ಫ್ಯಾಕ್ಟ್ಚೆಕ್: ಶಬರಿಮಲೆ ದೇವಾಲಯದ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಎಂದು ಪಂಪಾ ಗಣಪತಿ ದೇವಾಲಯ ಚಿತ್ರ ಹಂಚಿಕೆ
ಶಬರಿಮಲೆ ದೇವಾಲಯದ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಎಂದು ಪಂಪಾ ಗಣಪತಿ ದೇವಾಲಯ ಚಿತ್ರ ಹಂಚಿಕೆ

Claim :
ಕೇರಳ ಸರ್ಕಾರ ಶಬರಿಮಲೆ ದೇವಾಲಯದ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆFact :
ವೈರಲ್ ಆದ ಚಿತ್ರಗಳು ಪಂಪಾ ಗಣಪತಿ ದೇವಾಲಯಕ್ಕೆ ಸಂಬಂಧಿಸಿದ್ದು.
ಕೇರಳ ರಾಜ್ಯದ ಶಬರಿಮಲೆ ದೇವಸ್ಥಾನವು ಭಾರತದ ಪ್ರಮುಖ ಹಿಂದೂ ಪುಣ್ಯಕ್ಷೇತ್ರ ಎಂದರೆ ತಪ್ಪಾಗೊದಿಲ್ಲ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಲು ಇರುಮುಡಿಯನ್ನು ಕಟ್ಟಿಕೊಂಡು ದೇವರ ಮೊರೆ ಹೋಗುತ್ತಾರೆ. ಶಬರಿಮಲೆ ಯಾತ್ರೆಯು ಪ್ರತಿ ವರ್ಷದಂತೆ ನವೆಂಬರ್ ಮಾಸ ಅಂದರೆ, ಕಾರ್ತಿಕ ಮಾಸದಿಂದ ಜನವರಿಯವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಅಯ್ಯಪ್ಪ ಭಕ್ತರು 18 ಪವಿತ್ರ ಮೆಟ್ಟಿಲುಗಳನ್ನು ಏರುವ ಮೂಲಕ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಾರೆ. ಪ್ರತೀ ವರ್ಷವೂ ಶಬರಿಮಲೆಯ ಅಯ್ಯಪ್ಪ ದೇವಾಲಯವು ಮಂಡಲ-ಮಕರವಿಳಕ್ಕು ಸೀಸನ್ನಲ್ಲಿ ತೆರೆಯುತ್ತದೆ. ಅದೇ ರೀತಿ ಇದೀಗ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭವಾಗಿದೆ. ಈ ಹಿನ್ನೆಲೆ ದೇವಾಲಯದ ಬಾಗಿಲು ಕೂಡಾ ತೆರೆದಿದೆ. ಇತ್ತೀಚಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೂವರು ಯುವತಿಯರು ಪೊಲೀಸ್ ಅಧಿಕಾರಿಗಳ ವೇಷ ಧರಿಸಿ ಶಬರಿಮಲೆ ಯಾತ್ರಿಕರ ಜನಸಂದಣಿಯಲ್ಲಿ ನಡೆದುಕೊಂಡು ದೇವಾಲಯದ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ತೋರಿಸಲಾಗಿದೆ. "ಕೇರಳ ಕಮ್ಯುನಿಸ್ಟ್ ಸರ್ಕಾರವು ಅಯ್ಯಪ್ಪ ದೇವಾಲಯದ ನಿಯಮಗಳನ್ನು ಉಲ್ಲಂಘಿಸಿ ಯುವತಿಯರಿಗೆ ದೇವಾಲಯದೊಳಗೆ ಅವಕಾಶ ನೀಡಿದೆ" ಎಂದು ಪೋಸ್ಟ್ನ ಶೀರ್ಷಿಕೆ ಹೇಳುತ್ತದೆ.
ಡಿಸಂಬರ್ 30, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼApacharam in Shabarimala Ayyappa Temple. Commie govt of Kerala has deployed women police personnel in the Temple premises. They are adamant in destroying our age old traditionsʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼKerala communist government breaking Ayyappa Temple rules to allowing young women inside templeʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಎಕಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಅಪಚಾರ. ಕೇರಳ ಸರ್ಕಾರ ದೇವಾಲಯದ ಆವರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ನಮ್ಮ ಹಳೆಯ ಸಂಪ್ರದಾಯಗಳನ್ನು ನಾಶಮಾಡುವಲ್ಲಿ ಅವರು ದೃಢನಿಶ್ಚಯ ಮಾಡಿದ್ದಾರೆʼ ಎಂದು ಬರೆದಿರುವುದನ್ನು ನೋಡಬಹುದು. ಕ್ಯಾಪ್ಷನ್ನ್ನು ಅನುವಾದಿಸಿದಾಗ ʼಅಯ್ಯಪ್ಪ ದೇವಸ್ಥಾನದ ನಿಯಮಗಳನ್ನು ಉಲ್ಲಂಘಿಸಿ ಯುವತಿಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಿದ ಕೇರಳ ಕಮ್ಯುನಿಸ್ಟ್ ಸರ್ಕಾರʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಡಿಸಂಬರ್ 27, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCommunist govt has succeeded in bringing ladies in our sabarimala temple. It's not their fault but us. Who handed over our temple to tge non- believers to loot and destroy the temples tradition. Shameful police officers too. Who didn't objected to itʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕಮ್ಯುನಿಸ್ಟ್ ಸರ್ಕಾರ ನಮ್ಮ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ಇದು ಅವರ ತಪ್ಪಲ್ಲ, ನಮ್ಮ ತಪ್ಪೇ. ದೇವಾಲಯದ ಸಂಪ್ರದಾಯವನ್ನು ಲೂಟಿ ಮಾಡಲು ಮತ್ತು ನಾಶಮಾಡಲು ನಮ್ಮ ದೇವಾಲಯವನ್ನು ನಂಬಿಕೆಯಿಲ್ಲದವರಿಗೆ ಯಾರು ಹಸ್ತಾಂತರಿಸಿದರು. ನಾಚಿಕೆಗೇಡಿನ ಪೊಲೀಸ್ ಅಧಿಕಾರಿಗಳೂ ಸಹ. ಯಾರು ಅದನ್ನು ಆಕ್ಷೇಪಿಸಲಿಲ್ಲʼ ಎಂದು ಬರೆದರಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ಪೊಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಲ್ಲ, ಬದಲಾಗಿ ಪಂಬಾ ದ್ವಾರದಲ್ಲಿ ಮಹಿಳಾ ಪೊಲೀಸರು ನಿಯೋಜನೆಗೊಂಡಿರುವುದನ್ನು ತೋರಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ʼಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳಾ ಪೊಲೀಸರುʼ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹಾಗೆ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್ 31, 2025ರಂದು ʼಸ್ಟೇಟ್ ಪೊಲೀಸ್ ಮಿಡಿಯಾ ಸೆಂಟರ್ ಕೇರಳʼ ಎಂಬ ಫೇಸ್ಬುಕ್ ಖಾತೆಯಲ್ಲಿ ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ಹಂಚಿಕೊಂಡು ʼശബരിമല സന്നിധാനത്ത് യുവതികളായ വനിതാ പൊലീസുദ്യോഗസ്ഥരെ നിയോഗിച്ചതായി പരാമർശിച്ചു കൊണ്ട് പ്രചരിക്കുന്ന വീഡിയോ വ്യാജം. വീഡിയോയിലെ ദൃശ്യങ്ങൾ പമ്പാ ഗണപതി ക്ഷേത്രത്തിൽ നിന്നുള്ളതാണ്.ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಶಬರಿಮಲೆ ಸನ್ನಿಧಾನದಲ್ಲಿ ಯುವ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿಕೊಂಡು ಪ್ರಸಾರವಾಗುತ್ತಿರುವ ವೀಡಿಯೊ ನಕಲಿಯಾಗಿದೆ. ವೀಡಿಯೊದಲ್ಲಿರುವ ದೃಶ್ಯಗಳು ಪಂಪಾ ಗಣಪತಿ ದೇವಾಲಯದವುʼ ಎಂದು ಬರೆದಿರುವುದನ್ನು ನೋಡಬಹುದು. ಕೇರಳ ಪೊಲೀಸರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಇದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೇ ಸುಳಿವಾಗಿ ತೆಗೆದುಕೊಂಡು ನಾವು ʼಪಂಬ ಗಣಪತಿ ದೇವಸ್ಥಾನʼ ಎಂಬ ಕೀವರ್ಡ್ ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼವಂಡರ್ಬೋಟ್ʼ ಎಂಬ ವೆಬ್ಸೈಟ್ನಲ್ಲಿ ಹಂಚಿಕೊಂಡಿರುವ ಎರಡು ಚಿನ್ನಡ ಕಂಬಗಳನ್ನು ನಾವು ಕಂಡುಕೊಂಡೆವು. ಈ ಚಿತ್ರವನ್ನು ಪಂಬಾ ಗಣಪತಿ ದೇವಸ್ಥಾನ ಎಂದು ಗುರುತಿಸಿದ ಬಳಕೆದಾರರು ವಿಮರ್ಶೆಗಳ ವಿಭಾಗದಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಾವು ಗೂಗಲ್ ಮ್ಯಾಪ್ಸ್ನಲ್ಲಿ ಅಪ್ಲೋಡ್ ಮಾಡಿದ ಪಂಬ ಗಣಪತಿ ದೇವಾಲಯದ ಚಿತ್ರಗಳನ್ನು ಪರಿಶೀಲಿಸಿದೆವು. ವೈರಲ್ ಆಗಿರುವ ವೀಡಿಯೊವಿನಲ್ಲಿರುವ ಕೆಲವು ಕೀಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಗೂಗಲ್ ಮ್ಯಾಪ್ ಬಳಕೆದಾರರು ಗೂಗಲ್ ನಕ್ಷೆಗಳಿಗೆ ಅಪ್ಲೋಡ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳಂತೆಯೇ ಇವೆ ಎಂದು ನಾವು ಕಂಡುಕೊಂಡಿದ್ದೇವೆ. ಪಂಬಾ ಗಣಪತಿ ದೇವಾಲಯಪಂಪಾ ಗಣಪತಿ ಕೋವಿಲ್ ಎಂದೂ ಕರೆಯಲ್ಪಡುವ ಈ ದೇವಾಲಯವು ಗಣೇಶನಿಗೆ ಸಮರ್ಪಿತವಾಗಿದೆ. ಪಂಬದಿಂದ ಸನ್ನಿಧಾನಕ್ಕೆ ಹೋಗುವ ದಾರಿಯಲ್ಲಿ ಇದು ಮೊದಲ ದೇವಾಲಯ ಮತ್ತು ಪವಿತ್ರ ಸ್ಥಳವಾಗಿದೆ -ಶಬರಿಮಲೆ ಅಯ್ಯಪ್ಪ ದೇವಾಲಯಸನ್ನಿಧಾನಕ್ಕೆ ಸುರಕ್ಷಿತ ಚಾರಣಕ್ಕಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಜನವರಿ 9, 2023 ರಂದು ಎಸ್ ವಿ ಟೂರಿಸಂ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಪಂಬ ಗಣಪತಿ ದೇವಾಲಯವನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಪ್ರವಾಸೋದ್ಯಮ ವೀಡಿಯೊದಲ್ಲಿ ಗೋಚರಿಸುವ ಮೆಟ್ಟಿಲುಗಳು ಮತ್ತು ದೇವಾಲಯದ ರಚನೆಯು ವೈರಲ್ ಕ್ಲಿಪ್ನಲ್ಲಿ ಕಂಡುಬರುವವುಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ, ಇದರಲ್ಲಿ ಮಹಿಳಾ ಪೊಲೀಸರು ಆರಂಭದಲ್ಲಿ ಇಳಿಯುವ ಮೆಟ್ಟಿಲುಗಳನನ್ನು ಸಹ ನಾವಿಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಯಾವುದೇ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದಿಲ್ಲ ಮತ್ತು ತೀರ್ಥಯಾತ್ರೆಯ ಸಮಯದಲ್ಲಿ ಮಹಿಳೆಯರಿಗೆ ಗೊತ್ತುಪಡಿಸಿದ ಚೆಕ್ಪೋಸ್ಟ್ಗಳವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ವೈರಲ್ ಆದ ವಿಡಿಯೋ ಪಂಬಾ ಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದ್ದು, ಅಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅಧಿಕೃತವಾಗಿ ನಿಯೋಜಿಸಲಾಗುತ್ತದೆ.

