ಫ್ಯಾಕ್ಟ್ಚೆಕ್: ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ
ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ

Claim :
ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆFact :
ವೈರಲ್ ಆದ ವಿಡಿಯೋ 2016ರದ್ದು
ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ ಇಡೀ ಜಗತ್ತೇ ಬೆಚ್ಚಿಬಿದ್ದಿದೆ, ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಕೂಡ ಸಜ್ಜಾಗಿದೆ, ಜಮ್ಮು-ಕಾಶ್ಮೀರಾದ್ಯಂತ ಕೂಂಬಿಂಗ್ ಮಾಡುತ್ತಿದೆ, ಸಿಕ್ಕ ಸಿಕ್ಕಲ್ಲಿ ಉಗ್ರರನ್ನು ಹೊಡೆದು ಹಾಕುತ್ತಿದೆ. ಉಗ್ರರಿಗೆ ಸಹಾಯ ಮಾಡಿದ ಸ್ಥಳೀಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ, ಈಗಾಗಲೇ 10ಕ್ಕೂ ಹೆಚ್ಚು ಉಗ್ರರ ಮನೆಗಳನ್ನು ಧ್ವಂಸ ಮಾಡಿದೆ. ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕ್ರಮಕ್ಕಾಗಿ ಭಾರತ ಈಗ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಪಾಕಿಸ್ತಾನದ ವಿರುದ್ಧ ಪ್ರಮುಖ ಕ್ರಮಗಳನ್ನು ಕೈಗೊಂಡಿರುವ ಭಾರತ, 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ಸಿಂಧೂ ನದಿ ಒಪ್ಪಂದವನ್ನು ಕೂಡ ರದ್ದುಗೊಳಿಸಿದೆ.ಇದರ ನಡುವೆ ಈಗ ಇದಕ್ಕೆ ಸಂಬಂಧಪಟ್ಟಂತೆ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಅಪಹಸ್ಯ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀರಿನ ಬಾಟಲಿಯನ್ನು ಹಿಡಿದು “ನನಗೆ ನೀರು ಬೇಕು, ನನಗೆ ಸಹಾಯ ಮಾಡಿ.. ನನಗೆ ನೀರು ಬೇಕು, ಸಹಾಯ ಮಾಡಿ ..” ಎಂದು ಹೇಳುತ್ತಿರುವುದು ಕಂಡುಬಂದಿದೆ. ಇದನ್ನು ಹಂಚಿಕೊಂಡಿರುವ ಹಲವರು, ಪಾಕಿಸ್ತಾನವನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸಾಕಷ್ಟು ಮಂದಿ ವಿಡಿಯೋವನ್ನು ವಿವಿಧ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಮೇ 01, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು, ʼट्रंप ने कुछ इस तरह उड़ाया पाकिस्तान का मजाक!!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಕ್ಯಾಪ್ಷನ್ ಆಗಿ ʼट्रंप ने कुछ इस तरह उड़ाया पाकिस्तान का मजाक!!| भारत के सिंधु जल समझौते पर रोक लगाने परʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ, 02, 2025ರಂದು ಮತ್ತೊಬ್ಬ ಫೇಸ್ಬುಕ್ ಖಾತೆದಾರರ ʼDonald Trump Roast Whole Pakistan. Bhai Chara On Topʼ ಎಂದ ಶೀರ್ಷಿಕೆಯೊಂದಿಗೆ ಟ್ರಂಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋ ಫೆಬ್ರವರಿ 26, 2016ರಲ್ಲಿ, ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಪ್ರಚಾರದಲ್ಲಿದ್ದ ಡೊನಾಲ್ಡ್ ಜೆ ಟ್ರಂಪ್ 2016ರ ಪ್ರತಿಸ್ಪರ್ಧಿ ಮಾರ್ಕೊ ರೂಬಿಯೊ ಅವರ ವಿಡಿಯೋ ಕುರಿತು ಅಣಕಿಸಿದ ವಿಡಿಯೋವದು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 27, 2016ರಂದು ಎನ್ಬಿಸಿ ನ್ಯೂಸ್ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ನಮಗೆ ಕಾಣಿಸಿತು. ವಿಡಿಯೋವಿಗೆ ಶೀರ್ಷಿಕೆಯಾಗಿ ʼDonald J. Trump mocks 2016 rival Marco Rubio's infamous water bottle moment while on a campaign stop in Fort Worth, Texas, on Fridayʼ ಎಂದು ಬರೆದಿರುವುದನ್ನು ನೋಡಬಹುದು. ಇದರಲ್ಲಿ 2016ರ ಫೆಬ್ರವರಿ 26ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಪ್ರಚಾರದಲ್ಲಿದ್ದ ಡೊನಾಲ್ಡ್ ಜೆ ಟ್ರಂಪ್ 2016ರ ಪ್ರತಿಸ್ಪರ್ಧಿ ಮಾರ್ಕೊ ರೂಬಿಯೊ ಅವರ ವಿಡಿಯೋ ಕುರಿತು ಅಣಕಿಸಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.
ಫೆಬ್ರವರಿ 26, 2016ರಂದು ಎನ್ಬಿಸಿ ನ್ಯೂಸ್ ವೆಬ್ಸೈಟ್ನಲ್ಲಿ ʼChris Christie Endorses Donald Trump for Presidentʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು.
ಫೇಸ್ಬುಕ್ ಪೋಸ್ಟ್ನಿಂದ ಸುಳಿವುಗಳನ್ನು ಪಡೆದುಕೊಂಡು, ನಾವು ಸಂಬಂಧಿತ ಕೀವರ್ಡ್ಗಳನ್ನು ಬಳಸಿದ್ದೇವೆ ಮತ್ತು ಅದೇ ಘಟನೆಯನ್ನು ಒಳಗೊಂಡ ಹಲವಾರು ವರದಿಗಳನ್ನು ಕಂಡುಕೊಂಡಿದ್ದೇವೆ. 2013ರಲ್ಲಿ ಅಮೆರಿಕದ ರಾಜಕಾರಣಿ ಮಾರ್ಕೊ ರುಬಿಯೋ ಅವರು ಅಂದಿನ ಅಧ್ಯಕ್ಷ ಬರಕ್ ಒಬಮ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣಕ್ಕೆ ನೇರ ಪ್ರಸಾರದಲ್ಲಿ ಪ್ರತಿಕ್ರಿಯೆ ನೀಡುವ ವೇಳೆ ನೀರಿಗಾಗಿ ಹವಣಿಸುವುದು ಮತ್ತು ಅವಸರದಲ್ಲಿ ನೀರು ಕುಡಿಯುವುದು ಕಂಡುಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದೇ ರೀತಿ 2016ರಲ್ಲಿ ಡೊನಾಲ್ಡ್ ಟ್ರಂಪ್ ಮಾರ್ಕೊ ರುಬಿಯೋ ಅವರನ್ನು ಅಣಕಿಸಿದ್ದಾರೆ. ಈಗ ಇದೇ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. (ಆರ್ಕೈವ್)
ಫೆಬ್ರವರಿ 27, 2016ರಂದು ʼಸಿಬಿಸಿ ನ್ಯೂಸ್ʼ ತನ್ನ ಯೂಟ್ಯೂಬ್ ಖಾತೆಯಲ್ಲಿ ʼDonald Trump mocks Marco Rubio's 2013 water bottle gaffeʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಗಿ ʼಟೆಕ್ಸಾಸ್ನಲ್ಲಿ ನಡೆದ ರ್ಯಾಲಿಯಲ್ಲಿ, ಡೊನಾಲ್ಡ್ ಟ್ರಂಪ್ 2013 ರಲ್ಲಿ ಅಧ್ಯಕ್ಷ ಒಬಾಮಾ ಅವರ ಸ್ಟೇಟ್ ಆಫ್ ದಿ ಯೂನಿಯನ್ಗೆ ಖಂಡನೆ ನೀಡಿದಾಗ ಮಾರ್ಕೊ ರೂಬಿಯೊ ಅವರ ನೀರಿನ ಬಾಟಲ್ ದೋಷವನ್ನು ಅಪಹಾಸ್ಯ ಮಾಡುತ್ತಾರೆ. ಸಿಬಿಎಸ್ಎನ್ನ ಕಾಂಟೆಸ್ಸಾ ಬ್ರೂವರ್ ನಮಗೆ ವೀಡಿಯೊವನ್ನು ತೋರಿಸುತ್ತಾರೆ.ʼ ಎಂದು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ಈ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ 2013ರಲ್ಲಿ ಅಧ್ಯಕ್ಷ ಒಬಾಮಾ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣಕ್ಕೆ ನೀಡಿದ ಪ್ರತಿಕ್ರಿಯೆಯ ಸಮಯದಲ್ಲಿ ಮಾರ್ಕೊ ರುಬಿಯೊ (ಅಮೇರಿಕನ್ ರಾಜಕಾರಣಿ) ಅವರನ್ನು ವಿಚಿತ್ರವಾಗಿ ನೀರು ಕುಡಿದಿದ್ದಕ್ಕಾಗಿ ಅಪಹಾಸ್ಯ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಟ್ರಂಪ್ ಜನಸಮೂಹವನ್ನು ಉದ್ದೇಶಿಸಿ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, "ಅಧ್ಯಕ್ಷ ಒಬಾಮಾ ಅವರ ಭಾಷಣಕ್ಕೆ ಪ್ರತಿಕ್ರಿಯಿಸಲು ಮಾರ್ಕೊ ರುಬಿಯೊ ಅವರನ್ನು ಕೇಳಿದಾಗ ಆ ವಿಪತ್ತು ಮತ್ತು ಭಾಷಣದ ಮಧ್ಯದಲ್ಲಿ ಅವರು ನೀರಿಗಾಗಿ ಹೇಗೆ ಉಸಿರುಗಟ್ಟಿಸುತ್ತಿದ್ದರು ಎಂದು ನಿಮಗೆ ನೆನಪಿದೆಯೇ?" ಎಂದು ಕೇಳುತ್ತಿರುವುದು ಕಂಡುಬರುತ್ತದೆ. ನಂತರ ಅವರು ಬಾಟಲಿಯನ್ನು ಹಿಡಿದು ನೆಲದ ಮೇಲೆ ಸ್ವಲ್ಪ ನೀರನ್ನು ಚೆಲ್ಲಿ ಅದರಿಂದ ಕುಡಿಯುವ ಮೂಲಕ ರುಬಿಯೊ ಅವರನ್ನು ಅನುಕರಿಸುತ್ತಾರೆ. ಈ ವೀಡಿಯೊ ಫೆಬ್ರವರಿ 2016 ರಲ್ಲಿ ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ನಡೆದ ಪ್ರಚಾರ ರ್ಯಾಲಿಯದ್ದಾಗಿದೆ. 2016 ರ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆಯ ಸಮಯದಲ್ಲಿ ಇಬ್ಬರ ನಡುವಿನ ಹಿಂದಕ್ಕೆ ಮತ್ತು ಮುಂದಕ್ಕೆ ನಡೆದ ಚರ್ಚೆಯ ಭಾಗವಾಗಿ, ರಿಪಬ್ಲಿಕನ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ರುಬಿಯೊ ಮಾಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಟ್ರಂಪ್ ಅವರ ಕೃತ್ಯ ಬಂದಿದೆ ಎಂದು ವರದಿಗಳು ಉಲ್ಲೇಖಿಸುತ್ತವೆ. (ಆರ್ಕೈವ್)
ಇದರಿಂದ ಸಾಭೀತಾಗಿದ್ದೇನೆಂದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ 1960ರ ಸಿಂಧೂ ನದಿ ಜಲ ಒಪ್ಪಂದದ ರದ್ದತಿ ನಂತರ ಪಾಕಿಸ್ತಾನವನ್ನು ಅಣಕಿಸಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಫೆಬ್ರವರಿ 26, 2016ರಲ್ಲಿ, ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಪ್ರಚಾರದಲ್ಲಿದ್ದ ಡೊನಾಲ್ಡ್ ಜೆ ಟ್ರಂಪ್ 2016ರ ಪ್ರತಿಸ್ಪರ್ಧಿ ಮಾರ್ಕೊ ರೂಬಿಯೊ ಅವರ ವಿಡಿಯೋ ಕುರಿತು ಅಣಕಿಸಿದ ವಿಡಿಯೋವದು.