ಫ್ಯಾಕ್ಟ್ಚೆಕ್: 40 ವರ್ಷಗಳಲ್ಲಿ ಒಬ್ಬ ವ್ಯಕ್ತಿಯೂ ನನ್ನನ್ನು ಗೌರವಿಸಿಲ್ಲ ಎಂದು ರಾಹುಲ್ ಗಾಂಧಿಯವರ ಭಾಷಣದ ಒಂದು ಭಾಗವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ
40 ವರ್ಷಗಳಲ್ಲಿ ಒಬ್ಬ ವ್ಯಕ್ತಿಯೂ ನನ್ನನ್ನು ಗೌರವಿಸಿಲ್ಲ ಎಂದು ರಾಹುಲ್ ಗಾಂಧಿಯವರ ಭಾಷಣದ ಒಂದು ಭಾಗವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ

Claim :
40 ವರ್ಷಗಳಲ್ಲಿ ಒಬ್ಬ ವ್ಯಕ್ತಿಯೂ ನನ್ನನ್ನು ಗೌರವಿಸಿಲ್ಲ ಎಂದ ರಾಹುಲ್ ಗಾಂಧಿFact :
ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಸುಲ್ತಾನ್ಪುರದ ಚೇತ್ ರಾಮ್ ಮೋಚಿಯ ಬಗ್ಗೆ ಮಾತನಾಡುತ್ತಿದ್ದರು
ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಭಾಷಣದಲ್ಲಿ, ಕಳೆದ 40 ವರ್ಷಗಳಲ್ಲಿ ಯಾರೂ ತಮ್ಮನ್ನು ಗೌರವಿಸಿಲ್ಲ - ಕೇವಲ ಅವರ ತಂದೆ ಮಾತ್ರ ತಮಗೆ ಗೌರವ ಮತ್ತು ಗೌರವ ನೀಡಿದ್ದಾರೆ ಎಂದು ಗಾಂಧಿ ಹೇಳುವುದನ್ನು ಕೇಳಬಹುದು. ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ವಿಭಿನ್ನ ಕ್ಲಿಪ್ಗಳನ್ನು ಸೇರಿಸುವ ಮೂಲಕ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಅನೇಕ ಬಳಕೆದಾರರು ಈ ಹೇಳಿಕೆಯನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ.
ಏಪ್ರಿಲ್, 11, 2025ರಂದು ಫೇಸ್ಬುಕ್ ಬಳಕೆದಾರರೊಬ್ಬರು ʼಅಹಮದಾಬಾದ್-ಕಾಮಿಡಿ-ಶೋ. 40 ವರ್ಷಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ನನ್ನನ್ನು ಗೌರವಿಸಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಏಪ್ರಿಲ್ 11, 2025ರಂದು ಎಕ್ಸ್ ಖಾತೆದಾರರೊಬ್ಬರು ʼअहमदाबाद-कॉमेडी-शो | 40 साल मे किसी एक व्यक्ति ने मुझे इज्जत नही दी| ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. (ಆರ್ಕೈವ್)
ಮನೋಜ್ ಶ್ರೀವಾಸ್ತವ ಎಂಬ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಅಹಮದಾಬಾದ್ನಿಂದ ಬಂದಿದೆ ಎಂದು ಹೇಳಿಕೊಂಡು, "ಅಹಮದಾಬಾದ್ - ಹಾಸ್ಯ ಕಾರ್ಯಕ್ರಮ. 40 ವರ್ಷಗಳಲ್ಲಿ, ಒಬ್ಬ ವ್ಯಕ್ತಿಯೂ ನನಗೆ ಗೌರವ ನೀಡಿಲ್ಲ" ಎಂದು ಬರೆದಿದ್ದಾರೆ. ಈ ವ್ಯಕ್ತಿ ತನ್ನನ್ನು ತಾನು ಅವಮಾನಿಸಿಕೊಳ್ಳುವುದಕ್ಕೇ ಹುಟ್ಟಿದ್ದಾನೆ ಎಂದು ವೀಡಿಯೊದಲ್ಲಿ ಬರೆಯಲಾಗಿದೆ. (Archived)
ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಮತ್ತು ಶೂ ತಯಾರಕರಾದ ಚೇತ್ರಮ್ ಜಿ ಅವರ ನಡುವಿನ ಸಂಭಾಷಣೆ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವ ಸಣ್ಣ ವಿಡಿಯೋ ತುಣುಕನ್ನು ನಾವು ಕಂಡುಕೊಂಡೆವು. ವಿಡಿಯೋವಿಗೆ ಶೀರ್ಷಿಕೆಯಾಗಿ ʼजवाहरलाल नेहरू जी और महात्मा गांधी जी दोनों सच्चाई से मोहब्बत करते थे। सच्चाई से मोहब्बत करने वालों की पूरी लिस्ट है। उस लिस्ट में अंबेडकर जी, ज्योतिबा फुले जी, सावित्री बाई फुले जी, भगवान बुद्ध जी, गुरु नानक देव जी, बसवन्ना जी, नारायण गुरु जी, कबीर जी को जोड़ सकते हैं। ये संविधान हजारों साल पुराना है। इसमें उन सभी महापुरुषों की सोच शामिल है। जब आप संविधान हाथ में लेते हैं तो आप हजारों साल पुरानी विचारधारा की रक्षा करते हैं। लेकिन इसमें सावरकर की विचारधारा नहीं है, क्योंकि वो सच्चाई का सामना नहीं कर पाए। हमारा संविधान हिंदुस्तान की सच्चाई का रक्षक है और हमारे नेताओं ने जनता से जो सीखा, वो इस किताब में है। ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಇಬ್ಬರೂ ಸತ್ಯವನ್ನು ಪ್ರೀತಿಸುತ್ತಿದ್ದರು. ಸತ್ಯವನ್ನು ಪ್ರಾಮಾಣಿಕವಾಗಿ ಪ್ರೀತಿಸುವ ಜನರ ಸಂಪೂರ್ಣ ಪಟ್ಟಿ ಇದೆ. ನೀವು ಅಂಬೇಡ್ಕರ್ ಜಿ, ಜ್ಯೋತಿಬಾ ಫುಲೆ ಜಿ, ಸಾವಿತ್ರಿ ಬಾಯಿ ಫುಲೆರವರು, ಭಗವಾನ್ ಬುದ್ಧ ಜಿ, ಗುರುನಾನಕ್ ದೇವ್ ಜಿ, ಬಸವಣ್ಣ ಜಿ, ನಾರಾಯಣ ಗುರು ಜಿ, ಕಬೀರ್ ಜಿ ಅವರನ್ನು ಆ ಪಟ್ಟಿಗೆ ಸೇರಿಸಬಹುದು. ಈ ಸಂವಿಧಾನವು ಸಾವಿರಾರು ವರ್ಷಗಳಷ್ಟು ಹಳೆಯದು. ಇದರಲ್ಲಿ ಆ ಎಲ್ಲಾ ಮಹಾಪುರುಷರ ಚಿಂತನೆಯೂ ಸೇರಿದೆ. ನೀವು ಸಂವಿಧಾನವನ್ನು ಕೈಯಲ್ಲಿ ತೆಗೆದುಕೊಂಡಾಗ ನೀವು ಸಾವಿರ ವರ್ಷಗಳಷ್ಟು ಹಳೆಯ ಚಿಂತನೆಯನ್ನು ರಕ್ಷಿಸುತ್ತೀರಿ. ಆದರೆ ಅದರಲ್ಲಿ ಸಾವರ್ಕರ್ ಅವರ ಸಿದ್ಧಾಂತವಿಲ್ಲ, ಏಕೆಂದರೆ ಅವರು ಸತ್ಯವನ್ನು ಎದುರಿಸಲು ಸಾಧ್ಯವಾಗಲಿಲ್ಲ. ನಮ್ಮ ಸಂವಿಧಾನವು ಭಾರತದ ಸತ್ಯದ ರಕ್ಷಕ ಮತ್ತು ನಮ್ಮ ನಾಯಕರು ಸಾರ್ವಜನಿಕರಿಂದ ಕಲಿತದ್ದು ಈ ಪುಸ್ತಕದಲ್ಲಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ "ಸಂವಿಧಾನ್ ಸುರಕ್ಷಾ ಸಮ್ಮೇಳನ" (ಸಂವಿಧಾನ ರಕ್ಷಣಾ ಸಮ್ಮೇಳನ, ಇಂಗ್ಲಿಷ್ನಲ್ಲಿ ಅರ್ಥ) ಎಂಬ ಹ್ಯಾಶ್ಟ್ಯಾಗ್ ಅನ್ನು ಸೇರಿಸಲಾಗಿತ್ತು.
ನಂತರ ನಾವು ಈ ವಿಡಿಯೋದಲ್ಲಿ ನೀಡಿರುವ ಹ್ಯಾಷ್ಟ್ಯಾಗ್ನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊಂದು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಏಪ್ರಿಲ್ 7 ರ ಈ ವೀಡಿಯೊದಲ್ಲಿ, ವೈರಲ್ ವೀಡಿಯೊದ ಭಾಗವನ್ನು ಟೈಮ್ಲೈನ್ನ ಒಂದು ನಿಮಿಷದ ನಂತರ ಕೇಳಬಹುದು. ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ರಾಹುಲ್ ಗಾಂಧಿ ಸುಲ್ತಾನ್ಪುರದ ನಿವಾಸಿ ಚೇತ್ರಮ್ ಅವರ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಅವರು ನಲವತ್ತು ವರ್ಷಗಳಲ್ಲಿ ಚೇತ್ರಮ್ ಅವರಿಗೆ ಯಾರೂ ಗೌರವ ನೀಡದಿರುವ ಕುರಿತು ಮಾತನಾಡಿರುವುದು ಕಂಡು ಬಂದಿದೆ.
ಏಪ್ರಿಲ್ 7, 2025ರಂದು ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ರಾಹುಲ್ ಗಾಂಧಿಯ ವೈರಲ್ ಹೇಳಿಕೆಯನ್ನು ಟೈಮ್ ಸ್ಟ್ಯಾಂಪ್ನಲ್ಲಿ 1:00:38 ರಿಂದ 1:02:37 ರವರೆಗೆ ಕೇಳಬಹುದು. ಇಲ್ಲಿ, ಗಾಂಧಿಯವರು ಸುಲ್ತಾನ್ಪುರಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡುತ್ತಿದ್ದಾರೆ, ಅಲ್ಲಿ ಅವರು ಚಮ್ಮಾರ ಚೇತ್ ರಾಮ್ ಮೋಚಿ ಎಂಬ ವ್ಯಕ್ತಿಯನ್ನು ಭೇಟಿಯಾದರುನಾನು ಉತ್ತರ ಪ್ರದೇಶದ ಸುಲ್ತಾನ್ಪುರಕ್ಕೆ ಹೋದಾಗ, ನಾನು ಶೂ ತಯಾರಕರಾದ ಚೇತ್ರಮ್ ಜಿ ಅವರನ್ನು ಭೇಟಿಯಾದೆ. 40 ನಿಮಿಷಗಳ ಸಭೆಯಲ್ಲಿ, ಅವರಿಗೆ ಕೌಶಲ್ಯದ ಕೊರತೆಯಿಲ್ಲ ಎಂದು ನಾನು ನೋಡಿದೆ. ಅವರು ಯಾವುದೇ ರೀತಿಯ ಶೂ ತಯಾರಿಸಬಹುದು ಮತ್ತು ಅವರು 40 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಈ 40 ವರ್ಷಗಳಲ್ಲಿ ನನ್ನ ತಂದೆಯನ್ನು ಹೊರತುಪಡಿಸಿ ಯಾರೂ ನನ್ನನ್ನು ಗೌರವಿಸಿಲ್ಲ ಎಂದು ಚೇತ್ರಮ್ ಜಿ ಹೇಳಿದರು. ನಾನು ಶೂ ತಯಾರಿಸುವ ಯಂತ್ರವನ್ನು ಪಡೆದರೆ, ನನ್ನ ಕೆಲಸ ದ್ವಿಗುಣಗೊಳ್ಳುತ್ತದೆ ಎಂದು ಚೇತ್ರಮ್ ಜಿ ಹೇಳಿದರು. ಈ ಸಂಭಾಷಣೆಯ ನಂತರ, ನಾವು ಅವರಿಗೆ ಒಂದು ಯಂತ್ರವನ್ನು ತೆಗೆದುಕೊಟ್ಟೆವು. ಮೂರು ತಿಂಗಳ ನಂತರ, ಚೇತ್ರಮ್ ಜಿ ನನಗೆ ಕರೆ ಮಾಡಿ ಈಗ ನನ್ನ ಬಳಿ ಎರಡು ಅಂಗಡಿಗಳಿವೆ ಮತ್ತು 10 ಜನರು ನನಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಈ ಯಂತ್ರದಿಂದ ನಾನು ಇನ್ನೂ 4-5 ಅಂಗಡಿಗಳನ್ನು ತೆರೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಮತ್ತು ಶೂ ತಯಾರಕರಾದ ಚೇತ್ರಮ್ ಜಿ ಅವರ ನಡುವಿನ ಸಂಭಾಷಣೆಯ ಬಗ್ಗೆ ವಿವರಿಸಿರುವುದನ್ನು ನೋಡಬಹುದು.
ʼದಿ ಭಾರತ್ ನೌ' ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮೂಲ ವೀಡಿಯೊವನ್ನು ಸಹ ಕಂಡುಕೊಂಡಿದ್ದೇವೆ. ಏಪ್ರಿಲ್ 8 ರಂದು ಅಪ್ಲೋಡ್ ಮಾಡಲಾದ ಈ ವೀಡಿಯೊ ಸುದ್ದಿಯಲ್ಲಿ, ರಾಹುಲ್ ಗಾಂಧಿ ಪಾಟ್ನಾದ ಸುಲ್ತಾನ್ಪುರದ ಚೇತ್ರಮ್ ಅವರ ಕಥೆಯನ್ನು ವಿವರಿಸಿದ್ದಾರೆ ಎಂದು ಹೇಳಲಾಗಿದೆ.
ಮೂಲ ವಿಡಿಯೋದಲ್ಲಿ, ರಾಹುಲ್ ಗಾಂಧಿ ಸುಲ್ತಾನ್ಪುರದಲ್ಲಿ ಚೇತ್ರಮ್ ಅವರೊಂದಿಗಿನ ಭೇಟಿಯ ಬಗ್ಗೆ ಮಾತನಾಡುತ್ತಿದ್ದರು. ಆ ಭಾಗವನ್ನು ತಿರುಚಿ ಈ ವೈರಲ್ ವಿಡಿಯೋವನ್ನು ತಯಾರಿಸಲಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕೆಲವು ಪಕ್ಷಗಳು ಹೆದರುತ್ತಿವೆ. ಅದಕ್ಕಾಗಿಯೇ ರಾಹುಲ್ ಗಾಂಧಿಯವರ ವೀಡಿಯೊವನ್ನು ಟ್ರೋಲ್ ಆರ್ಮಿ ಕಾರ್ಖಾನೆ ತಿರುಚಿ ವೈರಲ್ ಮಾಡುತ್ತಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ವಿಡಿಯೋ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಮತ್ತು ಶೂ ತಯಾರಕರಾದ ಚೇತ್ರಮ್ ಜಿ ಅವರ ನಡುವಿನ ಸಂಭಾಷಣೆ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ.

