ಫ್ಯಾಕ್ಟ್ಚೆಕ್: ಪ್ರಧಾನಿ ಮೋದಿ ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಕರೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
ದೀಪಾವಳಿಗೆ ಎಲ್ಲಾ ನಾಗರಿಕರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕೆಂದು ಒತ್ತಾಯಿಸುವ ಪತ್ರವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ

Claim :
ಪ್ರಧಾನಿ ಮೋದಿ ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಕರೆ ನೀಡಿದ್ದಾರೆFact :
ವೈರಲ್ ಆದ ಫೋಟೋ ನಕಲಿಯದ್ದು. 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ವೊಂದು ವೈರಲ್ ಆಗುತ್ತಿದೆ. ಈ ದೀಪಾವಳಿಗೆ ಎಲ್ಲಾ ನಾಗರಿಕರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕೆಂದು ಒತ್ತಾಯಿಸುವ ಪತ್ರವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಳಕೆದಾರರು, ‘‘ನೀವು ಈ ಸಂದೇಶವನ್ನು 3 ಜನರಿಗೆ ಕಳುಹಿಸಬೇಕು. ಇಡೀ ದೇಶವು ಸಂಕರ್ಕಗೊಳ್ಳುತ್ತದೆ’’ ಎಂದು ಬರೆದುಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ ಎಂದರೆ, “ನನ್ನ ಪ್ರೀತಿಯ ಭಾರತೀಯ ನಾಗರಿಕರೇ, ಈ ಬಾರಿ ನೀವೆಲ್ಲರೂ ಇದನ್ನೇ ಮಾಡಬೇಕು ಅಂದರೆ ಮುಂಬರುವ ದೀಪಾವಳಿ ಹಬ್ಬದಂದು, ನಿಮ್ಮ ಮನೆಗಳಲ್ಲಿ ದೀಪ ಹಚ್ಚುವುದು, ಅಲಂಕಾರ, ಸಿಹಿತಿಂಡಿಗಳು ಇತ್ಯಾದಿಗಳಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸಿ. ನೀವು ಖಂಡಿತವಾಗಿ ಪ್ರಧಾನ ಮಂತ್ರಿಯ ಮಾತುಗಳನ್ನು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಸಣ್ಣ ಹೆಜ್ಜೆಗಳೊಂದಿಗೆ ನನಗೆ ಬೆಂಬಲ ನೋಡಿದರೆ, ನಮ್ಮ ಭಾರತವನ್ನು ವಿಶ್ವದ ಮೊದಲ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಿಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದಿದೆ. ಇದರ ಕೊನೆಯಲ್ಲಿ ನರೇಂದ್ರ ಮೋದಿ ಎಂಬ ಸಹಿ ಇದೆ.
ಫೇಸ್ಬುಕ್ ಖಾತೆದಾರರೊಬ್ಬರು ಸೆಪ್ಟಂಬರ್15, 2025ರಂದು ವೈರಲ್ ಆದ ಪೊಸ್ಟ್ನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಸೆಪ್ಟಂಬರ್ 16, 2025ರಂದು ಯೂಟ್ಯೂಬ್ ಖಾತೆದಾರರೊಬ್ಬರು ಇಮ್ಮ ಖಾತೆಯಲ್ಲಿ ಇದೇ ಪೊಸ್ಟ್ನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ವೈರಲ್ ಆದ ಫೋಟೋ ನಕಲಿಯದ್ದು. 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಾವು ವೈರಲ್ ಆದ ಫೋಟೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಹಾಗೆ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಬಳಸಿ ಹುಡುಕಾಟ ನಡೆಸಿದೆವು. ಜೊತೆಗೆ ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶವನ್ನು ನಿಜವಾಗಿಯೂ ಪ್ರಧಾನಿ ಮೋದಿ ಹೇಳಿಕೆಯೇ ಎಂದು ಪರಿಶೀಲಿಸಲು ವೈರಲ್ ಸಂದೇಶದ ಫೋಟೋವನ್ನು ಪರಿಶೀಲಿಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇದರಲ್ಲಿ ಗೂಗಲ್ ಲೆನ್ಸ್ ಮೂಲಕ ಅನುವಾದಿಸಲಾಗಿದೆ. ಆದ್ದರಿಂದ ಇದರಲ್ಲಿ ಮೂಲ ಭಾಷೆ ಬೇರೆ ಇದ್ದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಈ ಸಂದೇಶದಲ್ಲಿ ಯಾವುದೇ ದಿನಾಂಕವಿಲ್ಲ, ಅಶೋಕ ಲಾಂಛನದ ಬದಿಯಲ್ಲಿ ಮೋದಿಯವರ ಫೋಟೋ ಹಾಕಿರುವುದೂ ಸಂಶಯಕ್ಕೆ ದಾರಿ ಮಾಡಿತು. ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ. ಈ ವೇಳೆ ಹಿಂದಿಭಾಷೆಯಲ್ಲೂ ಇಂತಹದ್ದೇ ಪೋಸ್ಟ್ಗಳನ್ನು ನೋಡಿದ್ದೇವೆ. ಅಕ್ಟೋಬರ್ 18, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼrequest to allʼ ಎಂಬ ಶೀರ್ಷಿಕೆಯೊಂದಿಗೆ ಹಿಂದಿಯಲ್ಲಿರುವ ವೈರಲದದ ಆದ ಪೊಸ್ಟ್ನ್ನು ನೋಡಬಹುದು
ಸೆಪ್ಟಂಬರ್ 3, 2020ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼआपको यह संदेश 3 लोगों को भेजना चाहिए.. पूरा देश जुड़ जाएगा ....। मेरे प्यारे भारत वासियों आप सब इस बार इतना करें कि आने वाले दीपावली पर्व पर अपने घरों में रौशनी सजावट मिठाई इन सब में केवल भारत में बनी सामग्री का प्रयोग करें। आशा करता हूँ आप इस प्रधान सेवक की बात को जरूर मानेगें आप छोटे-छोटे कदमों से अगर मेरा साथ दो तो मैं आप से वादा करता हूँ हमारे भारत को दुनिया की सबसे आगे वाली पंक्ति में प्रथम स्थान पर बड़ा पाओगे । वन्देमातरमʼ ಎಂದು ಬರೆದಿರುವುದನ್ನು ನೋಡಬಹುದು. ಇದೇ ಸಂದೇಶವನ್ನು ಕನ್ನಡಕ್ಕೆ ಅನುವಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟವಾಯಿತು.
ಅಕ್ಟೊಬರ್ 24, 2016ರಂದು ʼಬಿಸಿನೆಸ್ ಸ್ಟ್ಯಾಂಡರ್ಡ್ʼ ವೆಬ್ಸೈಟ್ನಲ್ಲಿ ʼNo appeal by PM for using only India-made goods on Diwaliʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ ʼದೀಪಾವಳಿಯ ಸಂದರ್ಭದಲ್ಲಿ ಭಾರತದಲ್ಲಿ ತಯಾರಿಸಿದ ಪಟಾಕಿಗಳು, ಅಲಂಕಾರಿಕ ವಸ್ತುಗಳು ಮತ್ತು ಸಿಹಿತಿಂಡಿಗಳನ್ನು ಮಾತ್ರ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮನವಿ ಮಾಡಿಲ್ಲ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ, ಈ ನಿಟ್ಟಿನಲ್ಲಿ ಹರಡುತ್ತಿರುವ ಸಂದೇಶಗಳು "ನಿಜವಲ್ಲ" ಎಂದು ಹೇಳಿದ್ದಾರೆ. ಕೆಲವು ವಾಣಿಜ್ಯ ಸಂಸ್ಥೆಗಳು ಮೋದಿಯವರ "ಉದ್ದೇಶಪೂರ್ವಕ" ಪತ್ರವನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ಅವರು ಅಂತಹ ಯಾವುದೇ ಮನವಿಯನ್ನು ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿಯವರ ಛಾಯಾಚಿತ್ರ ಅಥವಾ ಅವರ ಸಹಿಯನ್ನು ಹೊಂದಿರುವ ಅಂತಹ ಯಾವುದೇ ಪತ್ರ ಅಥವಾ ಮನವಿಯು ಅಧಿಕೃತವಲ್ಲ ಎಂದು ಹೇಳಿದ್ದಾರೆ. "ಪ್ರಧಾನಿ ಮೋದಿ ದೀಪಾವಳಿಗೆ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಜನರನ್ನು ಒತ್ತಾಯಿಸಲಿಲ್ಲ. ವೈರಲ್ ಆದ ಪತ್ರವು ನಕಲಿ ಮತ್ತು ಕಂಪ್ಯೂಟರ್ ರಚಿತವಾಗಿದೆ’’ ಎಂದು ಈ ವರದಿಯಲ್ಲಿ ಬರೆಯಲಾಗಿದೆ.
ಅಕ್ಟೋಬರ್ 23,2016ರಂದು ʼಫೈನಾನ್ಷಿಯಲ್ ಎಕ್ಸ್ಪ್ರೆಸ್ʼ ವೆಬ್ಸೈಟ್ನಲ್ಲಿ ʼNo appeal by PM Narendra Modi for using only India-made goods on Diwali: Officialsʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼದೀಪಾವಳಿಯ ಸಂದರ್ಭದಲ್ಲಿ ಭಾರತದಲ್ಲಿ ತಯಾರಿಸಿದ ಪಟಾಕಿಗಳು, ಅಲಂಕಾರಿಕ ವಸ್ತುಗಳು ಮತ್ತು ಸಿಹಿತಿಂಡಿಗಳನ್ನು ಮಾತ್ರ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರು ಯಾವುದೇ ಮನವಿ ಮಾಡಿಲ್ಲ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ಇಂದು ತಿಳಿಸಿದ್ದಾರೆʼ ಎಂದು ವರದಿ ಮಾಡಲಾಗಿದೆ. ಇನ್ನಷ್ಟು ವೆಬ್ಸೈಟ್ಗಳು 2016ರಲ್ಲಿ ಇದೇ ಸುದ್ದಿಯನ್ನು ಪ್ರಕಟಿಸಿರುವುದು ನಾವು ಗಮನಿಸಿದ್ದೇವೆ. ಇದರಲ್ಲಿ ಕೂಡ, ಪ್ರಧಾನಿ ಮೋದಿ ಅವರದ್ದು ಎಂದು ಹೇಳಲಾದ ವೈರಲ್ ಪತ್ರವು ನಕಲಿಯಾಗಿದೆ. ದೀಪಾವಳಿಗೆ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಪ್ರಧಾನಿ ಮನವಿ ಮಾಡಲಿಲ್ಲ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 27, 2016 ರಂದು, ʼಪಿಎಂಒ ಇಂಡಿಯಾʼ ತನ್ನ ಎಕ್ಸ್ ಖಾತೆಯಲ್ಲಿ ʼFew appeals with PM’s ‘signature’ are circulated on social media. Such documents are not authentic.ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಇದರ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ. ಪಿಎಂಒದ ಪೋಸ್ಟ್ ನಲ್ಲಿ ‘ಪ್ರಧಾನಿಯವರ ಸಹಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಕೆಲವು ಮನವಿಗಳನ್ನು ಮಾಡಲಾಗುತ್ತಿದೆ. ಈ ದಾಖಲೆ ನಿಜವಾದ್ದಲ್ಲ’ ಎಂದಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ದೀಪಾವಳಿ ವೇಳೆ ಸ್ವದೇಶಿ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂಬ ಸಂದೇಶ ನಿಜವಲ್ಲ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿಯದ್ದು.

