ಫ್ಯಾಕ್ಟ್ಚೆಕ್: ಯುವತಿಯೊಬ್ಬಳು ಪಿಜ್ಜಾ ಡೆಲಿವರಿ ಬಾಯ್ ತನ್ನ ಸ್ನೇಹಿತನೆಂದು ವ್ಯಂಗ್ಯ ಮಾಡುತ್ತಿರುವ ವೀಡಿಯೊ ಸ್ಕ್ರಿಪ್ಟ್ಡ್
ಯುವತಿಯೊಬ್ಬಳು ಪಿಜ್ಜಾ ಡೆಲಿವರಿ ಬಾಯ್ ತನ್ನ ಸ್ನೇಹಿತನೆಂದು ವ್ಯಂಗ್ಯ ಮಾಡುತ್ತಿರುವ ವೀಡಿಯೊ ಸ್ಕ್ರಿಪ್ಟ್ಡ್

Claim :
ಯುವತಿಯೊಬ್ಬಳು ಪಿಜ್ಜಾ ಡೆಲಿವರಿ ಬಾಯ್ ತನ್ನ ಸ್ನೇಹಿತನೆಂದು ವ್ಯಂಗ್ಯ ಮಾಡಿದಳುFact :
ಈ ವಿಡಿಯೋ ಸ್ಕ್ರಿಪ್ಟ್ಡ್
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಜನವರಿ 29,2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼSee how a girl mocks her own school friend after spotting him working at Domino’s. The girl says: “This is my friend. He used to send us motivational reels about studying. Now he’s 30 years old and working at Domino’s.” Then she asks him: “How does it feel being a Domino’s guy?” Now the real question is Was she showing a real life story of struggle? Or was she laughing at his situation and throwing sarcasm at him? Because honest work is never shameful. Shame lies in turning someone’s hard-earned livelihood into mockery for content. The video is in the comment box. Watch it and tell was this just a joke, or pure sarcasm?ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಒಬ್ಬ ಹುಡುಗಿ ತನ್ನ ಶಾಲೆಯ ಸ್ನೇಹಿತನನ್ನು ಡೊಮಿನೋಸ್ನಲ್ಲಿ ಕೆಲಸ ಮಾಡುತ್ತಿರುವಾಗ ರೆಕಾರ್ಡ್ ಮಾಡುತ್ತಾಳೆ. ಅವನು ಹಿಂದೆ ಓದು ಬಗ್ಗೆ ಪ್ರೇರಣಾತ್ಮಕ ವಿಡಿಯೋಗಳನ್ನು ಕಳುಹಿಸುತ್ತಿದ್ದನೆಂದು ಹೇಳಿ, ಈಗ ಅವನು 30 ವರ್ಷ ವಯಸ್ಸಿನಲ್ಲಿ ಡೊಮಿನೋಸ್ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳುತ್ತಾಳೆ. ನಂತರ ಅವನಿಗೆ, “ಡೊಮಿನೋಸ್ ಗೈ ಆಗಿರುವುದಕ್ಕೆ ಹೇಗಿದೆ?” ಎಂದು ಕೇಳುತ್ತಾಳೆ. ಮೊದಲ ನೋಟಕ್ಕೆ ಇದು ಸಾಮಾನ್ಯ ಮಾತುಕತೆ ಅಥವಾ ತಮಾಷೆಯಂತೆ ಕಾಣಬಹುದು. ಆದರೆ ಸ್ವಲ್ಪ ಗಮನವಾಗಿ ನೋಡಿದರೆ, ಈ ವಿಡಿಯೋ ಒಂದು ಮುಖ್ಯ ಪ್ರಶ್ನೆಯನ್ನು ಎಬ್ಬಿಸುತ್ತದೆ. ಅವಳು ನಿಜವಾಗಿಯೂ ಜೀವನದ ಹೋರಾಟವನ್ನು ತೋರಿಸಲು ಪ್ರಯತ್ನಿಸಿದ್ದಳಾ? ಅಥವಾ ಅವನ ಪರಿಸ್ಥಿತಿಯನ್ನು ತಮಾಷೆ ಮಾಡುತ್ತಾ ವ್ಯಂಗ್ಯವಾಗಿ ವಿಷಯವನ್ನಾಗಿ ಮಾಡಿದ್ದಳಾ? ಡೊಮಿನೋಸ್ನಲ್ಲಿ ಕೆಲಸ ಮಾಡುವುದು ಅಥವಾ ಯಾವುದೇ ಕೆಲಸ ಮಾಡುವುದು ಲಜ್ಜೆಯ ವಿಷಯವಲ್ಲ. ಪ್ರಾಮಾಣಿಕವಾಗಿ ದುಡಿಯುವ ಯಾವುದೇ ಕೆಲಸ ಗೌರವಕ್ಕೆ ಪಾತ್ರ. ಅನೇಕರು ತಮ್ಮ ಕುಟುಂಬವನ್ನು ಪೋಷಿಸಲು ಇಂತಹ ಕೆಲಸಗಳನ್ನು ಮಾಡುತ್ತಾರೆ. ಇಲ್ಲಿ ಸಮಸ್ಯೆ ಅವನು ಯಾವ ಕೆಲಸ ಮಾಡುತ್ತಿದ್ದಾನೆ ಎಂಬುದಲ್ಲ. ಒಬ್ಬ ವ್ಯಕ್ತಿಯ ಗೌರವಯುತ ಜೀವನೋಪಾಯವನ್ನು ಮನರಂಜನೆಗಾಗಿ ಬಳಸುವುದೇ ನಿಜವಾದ ಸಮಸ್ಯೆ. ನಿಜವಾಗಿಯೂ ಪ್ರೇರಣೆ ನೀಡುವ ಉದ್ದೇಶ ಇದ್ದರೆ, ಮಾತಿನ ಶೈಲಿ ಮತ್ತು ಭಾವನೆ ಬೇರೆ ರೀತಿಯಾಗಿರುತ್ತಿತ್ತು. ಈ ವಿಡಿಯೋ ನೋಡುವವರಲ್ಲಿ ಇದು ಪ್ರೋತ್ಸಾಹವೇ ಅಥವಾ ಅವಮಾನವೇ ಎಂಬ ಪ್ರಶ್ನೆ ಮೂಡಿಸುತ್ತದೆ. ವೀಕ್ಷಣೆಗಳು ಮತ್ತು ಲೈಕ್ಗಳಿಗಾಗಿ ಓಡಾಡುವ ಈ ಕಾಲದಲ್ಲಿ, ಮಾನವೀಯತೆ ಕಳೆದುಹೋಗುತ್ತಿದೆ. ಆದರೆ ಯಾರೊಬ್ಬರ ಗೌರವವನ್ನು ವಿಷಯವನ್ನಾಗಿ ಮಾಡಬಾರದು. ವಿಡಿಯೋ ಕಾಮೆಂಟ್ ಬಾಕ್ಸ್ನಲ್ಲಿ ಇದೆ. ನೋಡಿ ಹೇಳಿ. ಇದು ಕೇವಲ ತಮಾಷೆಯೇ?ಅಥವಾ ಶುದ್ಧ ವ್ಯಂಗ್ಯವೇ? ಎಂದು ಪ್ರಶ್ನಿಸಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 29,2026ರಂದು ಒಂದು ಪ್ರಮುಖ ವೆಬ್ಸೈಟ್ನಲ್ಲಿ ʼ'డెలివరీ బాయ్' పై స్నేహితురాలి కామెంట్.. యువతిపై విమర్శలుʼ ಎಂಬ ಶಿರ್ಷಿಕೆಯೊಂದಿಗೆ ತೆಲುಗಿನಲ್ಲಿ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼఓ యువతి రోడ్డుపై వెళ్తున్న తన స్కూల్ స్నేహితుడిని కలిసింది. ఈ క్రమంలోనే అతడితో వీడియో తీస్తూ.. "ఇతడు నా స్నేహితుడు. చాలా రోజుల తర్వాత కలిశాడు. చదువుకోవాలంటూ గతంలో మాకు మోటివేషన్ రీల్స్ పంపేవాడు. ఇప్పుడు అతడికి 30 ఏళ్లు ఉంటాయి. ఓ పిజ్జా కంపెనీలో పనిచేస్తున్నాడు. ఈ పని చేయడం ఎలా అనిపిస్తోంది? చాలా బాగుంది కదా..” అంటూ మాట్లాడటం. కనిపిస్తోంది. ఆమె అలా మాట్లాడినా ఏమాత్రం కోపగించుకొని ఆ యువకుడు చిరునవ్వుతో సమాధానం చెబుతూ కనిపించాడు. అయితే, ఈ వీడియో ఎక్కడిదో, ఎప్పుడు తీశారో తెలియరాలేదు.ʼ ಎಂದು ಬರೆದಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಒಬ್ಬ ಯುವತಿ ತನ್ನ ಶಾಲಾ ಸ್ನೇಹಿತನನ್ನು ರಸ್ತೆಯಲ್ಲಿ ಭೇಟಿಯಾದಳು. ಈ ಪ್ರಕ್ರಿಯೆಯಲ್ಲಿ, ಅವಳು ಅವನೊಂದಿಗೆ ವೀಡಿಯೊ ತೆಗೆದುಕೊಳ್ಳುತ್ತಿದ್ದಳು.. "ಇವನು ನನ್ನ ಸ್ನೇಹಿತ. ಅವನು ಬಹಳ ಸಮಯದ ನಂತರ ನನ್ನನ್ನು ಭೇಟಿಯಾದನು. ಹಿಂದೆ ಅವನು ನಮಗೆ ಅಧ್ಯಯನ ಮಾಡಲು ಪ್ರೋತ್ಸಾಹಿಸಲು ಪ್ರೇರಕ ರೀಲ್ಗಳನ್ನು ಕಳುಹಿಸುತ್ತಿದ್ದ. ಈಗ ಅವನಿಗೆ 30 ವರ್ಷ. ಅವನು ಪಿಜ್ಜಾ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಈ ಕೆಲಸ ಮಾಡುವುದು ಹೇಗನಿಸುತ್ತದೆ? ಇದು ತುಂಬಾ ಚೆನ್ನಾಗಿದೆಯಲ್ವಾ.." ಎಂದು ಆಕೆ ವ್ಯಂಗ್ಯವಾಗಿ ಮಾತನಾಡುವುದನ್ನು ನೋಡಬಹುದು. ಅವಳು ಹಾಗೆ ಹೇಳಿದರೂ, ಯುವಕ ಕೋಪಗೊಳ್ಳಲಿಲ್ಲ ಮತ್ತು ನಗುತ್ತಾ ಉತ್ತರಿಸುತ್ತಿರುವುದನ್ನು ಕಾಣಬಹುದು.
ವೈರಲ್ ಆದ ವರದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಯುವತಿಯೊಬ್ಬಳು ತನ್ ಸ್ನೇಹಿತ ಪಿಜ್ಜಾ ಡೆಲಿವರಿ ಎಂದು ಅಣುಕಿಸುತ್ತಿರುವ ವಿಡಿಯೋ ಸ್ಕ್ರಿಪ್ಟ್ಡ್
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜನವರಿ 27,2026ರಂದು ರಿಷಿಕಾ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಿಕ್ಕಿತು. ಈ ವಿಡಿಯೋವಿಗೆ Disclaimer: Just an act ಎಂದು ಬರೆದಿರುವುದನ್ನು ನೋಡಬಹುದು. ಇದರಲ್ಲಿ ಸಾಭೀತಾಗಿದ್ದೇನೆಂದರೆ, ಈ ವಿಡಿಯೋವೊಂದು ಸ್ಕ್ರಿಪ್ಟ್ಡ್.
ಅಷ್ಟೇ ಅಲ್ಲ ಜನವರಿ 29,2026ರಂದು ʼviral boy ki sachaaiʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಒಂದು ಹುಡುಗಿ, ಡೊಮಿನೋಸ್ ಡೆಲಿವೆರಿ ರೀಲಿನ ಹುಡುಗನ ಬಗ್ಗೆ ಸ್ಪಷ್ಟನೆ ನೀಡುವುದನ್ನು ನಾವು ನೋಡಬಹುದು. ವೈರಲ್ ಆಗಿರುವ ವಿಡಿಯೋದಲ್ಲಿರುವ ಹುಡುಗನೇ ಈ ವಿಡಿಯೋದಲ್ಲಿಯೂ ಇದ್ದಾನೆ ಎಂದು ಆಕೆ ಹೇಳುತ್ತಾಳೆ. ಆಕೆ ಹುಡುಗನನ್ನು ಅವಮಾನಿಸ ಬೇಕು ಅಥವಾ ಟ್ರೂಲ್ ಮಾಡಬೇಕು ಎಂದು ನಾವು ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ನಾವು ಮಾಡಿದ್ದೇವೆ ಎನ್ನುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ವಿಡಿಯೋ ಪೂರ್ವನಿಯೋಜಿತವಾಗಿ ಮಾಡಲ್ಪಟ್ಟದ್ದೇ ಹೊರತು, ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ. ಅಷ್ಟೇ ಅಲ್ಲ ವಿಡಿಯೋ ಚಿತ್ರೀಕರಣದ ಬಗ್ಗೆ ಈ ವಿಡಿಯೋದಲ್ಲಿ ಕಾಣುವ ಪ್ರತಿಯೊಬ್ಬರಿಗೂ ಗೊತ್ತಿತ್ತು. ನಾವು ಈ ವಿಷಯವನ್ನು ವೈರಲ್ ಮಾಡಿ ಹೆಚ್ಚಿನ ವ್ಯೂಸ್, ಲೈಕ್ಸ್ ಹಾಗೂ ಲಾಭ ಪಡೆಯಲು ಅವಕಾಶ ಇದ್ದರೂ, ನಾವು ಸುಳ್ಳು ಸುದ್ದಿಯನ್ನು ಹರಡಬೇರದೆಂಬ ಉದ್ದೇಶದಿಂದ ಸ್ಪಷ್ಟಣೆ ಕೊಡಲು ನಾವೀ ವಿಡಿಯೋ ಮಾಡುತ್ತಿದ್ದೇವೆ. ಈ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಡುತ್ತಿರುವ ತಪ್ಪು ಅಭಿಪ್ರಾಯಗಳನ್ನು, ಹುಡುಗನ ವಿರುದ್ಧ ಅಥವಾ ಪರವಾಗಿ ಅನಾವಶ್ಯಕ ಪ್ರತಿಕ್ರಿಯೆಗಳು ಬರದಂತೆ ತಡೆಯ ಬೇಕೆಂದು ನಡೆದ ಘಟನೆಗೆ ಸಂಬಂಧಿಸಿದ ನಿಜವಾದ ಸ್ಥಿತಿಯನ್ನು ಜನರಿಗೆ ತಿಳಿಸಲು ನಾವೀ ವಿಡಿಯೋ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಿಷಿಕಾ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಮಾಡಲಾದ ಇತರ ವೀಡಿಯೊಗಳಲ್ಲಿ ಸಹ ತರುಣ್ ಸಿಂಗ್ನ್ನು ನಾವು ನೋಡಬಹುದು.
ಜನವರಿ 30, 2026ರಂದು ಪಿಜ್ಜಾ ಡೆಲಿವರಿ ಬಾಯ್ ಆಗಿ ನಟಿಸಿರುವ ತರುಣ್ ಸಿಂಗ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದು ಕೇವಲ ಒಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ವಿವರಿಸಿದ್ದಾರೆ. ಅಲ್ಲದೆ, ಈಗ ಕೆಲ ಜನರು ನನ್ನ ನಕಲಿ ಐಡಿಗಳನ್ನು ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ, ಅವರು ಈ ಸ್ಪಷ್ಟೀಕರಣ ವೀಡಿಯೊವನ್ನು ಮಾಡಿದ್ದೇನೆ ಎಂದಿದ್ದಾರೆ.
ಜನವರಿ 30, 2026ರಂದು ಒಡಿಶಾ ಬೈಟ್ ವೆಬ್ಸೈಟ್ನಲ್ಲಿ ʼVideo Clip Of Delivery Executive Being Insulted By Former Classmate Goes Viral; Woman Issues Clarification After Being Trolledʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ಶೀರ್ಷಿಕೆಯನ್ನು ಮತ್ತು ವರದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಡಾಮುನೋಸ್ ಡೆಲಿವರಿ ಬಾಯ್ ಸಂಬಂಧಿಸಿದ ವಿಡಿಯೋಗೆ ಸಿಕ್ಕ ತೀವ್ರವಾದ ಟೀಕೆಗಳು ಮತ್ತು ಟ್ರೋಲಿಂಗ್ ನಂತರ ಯುವತಿ ಸ್ಪಷ್ಟಣೆʼ ಎಂದು ಬರೆದಿರುವುದನ್ನು ನೋಡಬಹುದು. ಅಷ್ಟೇ ಅಲ್ಲ, ಈ ದೃಶ್ಯವು ಸ್ನೇಹಿತರ ಗುಂಪು ಹಾಸ್ಯಕ್ಕಾಗಿ ರೂಪಿಸಿದ್ದ ನಾಟಕೀಯ (ಸ್ಕ್ರಿಪ್ಟ್ ಮಾಡಿದ) ದೃಶ್ಯವೆಂದು ಸೃಷ್ಟಿಕರ್ತರು ಒಪ್ಪಿಕೊಂಡರು. ಡೆಲಿವರಿ ಯುವಕನ ವಯಸ್ಸು 30 ಅಲ್ಲ, 22 ವರ್ಷಗಳು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳೆ ಕ್ಯಾಮೆರಾ ಮುಂದೆ ಬಂದು, ಇದು “ಕೇವಲ ಹಾಸ್ಯಕ್ಕಾಗಿ” ಚಿತ್ರೀಕರಿಸಿದ್ದು ಎಂದು ಸ್ಪಷ್ಟಣೆ ನೀಡಿದ್ದಾಳೆಂದು ವರದಿ ಮಾಡಲಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಈ ವಿಡಿಯೋ ಸ್ಕ್ರಿಪ್ಟ್ಡ್.

