ಫ್ಯಾಕ್ಟ್ಚೆಕ್: ಬಿಹಾರ್ಗೆ ಹೊರಟಿದ್ದ ಆರ್ಡಿಎಕ್ಸ್ ತುಂಬಿದ ಲಾರಿಯನ್ನ ಪೊಲೀಸರು ಹಿಡಿದಿದ್ದಾರೆ ಎಂದು 2020ರ ವಿಡಿಯೋ ಹಂಚಿಕೆ
ಬಿಹಾರ್ಗೆ ಹೊರಟಿದ್ದ ಆರ್ಡಿಎಕ್ಸ್ ತುಂಬಿದ ಲಾರಿಯನ್ನ ಪೊಲೀಸರು ಹಿಡಿದಿದ್ದಾರೆ ಎಂದು 2020ರ ವಿಡಿಯೋ ಹಂಚಿಕೆ

Claim :
ಉತ್ತರ ಪ್ರದೇಶದ ಪೊಲೀಸರು ಬಿಹಾರ್ಗೆ ಹೊರಟಿದ್ದ ಆರ್ಡಿಎಕ್ಸ್ ತುಂಬಿದ ಲಾರಿಯನ್ನ ಹಿಡಿದಿದ್ದಾರೆFact :
ವೈರಲ್ ಆದ ವಿಡಿಯೋ 2020 ರಲ್ಲಿ ಸೋನೌಲಿಯಿಂದ ಟ್ರಕ್ ಕದ್ದ ವ್ಯಕ್ತಿಯ ಬಂಧನಕ್ಕೆ ಸಂಬಂಧಿಸಿದ್ದು
ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ಸ್ಫೋಟಕಗಳನ್ನು ತುಂಬಿದ ಟ್ರಕ್ನೊಂದಿಗೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುವ ವೀಡಿಯೊವೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಇಬ್ಬರು ಪೊಲೀಸರು ಟ್ರಕ್ ಮುಂದೆ ಯುವಕನನ್ನು ಹಿಡಿದಿರುವುದನ್ನು ನೋಡಬಹುದು.
ಅಕ್ಟೋಬರ್ 14, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಐ ಲವ್ ಉತ್ತರ ಪ್ರದೇಶ ಪೊಲೀಸ್. ಬಿಹಾರ್ಗೆ ಹೊರಟಿದ್ದ ಆರ್ಡಿಎಕ್ಸ್ ತುಂಬಿದ ಲಾರಿಯನ್ನ ಹಿಡಿದು. ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ. ಉತ್ತರಪ್ರದೇಶ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಅಕ್ಟೋಬರ್ 12, 2025ರಂದು ಫೇಸ್ಬುಕ್ನ ಮತ್ತೋಂದು ಖಾತೆದಾರರು ʼಐ ಲವ್ ಉತ್ತರ ಪ್ರದೇಶ ಪೊಲೀಸ್ ಬಿಹಾರ್ಗೆ ಹೊರಟಿದ್ದ RDX ತುಂಬಿದ ಲಾರಿಯನ್ನ ಹಿಡಿದರು. ದೊಡ್ಡ ಅನಾಹುತವನ್ನ ತಪ್ಪಿಸಿದರು. ಉತ್ತರಪ್ರದೇಶ ಪೊಲೀಸ್ 2ಜನ ಅರೆಸ್ಟ್ ಮಾಡಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ಕಾಣಬಹುದು.
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಮತ್ತಷ್ಟು ವೈರಲ್ ಆದ ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆದ ವಿಡಿಯೋಜುಲೈ 8, 2020 ರಂದು ಭಾರತ-ನೇಪಾಳ ಗಡಿಯಲ್ಲಿರುವ ಸೋನೌಲಿಯಲ್ಲಿ ಪೊಲೀಸರು ಟ್ರಕ್ ಕದ್ದ ವ್ಯಕ್ತಿಯನ್ನು ಬಂಧಿಸಿದ್ದ ವಿಡಿಯೋವದು.
ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜುಲೈ 8, 2020 ರಂದು ಲೈವ್ ಹಿಂದೂಸ್ತಾನ್ ವೆಬ್ಸೈಟ್ನಲ್ಲಿ ʼकंटेनर चुरा कर भाग रहे शख्स ने पुलिस को दी धमकी, 'रास्ता खाली करो वर्ना उड़ा दूंगा' ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದು ಪ್ರಕಟಿಸಿರುವುದನ್ನು ನೋಡಬಹುದು. ವರದಿಯಲ್ಲಿ ʼಭಾರತ-ನೇಪಾಳ ಗಡಿಯಿಂದ ಸೋನೌಲಿಯಲ್ಲಿ ಕಂಟೇನರ್ ಕದ್ದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸುತ್ತುವರೆದಾಗ, ಒಳಗೆ ಬಾಂಬ್ ಇದೆ ಎಂದು ಹೇಳುವ ಮೂಲಕ ಆತ ಭೀತಿಯನ್ನು ಹರಡಿದನು. "ದಾರಿ ತೆರವುಗೊಳಿಸಿ, ಇಲ್ಲದಿದ್ದರೆ ನಾನು ಎಲ್ಲರನ್ನೂ ಸ್ಪೋಟಿಸುತ್ತೇನೆ" ಎಂದು ಪೊಲೀಸರಿಗೆ ಬೆದರಿಕೆ ಹಾಕಿದನು. ಸೋನೌಲಿಯಿಂದ ಕದ್ದ ಟ್ರಕ್ನೊಂದಿಗೆ ಭಾರತ-ನೇಪಾಳ ಗಡಿಯನ್ನು ದಾಟಿದ ವ್ಯಕ್ತಿಯನ್ನು ಪೊಲೀಸರು ಹಿಡಿದಾಗ, ಟ್ರಕ್ನಲ್ಲಿ ಸ್ಫೋಟಕ ವಸ್ತು ಇದೆ ಎಂದು ಆತ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆತನನ್ನು ಸುತ್ತುವರೆದು ಬಂಧಿಸುತ್ತಿರುವ ದೃಶ್ಯ ಇದು. ಟ್ರಕ್ ಕಳ್ಳತನದ ಬಗ್ಗೆ ಸೋನೌಲಿ ಪೊಲೀಸರಿಗೆ ದೂರು ಬಂದ ತಕ್ಷಣ, ಈ ಸಂದೇಶವನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಏತನ್ಮಧ್ಯೆ, ಪೊಲೀಸರು ಕ್ಯಾಂಪಿಯರ್ಗಂಜ್ನಲ್ಲಿ ಟ್ರಕ್ ಅನ್ನು ಪತ್ತೆಹಚ್ಚಿದರು. ನಂತರ ಪನಿಯೇರಾದಿಂದ ಮುಜುರಿಗೆ ಹೋಗುವ ದಾರಿಯಲ್ಲಿ ಪೊಲೀಸರು ಟ್ರಕ್ ಅನ್ನು ನಿಲ್ಲಿಸಿದರು. ಈ ಸಮಯದಲ್ಲಿ ಚಾಲಕ ಬೆದರಿಕೆ ಹಾಕಿದ್ದಾನೆ. ಉನ್ನಾವೊದ ವ್ಯಕ್ತಿಯೊಬ್ಬರು ಟ್ರಕ್ ಅನ್ನು ಕದ್ದಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು ಟ್ರಕ್ ಅನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಪುರಂದರಪುರ, ಕೊಲ್ಹುಯಿ, ಫರೆಂಡಾ, ಕ್ಯಾಂಪಿಯರ್ಗಂಜ್ ಮತ್ತು ಪನಿಯೇರಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿರುವುದನ್ನು ನೋಡಬಹುದು.
ಅಕ್ಟೋಬರ್ 11, 2025ರಂದು ದೈನಿಕ್ ಭಾಸ್ಕರ್ ಎಂಬ ವೆಬ್ಸೈಟ್ನಲ್ಲಿ ʼफर्जी आरडीएक्स वीडियो वायरल करने पर मुकदमा दर्ज:पनियरा पुलिस ने 7 नामजद सहित अज्ञात के खिलाफ कार्रवाई कीʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಆರ್ಡಿಎಕ್ಸ್ ವಿಡಿಯೋ ವೈರಲ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲು: ಪಣಿಯಾರ ಪೊಲೀಸರು 7 ಮಂದಿ ಹೆಸರಿಸಲಾದ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು. ವರದಿಯಲ್ಲಿ ʼಆರ್ಡಿಎಕ್ಸ್ ಪತ್ತೆಯಾದ ವದಂತಿಗಳನ್ನು ಹರಡುವ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಪನಿಯಾರ ಪೊಲೀಸರು ಏಳು ಹೆಸರುಗಳು ಮತ್ತು ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2020 ರ ಈ ವೀಡಿಯೊವನ್ನು ಪ್ರಸ್ತುತ ಘಟನೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗಿದೆ. ಈ ಘಟನೆ ವಾಸ್ತವವಾಗಿ ನಾಲ್ಕು ವರ್ಷ ಹಳೆಯದು, ಈ ಪೋಸ್ಟ್ಗಳು ಆ ಪ್ರದೇಶದಲ್ಲಿ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿ ವದಂತಿಗಳನ್ನು ಹರಡಿದವು. ಮುಜುರಿ ಹೊರಠಾಣೆ ಉಸ್ತುವಾರಿ ವಹಿಸಿರುವ ಏಳು ಮಂದಿ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಆಶಿಶ್ ಕುಮಾರ್ ಸಿಂಗ್ ಹೇಳಿದ್ದಾರೆ’’ ಎಂದು ವರದಿಯಾಗಿರುವುದನ್ನು ನೋಡಬಹುದು.
ಅಕ್ಟೋಬರ್ 12, 2025ರಂದು ʼಅಮರ್ ಉಜಾಲ್ʼ ಎಂಬ ವೆಬ್ಸೈಟ್ನಲ್ಲಿ ʼMaharajganj News: फर्जी खबर फैलाने वालों पर पुलिस का शिकंजा, दो गिरफ्तारʼ ಎಂಬ ಶೀರ್ಷೀಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಮಹಾರಾಜ್ಗಂಜ್. ಪನಿಯಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಕ್ನಲ್ಲಿ ಆರ್ಡಿಎಕ್ಸ್ ಸ್ಫೋಟಕ ವಸ್ತು ವಶಪಡಿಸಿಕೊಂಡ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಸುದ್ದಿ ಪೋಸ್ಟ್ ಮಾಡಿದವರ ವಿರುದ್ಧ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಕ್ರಮ ಕೈಗೊಂಡಿರುವ ಪೊಲೀಸರು ಪನಿಯಾರ ಪೊಲೀಸ್ ಠಾಣೆಯಲ್ಲಿ ಎಂಟು ಹೆಸರಿಸಲಾದ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಪನಿಯಾರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಪನಿಯಾರ ಪ್ರದೇಶದಲ್ಲಿ ಟ್ರಕ್ನಿಂದ ಅಪಾರ ಪ್ರಮಾಣದ ಆರ್ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿಕೊಂಡಿವೆ. ಈ ಸುದ್ದಿ ದಾರಿತಪ್ಪಿಸುವಂತಿತ್ತು ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿತ್ತು. ಇದು ಸಾಮಾಜಿಕ ಅಶಾಂತಿಯ ಅಪಾಯವನ್ನು ಸೃಷ್ಟಿಸಿತ್ತು. ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿದರು. ಭಿತೌಲಿ ಪೊಲೀಸರು ಶ್ಯಾಮ್ಸುಂದರ್ ಗೌರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮತ್ತು ತನಿಖೆ ಮುಂದುವರೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿ ಹರಡುವುದು ಗಂಭೀರ ಅಪರಾಧ ಎಂದು ಎಎಸ್ಪಿ ಹೇಳಿದ್ದಾರೆ. ಪೊಲೀಸರು ಎಲ್ಲಾ ವೇದಿಕೆಗಳಲ್ಲಿ ಕಣ್ಗಾವಲು ಹೆಚ್ಚಿಸುತ್ತಿದ್ದಾರೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ಉತ್ತರ ಪ್ರದೇಶದಲ್ಲಿ ಸ್ಫೋಟಕಗಳೊಂದಿಗೆ ಯುವಕನನ್ನು ಬಂಧಿಸಲಾಗಿದೆ ಎಂದು ಪ್ರಸಾರವಾಗುತ್ತಿರುವ ವೀಡಿಯೊ ವಾಸ್ತವವಾಗಿ 2020 ರಲ್ಲಿ ಸೋನೌಲಿಯಿಂದ ಟ್ರಕ್ ಕದ್ದ ವ್ಯಕ್ತಿಯ ಬಂಧನದ ವೀಡಿಯೊ ಎಂಬುದು ಸ್ಪಷ್ಟವಾಗಿದೆ.

