ಫ್ಯಾಕ್ಟ್ಚೆಕ್: ಗುಲ್ಬರ್ಗಾ ಮತ್ತು ಬೀದರ್ನಲ್ಲಿ ಇರಾನಿ ಗ್ಯಾಂಗ್ ಬಂದಿಳಿದಿದೆ ಎಚ್ಚರ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
ಗುಲ್ಬರ್ಗಾ ಮತ್ತು ಬೀದರ್ನಲ್ಲಿ ಇರಾನಿ ಗ್ಯಾಂಗ್ ಬಂದಿಳಿದಿದೆ ಎಚ್ಚರ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
Claim :
ಗುಲ್ಬರ್ಗಾ ಮತ್ತು ಬೀದರ್ನಲ್ಲಿ ಇರಾನಿ ಗ್ಯಾಂಗ್ ಬಂದಿಳಿದಿದೆ ಎಚ್ಚರ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.Fact :
ವೈರಲ್ ಆದ ಫೋಟೋ ಇತ್ತೀಚಿನದಲ್ಲ, 2019 ರಲ್ಲಿ ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದ ಹಳೆಯ ಫೋಟೋವದು.
ಗುಲ್ಬರ್ಗಾ ಮತ್ತು ಬೀದರ್ನ ಇರಾನಿ ಗ್ಯಾಂಗ್ ಎಂದು ಶೀರ್ಷಿಕೆಯನ್ನೀಡಿದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪಲ್ಸರ್ ಎನ್ಎಸ್ ಬೈಕ್ನಲ್ಲಿ ಬರುವ ಖದೀಮರು ಮಹಿಳೆಯರ ಬಳಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದಾರೆ. ಜನನಿಬಿಡ ಪ್ರದೇಶ ಎಂದೂ ಲೆಕ್ಕಿಸದೆ ರಾಜಾರೋಷವಾಗಿ ಕತ್ತಿಗೆ ಕೈ ಹಾಕಿ ಸರ ಕಳ್ಳತನ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಕಂಬಳಿ ಇತರೆ ಹೊದಿಕೆ ಬೆಡ್ ಶೀಟ್, ಗೃಹಪಯೋಗಿ ಸಂಬಂಧಿತ ವಸ್ತುಗಳನ್ನು ಮಾರುವವರ ಮಾರುವೇಷದಲ್ಲಿ ಬಂದು ಮನೆಕಳ್ಳತನ ದರೋಡೆ ಸುಲಿಗೆಗಳನ್ನು ಮಾಡುತ್ತಿದ್ದು, ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆಗಸ್ಟ್ 23, 2024ರಂದು ಶಮ್ಮಿ ಧೀಮನ್ ಎಂಬ ಫೇಸ್ಬುಕ್ ಖಾತೆದಾರರ ಗುಲ್ಬರ್ಗಾ ಮತ್ತು ಬೀರ್ ಇರಾನಿ ಗ್ಯಾಂಗ್ ಎಂಬ ಶೀರ್ಷಿಕೆಯೊಂದಿಗೆ "These are Iranian people of bidar and gulbarga pretending to sell sheet, they are all gangsters please note. It is said that gang members reach out to people by becoming blanket sellers during the day, do home surveys and then rob the house, so everyone shares it with their respective beat groups. Delhi police " ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ " ಈ ಫೋಟೋದಲ್ಲಿ ಕಾಣುವವರು ಬೀದರ್ ಮತ್ತು ಗುಲ್ಬರ್ಗಾದ ಇರಾನಿನ ಗ್ಯಾಂಗ್. ಇವರು ಬೆಡ್ಶೀಟ್ ಮಾರುವಂತೆ ನಟಿಸಿ ದರೋಡೆ ಮಾಡುತ್ತಾರೆ. ದಯವಿಟ್ಟು ಗಮನಿಸಿ, ಅವರೆಲ್ಲರೂ ದರೋಡೆಕೋರರು. ಇವರು ಹಗಲಿನಲ್ಲಿ ಕಂಬಳಿ ಮಾರಾಟಗಾರರಂತೆ ನಟಿಸುವ ಮೂಲಕ ಜನರ ಬಳಿ ಬಂದು ಮನೆಯ ಸುತ್ತಮುತ್ತ ಹಾಗೆ ಮನೆಯನ್ನುಸೂಕ್ಷ್ಮವಾಗಿ ಗಮನಿಸಿ ನಂತರ ಮನೆಯನ್ನು ದರೋಡೆ ಮಾಡುತ್ತಾರೆ, ಈ ಸುದ್ದಿಯನ್ನು ನಿಮಗೆ ಗೊತ್ತಿರುವ ಪ್ರತಿಯೊಬ್ಬರೂ ಇದನ್ನು ಆದಷ್ಟು ಶೇರ್ ಮಾಡಿಕೊಳ್ಳಿ. ದೆಹಲಿ ಪೊಲೀಸ್’’ ಎಂದು ಬರೆದಿರುವುದನ್ನು ನೋಡಬಹುದು
ಆಗಸ್ಟ್ 29,2024ರಂದು ರೋಹಿತ್ ಪವಾರ್ ಎಂಬ ಶಾತೆದಾರ ತನ್ನ ಫೇಸ್ಬುಕ್ ಖಾತೆಯಲ್ಲಿ "Beware, Blanket, sheet and other clothes sellers in the market.. GANG HAS RRIVED . THESE ARE JEHADI PEOPLE OF BIDAR AND GULBARGA WHO ARE PRETENDING TO SELL CHADAR.THEY ARE ALL GANGSTERS. The members of the gang.. Becoming a blanket or other cloth vendor during the day.At the neighborhood, colony etc.. In the name of selling cheap stuff.. Do survey of houses, and then rob houses by looking for opportunity, so be careful and send this message to all your groups. Delhi Police" ಎಂದು ಇಂಗ್ಲೀಷ್ನಲ್ಲಿ ಕ್ಯಾಪ್ಷನ್ನ್ನೀಡಿ ಪೋಸ್ಟ್ ಮಾಡಿದ್ದಾರೆ.
ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದಾಗ "ಮಾರುಕಟ್ಟೆಯಲ್ಲಿ ಹೊದಿಕೆ, ಬೆಡ್ಶೀಟ್ ಮತ್ತು ಇತರ ಬಟ್ಟೆ ಮಾರಾಟಗಾರರು ಎಂದು ಹೇಳಿಕೊಂಡು ಒಂದು ಗ್ಯಾಂಗ್ ಆಗಮಿಸಿದೆ. ಇವರು ಬೀದರ್ ಮತ್ತು ಗುಲ್ಬರ್ಗಾದ ಜೆಹಾದಿ ವ್ಯಕ್ತಿಗಳು, ಇವರು ಚಾದರ್ ಮಾರಾಟ ಮಾಡುವಂತೆ ನಟಿಸುತ್ತಾರೆ. ಅವರೆಲ್ಲರೂ ದರೋಡೆಕೋರರು, ಇರಾನಿ ಗ್ಯಾಂಗ್ನ ಸದಸ್ಯರು. ಹಗಲಿನಲ್ಲಿ ಕಂಬಳಿ ಅಥವಾ ಇತರ ಬಟ್ಟೆ ಮಾರಾಟಗಾರರಾಗುತ್ತಾರೆ.. ನೆರೆಹೊರೆ, ಕಾಲೋನಿ ಇತ್ಯಾದಿಗಳಲ್ಲಿ.. ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಮನೆಗಳ ಸಮೀಕ್ಷೆ ಮಾಡಿ, ನಂತರ ಅವಕಾಶವನ್ನು ನೋಡಿಕೊಂಡು ಮನೆಗಳನ್ನು ದೋಚುತ್ತಾರೆ, ಆದ್ದರಿಂದ ಎಲ್ಲರೂ ಜಾಗರೂಕರಾಗಿರಿ ಮತ್ತು ಈ ಸಂದೇಶವನ್ನು ನಿಮ್ಮ ಎಲ್ಲಾ ಗುಂಪುಗಳಿಗೆ ಕಳುಹಿಸಿ. ದೆಹಲಿ ಪೊಲೀಸ್" ಎಂಬ ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಫೋಟೋ ಇತ್ತೀಚಿನದಲ್ಲ, 2019 ರಲ್ಲಿ ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದ ಹಳೆಯ ಫೋಟೋವದು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು "ಇರಾನಿ ಗ್ಯಾಂಗ್ʼ ಎಂಬ ಕೀವರ್ಡ್ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2019ರ ಜುಲೈನಲ್ಲಿ ದೈಜಿ ವರ್ಲ್ಡ್ ಎಂಬ ವೆಬ್ಸೈಟ್ನಲ್ಲಿ ವರದಿಯೊಂದು ಕಂಡುಬಂದಿತು. "ಮಂಗಳೂರು: ಇರಾನಿ ಗ್ಯಾಂಗ್ ಲೂಟಿಕೋರರ ಬಗ್ಗೆ ಪೋಲಿಸರು ಎಚ್ಚರಿಕೆಯನ್ನು ನೀಡುತ್ತಿದ್ದಾರೆ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ವೈರಲ್ ಆದ ಸುದ್ದಿಯ ಬಗ್ಗೆ ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಉದಯವಾಣಿ ವೆಬ್ಸೈಟ್ನಲ್ಲಿ ಜುಲೈ 29, 2019ರಂದು ಪ್ರಕಟಿಸಿದ ವರದಿಯೊಂದು ಕಂಡುಬಂದಿತು. ವರದಿಯಲ್ಲಿ ಕಂಬಳಿ ಮಾರಾಟದ ನೆಪದಲ್ಲಿ ಬಂದಿರುವ ಇರಾನಿ ಗ್ಯಾಂಗ್ನ ಬಗ್ಗೆ ಬಜ್ಪೆ ಪೊಲೀಸರು ಎಚ್ಚರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಆ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಈ ಗ್ಯಾಂಗ್ ಬಂದಿಳಿದಿದೆ. ಹಗಲು ಹೊತ್ತಿನಲ್ಲಿ ಕಂಬಳಿ ಮಾರುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸಿ, ಮನೆ ಸಮೀಕ್ಷೆ ನಡೆಸಿ ನಂತರ ಮನೆ ಲೂಟಿ ಮಾಡುತ್ತಾರೆ. ಮನೆಯಲ್ಲಿರುವವರು ಎಚ್ಚರಿಕೆಯಿಂದಿರಿ ಎಂದು’ ಎಂದು ಮಂಗಳೂರಿನ ಬಜ್ಪೆ ಪೊಲೀಸರು ಹೇಳಿರುವ ಮಾಹಿತಿ ಇದರಲ್ಲಿದೆ.
ಹಾಗೆ ವಿಜಯ ಕರ್ನಾಟಕ ವೆಬ್ಸೈಟ್ನಲ್ಲೂ ಸಹ ಜುಲೈ 30, 2019ರಂದು ʼಇರಾನಿ ಗ್ಯಾಂಗ್ ವದಂತಿ; ಪರಿಚಿತರ ಜತೆ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ ಎಂದ ಉಡುಪಿ ಎಸ್ಪಿʼ ಎಂಬ ಶೀರ್ಷಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು. ವರದಿಯಲ್ಲಿ ʼಮನೆಯ ಬಳಿ ಯಾವುದೇ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಜಾಗೃತೆಯಿಂದ ಇರಿ. ಯಾವುದೇ ಕಾರಣಕ್ಕೂ ಅವರನ್ನು ಮನೆಯ ಒಳಗಡೆ ಬರಲು ಬಿಡಬೇಡಿ. ಅವರೊಂದಿಗೆ ನಿಮ್ಮ ನೆರೆಮನೆಯವರ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಮನೆಯಲ್ಲಿ ಒಂಟಿ ಮಹಿಳೆಯರು ಇರುವ ಸಂದರ್ಭದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯ ಆವರಣದ ಒಳಗೆ ಸೇರಿಸ ಬೇಡಿ. ಮನೆಯ ಬಳಿ ಯಾರಾದರೂ ಅಪರಿಚಿತರು ಅಥವಾ ಮಾರಾಟಗಾರರು ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ನಂಬ್ರ 100 ಅಥವಾ 0820-2526444 ಗೆ ಸಂಪರ್ಕಿಸಿ ಎಂದು ವರದಿ ಮಾಡಿದ್ದನ್ನು ನಾವು ಕಂಡುಕೊಂಡೆವು.
ಹುಡುಕಾಟದಲ್ಲಿ ನಮಗೆ ಮತ್ತಾಲ್ಬ್ ಖಾನ್ ಎಂಬ ಎಕ್ಸ್ ಖಾತೆದಾರ ಜುಲೈ 3, 2019ರಂದು "ಹೈದರಾಬಾದ್ ಪೋಲೀಸರನ್ನು ಟ್ಯಾಗ್ ಮಾಡಿ ಈ ಸುದ್ದಿಯ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ಕೇಳಿ ಹೈದರಾಬಾದ್ ಪೊಲೀಸರನ್ನು
ಟ್ಯಾಗ್ ಮಾಡಿದ್ದನ್ನು ನಾವು ಕಂಡುಕೊಂಡೆವು. ಈ ಪೋಸ್ಟ್ಗೆ ಹೈದರಾಬಾದ್ ಪೊಲೀಸರು ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಉತ್ತರಿಸಿದ್ದನ್ನು ನಾವು ಕಂಡುಕೊಂಡೆವು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ಆದ ಸುದ್ದಿ ಇತ್ತೀಚಿನದಲ್ಲ. ಜುಲೈ 2019ರಲ್ಲಿ ಮಂಗಳೂರಿನ ಬಜ್ಪೆ ಪೊಲೀಸರು ಮನೆಗಳನ್ನು ದರೋಡೆ ಮಾಡಲು ಕಂಬಳಿ ಮಾರಾಟಗಾರರಂತೆ ಬರುತ್ತಿರುವ ಇರಾನಿನ ಗ್ಯಾಂಗ್ ಬಗ್ಗೆ ನೀಡಿದ ಎಚ್ಚರಿಕೆಯನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.