ಫ್ಯಾಕ್ಟ್ಚೆಕ್: ಭಾರತೀಯ ರಿಸರ್ವ್ ಬ್ಯಾಂಕ್ ₹250, ₹500, ₹1,000, ₹10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ
ಭಾರತೀಯ ರಿಸರ್ವ್ ಬ್ಯಾಂಕ್ ₹250, ₹500, ₹1,000, ₹10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ

Claim :
ಭಾರತೀಯ ರಿಸರ್ವ್ ಬ್ಯಾಂಕ್ ₹250, ₹500, ₹1,000, ₹10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಲಿದೆFact :
ವೈರಲ್ ಆದ ಪೊಸ್ಟ್ಗಳಲ್ಲಿ ಕಾಣುವ ನಾಣ್ಯಗಳನ್ನು ಎಐ ಮೂಲಕ ರಚಿಸಲಾಗಿದೆ
ಭಾರತೀಯ ರೂಪಾಯಿಗೆ ಸಂಬಂಧಿಸಿದಂತೆ ಕೆಲವು ನಕಲಿ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ₹250, ₹500, ₹1,000, ₹10,000 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಜೂನ್ 03. 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼNow ₹250 coin is being launched in India. How many people agree with this coin?ʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈಗ ಭಾರತದಲ್ಲಿ ₹250 ಮೌಲ್ಯದ ನಾಣ್ಯ ಬಿಡುಗಡೆಯಾಗುತ್ತಿದೆ. ಈ ನಾಣ್ಯವನ್ನು ಎಷ್ಟು ಜನರು ಒಪ್ಪುತ್ತಾರೆ ಎಂಬುದನ್ನು ಅನುಸರಿಸಿ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 05, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ₹500 ರೂಪಾಯಿಯ ನಾಣ್ಯದ ಚಿತ್ರವನ್ನು ಹಂಚಿಕೊಂಡು ʼNow 500 five hundred coin is being launched in India. How many people agree with this coin?ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈಗ ಭಾರತದಲ್ಲಿ ₹500 ಮೌಲ್ಯದ ನಾಣ್ಯ ಬಿಡುಗಡೆಯಾಗುತ್ತಿದೆ. ಈ ನಾಣ್ಯವನ್ನು ಎಷ್ಟು ಜನರು ಒಪ್ಪುತ್ತೀರಾʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 02, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ₹1000 ಮೌಲ್ಯದ ನಾಣ್ಯವನ್ನು ಹಂಚಿಕೊಂಡು ʼNow 1000 one thousand coin is being launched in India. How many people agree with this coin will soon reach the marketʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈಗ ಭಾರತದಲ್ಲಿ ಸಾವಿರ ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆಯಾಗಲಿದೆ. ಇದನ್ನು RBI ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿದೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಜೂನ್ 02, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ₹10,000 ರೂಪಾಯಿಯ ನಾಣ್ಯದ ಚಿತ್ರವನ್ನು ಹಂಚಿಕೊಂಡು ʼNow a coin worth 10,000 Das thousand is being launched in India. How many people agree with this coin follows like share subscribe ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈಗ ಭಾರತದಲ್ಲಿ 10,000 ಹತ್ತು ಸಾವಿರ ಮೌಲ್ಯದ ನಾಣ್ಯ ಬಿಡುಗಡೆಯಾಗುತ್ತಿದೆ. ಈ ನಾಣ್ಯವನ್ನು ಎಷ್ಟು ಜನರು ಒಪ್ಪುತ್ತಾರೆ ಎಂಬುದನ್ನು ಅನುಸರಿಸಿ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡಿರುವುದನ್ನು ನೋಡಬಹುದು. ಈ ಪೋಸ್ಟ್ನಲ್ಲಿ ಜನರಿಗೆ ಈ ನಾಣ್ಯದ ಬಗ್ಗೆ ಒಪ್ಪಿಗೆಯನ್ನು ಕೇಳಲಾಗಿದೆ, ಇದರಿಂದಾಗಿ ಜನಸಾಮಾನ್ಯರಲ್ಲಿ ಗೊಂದಲ ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಭಾರತ ಸರ್ಕಾರ ಅಂತಹ ಯಾವುದೇ ನಾಣ್ಯವನ್ನು ಬಿಡುಗಡೆ ಮಾಡಿಲ್ಲ. ವೈರಲ್ ಆದ ನಾಣ್ಯಗಳನ್ನು ಎಐ ಟೂಲ್ನ ಬಳಸಿ ರಚಿಸಲಾಗಿದೆ.
ನಾವು ವೈರಲ್ ಆದ ಪೊಸ್ಟ್ಗೆ ಸಂಬಂಧಿಸಿದ ಕೆಲವು ಪ್ರಮುಖ ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದವು. ಹುಡುಕಾಟದಲ್ಲಿ ನಮಗೆ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ ನಿಜವಾಗಿದ್ದರೆ ಆ ಕುರಿತು ಹಲವು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಹೀಗಾಗಿ ನಮಗೆ ₹250, ₹500, ₹1,000, ₹10,000 ರೂಪಾಯಿಯ ನಾಣ್ಯದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡವು
ನಾವು ನಾವು ಆರ್ಬಿಐ ವೆಬ್ಸೈಟ್ನಲ್ಲಿ ಹುಡುಕಿದೆವು. ಅಲ್ಲಿಯೂ ನಮಗೆ ಅಂತಹ ಯಾವುದೇ ಮಾಹಿತಿ ಸಿಗಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಾರ್ಷಿಕ ವರದಿಯಲ್ಲಿ, ಬ್ಯಾಂಕ್ ಈಗ ಎರಡು, ಐದು ಮತ್ತು 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಚಲಾವಣೆಯಲ್ಲಿರುವ ನಾಣ್ಯಗಳಲ್ಲಿ 50 ಪೈಸೆ, ಒಂದು ರೂಪಾಯಿ, 2 ರೂಪಾಯಿ, ಐದು ರೂಪಾಯಿ, 10 ಮತ್ತು 20 ರೂಪಾಯಿ ನಾಣ್ಯಗಳು ಸೇರಿವೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ.
ಮೇ 29, 2025ರಂದು ʼನ್ಯೂಸ್ 18ʼ ವೆಬ್ಸೈಟ್ನಲ್ಲಿ ʼCurrency Printing Costs Surge 25% In 1 Year, Rs 2, Rs 5, Rs 2,000 Notes Stopped: RBI Reportʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನOಡಬಹುದು. ವರದಿಯಲ್ಲಿ ʼಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ವರ್ಷಕ್ಕಿಂತ ನೋಟು ಉತ್ಪಾದನಾ ವೆಚ್ಚದಲ್ಲಿ 25% ರಷ್ಟು ತೀವ್ರ ಏರಿಕೆಯನ್ನು ಬಹಿರಂಗಪಡಿಸಿರುವುದರಿಂದ, ನಗದು ಮುದ್ರಣವು ಈಗ ಗಮನಾರ್ಹವಾಗಿ ದುಬಾರಿಯಾಗಿದೆ. ಗುರುವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ, 2024-25ರ ಆರ್ಥಿಕ ವರ್ಷದಲ್ಲಿ ಕರೆನ್ಸಿ ಮುದ್ರಣಕ್ಕಾಗಿ 6,372.8 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಕೇಂದ್ರ ಬ್ಯಾಂಕ್ ಬಹಿರಂಗಪಡಿಸಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ 5,101.4 ಕೋಟಿ ರೂ.ಗಳಷ್ಟಿತ್ತು. ಕಚ್ಚಾ ವಸ್ತುಗಳ ಬೆಲೆಗಳಲ್ಲಿನ ಹಣದುಬ್ಬರ, ವರ್ಧಿತ ಭದ್ರತಾ ವೈಶಿಷ್ಟ್ಯಗಳು ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಳೀಯಗೊಳಿಸುವ ಸಂಘಟಿತ ಪ್ರಯತ್ನ ಸೇರಿದಂತೆ ಅಂಶಗಳ ಸಂಯೋಜನೆಯಿಂದಾಗಿ ವೆಚ್ಚಗಳ ಏರಿಕೆ ಕಂಡುಬಂದಿದೆ. ನೋಟು ಮುದ್ರಣದಲ್ಲಿ ಬಳಸಲಾಗುವ ಎಲ್ಲಾ ಪ್ರಾಥಮಿಕ ವಸ್ತುಗಳು, ಕಾಗದದಿಂದ ಶಾಯಿ ಮತ್ತು ಇತರ ಭದ್ರತಾ ಘಟಕಗಳನ್ನು ಈಗ ದೇಶೀಯವಾಗಿ ಪಡೆಯಲಾಗುತ್ತಿದೆ ಎಂದು ಆರ್ಬಿಐ ಗಮನಿಸಿದೆ, ಇದು ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಈ ಪರಿವರ್ತನೆಯು ಭದ್ರತಾ ತಂತ್ರಜ್ಞಾನಕ್ಕೆ ನವೀಕರಣಗಳೊಂದಿಗೆ ಸೇರಿಕೊಂಡು ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡಿದೆ. ಈ ವರದಿಯು ಆರ್ಬಿಐ ಮೂರು ಮುಖಬೆಲೆಯ ನೋಟುಗಳಾದ ರೂ. 2, ರೂ. 5 ಮತ್ತು ರೂ. 2,000 ಗಳ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ದೃಢಪಡಿಸಿದೆ. ಈ ನೋಟುಗಳು ಇನ್ನೂ ಸೀಮಿತ ಚಲಾವಣೆಯಲ್ಲಿರಬಹುದು, ಆದರೆ ಯಾವುದೇ ಹೊಸ ಬ್ಯಾಚ್ಗಳನ್ನು ಉತ್ಪಾದಿಸಲಾಗುತ್ತಿಲ್ಲʼ ಎಂದು ವರದಿ ಮಾಡಿರುವುದನ್ನು ನೋಡಬಹುದು.
ಆರ್ಬಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ , ಮುಂಬೈ, ಹೈದರಾಬಾದ್, ಕೋಲ್ಕತ್ತಾ ಮತ್ತು ನೋಯ್ಡಾದಲ್ಲಿರುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್ಪಿಎಂಸಿಐಎಲ್) ನ ನಾಲ್ಕು ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಇದಾದ ನಂತರ, ಈ ನಾಣ್ಯಗಳನ್ನು ಆರ್ಬಿಐ ಬಿಡುಗಡೆ ಮಾಡುತ್ತದೆ ಎಂದು ತಿಳಿದು ಬಂದಿದೆ.
ವೈರಲ್ ಫೋಟೋವನ್ನು ಎಐ ಡಿಟೆಕ್ಟರ್ ಟೂಲ್ ಸಹಾಯದಿಂದ ಪರಿಶೀಲಿಸಲಾಗಿದ್ದು, ಈ ಚಿತ್ರ ನಕಲಿಯದ್ದು ಎಂದು ಕಂಡುಬಂದಿದೆ. ಸ್ಟೇಬಲ್ ಡಿಫ್ಯೂಷನ್, ಮಿಡ್ಜರ್ನಿ ಮತ್ತು ಡೆಲ್ಇ 2 ನಂತಹ AI ಪರಿಕರಗಳನ್ನು ಬಳಸಿಕೊಂಡು ಈ ಚಿತ್ರವನ್ನು ರಚಿಸಲಾಗಿದೆ. ಹೀಗಾಗಿ ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ₹250ರೂ ಚಿತ್ರ 64% ಪ್ರತಿಶಾತದಷ್ಟು, ₹500ರೂ ನಾಣ್ಯದ ಚಿತ್ರ 99.3%, ₹1,000ರೂ ನಾಣ್ಯದ ಚಿತ್ರ 84.4% ಮತ್ತು ₹10,000 ನಾಣ್ಯದ ಚಿತ್ರವನ್ನು 99.9% ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
Wasitai.com ನಲ್ಲಿ ಚಿತ್ರಗಳನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.
ಇದರಿಂದ ಸಾಭೀತಾಗಿದ್ದೆನೆಂದರೆ. ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಭಾರತ ಸರ್ಕಾರ ಅಂತಹ ಯಾವುದೇ ನಾಣ್ಯವನ್ನು ಬಿಡುಗಡೆ ಮಾಡಿಲ್ಲ. ವೈರಲ್ ಆದ ನಾಣ್ಯಗಳನ್ನು ಎಐ ಟೂಲ್ನ ಬಳಸಿ ರಚಿಸಲಾಗಿದೆ.