ಫ್ಯಾಕ್ಟ್ಚೆಕ್: ಭಾರತದಲ್ಲಿ ಪೋರ್ಟಬಲ್ ಜನರೇಟರ್ ಬಳಸಿ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ
ಭಾರತದಲ್ಲಿ ಪೋರ್ಟಬಲ್ ಜನರೇಟರ್ ಬಳಸಿ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡುತ್ತಿದ್ದಾರೆ ಎಂದು ಎಐ ವಿಡಿಯೋ ಹಂಚಿಕೆ

Claim :
ಭಾರತದಲ್ಲಿ ಪೋರ್ಟಬಲ್ ಜನರೇಟರ್ ಬಳಸಿ ಎಲೆಕ್ಟ್ರಿಕ್ ಕಾರನ್ನು ಚಾರ್ಜ್ ಮಾಡುತ್ತಿದ್ದಾರೆFact :
ವೈರಲ್ ಆದ ವಿಡಿಯೋವನ್ನು ಎಐ ಬಳಸಿ ರಚಿಸಲಾಗಿದೆ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ʼಭಾರತದಲ್ಲಿ ಹೊಸ “ಹೈಬ್ರಿಡ್ 2.0” ಕಂಡುಹಿಡಿದಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಎಲೆಕ್ಟ್ರಿಕ್ ಕಾರಿನ ಹಿಂಭಾಗಕ್ಕೆ ಒಂದು ಜನರೇಟರ್ ಕಟ್ಟಿ, ಅದರಿಂದಲೇ ಕಾರನ್ನು ಚಾರ್ಜ್ ಮಾಡುತ್ತಿರುವಂತೆ ಕಾಣಿಸುತ್ತದೆ. ಜನರೇಟರ್ನಿಂದ ಒಂದು ವೈರ್ ನೇರವಾಗಿ ಕಾರಿಗೆ ಸಂಪರ್ಕಿಸಿರುವುದರಿಂದ, ಕಾರು ಓಡುತ್ತಿರುವಾಗಲೇ ಚಾರ್ಜ್ ಆಗುತ್ತಿರುವಂತೆ ಕಾಣುತ್ತದೆ.
ಮಾರ್ಚ್ 03, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼAn Indian Man attached a generator to his SUV to charge it while driving. social media says: only in India can This Happenʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಭಾರತದಲ್ಲಿ ಒಬ್ಬ ವ್ಯಕ್ತಿ ತನ್ನ ಎಸ್ಯುವಿ ಕಾರಿಗೆ ಜನರೇಟರ್ ಕಟ್ಟಿ, ಕಾರು ಓಡುತ್ತಿರುವಾಗಲೇ ಅದರಿಂದ ಚಾರ್ಜ್ ಮಾಡುತ್ತಿದ್ದಾನೆ, ಇದನ್ನು ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು “ಇಂತಹದ್ದು ಭಾರತದಲ್ಲೇ ಮಾತ್ರ ಸಾಧ್ಯ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೆಬ್ರವರಿ 24,2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼBreaking : India invents Hybrid 2.0 ⚡. Electric car powered by a diesel generator on a trolley. Zero emissions mindset, 100% jugaad execution. Atmanirbhar innovation, but make it confusingʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬ್ರೇಕಿಂಗ್: ಭಾರತದಲ್ಲಿ ಹೊಸ “ಹೈಬ್ರಿಡ್ 2.0” ಕಂಡುಹಿಡಿದಿದ್ದಾರೆ. ಟ್ರಾಲಿಯಲ್ಲಿ ಇಟ್ಟಿರುವ ಡೀಸೆಲ್ ಜನರೇಟರ್ನಿಂದ ಎಲೆಕ್ಟ್ರಿಕ್ ಕಾರಿಗೆ ಚಾರ್ಚ್ ಆಗುತ್ತಿರುವ ದೃಶ್ಯ ವೈರಲ್ ಆಗಿದೆ. “ಝೀರೋ ಪೊಲ್ಯೂಷನ್” ಎಂಬ ಆಲೋಚನೆ ಇದ್ದರೂ, ಕಾರ್ಯಗತಗೊಳಿಸುವ ವಿಧಾನ ಮಾತ್ರ ಪಕ್ಕಾ ಜುಗಾಡ್ ಸ್ಟೈಲ್ನಲ್ಲಿ ಇದೆ. ಆತ್ಮನಿರ್ಭರ್ ಆವಿಷ್ಕಾರ ಅಂದ್ರೆ ಇದೇ ಅನಿಸುತ್ತದೆ. ಆದರೆ ನೋಡೋವರಿಗೆ ಸ್ವಲ್ಪ ಗೊಂದಲವೂ ಆಗುತ್ತಿದೆʼ ಎಂದು ಬರೆದಿರುವುದನ್ನು ನೋಡಬಹುದು
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೆಬ್ರವರಿ 26, 2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼEV ಕಾರುಗಳಿಗೆ ಚಾರ್ಜಿಂಗ್ ಸಮಸ್ಯೆ ಇದೆಯಾ? ಈ ವಿಡಿಯೋ ನೋಡಿದರೆ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಗ್ಯಾಪ್ ಇದೆ ಅನ್ನೋದು ಗೊತ್ತಾಗುತ್ತದೆ. ಭಾರತದಲ್ಲಿ ಒಬ್ಬ ವ್ಯಕ್ತಿ ಪ್ರಯಾಣ ಮಾಡುವಾಗ ತನ್ನ ಎಲೆಕ್ಟ್ರಿಕ್ ಎಸ್ಯುವಿ ಕಾರಿಗೆ ಪೋರ್ಟಬಲ್ ಇಂಧನ ಜನರೇಟರ್ ಬಳಸಿ ಚಾರ್ಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹತ್ತಿರದಲ್ಲಿ ಚಾರ್ಜಿಂಗ್ ಸ್ಟೇಷನ್ ಇರಲಿಲ್ಲ, ಅದಕ್ಕಾಗಿ ಅವನು ತನ್ನದೇ ರೀತಿಯಲ್ಲಿ ಒಂದು ವ್ಯವಸ್ಥೆ ಮಾಡಿಕೊಂಡಿದ್ದಾನೆ. ಭಾರತದಲ್ಲಿ EV ಬಳಕೆ ವೇಗವಾಗಿ ಹೆಚ್ಚುತ್ತಿದೆ, ಆದರೆ ಚಾರ್ಜಿಂಗ್ ಸೌಲಭ್ಯಗಳು ಇನ್ನೂ ಅಷ್ಟು ವೇಗವಾಗಿ ಅಭಿವೃದ್ಧಿಯಾಗಿಲ್ಲ. ಬೇಡಿಕೆ ಹೆಚ್ಚು ಆಗಿ ಸೌಲಭ್ಯ ಕಡಿಮೆ ಇದ್ದಾಗ ಜನರು ತಮ್ಮದೇ ರೀತಿಯ ತಾತ್ಕಾಲಿಕ ಪರಿಹಾರಗಳನ್ನು ಹುಡುಕುತ್ತಾರೆ. ಇಂತಹ ಪ್ರತಿಯೊಂದು ಜುಗಾಡ್ ಒಂದು ವಿಷಯವನ್ನು ಹೇಳುತ್ತದೆ. ಮಾರುಕಟ್ಟೆಯಲ್ಲಿ ಇನ್ನೂ ದೊಡ್ಡ ಅವಕಾಶ ಇದೆ. ಹೀಗಾಗಿ ಇಲ್ಲಿ ಮುಖ್ಯ ಕಥೆ ಜನರೇಟರ್ ಅಲ್ಲ, ಚಾರ್ಜಿಂಗ್ ಮೂಲಸೌಕರ್ಯದ ಕೊರತೆ. ಇದು ಸ್ಮಾರ್ಟ್ ಪರಿಹಾರವಾ? ಇಲ್ಲವೇ ಬದಲಾವಣೆಯಲ್ಲಿರುವ ಒಂದು ಸಮಸ್ಯೆಯಾ? ಅದನ್ನು ನೀವು ತೀರ್ಮಾನಿಸಬೇಕುʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ವೈರಲ್ ಆದ ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ವೈರಲ್ ಆದ ವಿಡಿಯೋ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವಿಡಿಯೋವಿನ ಕೆಲವು ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ಆದ ವಿಡಿಯೋವಿನ ಹಲವು ಫ್ರೇಮ್ಗಳಲ್ಲಿ ಜರ್ಕ್ ಮೋಷನ್ ಆಗುವುದು ನಾವು ಕಾಣಬಹುದು, ಅಷ್ಟೇ ಅಲ್ಲ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಯಾವುದೇ ನೈಜ್ಯತೆಯ ಅಂಶವಿಲ್ಲ ಎನ್ನುವುದು ಕಂಡುಬಂದಿತು. ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಿಸದೇ ವಿಚಿತ್ರವಾಗಿ ವಕ್ರವಾಗಿರುವಂತೆ ಕಾಣುತ್ತದೆ. ಬ್ಯಾಕ್ಗ್ರೌಂಡ್ನಲ್ಲಿ ಕಾಣುವ ಕೆಲವು ಕಾರುಗಳ ನಂಬರ್ ಪ್ಲೇಟ್ಗಳಲ್ಲಿ ಅಕ್ಷರಗಳು ಅಪೂರ್ಣವಾಗಿದ್ದವು ಹಾಗೆ ಕೆಲವು ಕಾರುಗಳಿಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಇಂತಹ ತಪ್ಪುಗಳು ಸಾಮಾನ್ಯವಾಗಿ ಎಐ ಮೂಲಕ ತಯಾರಿಸಿದ ವಿಡಿಯೋಗಳಲ್ಲಿ ಕಾಣಿಸುತ್ತವೆ. ಈ ಎಲ್ಲ ಕಾರಣಗಳಿಂದ ಈ ವಿಡಿಯೋ ಡಿಜಿಟಲ್ ರೀತಿಯಲ್ಲಿ ತಯಾರಿಸಿರಬಹುದು ಎಂಬ ಅನುಮಾನಗಳು ಮೂಡಿ ನಾವು ಎಐ ಟೂಲ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ವೈರಲ್ ಆದ ವಿಡಿಯೋವಿನ ವಿವಿಧ ಫ್ರೇಮ್ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಸೈಟ್ ಇಂಜಿನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋ 92% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼಹೈವ್ ಮಾಡರೇಶನ್ʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ವಿಡಿಯೋವನ್ನು 93% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ಮತ್ತೋಂದು ಎಐ ಡಿಟೆಕ್ಟರ್ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್ ಟೂಲ್ ʼವಾಸ್ ಇಟ್ ಎಐʼ ಟೂಲ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.
ವೈರಲ್ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ವಿಡಿಯೋ ಫೆಬ್ರವರಿ 22, 2026ರಂದು “viiztrrix” ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು. ಆ ಖಾತೆಯ ಬಯೋದಲ್ಲೇ ಅವರು ಎಐ ಮೂಲಕ ತಯಾರಿಸಿದ ವಿಡಿಯೋಗಳನ್ನು ಸೃಷ್ಟಿಸಿ ಹಂಚುತ್ತಾರೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

