ಫ್ಯಾಕ್ಟ್ಚೆಕ್: ಸಿಎಎ ವಿರೋಧಿ ಪ್ರತಿಭಟನೆಯ ಹಳೆಯ ವೀಡಿಯೊವನ್ನು ಸಂಭಾಲ್ ಹಿಂಸಾಚಾರಕ್ಕೆ ಸೇರಿಸಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಿಎಎ ವಿರೋಧಿ ಪ್ರತಿಭಟನೆಯ ಹಳೆಯ ವೀಡಿಯೊವನ್ನು ಸಂಭಾಲ್ ಹಿಂಸಾಚಾರಕ್ಕೆ ಸೇರಿಸಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
Claim :
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಯುಪಿ ಪೊಲೀಸರು ಮುಸ್ಲಿಮರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆFact :
ವೈರಲ್ ಆದ ವಿಡಿಯೋ ಡಿಸೆಂಬರ್ 2019ರಲ್ಲಿ ಗೋರಖ್ಪುರದಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ್ದು
ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಜಾಮಾ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸರ್ವೇಗಾಗಿ ನ್ಯಾಯಾಲಯ ಹೊರಡಿಸಿದ ಆದೇಶದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಪೋಸ್ಟ್ಗಳು ಹರಿದಾಡುತ್ತಿವೆ.
ನವಂಬರ್ 24,2024ರಂದು ʼನಾಗೇಶ್ ಪ್ರೀತಮ್ʼ ಎಂಬ ಫೇಸ್ಬುಕ್ ಖಾತೆದಾರ ʼಉತ್ತರ ಪ್ರದೇಶದ ಪೊಲೀಸರಿಂದ ಭರ್ಜರಿ ಬ್ಯಾಟಿಂಗ್ ಬ್ಯಾಟಿಂಗ್ ಸ್ಟ್ರೈಕ್ ರೈಟ 360ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ನವಂಬರ್ 25, 2024ರಂದು ʼಶ್ರೇಯಾ ಸನಾತನಿʼ ಎಂಬ ಎಕ್ಸ್ ಖಾತೆದಾರರು ʼದೀರ್ಘಕಾಲದ ಬೆನ್ನು ನೋವು, ಸೊಂಟ ನೋವು, ಕಾಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ. ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ, ಪ್ರಸಿದ್ಧ ವೈದ್ಯ. ಯೋಗಿ ಆದಿತ್ಯನಾಥ್ ಹೀಗೆ ಚಿಕಿತ್ಸೆ ನೀಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ನವಂಬರ್ 25, 2024ರಂದು ʼಫೈಲ್ವಾನ್ ಶ್ರೀನಿವಾಸ್ ಭಜರಂಗ್ ದಳʼ ಎಂಬ ಫೇಸ್ಬುಕ್ ಬಳಕೆದಾರರೊಬ್ಬರು ʼಉತ್ತರ ಪ್ರದೇಶ ಪೋಲೀಸರು ಇಂದು ತುಂಬಾ ಭಯಾನಕವಾಗಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಮೂವರನ್ನು ಶಾಂತಿದೂತ ಮುಸ್ಲಿಂಗಳನ್ನು ಸ್ವರ್ಗಕ್ಕೆ ಕಳುಹಿಸಿ ಕೊಟ್ಟಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಸಂಭಾಲ್ ಪ್ರತಿಭಟನೆಗೆ ಸಂಬಂಧಿಸಿದಲ್ಲ.ಈ ವಿಡಿಯೋ ಡಿಸೆಂಬರ್ 2019ರಲ್ಲಿ ಗೋರಖ್ಪುರದಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ್ದು.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್ 31, 2024ರಂದು ʼಸೋಷಲ್ ಮಿಡಿಯಾ ನ್ಯೂಸ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ "Indian Police Beaten anti-Citizenship Law protester. CAA - NRC - CAA_NRC - India - CAAProtest _CAA" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 25, 2020ರಂದು ʼಜಡ್ಜ್ ಅಡ್ವೋಕೇಟ್ ಪಿಡಿತ್ ಆರ್ಗನೈಶೇಷನ್ʼ ಎಂಬ ಫೇಸ್ಬುಕ್ ಖಾತೆದಾರ "
इस वीडियो से आप देख सकते हैं उत्तर प्रदेश में शांतिपूर्ण प्रदर्शनकारियों का कैसे लाठी चार्ज होता है गैरकानूनी भर्ती धारी गुंडे योगी आदित्यनाथ के आदेशों पर कैसे आम जनता की पिटाई हो रही है बेहद खतरनाक है देश के लिए ऐसा लगता है अंग्रेजों के मुकुरो का राज हो गया है देश में अति निंदनीय जय हिंद सुभाष केटी लुधियाना" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಶೀರ್ಷಿಕೆಯನ್ನು ಅನುವಾದಿಸಿದಾಗ "ಉತ್ತರ ಪ್ರದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಹೇಗೆ ಲಾಠಿ ಚಾರ್ಜ್ ಮಾಡುತ್ತಾರೆ, ಯೋಗಿ ಆದಿತ್ಯನಾಥ್ ಅವರ ಆದೇಶದ ಮೇರೆಗೆ ಸಾಮಾನ್ಯ ಜನರನ್ನು ಹೇಗೆ ಥಳಿಸಲಾಗುತ್ತಿದೆ, ಇದು ದೇಶಕ್ಕೆ ತುಂಬಾ ಅಪಾಯಕಾರಿ" ಎಂದು ಬರೆದು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಮೇಲಿನ ಫೇಸ್ಬುಕ್ ಪೋಸ್ಟ್ನಲ್ಲಿರುವ ಶೀರ್ಷಿಕೆಯಲ್ಲಿರುವ ಕೆಲವು ಮಾಹಿತಿಯನ್ನು ಸುಳಿವಾಗಿ ಉಪಯೋಗಿಸಿಕೊಂಡು ನಾವು ಗೂಗಲ್ನಲ್ಲಿ ಕೆಲವು ಪ್ರಮುಖ ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಹಲವು ಯೂಟ್ಯೂಬ್ ಖಾತೆಗಳಲ್ಲಿ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಮಾಧ್ಯಮ ವರದಿಗಳು ಕಂಡುಬಂದಿತು.
ಡಿಸಂಬರ್ 20, 2019ರಲ್ಲಿ ಕನ್ನಡ ಮಾಧ್ಯಮ ಸಂಸ್ಥೆಯಾದ ʼಟಿವಿ9 ಕನ್ನಡʼ ಯೂಟ್ಯೂಬ್ ಖಾತೆಯಲ್ಲಿ "CAA Protest: Violent Protesters Pelt Stones At COPs In Gorakhpur, Uttar Pradesh" ‘‘ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಕಲ್ಲು ತೂರಾಟ’’ ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಮತ್ತಷ್ಟು ಮಾಹಿತಿಯನ್ನು ಕೆಲೆಹಾಕಲು ಹುಡುಕಾಟ ನಡೆಸಿದಾಗ ನಮಗೆ ಡಿಸಂಬರ್ 20,2019ರಂದು ʼಲೈವ್ ಹಿಂದೂಸ್ತಾನ್ʼ ಯೂಟ್ಯೂಬ್ ಚಾನೆಲ್ ʼगोरखपुर : सीएए के खिलाफ प्रदर्शन के दौरान पथराव में दो घायल,लाठीचार्जʼ ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವೊಂದನ್ನು ನAವು ಕಂಡುಕೊಂಡೆವು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಗೋರಖ್ಪುರ: ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್ನಲ್ಲಿ ಇಬ್ಬರು ಗಾಯಗೊಂಡರು.’’ ಎಂಬ ಶೀರ್ಷಿಕೆ ನೀಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ವೇಳೆ ನಖಾಸ್ ಚೌಕ್ನಲ್ಲಿ ಕಲ್ಲು ತೂರಾಟದ ಘಟನೆಯ ನಂತರ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಆಕ್ರೋಶಗೊಂಡ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಶುಕ್ರವಾರದ ಪ್ರಾರ್ಥನೆಯ ನಂತರ, ಘಂಟಾಘರ್ನಲ್ಲಿರುವ ಜಾಮಾ ಮಸೀದಿಯಿಂದ ಹೊರಬರುವ ಜನರು ತಮ್ಮ ಕೈಗಳಿಗೆ ಕಪ್ಪು ಪಟ್ಟಿಯೊಂದಿಗೆ ಪ್ರದರ್ಶಿಸಿದರು. ಪ್ರತಿಭಟನಾಕಾರರು ನಖಾಸ್ ಚೌಕ್ ಬಳಿ ತಲುಪಿದಾಗ ಯಾರೋ ಕಲ್ಲು ತೂರಾಟ ನಡೆಸಿದರು. ಇದಾದ ನಂತರವೇ ವಾತಾವರಣ ಹದಗೆಟ್ಟಿತು. ಎಂದು ವರದಿಯಾಗಿರುವುದನ್ನು ನೋಡಬಹುದು
ಎರಡು ವೀಡಿಯೊಗಳನ್ನು ಹೋಲಿಸಿದಾಗ, ವೈರಲ್ ವೀಡಿಯೊ ಮತ್ತು ಮೂಲ ವಿಡಿಯೋವಿನಲ್ಲಿ ಕಾಣುವ ಸ್ಥಳನ್ನು ನಾವು ಹೋಲಿಸಿದೆವು.
ವೈರಲ್ ಆದ ವೀಡಿಯೊದಲ್ಲಿ ನಾವು ಎಷ್ಟೋಂದು ಅಂಗಡಿಗಳ ಹೆಸರಿನ ಬೋರ್ಡ್ಗಳಲ್ಲಿ ನೋಡಬಹುದು. ನಾವು ಗೂಗಲ್ ಮ್ಯಾಪ್ಸ್ನಲ್ಲಿ ನಾವು ನಖಾಸ್ ಚೌಕ್ನಲ್ಲಿ ಕಾಣುವ ʼಮಾ ವೈಷ್ಣೋ ಸ್ಟೇಷನ್ʼ ಎಂಬ ಅಂಗಡಿಯನ್ನು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿನ ಸಂಭಾಲ್ನಿಂದ 650 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿದೆ ಎಂಬುದು ಖಚಿತವಾಯಿತು. ಗೂಗಲ್ ಮ್ಯಾಪ್ನಲ್ಲಿ ತೋರಿಸಿರುವ ಪ್ರಕಾರ ಈ ಪ್ರದೇಶವು ಗೋರಖ್ಪುರದ ನಖಾಸ್ ಚೌಕ್ನಲ್ಲಿದೆ ಎಂದು ಖಚಿತವಾಯಿತು. ಗೂಗಲ್ ಮ್ಯಾಪ್ಸ್ ಸ್ಟ್ರೀಟ್ ವ್ಯೂನಲ್ಲಿ ಕಂಡುಬರುವ ಅಂಗಡಿಯ ಹೋಲಿಕೆಯನ್ನು ಈ ಚಿತ್ರದಲ್ಲಿ ನೀವು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟವಾಯಿತು. ವೈರಲ್ ಆದ ವಿಡಿಯೋ ಸಂಭಾಲ್ ಪ್ರತಿಭಟನೆಗೆ ಸಂಬಂಧಿಸಿದಲ್ಲ.ಈ ವಿಡಿಯೋ ಡಿಸೆಂಬರ್ 2019ರಲ್ಲಿ ಗೋರಖ್ಪುರದಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ್ದು.