ಫ್ಯಾಕ್ಟ್ಚೆಕ್: ಅಹಮದಾಬಾದ್ ವಿಮಾನ ಅಪಘಾತದಲ್ಲಿ ಕುರಾನ್ ಸುರಕ್ಷಿತವಾಗಿ ಪತ್ತೆಯಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಕುರಾನ್ ಸುರಕ್ಷಿತವಾಗಿ ಪತ್ತೆಯಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

Claim :
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಕುರಾನ್ ಸುರಕ್ಷಿತವಾಗಿ ಪತ್ತೆಯಾಗಿದೆFact :
ವೈರಲ್ ವಿಡಿಯೋ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿದೆ
ಬೋಯಿಂಗ್ 787 ಕ್ರೀಮ್ಲೈನರ್ ಮಾದರಿಯ ವಿಮಾನವು ಜೂನ್ 12ರ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಆರ್ಜೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ವಿಮಾನದಲ್ಲಿದ್ದ 241 ಜನರಲ್ಲಿ ಒಬ್ಬರು ಪವಾಡವೆಂಬಂತೆ ಬದುಕುಳಿದರು. ಆದರೆ ಉಳಿದ 241 ಪ್ರಯಾಣಿಕರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುತ್ತಲಿನವರು ಸೇರಿ ಒಟ್ಟು 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ನಂತರದ ವಿಡಿಯೋವೆಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕುರಾನ್ನ ಒಂದು ಪ್ರತಿಯು ಬೆಂಕಿಯಿಂದ ಸುರಕ್ಷಿತವಾಗಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಈ ವೀಡಿಯೊವನ್ನು ಅಹಮದಾಬಾದ್ ವಿಮಾನ ಅಪಘಾತದ ಭಗ್ನಾವಶೇಷದಿಂದ ಕಂಡುಬಂದ ಕುರಾನ್ ಎಂದು ಕೆಲವರು ಹೇಳುತ್ತಿದ್ದಾರೆ, ಇದು “ಪವಾಡ” ಎಂದು ಚಿತ್ರಿಸಲಾಗುತ್ತಿದೆ.
ಜೂನ್ 15,2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ʼMasha Allah, Allah hu akbar plan crash me bhi nahi jala quraanʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳಿಂದ ಕುರಾನ್ ಬಹುತೇಕ ಹಾನಿಗೊಳಗಾಗದೆ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾನೆ. ವಿಮಾನ ಅಪಘಾತದ ಬೆಂಕಿಯಲ್ಲಿ ಉಳಿದೆಲ್ಲವೂ ನಾಶವಾದಾಗ ಪವಿತ್ರ ಗ್ರಂಥವು ಹಾನಿಯಾಗದಂತೆ ಬದುಕುಳಿದಿದೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 15, 2025ರಂದು ಎಕ್ಸ್ ಖಾತೆದಾರರೊಬ್ಬರು ʼअहमदाबाद प्लेन क्रेश में इस्लाम की पवित्र क़ुरान सही सलामत..!! अल्हम्दुलिल्लाह कुरान की हिफाजत अल्लाह खुद करता है #planecrash #planecrashahmedabadʼ ಎಂದು ಬರೆದು ವೈರಲ್ ಕುರಾನ್ ಚಿತ್ರವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಹಮದಾಬಾದ್ ವಿಮಾನ ಅಪಘಾತದಲ್ಲಿ ಇಸ್ಲಾಂನ ಪವಿತ್ರ ಕುರಾನ್ ಸುರಕ್ಷಿತವಾಗಿದೆ. ಅಲ್ಹಮ್ದುಲಿಲ್ಲಾಹ್, ಅಲ್ಲಾಹನು ಸ್ವತಃ ಕುರಾನ್ ಅನ್ನು ರಕ್ಷಿಸುತ್ತಾನೆ. #planecrash #planecrashahmedabadʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 14, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼहमने कुरान को उतारा है और हम ही इसकी हिफाजत करेंगे - Al Qur'an #Quran #Allah #ProphetMuhammadﷺ #planecrash #AhmedabadPlaneCrashʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಈ ವೈರಲ್ ವೀಡಿಯೊ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ವೀಡಿಯೊವನ್ನು ಧಾರ್ಮಿಕ ಆಯಾಮದಲ್ಲಿ ಅತಿ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.. ವಾಸ್ತವವಾಗಿ ವೈರಲ್ ವಿಡಿಯೋ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿದ್ದು, ಇದು ಹಳೆಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಮಾರ್ಚ್ 09, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ವೈರಲ್ ಆದ ವಿಡಿಯೋವನ್ನು ಹಂಚಿಕೊಂಡಿರುವುದು ನಾವು ಕಂಡುಕೊಂಡೆವು. ಜೂನ್ 12 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬೋಯಿಂಗ್ 787-8 ವಿಮಾನ ಅಪಘಾತಕ್ಕೀಡಾಗುವ ತಿಂಗಳುಗಳ ಮೊದಲು, ಮಾರ್ಚ್ 9, 2025 ರಂದು ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ.
ಮಾರ್ಚ್ 8, 2025 ರಂದು ಇರಾಕಿ ಮಾಧ್ಯಮ ಪೋರ್ಟಲ್ ಕಿರ್ಕುಕ್ ಅಧಿಕೃತ ಸುದ್ದಿಯ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊವೊಂದು ಕಂಡು ಬಂದಿದೆ. ಈ ವಿಡಿಯೋ ಅಪ್ಲೋಡ್ ಮಾಡಲಾದ ದಿನಾಂಕವನ್ನು ಗಮನಿಸಿದಾಗ ಇದು ಅಹಮದಾಬಾದ್ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನ ವಿಡಿಯೋ ಎಂಬುದು ನಮಗೆ ಸ್ಪಷ್ಟವಾಗಿದೆ.
ಮೇ 14, 2025ರಂದು ಥಾಯ್ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇಲ್ಲಿಯೂ ಸಹ, ಈ ವೀಡಿಯೊದ ಸ್ಥಳದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ
ಮಾರ್ಚ್ 10, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼಅಲ್ಲಾಹನು ಎಲ್ಲವನ್ನೂ ಮಾಡಲು ಸಮರ್ಥನಾಗಿದ್ದಾನೆ!! ಈ ಮನೆ ಸುಟ್ಟುಹೋಗಿದೆ. ಆದರೆ ಅಲ್ಲಾಹನ ಪವಿತ್ರ ಕುರಾನ್ ಸುಟ್ಟುಹೋಗಲಿಲ್ಲ!! ಕುರಾನ್ ಅಲ್ಲಾಹನ ವಾಕ್ಯ ಎಂಬುದಕ್ಕೆ ಇದು ಒಂದು ದೊಡ್ಡ ಸಾಕ್ಷಿ. ಧನ್ಯವಾದಗಳು. ನಾವಿರುವ ತಿಂಗಳು ಕುರಾನ್ ಅವತೀರ್ಣಗೊಂಡ ತಿಂಗಳು! ವಿಡಿಯೋ ನೋಡಿ. ಅಲಾಹಮ್ದುಲಿಲ್ಲಾಹ್ ಎಂದು ಹೇಳಿ ಮತ್ತು ಈ ಗೌರವಾನ್ವಿತ ಇಸ್ಲಾಂ ಧರ್ಮದಿಂದ ಆಶೀರ್ವದಿಸಲ್ಪಟ್ಟ ನಿಮ್ಮ ಪ್ರಭುವಿಗೆ ಕೃತಜ್ಞತೆ ಸಲ್ಲಿಸಿʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇನ್ನು ವೈರಲ್ ವಿಡಿಯೋ ಎಲ್ಲಿಯದ್ದು ಎಂಬುದು ನಮಗೆ ಯಾವುದೇ ಖಚಿತ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ. ಹೀಗಾಗಿ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಗೊಂಡ ನಂತರ ವಿಮಾನದ ಅವಶೇಷಗಳಲ್ಲಿ ಕುರಾನ್ ಪತ್ತೆಯಾಗಿದೆಯೇ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟವನ್ನು ನಡೆಸಿದೆವು. ಹುಡುಕಾಟದಲ್ಲಿ ನಮಗೆ ಭಗವದ್ಗೀತೆಯೊಂದು ಪತ್ತೆಯಾಗಿರುವುದನ್ನು ಹೊರತು ಪಡಿಸಿ ಬೇರೇನು ಮಾಹಿತಿಗಳಾಗಲಿ ಅಥವಾ ಅಧಿಕೃತ ವರದಿಗಳಾಗಲಿ ಕಂಡು ಬಂದಿಲ್ಲ. ಹೀಗಾಗಿ ವೈರಲ್ ವಿಡಿಯೋವನ್ನು ದಾರಿ ತಪ್ಪಿಸುವ ಉದ್ದೇಶದೊಂದಿಗೆ ಹಂಚಿಕೊಳ್ಳಲಾಗಿರುವುದು ನಮಗೆ ಖಚಿತವಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗೋಳಲ್ಲಿ ಹಾನಿಗೊಳಗಾಗದ ಕುರಾನ್ ಪುಸ್ತಕ ಲಭಿಸಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವಿಡಿಯೋ ವಿಮಾನ ಅಪಘಾತಕ್ಕೂ 2 ತಿಂಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿದ್ದು, ಇದು ಹಳೆಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

