ಫ್ಯಾಕ್ಟ್ಚೆಕ್: ಇರಾನ್ ಕ್ಷಿಪಣಿಗಳು ಟೆಲ್ ಅವೀವ್ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿವೆ ಎಂದು ಎಐ ವಿಡಿಯೋ ಹಂಚಿಕೆ
ಇರಾನ್ ಕ್ಷಿಪಣಿಗಳು ಟೆಲ್ ಅವೀವ್ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿವೆ ಎಂದು ಎಐ ವಿಡಿಯೋ ಹಂಚಿಕೆ

Claim :
ಇರಾನ್ ಕ್ಷಿಪಣಿಗಳು ಟೆಲ್ ಅವೀವ್ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿವೆFact :
ವೈರಲ್ ಆದ ವಿಡಿಯೋವನ್ನು ಎಐ ಬಳಸಿ ರಚಿಸಲಾಗಿದೆ
ಇತ್ತೀಚಿಗೆ ಇರಾನ್–ಇಸ್ರೇಲ್ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಘಟನೆ ಎಲ್ಲೆಡೆ ಗಮನ ಸೆಳೆದಿದೆ. ಇದರ ಜೊತೆಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪಣಿ ದಾಳಿ ನಡೆದ ದೃಶ್ಯಗಳು ಎಂದು ಹೇಳಿ ಹಲವಾರು ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಟೆಲ್ ಅವೀವ್ ನಗರವನ್ನು ಇರಾನ್ ಕ್ಷಿಪಣಿಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿದ ದೃಶ್ಯಗಳು ಎಂದು ಹೇಳಿ ಹಲವು ಕ್ಲಿಪ್ಗಳು ವೈರಲ್ ಆಗಿವೆ. ಇತ್ತೀಚಿನ ಇರಾನ್ ಕ್ಷಿಪಣಿ ದಾಳಿ ವೇಳೆ ಟೆಲ್ ಅವೀವ್ನಲ್ಲಿ ನಡೆದ ಘಟನೆ ಎಂದು ಹೇಳಿ ಹಂಚಲಾಗುತ್ತಿದೆ.
ಮಾರ್ಚ್ 03, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ನ ಟೆಲ್ ಅವೀವ್ನಿಂದ ಭಯಾನಕ ವೀಡಿಯೊ. ಮಾನವೀಯತೆಯ ಬಗ್ಗೆ ಮಾತನಾಡುತ್ತಿದ್ದ ಇಸ್ಲಾಮಿುಗಳು ನಾಗರಿಕರ ಮೇಲಿನ ಈ ದಾಳಿಯನ್ನು ಆನಂದಿಸುತ್ತಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮಾರ್ಚ್ 03, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIranian missiles have penetrated Tel Aviv's defense systemʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇರಾನ್ ಕ್ಷಿಪಣಿಗಳು ಟೆಲ್ ಅವೀವ್ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿವೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮಾರ್ಚ್ 04 ,2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼIran reportedly fires ballistic missiles at 🇮🇱 Israeli cities. Civilian areas reportedly damaged amid sharp escalation smoke, sirens and chaos unfold as missiles strike central Israel. Tension on the rise. Prayers for safety and peace. Stay informed. details still developingʼ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇರಾನ್ ಇಸ್ರೇಲ್ನ ಕೆಲವು ನಗರಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ನಾಗರಿಕ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ಹೇಳಲಾಗುತ್ತಿದೆ. ಕ್ಷಿಪಣಿ ದಾಳಿಯ ನಂತರ ಮಧ್ಯ ಇಸ್ರೇಲ್ನ ಕೆಲವು ಭಾಗಗಳಲ್ಲಿ ಸೈರನ್ ಧ್ವನಿ, ಹೊಗೆ ಮತ್ತು ಗೊಂದಲದ ಪರಿಸ್ಥಿತಿ ಉಂಟಾಗಿದೆ ಎಂಬ ವರದಿಗಳಿವೆ. ಜನರ ಸುರಕ್ಷತೆ ಮತ್ತು ಶಾಂತಿಯಿಗಾಗಿ ಪ್ರಾರ್ಥನೆಗಳು. ಪರಿಸ್ಥಿತಿ ಇನ್ನೂ ಮುಂದುವರಿಯುತ್ತಿದ್ದು ಹೆಚ್ಚಿನ ಮಾಹಿತಿ ಹೊರಬರುತ್ತಿದೆ.ʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮಾರ್ಚ್ 03, 2026ರಂದು ಒನ್ ಇಂಡಿಯಾ ವೆಬ್ಸೈಟ್ನಲ್ಲಿ ʼIranian Ballistic Missiles POUNDS Tel Aviv on Day 4 of Iran vs U.S-Israel War |Tel Aviv Under Attackʼ ಎಂಬ ಶಿರ್ಷಿಕೆಯೊಂದಿಗೆ ಕೆಲವಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇರಾನ್-ಅಮೆರಿಕಾ-ಇಸ್ರೇಲ್ ಯುದ್ಧದ ನಾಲ್ಕನೇ ದಿನ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಟೆಲ್ ಅವೀವ್ ನಗರವನ್ನು ಗುರಿಯಾಗಿಸಿ ಭಾರೀ ದಾಳಿ ನಡೆಸಿದವು, ಇದರಿಂದ ನಗರವು ತೀವ್ರ ದಾಳಿಯಲ್ಲಿತ್ತುʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವರದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ಮನೆಯ ಮೇಲ್ಛಾವಣಿಗಳ ಮೇಲೆ ಇದ್ದ ಸೌರ ಪ್ಯಾನೆಲ್ಗಳು ದಾಳಿಯಿಂದ ಯಾವುದೇ ಹೊಡೆತವಾಗದಿದ್ದರೂ ವಂಗಿದಂತೆ ಕಾಣಿಸುತ್ತಿವೆ.
ಅದೇ ರೀತಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೂ ನೇರವಾಗಿ ಏನೂ ತಾಗದಿದ್ದರೂ ಅವು ಹಾನಿಗೊಳಗಾದಂತೆ ಕಾಣಿಸುತ್ತಿವೆ.
ಇಂತಹ ತಪ್ಪುಗಳು ಸಾಮಾನ್ಯವಾಗಿ ಎಐ ಮೂಲಕ ತಯಾರಿಸಿದ ವಿಡಿಯೋಗಳಲ್ಲಿ ಕಾಣಿಸುತ್ತವೆ. ಈ ಎಲ್ಲ ಕಾರಣಗಳಿಂದ ಈ ವಿಡಿಯೋ ಡಿಜಿಟಲ್ ರೀತಿಯಲ್ಲಿ ತಯಾರಿಸಿರಬಹುದು ಎಂಬ ಅನುಮಾನಗಳು ಮೂಡಿ ನಾವು ಎಐ ಟೂಲ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 99% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಹೈವ್ ಮಾಡರೇಶನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 82% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಎಐ ಡಿಟೆಕ್ಟರ್ ಟೂಲ್ ʼಇಲುಮಿನಟ್ರೀʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 85.7% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

