ಫ್ಯಾಕ್ಟ್ಚೆಕ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅತ್ಯಾಚಾರ ಅಪರಾಧಿಗಳನ್ನು ಎನ್ಕೌಂಟರ್ ಮಾಡಬೇಕು ಎಂದು ಯಾವುದೇ ಆದೇಶ ನೀಡಲಿಲ್ಲ
ರಾಷ್ಟ್ರಪತಿ ದ್ರೌಪದಿ ಮುರ್ಮು ಅತ್ಯಾಚಾರ ಅಪರಾಧಿಗಳನ್ನು ಎನ್ಕೌಂಟರ್ ಮಾಡಬೇಕು ಎಂದು ಯಾವುದೇ ಆದೇಶ ನೀಡಲಿಲ್ಲ

Claim :
ದ್ರೌಪದಿ ಮುರ್ಮು ಅತ್ಯಾಚಾರ ಅಪರಾಧಿಗಳನ್ನು ಎನ್ಕೌಂಟರ್ಗಳಲ್ಲಿ ಕೊಲ್ಲುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸಲು ಆದೇಶಿಸಿದ್ದಾರೆFact :
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಂಬಂಧಿಸಿದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ವೈರಲ್ ಆದ ಪೊಸ್ಟ್ನಲ್ಲಿ ʼಮುಗ್ಧ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು. ಅತ್ಯಾಚಾರಿಗಳಿಗೆ ಇನ್ಮುಂದೆ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಅವರು ಹೇಳಿದರು. ಈ ಅಪರಾಧಿಗಳಿಗೆ ಇನ್ಮೇಲೆ ಒಂದೇ ಒಂದು ಕಾನೂನು ಅದೇ ಡೈರೆಕ್ಟ್ ಎನ್ಕೌಂಟರ್ ಅಥವಾ ಪಟ್ಟಣದ ಚೌಕದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುವುದು. ದ್ರೌಪದಿಯ ನಿರ್ಧಾರವನ್ನು ಯಾರು ಒಪ್ಪುತ್ತೀರಾ? ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಿಮಗೆ ಅನಿಸಿದರೆ! ದಯವಿಟ್ಟು ನಮಗೆ ತಿಳಿಸಿʼ ಎಂಬ ಶೀರ್ಷಿಕೆಯೊಳಗೊಂಡಿರುವ ಪೊಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನವರಿ 31, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼ ಮುಗ್ಧ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು. ಅತ್ಯಾಚಾರಿಗಳಿಗೆ ಇನ್ಮುಂದೆ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಅವರು ಹೇಳಿದರು. ಈ ಅಪರಾಧಿಗಳಿಗೆ ಇನ್ಮೇಲೆ ಒಂದೇ ಒಂದು ಕಾನೂನು ಅದೇ ಡೈರೆಕ್ಟ್ ಎನ್ಕೌಂಟರ್ ಅಥವಾ ಪಟ್ಟಣದ ಚೌಕದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುವುದು. ದ್ರೌಪದಿಯ ನಿರ್ಧಾರವನ್ನು ಯಾರು ಒಪ್ಪುತ್ತೀರಾ? ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಿಮಗೆ ಅನಿಸಿದರೆ! ದಯವಿಟ್ಟು ನಮಗೆ ತಿಳಿಸಿʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫೆಬ್ರವರಿ 02, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼಅತ್ಯಾಚಾರ ಮತ್ತು ದೌರ್ಜನ್ಯಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು. ಅತ್ಯಾಚಾರಿಗಳಿಗೆ ಇನ್ಮುಂದೆ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಅವರು ಹೇಳಿದರು. ಈ ಅಪರಾಧಿಗಳಿಗೆ ಇನ್ಮೇಲೆ ಒಂದೇ ಒಂದು ಕಾನೂನು ಅದೇ ಡೈರೆಕ್ಟ್ ಎನ್ಕೌಂಟರ್ ಅಥವಾ ಪಟ್ಟಣದ ಚೌಕದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುವುದು. ದ್ರೌಪದಿಯ ನಿರ್ಧಾರವನ್ನು ಯಾರು ಒಪ್ಪುತ್ತೀರಾ? ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಂತಹ ಯಾವುದೇ ಹೇಳಿಕೆ ನೀಡಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಪೊಸ್ಟ್ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆ ಅಥವಾ ಅಧಿಕೃತ ಮೂಲಗಳಲ್ಲಿ ಹಂಚಿಕೊಂಡಿರುವ ಮಾಹಿತಿ ನಮಗೆ ಕಂಡುಬಂದಿಲ್ಲ. ಒಂದು ವೇಳೆ, ದ್ರೌಪದಿ ಮುರ್ಮು ನಿಜಕ್ಕೂ ಇಂತಹ ನಿರ್ಧಾರ ಕೈಗೊಂಡಿದ್ದರೆ, ಕೇವಲ ದೇಶದಲ್ಲಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ ಯಾವುದೇ ಮಾಹಿತಿ ನಮಗೆ ಸಿಗಲಿಲ್ಲ.
ನಾವು ರಾಷ್ಟ್ರಪತಿ, ಪ್ರಧಾನಿ ಅವರ ಅಧಿಕೃತ ಸಾಮಾಜಿಕ ಖಾತೆಯನ್ನು ಕೂಡ ನಾವು ಪರಿಶೀಲಿಸಿದ್ದೇವೆ. ಇದರಲ್ಲೂ ವೈರಲ್ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕಂಡುಬಂದಿಲ್ಲ.
ಜನವರಿ 28 ರಂದು ಸಂಸತ್ತಿನ ಬಜೆಟ್ ಅಧಿವೇಶನವು ಪ್ರಾರಂಭವಾಯಿತು. ಈ ಅವಧಿಯಲ್ಲಿ ರಾಷ್ಟ್ರಪತಿಗಳು ಸಂಸತ್ತಿಗೆ ತಮ್ಮ ಭಾಷಣ ಮಾಡಿದ್ದರು. ನಾವು ಭಾರತದ ರಾಷ್ಟ್ರಪತಿಗಳ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ರಾಷ್ಟ್ರಪತಿಯ ಭಾಷಣವನ್ನು ಪರಿಶೀಲಿಸಿದೆವು, ಈ ಪೂರ್ತಿ ವಿಡಿಯೋವನ್ನು ನಾವು ಪರಿಶೀಲಿಸಿದಾಗ ಇದರಲ್ಲೂ ಯಾವುದೇ ಹೇಳಿಕೆ ಇರಲಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ದ್ರೌಪದಿ ಮುರ್ಮು ಅತ್ಯಾಚಾರ ಅಪರಾಧಿಗಳನ್ನು ಎನ್ಕೌಂಟರ್ಗಳಲ್ಲಿ ಕೊಲ್ಲುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

