ಫ್ಯಾಕ್ಟ್ಚೆಕ್: ಶಿಮ್ಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ಶಿಮ್ಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

Claim :
ಶಿಮ್ಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆFact :
ವೈರಲ್ ಆದ ವಿಡಿಯೋ ಇತ್ತೀಚಿಗೆ ನಡೆದ ಬಸ್ ಘಟನೆಗೆ ಸಂಬಂಧಿಸಿದ್ದಲ್ಲ. ಇದು 2023ರದ್ದು
ಕೇರಳದಲ್ಲಿ ಸಂಚಲನ ಮೂಡಿಸಿದ್ದ ಬಸ್ನಲ್ಲಿನ ಲೈಂಗಿಕ ಕಿರುಕುಳ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ಮಹಿಳೆಗೆ ಕೇರಳ ಪೊಲೀಸರು ಬಿಗ್ಶಾಕ್ ನೀಡಿದೆ. ಜನವರರಿ 21, 2026ರಂದು ಗೋವಿಂದಪುರಂ ನಿವಾಸಿ ಬಸ್ ಪ್ರಯಾಣದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ 42 ವರ್ಷದ ದೀಪಕ್ ಯು ಆತ್ಮಹತ್ಯೆ ಬೆನ್ನಲ್ಲೇ ಮಹಿಳೆಯ ವಿರುದ್ಧ ಸೋಮವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ತನ್ನ ಕಂಟೆಂಟ್ಗಾಗಿ ಬಸ್ ಪ್ರಯಾಣದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ವಡಕರದ ನಿವಾಸಿ ಶಿಮಿತಾ ಮುಸ್ತಫಾ (35) ವಿರುದ್ಧ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದರು. ಅತನ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಶಿಮಿತಾ ಮುಸ್ತಫಾಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಜನವರಿ 21, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಕೇರಳದ ಹಿಂದೂ ಯುವಕನ ಆತ್ಮಹತ್ಯೆಗೆ ಕಾರಣಳಾದ Shimjita ಮುಸ್ತಾಫಾಳನ್ನು ಬಂಧಿಸಿದ ಕೇರಳದ ಪೊಲೀಸರು. ಮುಂದಿನ ಕ್ರಮಗಳು ಹೇಗಿರುತ್ತವೆ ನೋಡಬೇಕುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಇದೇ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಸಹ ನಾವು ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 22, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಕೇರಳದ ಹಿಂದೂ ಯುವಕನ ಆತ್ಮಹತ್ಯೆಗೆ ಕಾರಣಳಾದ Shimjita ಮುಸ್ತಾಫಾಳನ್ನು ಬಂಧಿಸಿದ ಕೇರಳದ ಪೊಲೀಸರು. ಮುಂದಿನ ಕ್ರಮಗಳು ಹೇಗಿರುತ್ತವೆ ನೋಡಬೇಕುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ. ಈ ವೀಡಿಯೊ ಹಳೆಯದಾಗಿದ್ದು, 2023ರಲ್ಲಿ ಕೇರಳದಲ್ಲಿ ನಡೆದ ವಿಭಿನ್ನ ಘಟನೆಗೆ ಸಂಬಂಧಿಸಿದಂತೆ ಅಶ್ವಥಿ ಎಂಬ ಮಹಿಳೆಯನ್ನು ಬಂಧಿಸಿದಾಗ ಇದನ್ನು ರೆಕಾರ್ಡ್ ಮಾಡಲಾಗಿದೆ.
ನಾವು ವೈರಲ್ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನ್ಯೂಸ್ ಕೇರಳ ಯೂಟ್ಯೂಬ್ ಚಾನೆಲ್ನಲ್ಲಿ ನವಂಬರ್ 24, 2023ರಂದು ಹಂಚಿಕೊಂಡಿರುವ ವಿಡಿಯೋವೊಂದು ಕಂಡುಬಂದಿತು. ವಿಡಿಯೋವಿಗೆ ʼഅശ്വതി അഭിഭാഷകനോടൊപ്പം അഞ്ചൽ പോലീസിൽ ഹാജരായിʼ ಎಂಬ ಶೀರ್ಷಿಕೆಯನ್ನು ನೀಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಶ್ವತಿ ತನ್ನ ವಕೀಲರೊಂದಿಗೆ ಆಂಚಲ್ ಪೊಲೀಸ್ ಠಾಣೆಯಲ್ಲಿ ಹಾಜರಾದರುʼ ಎಂದು ಬರೆದಿರುವುದನ್ನು ನೋಡಬಹುದು. ವೀಡಿಯೊದಲ್ಲಿ, ಬಂಧಿತ ಮಹಿಳೆಯ ಹೆಸರನ್ನು ಅಶ್ವತಿ ಎಂದು ಸಹ ಉಲ್ಲೇಖಿಸಲಾಗಿದೆ. ವಿಡಿಯೋವಿನ ವಿವರಣೆಯನ್ನು ನೋಡಿದರೆ ʼಅವಳು ಅವನನ್ನೂ ಕೊಲ್ಲುತ್ತಾಳೆ. ಪತಿ ನೇಣು ಬಿಗಿದುಕೊಂಡ ದಿನದಂದು ತನ್ನ ಮಗುವನ್ನು ಬಿಟ್ಟು ಪ್ರಿಯಕರನೊಂದಿಗೆ ಹೋದ ಅಶ್ವತಿ, ತನ್ನ ವಕೀಲರೊಂದಿಗೆ ಆಂಚಲ್ ಪೊಲೀಸರ ಮುಂದೆ ಹಾಜರಾದಳು. ಪೊಲೀಸ್ ಠಾಣೆಯಲ್ಲಿ ಅಶ್ವತಿಯ ಮೇಲೆ ಆಕೆಯ ಪೋಷಕರು ಹಲ್ಲೆ ನಡೆಸದಂತೆ ಪೊಲೀಸರು ತಡೆದರು.ʼ ಎಂದು ಬರೆದಿರುವುದನ್ನು ನೋಡಬಹುದು.
ಮತ್ತಷ್ಟು ಮಾಹಿತಿಯನ್ನು ತಿಳಿಯಲು ನಾವು ವೈರಲ್ ಆದ ವಿಡಿಯೋಗೆ ಸಂಬಂಧಿಸಿದ ಕೀವರ್ಡ್ ʼಶಿಮ್ಜಿತಾ ಮುಸ್ತಫಾ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆಯೇʼ ಎಂಬ ಪದಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼದಿ ಹಿಂದೂʼ ವೆಬ್ಸೈಟ್ನಲ್ಲಿ ಜನವರಿ 22, 2026ರಂದು ʼUnnatural death of man following social media trial: accused arrested from Vadakaraʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಇನ್ನು ಶಿಮ್ಜಿತಾ ಮುಸ್ತಫಾರನ್ನು ಜನವರಿ 21, 2026ರಂದು ಕೇರಳದ ಉತ್ತರ ಕರಾವಳಿಯಲ್ಲಿರುವ ಅವರ ಸಂಬಂಧಿಕರ ಮನೆಯಿಂದ ಬಂಧಿಸಲಾಯಿತು" ಎಂದು ದಿ ಹಿಂದೂ ವರದಿ ಮಾಡಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ಕೇರಳ ಬಸ್ ವಿವಾದದ ವೀಡಿಯೊ ಘಟನೆಯಲ್ಲಿ ಭಾಗಿಯಾಗಿರುವ ಶಿಮ್ಜಿತಾ ಮುಸ್ತಫಾರನ್ನು ಬಂಧಿಸಲಾಗಿದೆ ಎಂದು ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವೀಡಿಯೊದಲ್ಲಿರುವ ವ್ಯಕ್ತಿ ಶಿಮ್ಜಿತಾ ಮುಸ್ತಫಾ ಅಲ್ಲ. 2023ರಲ್ಲಿ ಕೇರಳದಲ್ಲಿ ನಡೆದ ಮತ್ತೊಂದು ಘಟನೆಗಾಗಿ ಅಶ್ವತಿ ಎಂಬ ಮಹಿಳೆಯನ್ನು ಬಂಧಿಸಿದಾಗ ತೆಗೆದ ಹಳೆಯ ವೀಡಿಯೊವನ್ನು ಈಗ ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ.

