ಫ್ಯಾಕ್ಟ್ಚೆಕ್: ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್
ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್

Claim :
ನವರಾತ್ರಿ ಮೆರವಣಿಗೆಯ ವೇಳೆ ಮಾಂಸದ ತುಂಡುಗಳನ್ನು ಎಸೆದು ಮುಸ್ಲೀಮರು ಅಶಾಂತಿಯನ್ನು ಪ್ರಚೋದಿಸಿದ್ದಾರೆFact :
ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮುಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯ ವಿಡಿಯೋವಿದು
ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ನವರಾತ್ರಿ ಮೆರವಣಿಗೆ ಮೇಲೆ ಮುಸ್ಲಿಮರು ನಡೆಸಿದ ದಾಳಿ ಎಂದು ಹೇಳಲಾಗುವ ವೀಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಪೊಲೀಸರು ದೊಡ್ಡ ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವುದನ್ನು ಕಾಣಬಹುದು.
ಸೆಪ್ಟಂಬರ್ 29, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ "ಐ ಲವ್ ಮುಹಮ್ಮದ್" ಹೆಸರಿನಲ್ಲಿ ಮತ್ತೊಂದು ಬೆಂಕಿ ಹಚ್ಚುವಿಕೆ! ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ 'ಐ ಲವ್ ಎಂ' ಹೆಸರಿನಲ್ಲಿ ಇಸ್ಲಾಮಿಸ್ಟ್ಗಳು ನವರಾತ್ರಿ ಮೆರವಣಿಗೆಯ ಮೇಲೆ ಮಾಂಸದ ತುಂಡುಗಳನ್ನು (ಬಹುಶಃ ಗೌಮನ್ನರು) ಎಸೆದು, ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮೂಲಕ ಮಧ್ಯಪ್ರವೇಶಿಸಬೇಕಾಯಿತು. ಹೆಂಗ್ ಮಡಗವ್ರೆ ಅಂದ್ರೆ ಅಬ್ಬಬ್ಬಬ್ಬಾʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕಿೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ವಿಡಿಯೋ ಇದಾಗಿದೆ.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನ್ಯೂಸ್ 18 ವೆಬ್ಸೈಟ್ನಲ್ಲಿ ʼ‘I Love Muhammad’ Rangoli Triggers Clashes In Maharashtra’s Ahilyanagar, 30 Detainedʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಉತ್ತರ ಪ್ರದೇಶದ ನಂತರ, ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 28 ರ ರಾತ್ರಿ ಮಿಲಿವಾಡಾ ಪ್ರದೇಶದ ರಸ್ತೆಬದಿಯ ರಂಗೋಲಿಯ ಮೇಲೆ "ಐ ಲವ್ ಮುಹಮ್ಮದ್" ಎಂಬ ಬರಹ ಕಾಣಿಸಿಕೊಂಡ ನಂತರ ಉದ್ವಿಗ್ನತೆ ಆವರಿಸಿತು. ಬರಹದ ವೀಡಿಯೊ ಬೆಳಗಿನ ಹೊತ್ತಿಗೆ ವೈರಲ್ ಆಗಿದ್ದು, ಪ್ರತಿಭಟನೆಗಳು ಬೇಗನೆ ಹಿಂಸಾಚಾರಕ್ಕೆ ತಿರುಗಿ ಈಗಾಗಲೇ ಸೂಕ್ಷ್ಮವಾದ ವಿಷಯದತ್ತ ರಾಜ್ಯಾದ್ಯಂತ ಗಮನ ಸೆಳೆದವು. ಈ ಗೀಚುಬರಹ ಪತ್ತೆಯಾದ ನಂತರ ಆಕ್ರೋಶ ವೇಗವಾಗಿ ಹರಡಿತು, ಮುಸ್ಲಿಂ ಯುವಕರು ಜನನಿಬಿಡ ಅಹಲ್ಯಾನಗರ-ಸಂಭಾಜಿ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು. ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು, ಇದು ಎಫ್ಐಆರ್ ದಾಖಲಿಸಲು ಮತ್ತು ರಂಗೋಲಿ ಬಿಡಿಸಲು ಕಾರಣವಾದ ಒಬ್ಬ ವ್ಯಕ್ತಿಯನ್ನು ಬಂಧಿಸಲು ಕಾರಣವಾಯಿತು. ನಂತರ ಮುಸ್ಲಿಂ ಯುವಕರು ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಘರ್ಷಣೆಯಲ್ಲಿ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆʼ ಎಂದು ಬರೆದಿರುವುದನ್ನು ನಾವಿಲ್ಲಿ ಕಾಣಬಹುದು.
ಸೆಪ್ಟಂಬರ್ 29, 2025ರಂದು ʼದಿ ಹಿಂದೂʼ ವೆಬ್ಸೈಟ್ನಲ್ಲಿ ʼProtest against 'I Love Muhammad' graffiti on road turns violent in Ahilyanagar; one arrestedʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ರಸ್ತೆಯಲ್ಲಿ ಚಿತ್ರಿಸಲಾದ 'ಐ ಲವ್ ಮುಹಮ್ಮದ್' ಎಂಬ ಗೀಚುಬರಹದ ವಿರುದ್ಧ ಸೋಮವಾರ (ಸೆಪ್ಟೆಂಬರ್ 29, 2025) ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತು, ಇದರಿಂದಾಗಿ ಪೊಲೀಸರು ಕಲ್ಲು ತೂರಾಟಗಾರರ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದರೂ, ಪ್ರತಿಭಟನಾಕಾರರು ಅಹಲ್ಯಾನಗರ-ಛತ್ರಪತಿ ಸಂಭಾಜಿನಗರ ರಸ್ತೆಯನ್ನು ತಡೆದಿದ್ದರು ಎಂದು ಅವರು ಹೇಳಿದರು. ಕೊಟ್ವಾಲಿ ಪ್ರದೇಶದ ಕೋಟ್ಲಾದಲ್ಲಿ ಇಂದು ಬೆಳಿಗ್ಗೆ ಯಾರೋ ರಸ್ತೆಯ ಮೇಲೆ 'ಐ ಲವ್ ಮುಹಮ್ಮದ್' ಎಂದು ಚಿತ್ರಿಸಿದ ನಂತರ ಪ್ರತಿಭಟನೆ ಪ್ರಾರಂಭವಾಯಿತು, ಇದನ್ನು ಮುಸ್ಲಿಂ ಸಮುದಾಯದ ಸದಸ್ಯರು ಆಕ್ಷೇಪಿಸಿದರು. ಈ ಗೀಚುಬರಹದ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆʼ ಎಂದು ವರದಿಯಾಗಿದೆ. ಈ ವರದಿಯಲ್ಲಿ ಅಹಲ್ಯಾ ನಗರ ಸೂಪರಿಂಟೆಂಡೆಂಟ್ ಸೋಮನಾಥ್ ಖರ್ಗೆ ಅವರ ಪ್ರತಿಕ್ರಿಯೆಯೂ ಸೇರಿದೆ. ಆದರೆ ಯಾವುದೇ ಮಾಧ್ಯಮ ವರದಿಗಳಲ್ಲಿ ನವರಾತ್ರಿ ಆಚರಣೆಯ ಸಮಯದಲ್ಲಿ ಮಾಂಸವನ್ನು ಎಸೆಯಲಾಗಿದೆ ಅಥವಾ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ.
ಸೆಪ್ಟಂಬರ್ 29, 2025ರಂದು ʼಮಹಾರಾಷ್ಟ್ರ ಟೈಮ್ಸ್ʼ ವೆಬ್ಸೈಟ್ನಲ್ಲಿ ʼAhilyanagar News: अहिल्यानगरमध्ये धार्मिक तणाव, रास्तारोकोनंतर पोलिसांचा आंदोलकांवर लाठीचार्ज, नेमकं काय घडलं? ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ಕಾಣಬಹುದು. ವರದಿಯಲ್ಲಿ ʼಅಹಲ್ಯಾನಗರ ನಗರದಲ್ಲಿ ದುರ್ಗಾ ಮಾತಾ ದೌದ್ ಆಚರಣೆಯ ಸಂದರ್ಭದಲ್ಲಿ ಬಿಡಿಸಿದ ಆಕ್ಷೇಪಾರ್ಹ ರಂಗೋಲಿಯಲ್ಲಿ "ಐ ಲವ್ ಮೊಹಮ್ಮದ್" ಎಂಬ ಪದಗಳು ಕಂಡುಬಂದ ನಂತರ ವಿವಾದ ಭುಗಿಲೆದ್ದಿದೆ. ಪೊಲೀಸರು ಸಂಬಂಧಪಟ್ಟ ವ್ಯಕ್ತಿಯನ್ನು ಬಂಧಿಸಿದ್ದರೂ, ಮುಸ್ಲಿಂ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ. ಪರಿಣಾಮವಾಗಿ, ಛತ್ರಪತಿ ಸಂಭಾಜಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಈ ಪ್ರತಿಭಟನೆಯ ಸಮಯದಲ್ಲಿ, ಕೋಪಗೊಂಡ ಜನಸಮೂಹ ಇಡೀ ನಗರದ ಕಡೆಗೆ ಮೆರವಣಿಗೆ ನಡೆಸುತ್ತಿರುವುದನ್ನು ಪೊಲೀಸರು ಗಮನಿಸಿದರು , ಇದು ಗದ್ದಲವನ್ನು ಸೃಷ್ಟಿಸಿತು . ನಂತರ, ಪೊಲೀಸ್ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿ ಕೈ ಮೀರದಂತೆ ತಡೆಯಲು ಲಾಠಿ ಪ್ರಹಾರ ನಡೆಸಿ ಗುಂಪನ್ನು ತಡೆದರು. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲವಾರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇದು ನಗರದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆಯ ನಂತರ, ಅಹಲ್ಯಾನಗರ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಆಡಳಿತವು ಬಿಗಿ ಭದ್ರತೆಯನ್ನು ನಿಯೋಜಿಸಿದೆ. ಚ. ಸಂಭಾಜಿ ನಗರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆʼ ಎಂದು ವರದಿ ಮಾಡಿರುವುದನ್ನು ನೋಡಬಹುದು
ಸೆಪ್ಟೆಂಬರ್ 29, 2025ರಂದು ʼಹಿಂದಿ ಏಷ್ಯಾನೆಟ್ʼ ವೆಬ್ಸೈಟ್ನಲ್ಲಿ ʼयूपी के बाद अब महाराष्ट्र पहुंचा 'आई लव मोहम्मद' विवाद, एक रंगोली पर मचा बवालʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಅಹಲ್ಯಾನಗರ ನಗರದಲ್ಲಿ ದುರ್ಗಾ ಮಾತಾ ದೌದ್ ಆಚರಣೆಯ ಸಂದರ್ಭ ಬಿಡಿಸಿದ ಆಕ್ಷೇಪಾರ್ಹ ರಂಗೋಲಿಯಲ್ಲಿ "ಐ ಲವ್ ಮೊಹಮ್ಮದ್" ಎಂಬ ಪದಗಳು ಕಂಡುಬಂದ ನಂತರ ವಿವಾದ ಭುಗಿಲೆದ್ದಿದೆ. ಪೊಲೀಸರು ಸಂಬಂಧಪಟ್ಟ ವ್ಯಕ್ತಿಯನ್ನು ಬಂಧಿಸಿದ್ದರೂ, ಮುಸ್ಲಿಂ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ. ಪರಿಣಾಮವಾಗಿ, ಛತ್ರಪತಿ ಸಂಭಾಜಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ.
ಸೆಪ್ಟೆಂಬರ್ 29, 2025ರಂದು ʼನ್ಯೂಸ್ ನೇಷನ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼMaharashtra के अहिल्यानगर में I Love Muhammad पर बवाल, 30 प्रदर्शनकारी गिरफ्तार | Mumbai Policeʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ರಂಗೋಲಿ ವಿಚಾರ ಗಲಾಟೆ ನಡೆದಿದೆ: 30 ಜನರನ್ನು ಬಂಧಿಸಲಾಗಿದೆʼ ಎಂದು ಬರೆದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ಮಹಾರಾಷ್ಟ್ರದ ಅಹಲ್ಯಾನಗರದಲ್ಲಿ ಐ ಲವ್ ಮೊಹಮ್ಮದ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ವಿಡಿಯೋ ಇದಾಗಿದೆ.

