ಫ್ಯಾಕ್ಟ್ಚೆಕ್: ಗೋಡೆ ಮೇಲೆ ಆಂಜನೇಯನ ಚಿತ್ರ ಬಿಡಿಸಿದ ಕೋತಿ ಎಂದು ಎಐ ವಿಡಿಯೋ ಹಂಚಿಕೆ
ಗೋಡೆ ಮೇಲೆ ಆಂಜನೇಯನ ಚಿತ್ರ ಬಿಡಿಸಿದ ಕೋತಿ ಎಂದು ಎಐ ವಿಡಿಯೋ ಹಂಚಿಕೆ

Claim :
ಗೋಡೆ ಮೇಲೆ ಆಂಜನೇಯನ ಚಿತ್ರ ಬಿಡಿಸಿದ ಮಂಗFact :
ವೈರಲ್ ಅದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮಂಗವೊಂದು ಗೊಡೆಯ ಮೇಲೆ ಆಂಜನೇಯನ ಚಿತ್ರವನ್ನು ಬಿಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಕ್ಟೋಬರ್ 11, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ಮಂಗ ಆಂಜನೇಯನ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡು ʼಉತ್ತರ ಪ್ರದೇಶದಲ್ಲಿ ಆಂಜನೇಯನ ಚಿತ್ರ ಬರೆದ ಮಂಗʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 10, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼबंदर ने बनाई हनुमान जी की तस्वीर! भारत के एक गांव में एक बंदर ने कोयले से मंदिर की दीवार पर हनुमान जी की आकृति बना दी। लोगों ने इसे चमत्कार माना और इसे दिव्य संकेत बताया। यह अनोखा दृश्य सोशल मीडिया पर वायरल हो गया।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೋತಿ ಹನುಮಂತನ ಚಿತ್ರವನ್ನು ಬಿಡಿಸಿದೆ! ಭಾರತದ ಒಂದು ಹಳ್ಳಿಯಲ್ಲಿ, ಒಂದು ಕೋತಿಯು ದೇವಸ್ಥಾನದ ಗೋಡೆಯ ಮೇಲೆ ಕಲ್ಲಿದ್ದಲನ್ನು ಬಳಸಿ ಹನುಮಂತನ ಆಕೃತಿಯನ್ನು ಬಿಡಿಸಿತು. ಜನರು ಇದನ್ನು ಪವಾಡವೆಂದು ಪರಿಗಣಿಸಿದರು ಮತ್ತು ಇದನ್ನು ದೈವಿಕ ಚಿಹ್ನೆ ಎಂದು ಬಣ್ಣಿಸಿದರು. ಈ ವಿಶಿಷ್ಟ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತುʼ ಎಂಬ ಶೀರ್ಷಿಕಡಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 11, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼವಾನರನಿಂದ ಭಜರಂಗಿ ಚಿತ್ರʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 12, 2025ರಂದು ಇದೇ ವೈರಲ್ ಆದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಮತ್ತೋಬ್ಬರು ಹಂಚಿಕೊಂಡು ಕ್ಯಾಪ್ಷನ್ ಆಗಿ ʼಅಲ್ಲರೂ ಜೈ ಆಂಜನೇಯ ಅಂತಾ ಕಮೆಂಟ್ ಮಾಡಿʼ ಎಂದು ಬರೆದುಕೊಂಡು ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ಕಾಣಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಅಕ್ಟೋಬರ್ 12, 2025ರಂದು ಇನ್ನೋಂದು ಯೂಟ್ಯೂಬ್ ಖಾತೆಯಲ್ಲಿ ʼMonkey drawing hanuman ji in wallʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ವೈರಲ್ ಆದ ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ. ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಅಲ್ಲಿಯೂ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಖಂಡಿತಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು. ಆದರೆ ನಮಗೆ ಯಾವುದೇ ವರದಿಗಳು ಸಿಗಲಿಲ್ಲ ಗೂಗಲ್ನಲ್ಲಿ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಫೋಟೊವನ್ನು AI ಮೂಲಕ ಅಥವಾ ಡಿಜಿಟಲ್ ಟ್ಯಾಂಪರಿಂಗ್ನ ವಿಶಿಷ್ಟ ಚಿಹ್ನೆಗಳು ಕಂಡುಬರುತ್ತವೆ. ಮಸುಕಾದ ಅಥವಾ ಅಪೂರ್ಣ ಮುಖಗಳು, ಅಸ್ವಾಭಾವಿಕ ದೇಹದ ಭಂಗಿಗಳನ್ನು ನಾವಿಲ್ಲಿ ನೋಡಬಹುದು.
ನಾವು ವೀಡಿಯೋವನ್ನು ಕೀ ಫ್ರೇಮ್ಗಳಾಗಿ ವಿಂಗಡಿಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ‘ಮಲ್ಟಿವರ್ಸೆಮೆಟ್ರಿಕ್ಸ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ವೀಡಿಯೋ ಕಂಡಿದ್ದೇವೆ. ಇನ್ಸ್ಟಾಗ್ರಾಮ್ ಹ್ಯಾಂಡಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊಗೆ ಹೋಲುತ್ತದೆ ಎಂದು ನಾವು ಕಂಡುಕೊಂಡಿದೆ. ವಿಡಿಯೋವಿಗೆ ಶೀರ್ಷಿಕೆಯಾಗಿ ʼMonkey Draws Hanuman. In an astonishing scene from a village in India, a mischievous monkey picked up a piece of charcoal and began sketching on a temple wall. To everyone’s amazement, the outline slowly took the form of Lord Hanuman. Locals gasped as the animal continued, its strokes uncannily accurate, leaving behind an image that devotees are calling a divine sign. The rare moment, captured on video, has gone viral, sparking spiritual discussions and awe across social media. #HiggsfieldSora2 + “try unlimited Sora 2 on @Higgsfield.aiʼ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಸೇರಿಸಲಾದ ವಿವರಗಳು ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಅದು ನಿಜವಾದ ಘಟನೆಯನ್ನು ಚಿತ್ರಿಸಿಲ್ಲ ಎನ್ನುವುದು ಸಾಭೀತಾಗಿದೆ.
ಇನ್ನು ʼಮಲ್ಟಿವರ್ಸ್ಮ್ಯಾಟ್ರಿಕ್ಸ್ʼ ಖಾತೆಯನ್ನು ಪರಿಶೀಲಿಸಿದಾಗ, ಖಾತೆದಾರರ ಹೆಸರು ಅಜಿನ್ ಜೋಸೆಫ್ ಎಂದು ನಾವು ಕಂಡುಕೊಂಡಿದ್ದೇವೆ. ಈ ಖಾತೆಯಲ್ಲಿನ ಬಯೋವಿನಲ್ಲಿ ಎಐ ರಚಿತ ವೀಡಿಯೊಗಳನ್ನು ರಚಿಸುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇತರ ಹಲವು ಎಐ ರಚಿತ ವೀಡಿಯೊಗಳನ್ನು ಅವರ ಪ್ರೊಫೈಲ್ನಲ್ಲಿಯೂ ನಾವು ಕಾಣಬಹುದು.
ಎಐ ಡಿಟೆಕ್ಟರ್ DeepFake-O-Meter ಮೂಲಕ ರನ್ ಮಾಡಿದ್ದೇವೆ , ಇದು ವೀಡಿಯೊ ಬಹುಶಃ AI- ರಚಿತವಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಪುರಾವೆಗಳು ವೀಡಿಯೊ ನಿಜವಲ್ಲ ಎಂದು ಖಚಿತಪಡಿಸುತ್ತವೆ.
ಈ ಲೋಪಗಳನ್ನು ಆಧರಿಸಿ ವೈರಲ್ ಫೋಟೋವನ್ನು was it AI ಎಂಬ ಎಐ ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು ಎಐನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗುತ್ತಿದೆ.

