ಫ್ಯಾಕ್ಟ್ಚೆಕ್: ಪಾಕಿಸ್ತಾನಿ ಸಂಸದ ಸೈಫುಲ್ಲಾ ಜೊತೆ ಅಖಿಲೇಶ್ ಯಾದವ್ ಅವರ ಫೋಟೋ ಎಂದು ಉದ್ಯಮಿ ಆಶಿಶ್ ಸರಾಫ್ ಫೋಟೋ ಹಂಚಿಕೆ
ಪಾಕಿಸ್ತಾನಿ ಸಂಸದ ಸೈಫುಲ್ಲಾ ಜೊತೆ ಅಖಿಲೇಶ್ ಯಾದವ್ ಅವರ ಫೋಟೋ ಎಂದು ಉದ್ಯಮಿ ಆಶಿಶ್ ಸರಾಫ್ ಫೋಟೋ ಹಂಚಿಕೆ

Claim: ಪಾಕಿಸ್ತಾನಿ ಸಂಸದ ಸೈಫುಲ್ಲಾ ಜೊತೆ ಅಖಿಲೇಶ್ ಯಾದವ್ ಅವರ ಫೋಟೋ
Fact: ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಪಾಕಿಸ್ತಾನಿ ಸಂಸದರಲ್ಲ, ಬದಲಾಗಿ ಭಾರತೀಯ ಮೂಲದ ಉದ್ಯಮಿ ಆಶಿಶ್ ಸರಾಫ್
Claim Fc (1).png
ಕಾಶ್ಮೀರ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪಾಕಿಸ್ತಾನಿ ಸಂಸದ ಸೈಫುಲ್ಲಾ ಅಬ್ರೋರೊಂದಿಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಎಕ್ಸ್ ಖಾತೆದಾರರೊಬ್ಬರು ʼलंदन में जश्न मना रहा था गद्दार टोंटी चोर, पाकिस्तानी सैफ़ुल्लाह के साथ| पाकिस्तान की संसद में सांसद सैफ़ुल्लाह ने कल पाकिस्तान के पक्ष में दिए उसके बयान पर ख़ुशी का इज़हार की ,अखिलेश यादव के भारत विरोधी बयान पर पाकिस्तान में ख़ुशी की लहर, अगला चुनाव लगता है कि समाजवादी पार्टी मुखिया इस्लामाबाद से लड़ेगा ?ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼದೇಶದ್ರೋಹಿ ಮತ್ತು ಟ್ಯಾಪ್ ಕಳ್ಳ ಪಾಕಿಸ್ತಾನಿ ಸೈಫುಲ್ಲಾ ಜೊತೆ ಲಂಡನ್ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು, ಅಖಿಲೇಶ್ ಯಾದವ್ ಅವರ ಭಾರತ ವಿರೋಧಿ ಹೇಳಿಕೆ ಮತ್ತು ಪಾಕಿಸ್ತಾನವನ್ನು ಬೆಂಬಲಿಸಿ ನೀಡಿದ ಹೇಳಿಕೆಗೆ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ, ಸಂಸದ ಸೈಫುಲ್ಲಾ ಸಂತೋಷ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲಿ ಸಂತೋಷದ ಅಲೆಯಿದೆʼ ಎಂದು ಬರೆದಿರುವುನ್ನು ನೋಡಬಹುದು.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)

ಫೇಸ್ಬುಕ್ ಖಾತೆದಾರರೊಬ್ಬರು ʼCelebrating in London with traitor tonti thief pakistani saifullah Pakistan MP Saifullah expressed happiness on his statement in favor of Pakistan yesterday, Akhilesh Yadav's anti-India statement, Next election looks like Samajwadi Party chief will contest Islamabad? Vijay hindustaniʼ ಎಂಬ ಶೀರ್ಷಿಕೆಯೊಂದಿಗೆ ಪೊಟೋವೊಂದನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಲಂಡನ್ನಲ್ಲಿ ದೇಶದ್ರೋಹಿ ತೋಂಟಿ ಕಳ್ಳ ಪಾಕಿಸ್ತಾನಿ ಸೈಫುಲ್ಲಾ ಜೊತೆ ಸಂಭ್ರಮಾಚರಣೆ. ನಿನ್ನೆ ಪಾಕಿಸ್ತಾನದ ಪರವಾಗಿ ನೀಡಿದ ಹೇಳಿಕೆಗೆ ಪಾಕಿಸ್ತಾನ ಸಂಸದ ಸೈಫುಲ್ಲಾ ಸಂತೋಷ ವ್ಯಕ್ತಪಡಿಸಿದರು, ಅಖಿಲೇಶ್ ಯಾದವ್ ಅವರ ಭಾರತ ವಿರೋಧಿ ಹೇಳಿಕೆ, ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರು ಇಸ್ಲಾಮಾಬಾದ್ನಲ್ಲಿ ಸ್ಪರ್ಧಿಸುವಂತೆ ಕಾಣುತ್ತಿದೆಯೇ? ವಿಜಯ್ ಹಿಂದೂಸ್ತಾನಿʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)

ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼलंदन में जश्न मना रहा था गद्दार टोंटी चोर, पाकिस्तानी सैफ़ुल्लाह के साथ* *पाकिस्तान की संसद में सांसद सैफ़ुल्लाह ने कल पाकिस्तान के पक्ष में दिए उसके बयान पर ख़ुशी का इज़हार किया, अखिलेश यादव के भारत विरोधी बयान पर पाकिस्तान में ख़ुशी की लहर,* अगला चुनाव लगता है कि समाजवादी पार्टी मुखिया इस्लामाबाद से लड़ेगा| ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಲಂಡನ್ನಲ್ಲಿ ದೇಶದ್ರೋಹಿ ಟೋಂಟಿ ಕಳ್ಳ ಪಾಕಿಸ್ತಾನಿ ಸೈಫುಲ್ಲಾ ಜೊತೆ ಸಂಭ್ರಮಿಸುತ್ತಿದ್ದಾನೆ. ನಿನ್ನೆ ಪಾಕಿಸ್ತಾನದ ಪರವಾಗಿ ನೀಡಿದ ಹೇಳಿಕೆ, ಅಖಿಲೇಶ್ ಯಾದವ್ ಅವರ ಭಾರತ ವಿರೋಧಿ ಹೇಳಿಕೆಗೆ ಪಾಕಿಸ್ತಾನ ಸಂಸದ ಸೈಫುಲ್ಲಾ ಸಂತೋಷ ವ್ಯಕ್ತಪಡಿಸಿದರು, ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರು ಇಸ್ಲಾಮಾಬಾದ್ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಎಂದು ಬರೆದಿರುವುದನ್ನು ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಅಖಿಲೇಶ್ ಯಾದವ್ ಅವರೊಂದಿಗೆ ಪೋಸ್ ನೀಡುತ್ತಿರುವ ವ್ಯಕ್ತಿ ಆಶಿಶ್ ಸರಾಫ್, ಪಾಕಿಸ್ತಾನಿ ಸಂಸದ ಸೈಫುಲ್ಲಾ ಅಲ್ಲ.
ನಾವು ವೈರಲ್ ಆದ ಚಿತ್ರವನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆಶಿಶ್ ಸರಾಫ್ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ಇದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಇತರ ಭಾರತೀಯ ರಾಜಕಾರಣಿಗಳೊಂದಿಗೆ ಕಾಣಿಸಿಕೊಂಡ ಅದೇ ವ್ಯಕ್ತಿಯ ಹಲವಾರು ಚಿತ್ರಗಳನ್ನು ಒಳಗೊಂಡಿತ್ತು.

ತನಿಖೆಯ ಮುಂದಿನ ಭಾಗದಲ್ಲಿ, ನಮಗೆ, ವೆಬ್ಸೈಟ್ನ ಜೀವನಚರಿತ್ರೆ ವಿಭಾಗವನ್ನು ಪರಿಶೀಲಿಸಿದಾಗ ಆಶಿಶ್ ಸರಾಫ್ ಜಾಗತಿಕ ಹೂಡಿಕೆಗಳಿಗೆ ಹಣಕಾಸು ಸಲಹಾ ಸೇವೆಗಳನ್ನು ಒದಗಿಸುವ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆಯಾದ ಫೇಕರ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಸಿಇಒ ಎಂದು ಕಂಡುಬಂದಿದೆ. ಅದರ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.

ಮತ್ತಷ್ಟು ಸರ್ಚ್ ಮಾಡಿದಾಗ, ಏಪ್ರಿಲ್ 30 ರಂದು ಬಿಜೆಪಿ ಸಂಸದ ಡಾ. ನಿಶಿಕಾಂತ್ ದುಬೆ ಅವರು ಪೋಸ್ಟ್ ಮಾಡಿದ ಟ್ವೀಟ್ನಿಂದ ಲಭ್ಯವಾಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಕಂಡುಬರುವ ಅದೇ ಚಿತ್ರವನ್ನು ಒಳಗೊಂಡಿತ್ತು. ಶೀರ್ಷಿಕೆ ಹೀಗಿದೆ: “संसद के बजट सत्र के दौरान भी लंदन में जश्न मनाते रहे समाजवादी पार्टी के मुखिया अखिलेश यादव जी के लिए बड़ी ख़ुशख़बरी,पाकिस्तान की संसद में सांसद सैफ़ुल्लाह ने कल पाकिस्तान के पक्ष में दिए उनके बयान पर ख़ुशी का इज़हार किया,अखिलेश यादव जी के भारत विरोधी बयान पर पाकिस्तान में ख़ुशी की लहर, अगला चुनाव लगता है कि समाजवादी पार्टी मुखिया इस्लामाबाद से लड़ेंगे?" ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸಂಸತ್ತಿನ ಬಜೆಟ್ ಅಧಿವೇಶನದ ಸಮಯದಲ್ಲಿಯೂ ಲಂಡನ್ನಲ್ಲಿ ಸಂಭ್ರಮಾಚರಣೆ ಮಾಡುತ್ತಲೇ ಇದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜಿ ಅವರಿಗೆ ದೊಡ್ಡ ಒಳ್ಳೆಯ ಸುದ್ದಿ, ಪಾಕಿಸ್ತಾನ ಸಂಸತ್ತಿನ ಸಂಸದ ಸೈಫುಲ್ಲಾ ನಿನ್ನೆ ಪಾಕಿಸ್ತಾನದ ಪರವಾಗಿ ನೀಡಿದ ಹೇಳಿಕೆಗೆ ಸಂತೋಷ ವ್ಯಕ್ತಪಡಿಸಿದರು, ಅಖಿಲೇಶ್ ಯಾದವ್ ಜಿ ಅವರ ಭಾರತ ವಿರೋಧಿ ಹೇಳಿಕೆಯಿಂದ ಪಾಕಿಸ್ತಾನದಲ್ಲಿ ಸಂತೋಷದ ಅಲೆ, ಸಮಾಜವಾದಿ ಪಕ್ಷದ ಮುಖ್ಯಸ್ಥರು ಮುಂದಿನ ಚುನಾವಣೆಯಲ್ಲಿ ಇಸ್ಲಾಮಾಬಾದ್ನಿಂದ ಸ್ಪರ್ಧಿಸುತ್ತಾರೆ ಎಂದು ತೋರುತ್ತದೆ?ʼ ಎಂದು ಬರೆದಿರುವುದನ್ನು ನೋಡಬಹುದು. ದುಬೆ ತಮ್ಮ ಟ್ವೀಟ್ನಲ್ಲಿ, ಪಾಕಿಸ್ತಾನದ ಮೇಲ್ಮನೆಯ ಪಿಟಿಐ ಸದಸ್ಯ ಪಾಕಿಸ್ತಾನಿ ಸೆನೆಟರ್ ಸೈಫುಲ್ಲಾ ಅಬ್ರೊ ಅವರನ್ನು ಉಲ್ಲೇಖಿಸಿದ್ದಾರೆ, ಅವರು ಸೆನೆಟ್ ಚರ್ಚೆಯ ಸಂದರ್ಭದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಸೇರಿದಂತೆ ಭಾರತದ ವಿರೋಧ ಪಕ್ಷಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತಿವೆ ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ, ದುಬೆ ಅಖಿಲೇಶ್ ಯಾದವ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಯಾದವ್ ಅವರ ಭಾರತ ವಿರೋಧಿ ಹೇಳಿಕೆಗಳ ಬಗ್ಗೆ ಪಾಕಿಸ್ತಾನದಲ್ಲಿ ಸಂತೋಷದ ಅಲೆಯನ್ನು ಸೂಚಿಸುವ ಶೀರ್ಷಿಕೆಯನ್ನು ನೀಡಲಾಗಿದೆ, ಇದು ಎಸ್ಪಿ ಮುಖ್ಯಸ್ಥರು ಮುಂದಿನ ಚುನಾವಣೆಯಲ್ಲಿ ಇಸ್ಲಾಮಾಬಾದ್ನಿಂದ ಸ್ಪರ್ಧಿಸಬಹುದು ಎಂದು ಸೂಚಿಸುತ್ತದೆ. ಈ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಅವರು ಚಿತ್ರದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಕಾಣಿಸಿಕೊಂಡ ವ್ಯಕ್ತಿ ಪಾಕಿಸ್ತಾನಿ ರಾಜಕಾರಣಿ ಸೈಫುಲ್ಲಾ ಅಬ್ರೊ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ.
ಆದಾಗ್ಯೂ, ಮೇ 3, 2025 ರಂದು, ಡಾ. ನಿಶಿಕಾಂತ್ ದುಬೆ ಅದೇ ಟ್ವೀಟ್ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಪೋಸ್ಟ್ ಮಾಡಿದ್ದು, ಕೆಲವರಿಗೆ ಹಿಂದಿ ಓದಲು ಬರುವುದಿಲ್ಲವೇ? ಪಾಕಿಸ್ತಾನದ ಸಂಸತ್ತಿನಲ್ಲಿ ತಮ್ಮ ಹೇಳಿಕೆಗಳಿಂದ ಪ್ರಶಂಸೆ ಗಳಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸತ್ತಿನ ಬಜೆಟ್ ಅಧಿವೇಶನದ ಸಮಯದಲ್ಲೂ ಲಂಡನ್ನಲ್ಲಿ ಅಲೆದಾಡುತ್ತಿದ್ದರು ಎಂದು ನಾನು ಬರೆದಿದ್ದೆ. ಇದು ಅವರು ಲಂಡನ್ನಲ್ಲಿ ಓಡಾಡುತ್ತಿರುವ ಚಿತ್ರ. ಪಾಕಿಸ್ತಾನಿ ಮನಸ್ಥಿತಿಯ ಇಂಗ್ಲಿಷರು ಹಿಂದಿಯನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ? ಎಂದು ಬರೆದಿದ್ದಾರೆ. ಸಮಾಜವಾದಿ ಪಕ್ಷದ ಅಧಿಕೃತ ಎಕ್ಸ್ಖಾತೆಯಲ್ಲಿ ನಲ್ಲಿ ಹೇಳಿಕೆಯನ್ನು ನೀಡಿದ್ದು, ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಸೈಫುಲ್ಲಾ ಅಬ್ರೋ ಅಲ್ಲ, ಆದರೆ ಕೈಗಾರಿಕೋದ್ಯಮಿ ಮತ್ತು ಹಣಕಾಸು ಹೂಡಿಕೆದಾರ ಆಶಿಶ್ ಸರಾಫ್ ಎಂದು ದೃಢಪಡಿಸಿದೆ.
ಕೆಳಗಿನ ಹೋಲಿಕೆ ಚಿತ್ರವು ಪಾಕಿಸ್ತಾನಿ ಸಂಸದ ಸೈಫುಲ್ಲಾ ಅಬ್ರೋ ಮತ್ತು ಆಶಿಶ್ ಸರಾಫ್ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ತೋರಿಸುತ್ತದೆ

ಇದರಿಂದ ಸಾಭೀತಾಗಿದ್ದೇನೆಂದರೆ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿ ನಡೆಸಿದ ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನದ ಸಂಸದ ಸೈಫುಲ್ಲಾ ಅಬ್ರೋ ಜೊತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಫೋಟೊಗೆ ಫೋಸ್ ನೀಡಿದ್ದಾರೆ ಎಂದು ಕೈಗಾರಿಕೋದ್ಯಮಿ ಮತ್ತು ಹಣಕಾಸು ಹೂಡಿಕೆದಾರ ಆಶಿಶ್ ಸರಾಫ್ರವರ ಫೋಟೊವನ್ನು ಸುಳ್ಳು ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಂಡಿದ್ದಾರೆ.

