ಫ್ಯಾಕ್ಟ್ಚೆಕ್: ಮುಖೇಶ್ ಅಂಬಾನಿ ಮಧುಮೇಹದ ಬಗ್ಗೆ ಮಾತನಾಡಿದ್ದಾರೆ ಎಂದು ಎಐ ಆಡಿಯೋ ಹಂಚಿಕೆ
ಮುಖೇಶ್ ಅಂಬಾನಿ ಮಧುಮೇಹದ ಬಗ್ಗೆ ಮಾತನಾಡಿದ್ದಾರೆ ಎಂದು ಎಐ ಆಡಿಯೋ ಹಂಚಿಕೆ

Claim :
ಮುಖೇಶ್ ಅಂಬಾನಿ ಮಧುಮೇಹದ ಬಗ್ಗೆ ಮಾತನಾಡಿದ್ದಾರೆFact :
ಮುಖೇಶ್ ಅಂಬಾನಿಯವರ ಆಡಿಯೊ ಎಐ ಸಹಾಯದಿಂದ ರಚಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮಧುಮೇಹವನ್ನು ಹೇಗೆ ನಿವಾರಿಸುವುದು ಎಂದು ಚರ್ಚಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ಲಿಪ್ನಲ್ಲಿ, ಅಂಬಾನಿ ಈ ಸ್ಥಿತಿಗೆ ಸಂಬಂಧಿಸಿದ ಆರೋಗ್ಯ ಸಲಹೆಯನ್ನು ಹಂಚಿಕೊಂಡಂತೆ ಕಾಣುತ್ತದೆ.
ಏಪ್ರಿಲ್ 09, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು, ʼअगर आप कल सुबह अपने रक्त शर्करा स्तर को 90 मिलीग्राम प्रति डेसिलिटर के साथ जगना चाहते हैं, मेटफोर्मिन या अन्य दवाओं को छोड़ना चाहते हैं, अपनी पसंदीदा खाद्य पदार्थों को फिर से खाना चाहते हैं, ऊर्जा से भरपूर रहना चाहते हैं, खेलकूद करना चाहते हैं, अपने परिवार और दोस्तों के साथ समय बिताना चाहते हैं बिना मधुमेह के परिणामों से डर के, तो मैं आपको सिर्फ 2 मिनट में समाधान दूंगा।ʼ ಎಂಬ ಶೀರ್ಷಿಕೆಯನ್ನೀಡಿ ಮುಖೇಶ್ ಅಂಬಾನಿ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೀವು ಪ್ರತಿ ದಿನ 90 ಮಿಗ್ರಾಂ ಡೆಸಿಲೇಟರ್ ಸೇವಿಸಿ. ಇದರಿಂದ ನೀವು ಮೆಟೋಫಾರ್ಮಿನ್ ಅಥವಾ ನಿಮ್ಮ ಔಷಧಿಗಳನ್ನು ಸೇವಿಸುವ ಅವಶ್ಯಕತೆ ಇರುವುದಲ್ಲ. ಹಾಗೆ ನಿಮ್ಮ ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಲು, ಶಕ್ತಿಯಿಂದ ಇರಲು , ಕ್ರೀಡೆಗಳನ್ನು ಆಡಲು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಧುಮೇಹದ ಪರಿಣಾಮಗಳ ಭಯವಿಲ್ಲದೆ ಸಮಯ ಕಳೆಯಲು ಬಯಸಿದರೆ, ನಿಮಗೆ ನಾನು ಎರಡೇ ನಿಮಿಷದಲ್ಲಿ ಪರಿಹಾರ ನೀಡುತ್ತೇನೆʼ ಎಂದು ಬರೆದಿರುವುದನ್ನು ನೋಡಬಹುದು ಎಂದು ವೀಡಿಯೊದಲ್ಲಿ ಮುಖೇಶ್ ಅಂಬಾನಿ ಮಧುಮೇಹದ ಬಗ್ಗೆ ಮಾತನಾಡುವುದನ್ನು ಕೇಳಬಹುದು. ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರು ಮಧುಮೇಹವನ್ನು ನಿವಾರಿಸುವ ಬಗ್ಗೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರು ಮಧುಮೇಹದ ಬಗ್ಗೆ ಮಾತನಾಡಿರುವ ವಿಡಿಯೋ ನಿಜವಲ್ಲ. ವೈರಲ್ ವೀಡಿಯೊದಲ್ಲಿರುವ ಮುಖೇಶ್ ಅಂಬಾನಿಯವರ ಆಡಿಯೊ ಎಐ ಸಹಾಯದಿಂದ ರಚಿಸಲಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಮಗೆ, ಡಿಸಂಬರ್, 15, 2020ರಂದು ರಿಲಯನ್ಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ ʼರಿಲಯನ್ಸ್ ಅಪ್ಡೇಟ್ಸ್ʼನಲ್ಲಿ ವೈರಲ್ ಆದ ವಿಡಿಯೋವಿನ ಪೂರ್ತಿ ಆವೃತ್ತಿಯನ್ನು ಹಂಚಿಕೊಂಡಿರುವುದನ್ನು ನೋಡಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ ʼSh Mukesh Ambani and Sh Mark Zuckerberg in discussion at Facebook Fuel For India 2020ʼ ಎಂದು ಬರೆದು ಹಂಚಿಕೊಂಡಿರುವುದನ್ನು ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼSh Mukesh Ambani, Chairman and Managing Director, Reliance Industries Ltd, and Sh Mark Zuckerberg, Chairman and CEO, Facebook share their excitement about India, and how digital can accelerate economic progressʼ ಎಂದು ಹಂಚಿಕೊಂಡಿರುವುದನ್ನು ನೋಡಬಹುದು. ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದಾಗ ʼರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ ಮತ್ತು ಫೇಸ್ಬುಕ್ನ ಅಧ್ಯಕ್ಷ ಮತ್ತು ಸಿಇಒ ಶ್ರೀ ಮಾರ್ಕ್ ಜುಕರ್ಬರ್ಗ್ ಭಾರತದ ಬಗ್ಗೆ ಮತ್ತು ಡಿಜಿಟಲ್ ಆರ್ಥಿಕ ಪ್ರಗತಿಯನ್ನು ಹೇಗೆ ವೇಗಗೊಳ್ಳುತ್ತದೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂಪೂರ್ಣ ವೀಡಿಯೊದಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರನ್ನು ವೀಡಿಯೊದ ಆರಂಭದಲ್ಲಿ ಕಾಣಬಹುದು ಮತ್ತು ಅದರ ನಂತರ ಮುಖೇಶ್ ಅಂಬಾನಿಯನ್ನು ಕಾಣಬಹುದು. ವೈರಲ್ ಕ್ಲಿಪ್ ಅನ್ನು ವೀಡಿಯೊದಲ್ಲಿ 4 ನಿಮಿಷಗಳ ನಂತರ ನೋಡಬಹುದು. ಇಲ್ಲಿ ಅವರು ಕೋವಿಡ್ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ಡಿಸಂಬರ್, 15, 2020ರಂದು ಸಿಎನ್ಎನ್ ನ್ಯೂಸ್-18 ಯೂಟ್ಯೂಬ್ ಚಾನೆಲ್ನಲ್ಲಿ ʼMark Zuckerberg EXCLUSIVE Interview With Mukesh Ambani | CNN News18ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನ ಕ್ಯಾಪ್ಷನ್ನಲ್ಲಿ “ಭಾರತದ ಡಿಜಿಟಲ್ ಕನಸು ಮತ್ತು ಸಾಂಕ್ರಾಮಿಕ ರೋಗದ ನಡುವೆ ಭಾರತದ ಬೆಳವಣಿಗೆಯನ್ನು ರೂಪಿಸುವುದು ಮತ್ತು ಫೇಸ್ಬುಕ್ ಈ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡುತ್ತಿದೆ ಎಂಬುದರ ಕುರಿತು RIL ಅಧ್ಯಕ್ಷ ಮುಖೇಶ್ ಅಂಬಾನಿ ಅವರೊಂದಿಗೆ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ನಡೆಸಿದ ವಿಶೇಷ ಸಂಭಾಷಣೆಯನ್ನು ವೀಕ್ಷಿಸಿ” ಎಂದು ಬರೆಯಲಾಗಿದೆ.
ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೂಲ ವಿಡಿಯೋಗೂ ವೈರಲ್ ವಿಡಿಯೋಗೂ ಸಾಕಷ್ಟು ವ್ಯತ್ಯಾಸವಿರುವುದು ನಮಗೆ ಸ್ಪಷ್ಟವಾಗಿ ಕಂಡು ಬಂದಿತು. ವಿಡಿಯೋವಿನಲ್ಲಿ ಕೆಲವು ಭಾಗಗಳಲ್ಲಿ ಧ್ವನಿಯಲ್ಲಿ ಮತ್ತು ಮಾತನಾಡುವಾಗ ಲಿಪ್ ಮೂಮೆಂಟ್ಗಳಲ್ಲಿ ಲೋಪಗಳು ಕಂಡು ಬಂದಿವೆ. ಈ ಲೋಪಗಳು ಬಹುವಾಗಿ ಎಐನಿಂದು ಧ್ವನಿಯನ್ನು ಬದಲಾಯಿಸಿದಾಗ ಸಾಧಾರಣವಾಗಿ ಕಂಡು ಬರುತ್ತವೆ. ಹಾಗಾಗಿ ವೈರಲ್ ವಿಡಿಯೋವನ್ನು ಎಐ ಬಳಸಿ ಎಡಿಟ್ ಮಾಡಿರುವುದು ನಮಗೆ ಸ್ಪಷ್ಟವಾಗಿದೆ.
ಹೀಗಾಗಿ ನಾವು ಹೈವ್ ಎಐ ಟೂಲ್ನಲ್ಲಿ ವಿಡಿಯೋವಿನ ಸಂಪೂರ್ಣ ಆಡಿಯೊ ಟ್ರ್ಯಾಕ್ನ್ನು ಹಂಚಿಕೊಂಡೆವು. ಫಲಿತಾಂಶವಾಗಿ ವೈರಲ್ ಆದ ವಿಡಿಯೋ ಎಐ ಮೂಲಕ ರಚಿಸಲಾಗಿಗೆ ಎಂದು ಸ್ಪಷ್ಟವಾಗಿತು. ಇನ್ನು ಡೀಪ್ಫೇಕ್-ಒ-ಮೀಟರ್ ಎಂಬ ವೆಬ್ಸೈಟ್ನಲ್ಲಿ ಹುಡುಕಾಟ ನಡೆಸಿದಾಗ ವೈರಲ್ ಆದ ವಿಡಿಯೋದಲ್ಲಿ ಬರುವ ಆಡಿಯೋದಲ್ಲಿ ಬಳಸಲಾದ ಹಲವಾರು ವರ್ಗೀಕರಣಗಳಲ್ಲಿ, ಕೇವಲ ಎರಡು ಮಾತ್ರ ಹೆಚ್ಚಿನ ವಿಶ್ವಾಸಾರ್ಹತೆಯ ಅಂಕಗಳನ್ನು ನೀಡಿದರೆ, ಉಳಿದವು ಕಡಿಮೆ ವಿಶ್ವಾಸಾರ್ಹತೆಯನ್ನು ತೋರಿಸಿದವು.
ಹಿಯಾ ಎಂಬ ಮತ್ತೋಂದು ಎಐ ಆಟಿಯೋ ಕಂಡುಹಿಡಿಯುವ ವೆಬ್ಸೈಟ್ ಟೂಲ್ನಲ್ಲಿ ವಿಡಿಯೋವಿನಲ್ಲಿರುವ ಆಡಿಯೋವನ್ನು ಹಂಚಿಕೊಂಡೆವು. AI ಬಳಸಿ ಆಡಿಯೊವನ್ನು ರಚಿಸಲಾಗಿದೆ ಅಥವಾ ಗಮನಾರ್ಹವಾಗಿ ಮಾರ್ಪಡಿಸಲಾಗಿದೆ ಎಂದು ದೃಢಪಡಿಸಲಾಗಿದೆ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರು ಮಧುಮೇಹದ ಬಗ್ಗೆ ಮಾತನಾಡಿರುವ ವಿಡಿಯೋ ನಿಜವಲ್ಲ. ವೈರಲ್ ವೀಡಿಯೊದಲ್ಲಿರುವ ಮುಖೇಶ್ ಅಂಬಾನಿಯವರ ಆಡಿಯೊ ಎಐ ಸಹಾಯದಿಂದ ರಚಿಸಲಾಗಿದೆ.

