ಫ್ಯಾಕ್ಟ್ಚೆಕ್: ಚಿರತೆಯೊಂದು ರೈಲನ್ನು ಬೆನ್ನಟಿದೆ ಎಂದು ಎಐ ವಿಡಿಯೋ ಹಂಚಿಕೆ
ಚಿರತೆಯೊಂದು ರೈಲನ್ನು ಬೆನ್ನಟಿದೆ ಎಂದು ಎಐ ವಿಡಿಯೋ ಹಂಚಿಕೆ

Claim :
ಚಿರತೆಯೊಂದು ರೈಲನ್ನು ಬೆನ್ನಟಿ ದಾಳಿ ಮಾಡಲು ಪ್ರಯತ್ನಿಸಿದೆFact :
ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ
ಇತ್ತೀಚಿಗೆ ಚಿರತೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆದ ವಿಡಿಯೋವನ್ನು ನೋಡಿದರೆ, ರೈಲು ಎಂಜಿನ್ಗೆ ಸಮಾನಾಂತರವಾಗಿ ಹಳಿಗಳ ಉದ್ದಕ್ಕೂ ಚಿರತೆಯೊಂದು ಓಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವಿಗೆ ಕೆಲವು ಸಾಮಾಜಿಕ ಬಳಕೆದಾರರು ಈ ವೀಡಿಯೊ ವಾಸ್ತವವಾಗಿ ಅಮರಾವತಿಗೆ ಸಂಬಂಧಿಸಿದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ.
ಜನವರಿ 04, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼWhile traveling, especially in forests, keep the windows and doors closed. Look, a cheetah is jumping at the door. In an attempt to bring the cheetah down, a man also fell down along with itʼ ಎಂದು ಬರೆದಿರುವುದನ್ನು ಕಾಣಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪ್ರಯಾಣ ಮಾಡುವಾಗ, ವಿಶೇಷವಾಗಿ ಕಾಡುಗಳಲ್ಲಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ. ನೋಡಿ, ಚಿರತೆಯು ಬಾಗಿಲಲ್ಲಿ ಜಿಗಿಯುತ್ತಿದೆ. ಚಿರತೆಯನ್ನು ಉರುಳಿಸುವ ಪ್ರಯತ್ನದಲ್ಲಿ, ಅದರೊಂದಿಗೆ ಒಬ್ಬ ಮನುಷ್ಯನು ಸಹ ಕೆಳಗೆ ಬಿದ್ದನುʼ ಎಂದು ಬರೆದು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಡಿಸಂಬರ್ 28, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯಿಂದ ಪ್ರಯಾಣಿಸಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಆದರೆ, ಈ ಘಟನೆಗೆ ಸಂಬಂಧಿಸಿದ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು.
ಈ ವೈರಲ್ ವೀಡಿಯೊವನ್ನು ಜಾಗ್ರತವಾಗಿ ನೋಡಿದರೆ, ವೀಡಿಯೊದಲ್ಲಿರುವ ಆಡಿಯೋ ನಿಜವಾದ ಚಿರತೆ ಧ್ವನಿ ಅನಿಸಿವುದಿಲ್ಲ. ಅಷ್ಟೇ ಅಲ್ಲ ವಿಡಿಯೋವಿನ ಕೆಲವು ಫ್ರೇಮ್ಗಳಲ್ಲಿ ರೈಲು ಹಳಿಗಳ ಮೇಲೆ ಓಡುತ್ತಿರುವ ಚಿರತೆ ಕಣ್ಮರೆಯಾಗುವುದನ್ನು ನೋಡಬಹುದು. ಕೆಲವೊಮ್ಮೆ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ, ಇನ್ನು ಕೆಲವೊಮ್ಮೆ ಚಿರತೆಯ ದೇಹದ ಕೆಲವು ಭಾಗಗಳು ಮಾತ್ರ ಕಾಣಿಸುತ್ತವೆ. ಅಷ್ಟೇ ಅಲ್ಲ, ಚಿರತೆಯ ಬಾಯಿ ಮತ್ತು ಕಾಲುಗಳು ವಿಚಿತ್ರವಾಗಿ ಕಾಣುವುದನ್ನು ಸಹ ನಾವು ಗಮನಿಸಿದ್ದೇವೆ.
ಡಿಸಂಬರ್ 30, 2025ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAMRAVATI | A viral video claiming a leopard chasing a train on the Gopal Nagar railway track is fake, clarified Amol Gavner of the Forest Department. Officials said the clip is AI-generated—the area has only one track, while the video shows multiple tracks, which doesn’t match reality. Also, wild animals do not chase trains; they flee due to the loud noise. The video has been circulating for two days, spreading fear among citizens. The Forest Department warned that creating and sharing fake videos is a punishable offence, and strict action will be taken against those responsible. BYTE: Amol Gavner, Forest Department Rescue Officerʼ ಎಂದು ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಮರಾವತಿ ಜಿಲ್ಲೆಯ ಗೋಪಾಲ್ ನಗರ ರೈಲ್ವೆ ಹಳಿಯಲ್ಲಿ ಚಿರತೆ ರೈಲನ್ನು ಬೆನ್ನಟ್ಟುತ್ತಿದೆ ಎನ್ನುವಂತೆ ವೈರಲ್ ಆಗಿರುವ ವೀಡಿಯೊ ಸಂಪೂರ್ಣವಾಗಿ ನಕಲಿ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.ಅರಣ್ಯ ಇಲಾಖೆಯ ರಕ್ಷಣಾ ಅಧಿಕಾರಿ ಅಮೋಲ್ ಗವ್ನರ್ ಅವರು ಮಾತನಾಡಿ, ಈ ವೀಡಿಯೊ ಕೃತಕ ಬುದ್ಧಿಮತ್ತೆ—ಅಂದರೆ ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಪ್ರದೇಶದಲ್ಲಿ ವಾಸ್ತವವಾಗಿ ಕೇವಲ ಒಂದು ರೈಲ್ವೆ ಹಳಿ ಮಾತ್ರ ಇದೆ. ಆದರೆ ವೈರಲ್ ವೀಡಿಯೊದಲ್ಲಿ ಹಲವು ಹಳಿಗಳು ಕಾಣಿಸುತ್ತವೆ. ಇದು ಸ್ಥಳೀಯ ವಾಸ್ತವ ಸ್ಥಿತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೆ, ಕಾಡು ಪ್ರಾಣಿಗಳು ಸಾಮಾನ್ಯವಾಗಿ ರೈಲುಗಳಂತಹ ದೊಡ್ಡ ಶಬ್ದಗಳಿಗೆ ಭಯಪಟ್ಟು ದೂರ ಓಡಿಹೋಗುತ್ತವೆ. ರೈಲನ್ನು ಬೆನ್ನಟ್ಟುವುದು ಸಹಜ ವರ್ತನೆ ಅಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ಈ ನಕಲಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಅನಾವಶ್ಯಕ ಭಯವನ್ನು ಉಂಟುಮಾಡುತ್ತಿದೆ. ನಕಲಿ ವೀಡಿಯೊಗಳನ್ನು ಸೃಷ್ಟಿಸುವುದು ಮತ್ತು ಹಂಚಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆʼ ಎಂದು ಬರೆದಿರುವುದನ್ನು ನೋಡಬಹುದು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ಮತ್ತಷ್ಟು ಖಚಿತಪಡಿಸಿಕೊಳ್ಳಲು ನಾವು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 40% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಹೈವ್ ಮಾಡರೇಶನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 99.9 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

