ಬ್ರಿಟಾನಿ ಫ್ರಾನ್ಸ್ ಸಾಮ್ರಾಜ್ಯದೊಂದಿಗೆ ಏಕೀಕರಣಗೊಳ್ಳಲು ಕಾರಣವಾದ ಪ್ರಮುಖ ಸಂಘರ್ಷವಾಗಿದೆ. ಮೇ 5, 2021 ರಂದು PLOS ONE ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಇದನ್ನು 14 ನೇ ಶತಮಾನದ ಅಂತ್ಯದಿಂದ 16 ನೇ ಶತಮಾನದವರೆಗಿನ ಜಾಕೋಬಿನ್ ಕಾನ್ವೆಂಟ್ನಲ್ಲಿನ ಸಾಮೂಹಿಕ ಸಮಾಧಿಯ ಪುರಾತತ್ತ್ವ ಶಾಸ್ತ್ರದ ಉತ್ಖನನದ ಭಾಗವೆಂದು ವಿವರಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ಗೌರಿ ಲಂಕೇಶ್ ವರದಿ ಮಾಡಿದ್ದಾರೆಯೇ ಎಂಬ ಬಗ್ಗೆ ಆನ್ಲೈನ್ನಲ್ಲಿ ಹುಡುಕಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ನಾವು ಲಂಕೇಶ್ ಪತ್ರಿಕೆಯವರನ್ನು ಸಂಪರ್ಕಿಸಿದ್ದೇವೆ, ಅವರು ಮಾಹಿತಿ ನೀಡಿದ ತಕ್ಷಣ ಈ ಸ್ಟೋರಿಯನ್ನು ಅಪ್ಡೇಟ್ ಮಾಡಲಾಗುತ್ತಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, 2011 ಮತ್ತು 2013 ರ ನಡುವೆ ಫ್ರಾನ್ಸ್ನ ರೆನ್ನೆಸ್ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದ ಫೋಟೋವನ್ನು ಸದ್ಯ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧಾಕಾರ್ಯಕ್ಕೆ ಸಂಬಂಧಿಸಿ ತಪ್ಪಾಗಿ ಶೇರ್ ಮಾಡಲಾಗುತ್ತದೆ

