ಫ್ಯಾಕ್ಟ್ಚೆಕ್: ಮಹಿಳೆಯೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಿದ್ದಾಳೆ ಎಂದು ಸ್ಕ್ರಿಪ್ಟ್ಡ್ ವಿಡಿಯೋ ಹಂಚಿಕೆ
ಮಹಿಳೆಯೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಿದ್ದಾಳೆ ಎಂದು ಸ್ಕ್ರಿಪ್ಟ್ಡ್ ವಿಡಿಯೋ ಹಂಚಿಕೆ

Claim :
ಮಹಿಳೆಯೊಬ್ಬಳು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಿದ್ದಾಳೆFact :
ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ
ಸಾಮಾಜಿಕ ಮಾಧ್ಯಮದಲ್ಲಿ 1 ನಿಮಿಷ ಮತ್ತು 1 ಸೆಕೆಂಡ್ನ ಸಣ್ಣ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಒಬ್ಬ ಮಹಿಳೆ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಕರೆದೊಯ್ಯುತ್ತಿದ್ದಾಳೆ. ದಾರಿಯಲ್ಲಿ, ತಾನು ಕಚೇರಿ ಸಿಬ್ಬಂದಿ ಎಂದು ಹೇಳುವ ವ್ಯಕ್ತಿ ಅವರನ್ನು ತಡೆದು ಅವರು ಏಕೆ ಬಂದಿದ್ದಾರೆ ಎಂದು ಕೇಳುತ್ತಾನೆ. ಆ ಮಹಿಳೆ ಅವನಿಗೆ ಆ ವೃದ್ಧ ಮಹಿಳೆ ತನ್ನ ತಾಯಿ ಮತ್ತು "ಮನೆಯಲ್ಲಿ ಜಾಗವಿಲ್ಲದ ಕಾರಣ" ಅವಳನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿರುವುದಾಗಿ ಹೇಳುತ್ತಾಳೆ. ಇದನ್ನು ಕೇಳಿದ ತಾಯಿ ಭಾವುಕಳಾಗುತ್ತಾಳೆ ಮತ್ತು ಅವಳ ಮುಖದಲ್ಲಿ ಕಣ್ಣೀರು ಬರುತ್ತದೆ. ಪುರುಷನು ತನ್ನ ಸ್ವಂತ ನಿರ್ಧಾರದಿಂದ ಬಂದಿದ್ದೀರಾ ಎಂದು ತಾಯಿಯನ್ನು ಕೇಳಿದಾಗ, ವೃದ್ಧ ಮಹಿಳೆ "ಇಲ್ಲ" ಎಂದು ಮೃದುವಾಗಿ ಹೇಳುತ್ತಾಳೆ. ಈ ಭಾವನಾತ್ಮಕ ಕ್ಷಣವೇ ವೀಡಿಯೊ ವೈರಲ್ ಆಗಲು ಕಾರಣವಾಗಿರುವುದನ್ನು ನೋಡಬಹುದು.
ಜನವರಿ 06, 2026ರಂದು ಎಕ್ಸ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼShe left her poor old mother in an old age home. The mother started crying. She failed as a daughterʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼHeartbreaking: Daughter takes elderly Mother to Old age home, says. "There's no place for her at home"ʼ ಎಂದು ಬರೆದಿರುವದುನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅವಳು ತನ್ನ ಬಡ ವೃದ್ಧ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋದಳು. ತಾಯಿ ಅಳಲು ಪ್ರಾರಂಭಿಸಿದಳು. ಅವಳು ಮಗಳಾಗಿ ವಿಫಲಳಾದಳುʼ ಎಂದು ಬರೆದಿರುವುದನ್ನು ನೋಡಬಹುದು. ಇನ್ನು ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼಹೃದಯವಿದ್ರಾವಕ: ಮಗಳು ವೃದ್ಧ ತಾಯಿಯನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುತ್ತಾಳೆ, "ಮನೆಯಲ್ಲಿ ಅವಳಿಗೆ ಸ್ಥಳವಿಲ್ಲ" ಎಂದು ಹೇಳುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜನವರಿ 06, 2026ರಂದು ಯೂಟ್ಯೂಬ್ ಖಾತೆಯಲ್ಲಿ ʼआज की तेज़ रफ्तार जिंदगी में रिश्तों की कीमत कम होती जा रही है। इस वीडियो में एक ऐसी दिल को छू लेने वाली और सोचने पर मजबूर कर देने वाली घटना दिखाई गई है, जहां एक बेटी अपनी मां को यह कहकर वृद्धाश्रम छोड़ने ले जाती है कि अब घर में उनके लिए जगह नहीं है।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ವರದಿಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇಂದಿನ ಕಾರ್ಯನಿರತ ಜೀವನಶೈಲಿಯಲ್ಲಿ, ಸಂಬಂಧಗಳು ನಿಧಾನವಾಗಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಈ ವೀಡಿಯೊದಲ್ಲಿ ಒಬ್ಬ ಮಗಳು ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿ, ಅವರ ಮನೆಯಲ್ಲಿ ಇನ್ನು ಜಾಗವಿಲ್ಲ ಎಂದು ಹೇಳುವ ಭಾವನಾತ್ಮಕ ಮತ್ತು ಚಿಂತನಶೀಲ ಸನ್ನಿವೇಶವನ್ನು ತೋರಿಸಲಾಗಿದೆʼ ಎಂದು ಬರೆದಿರುವುದನ್ನು ನೋಡಬಹುದು.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೀಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಮಗೆ ಡಿಸಂಬರ್ 23, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರ ತಮ್ಮ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼमाँ को छोड़ दिया भटकने के लिये #ಅಶಿಶ್ಪೋಪೆರ್ This video is scripted and for awareness purposes only.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಖಾತೆಯಲ್ಲಿ ʼವೈರಲ್ ಆದಂತೆಯೇ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿತ್ತು. ಇವೆಲ್ಲದರಲ್ಲೂ, ಇಬ್ಬರೂ ಮಹಿಳೆಯರು ವೈರಲ್ ವೀಡಿಯೊದಲ್ಲಿರುವಂತೆಯೇ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿರುವುದನ್ನು ನೋಡಬಹುದು. ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ
ಏಪ್ರಿಲ್ 2023 ರಲ್ಲಿ ಇದೇ ರೀತಿಯ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ನಮಗೆ ಕಂಡುಬಂದಿದೆ. ಈ ವೀಡಿಯೊ ಇತ್ತೀಚಿನದಲ್ಲ ಆದರೆ ಕನಿಷ್ಠ ಮೂರು ವರ್ಷ ಹಳೆಯದು.
ಆಶಿಶ್ ವ್ಯಾಟ್ಸ್ ಹರಿಯಾಣದ ಡಿಜಿಟಲ್ ಕ್ರಿಯೇಟರ್ ಎಂದು ಖಾತೆಯ ಬಯೋದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂತಹ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ ನವೆಂಬರ್ 25, 2022ರಂದು ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಮತ್ತೊಂದು ನಾಟಕೀಯ ವೀಡಿಯೊವನ್ನು ನಾವಿಲ್ಲಿ ನೋಡಬಹುದು. ಈ ವಿಡಿಯೋದಲ್ಲಿಯೂ ಸಹ ನಾವು ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ಅದೇ ವೃದ್ಧೆಯನ್ನು ಕಾಣಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ಮಹಿಳೆಯೊಬ್ಬರು ತನ್ನ ವೃದ್ಧ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಿರುವ ಈ ವೀಡಿಯೊ ದೃಶ್ಯ ವಾಸ್ತವದಲ್ಲಿ ನಡೆದಿರುವ ಘಟನೆಯಲ್ಲ. ಇದು ಒಂದು ಸ್ಕ್ರಿಪ್ಟ್ ಮಾಡಿರುವ ವೀಡಿಯೊ.

