ಫ್ಯಾಕ್ಟ್ಚೆಕ್: 2024ರ ಪಂಜಾಬ್ನಲ್ಲಿ ಕೃಷಿ ತಾಜ್ಯ ಸುಡುವ ವಿಡಿಯೋವನ್ನು ದೀಪಾವಳಿ ನಂತರದ ದೆಹಲಿಯ ಮಾಲಿನ್ಯಕ್ಕೆ ಕಾರಣ ಎಂದು ಹಂಚಿಕೆ
2024ರ ಪಂಜಾಬ್ನಲ್ಲಿ ಕೃಷಿ ತಾಜ್ಯ ಸುಡುವ ವಿಡಿಯೋವನ್ನು ದೀಪಾವಳಿ ನಂತರದ ದೆಹಲಿಯ ಮಾಲಿನ್ಯಕ್ಕೆ ಕಾರಣ ಎಂದು ಹಂಚಿಕೆ

Claim :
ಪಂಜಾಬ್ನಲ್ಲಿ ಇತ್ತೀಚೆಗೆ ಕೃಷಿ ಕೂಳೆ ಸುಡುವುದನ್ನು ವೀಡಿಯೊ ತೋರಿಸುತ್ತದೆ, ಇದು ದೆಹಲಿ ಮಾಲಿನ್ಯದ ಇತ್ತೀಚಿನ ಏರಿಕೆಗೆ ಕಾರಣFact :
ವೈರಲ್ ಆದ ವಿಡಿಯೋ 2024ರದ್ದು
ದೆಹಲಿ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿ ಮತ್ತು ಹರ್ಯಾಣದಲ್ಲಿ ಇದು ವಿಕೋಪದ ಹಂತಕ್ಕೆ ತಿರುಗಿದ್ದು, ವಾಯುಗುಣಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೀಪಾವಳಿಯ ಪಟಾಕಿಯು ಇದಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ.ದೆಹಲಿಯ 38 ವಾಯುಗುಣಮಟ್ಟ ಪರೀಕ್ಷಾ ಕೇಂದ್ರಗಳ ಪೈಕಿ 35 ಕೇಂದ್ರಗಳ ಗುಣಮಟ್ಟವು ‘ಅತಿ ಗಂಭೀರ’ ಎಂದು ದಾಖಲಾಗಿದೆ. ಬವಾನಾ ಎಂಬಲ್ಲಿ 432 ಅಂಕ ದಾಖಲಾಗಿದ್ದು, ಇದು ಅತ್ಯಂತ ಗಂಭೀರವಾಗಿದೆ. ಪರಿಣಾಮ ದೆಹಲಿ ಪೂರ್ತಿ ಹೊಗೆ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.
ಇದರ ನಡುವೆ ಇತ್ತೀಚಿಗೆ ಅಂದರೆ, ಅಕ್ಟೋಬರ್ 22, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThis is the level of Stubble Burning going on in Punjab. This is a perennial cause of air pollution in Delhi and its suburbs" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪಂಜಾಬ್ನಲ್ಲಿ ನಡೆಯುತ್ತಿರುವ ತಾಜ್ಯ ಸುಡುವಿಕೆಯ ಮಟ್ಟ ಇದು. ದೆಹಲಿ ಮತ್ತು ಅದರ ಉಪನಗರಗಳಲ್ಲಿ ವಾಯು ಮಾಲಿನ್ಯಕ್ಕೆ ಇದು ಸದಾಕಾಲದ ಕಾರಣವಾಗಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡದ್ದಾರೆ.
ವೈರಲ್ ಆದ ವಿಡಿಯೋವನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 22, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThis is the level of Stubble Burning going on in Punjab. This is a perennial cause of air pollution in Delhi and its suburbs" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋ 2024ರದ್ದು.
ನಾವು ವೈರಲ್ ಆದ ವಿಡಿಯೋವಿನದಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವೆಂಬರ್ 1, 2024ರಂದು ʼನ್ಯೂಸ್9 ಲೈವ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼStubble Burning in Punjab : Incident Reported in Dagru Village, Moga Districtʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವರದಿಯ ಟೈಮ್ಲೈನ್ನಲ್ಲಿ ವೀಡಿಯೊ ಇತ್ತೀಚಿನದಲ್ಲ ಒಂದು ವರ್ಷ ಹಳೆಯದು ಎಂದು ಸ್ಪಷ್ಟಪಡಿಸಲಾಗಿದೆ. ಪಂಜಾಬ್ನ ಮೋಗಾ ಜಿಲ್ಲೆಯ ಡಾಗ್ರು ಗ್ರಾಮದಲ್ಲಿ ತಾಜ್ಯವನ್ನು ಸುಡುವ ಘಟನೆಯನ್ನು ಇದು ಚಿತ್ರಿಸುತ್ತದೆ. ಈ ಅಭ್ಯಾಸವು ರೈತರಲ್ಲಿ ಸಾಮಾನ್ಯವಾಗಿದ್ದರೂ, ವಾಯು ಮಾಲಿನ್ಯ ಮತ್ತು ಆರೋಗ್ಯದ ಅಪಾಯಗಳು ಸೇರಿದಂತೆ ಗಮನಾರ್ಹ ಪರಿಸರ ಸವಾಲುಗಳನ್ನು ಒಡ್ಡುತ್ತದೆʼ ಎಂಬುದನ್ನು ನಾವೀ ವರದಿಯಲ್ಲಿ ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼಪಂಜಾಬ್ನ ಮೋಗಾ ಜಿಲ್ಲೆಯ ದಾಗ್ರು ಗ್ರಾಮದ ಹೊಲವೊಂದರಲ್ಲಿ ಕೃಷಿ ಕೂಳೆ ಸುಡುವ ಘಟನೆಯನ್ನು ನಾವು ಹತ್ತಿರದಿಂದ ನೋಡುತ್ತೇವೆ. ಈ ಪದ್ಧತಿ ರೈತರಲ್ಲಿ ಸಾಮಾನ್ಯವಾಗಿದ್ದರೂ, ವಾಯು ಮಾಲಿನ್ಯ ಮತ್ತು ಆರೋಗ್ಯದ ಅಪಾಯಗಳು ಸೇರಿದಂತೆ ಗಮನಾರ್ಹ ಪರಿಸರ ಸವಾಲುಗಳನ್ನು ಒಡ್ಡುತ್ತದೆ. ಕೃಷಿ ಕೂಳೆ ಸುಡುವಿಕೆಯ ಪರಿಣಾಮಗಳು, ಗಾಳಿಯ ಗುಣಮಟ್ಟದ ಮೇಲೆ ಅದರ ಪರಿಣಾಮ ಮತ್ತು ಸುಸ್ಥಿರ ಪರ್ಯಾಯಗಳನ್ನು ಹುಡುಕುವ ನಿರಂತರ ಪ್ರಯತ್ನಗಳನ್ನು ನಾವು ಚರ್ಚಿಸುತ್ತೇವೆ. ಪಂಜಾಬ್ನ ಕೃಷಿ ಭೂದೃಶ್ಯವನ್ನು ಎದುರಿಸುತ್ತಿರುವ ಈ ಒತ್ತುವ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವಾಗ ನಮ್ಮೊಂದಿಗೆ ಸೇರಿʼ ಎಂಬುದನ್ನು ನಾವಿಲ್ಲಿ ನೋಡಬಹುದು.
ನವಂಬರ್ 01, 2024ರಂದು ʼಎಎನ್ಐʼ ಎಕ್ಸ್ ಖಾತೆಯಲ್ಲಿ ʼ#WATCH | Punjab: An incident of stubble burning seen in a field in Dagru village of Moga districtʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 22, 2025ರಂದು ʼನ್ಯೂಸ್ ಬೈಟ್ಸ್ʼ ಎಂಬ ವೆಬ್ಸೈಟ್ನಲ್ಲಿ ʼಪಂಜಾಬ್: ಈ ವರ್ಷ ಕೂಳೆ ಸುಡುವ ಪ್ರಕರಣಗಳಲ್ಲಿ 73% ಇಳಿಕೆʼ ಎಂಬ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಈ ವರ್ಷ ಪಂಜಾಬ್ನಲ್ಲಿ ಹುಲ್ಲು ಸುಡುವ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 21 ರವರೆಗೆ ಕೇವಲ 415 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,510 ಪ್ರಕರಣಗಳು ದಾಖಲಾಗಿದ್ದಕ್ಕಿಂತ ಇದು ತೀವ್ರ ಇಳಿಕೆಯಾಗಿದೆ. ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ (ಪಿಪಿಸಿಬಿ) ಮಾಹಿತಿಯ ಪ್ರಕಾರ, 2023 ರಲ್ಲಿ ಇದೇ ಅವಧಿಯಲ್ಲಿ ದಾಖಲಾದ ಒಟ್ಟು ಕೃಷಿ ಬೆಂಕಿಯ ಸಂಖ್ಯೆ 1,764.ಈ ವರ್ಷ ಪಂಜಾಬ್ನಲ್ಲಿ ಹುಲ್ಲು ಸುಡುವ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ, ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 21 ರವರೆಗೆ ಕೇವಲ 415 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,510 ಪ್ರಕರಣಗಳು ದಾಖಲಾಗಿದ್ದವುʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಅಕ್ಟೋಬರ್ 23, 2025ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್ಸೈಟ್ನಲ್ಲಿ ʼMeasures beyond agriculture needed to clean Delhi air, says new studyʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಚಳಿಗಾಲದ ಆರಂಭದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಗಾಳಿಯ ಗುಣಮಟ್ಟ ಹದಗೆಡಲು ಪಂಜಾಬ್ ಮತ್ತು ಹರಿಯಾಣದಲ್ಲಿ ಕೂಳೆ ಸುಡುವಿಕೆಯ ಕೊಡುಗೆಯ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ, ಸಂಶೋಧನಾ-ಆಧಾರಿತ ಸಲಹಾ ಸಂಸ್ಥೆಯಾದ ಕ್ಲೈಮೇಟ್ ಟ್ರೆಂಡ್ಸ್, ದೆಹಲಿಯ PM2.5 ಮೇಲೆ ಕೂಳೆ ಸುಡುವಿಕೆಯ ಪರಿಣಾಮದ ಬಗ್ಗೆ ಕೇಂದ್ರೀಕೃತ ಡೇಟಾವನ್ನು ವಿಶ್ಲೇಷಿಸಿದೆ. ಈ ತುಲನಾತ್ಮಕ ವಿಶ್ಲೇಷಣೆಯು ಅಕ್ಟೋಬರ್ 2024 ಮತ್ತು ಅಕ್ಟೋಬರ್ 2025ರ ನಡುವಿನ ಹೋಲಿಕೆಯನ್ನು ಒಳಗೊಂಡಿದೆʼ ಎಂದು ವರದಿಯಲ್ಲಿದೆ.
ಇದರಿಂದ ಸಾಭೀತಗಿದ್ದೇನೆಂದರೆ, ಪಂಜಾಬ್ನಲ್ಲಿ ಹುಲ್ಲುಗಾವಲುಗಳಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಇದರಿಂದ ಭಾರೀ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಇತ್ತೀಚಿನದಲ್ಲ. ವೈರಲ್ ಆದ ವಿಡಿಯೋ 2024ರದ್ದು ಮತ್ತು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪ್ರಸ್ತುತ ಮಾಲಿನ್ಯ ಮಟ್ಟಕ್ಕೆ ಸಂಬಂಧಿಸಿಲ್ಲ

