ಫ್ಯಾಕ್ಟ್ಚೆಕ್: ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಆದಂಪುರದಲ್ಲಿ ಹಾನಿಗೊಳಗಾಗಿದೆ 2023ರ ಫೋಟೋ ಹಂಚಿಕೆ
ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಆದಂಪುರದಲ್ಲಿ ಹಾನಿಗೊಳಗಾಗಿದೆ 2023ರ ಫೋಟೋ ಹಂಚಿಕೆ

Claim :
ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಆದಂಪುರದಲ್ಲಿ ಹಾನಿಗೊಳಗಾಗಿದೆFact :
2023ರ ಕ್ರೈಮಿಯಾ ವಾಯುನೆಲೆ ಸ್ಫೋಟದ ಫೋಟೋವನ್ನು ಆದಂಪುರದಲ್ಲಿ ನಡೆದ ಘಟನೆ ಎಂದು ಹಂಚಿಕೆ
ಭಾರತೀಯ ಸಶಸ್ತ್ರ ಪಡೆಗಳು ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂದೂರ್’ನ್ನು ಪ್ರಾರಂಭಿಸಿದವು. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಸಮಯದಲ್ಲಿ, ದೊಡ್ಡ ಬೆಂಕಿಯ ಚೆಂಡು ಮತ್ತು ದಟ್ಟವಾದ ಹೊಗೆಯೊಂದಿಗೆ ಬೃಹತ್ ಸ್ಫೋಟವನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದು ಆಡಂಪುರದಲ್ಲಿರುವ ಭಾರತೀಯ S-400 ವಾಯು ರಕ್ಷಣಾ ವ್ಯವಸ್ಥೆಯ ತಾಣವನ್ನು ಅಪರಿಚಿತ ಕ್ಷಿಪಣಿಗಳು ಮತ್ತು ಡ್ರೋನ್ಗಳು ಹೊಡೆದುರುಳಿಸಿವೆ ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಮೇ 08, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼ#BREAKING News* Indian S-400 Air Defense System site in Adampur hit by unknown😎 missiles and drones. Details will be delivered later. #ISPR #NBRʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ#ಬ್ರೇಕಿಂಗ್ ನ್ಯೂಸ್. ಆಡಂಪುರದಲ್ಲಿರುವ ಭಾರತೀಯ S-400 ವಾಯು ರಕ್ಷಣಾ ವ್ಯವಸ್ಥೆಯ ತಾಣವನ್ನು ಅಪರಿಚಿತ ಕ್ಷಿಪಣಿಗಳು ಮತ್ತು ಡ್ರೋನ್ಗಳು ಹೊಡೆದುರುಳಿಸಿವೆ #ISPR #NBR" ಎಂಬ ಶೀರ್ಷಿಕೆಯೊಮದಿಗೆ ಹಂಚಿಕೊಂಡಿರುವುದನ್ನು ನೋಡಬಹುದು
ವೈರಲ್ ಆದ ಫೋಟೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮೇ 08, 2025ರಂದು ಮತ್ತೋಂದು ಫೇಸ್ಬುಕ್ ಖಾತೆಯಲ್ಲಿ ʼ#BREAKING: Indian S-400 air defense system site in Adampur has reportedly been hit by unknown missiles and drones.
● A system India bragged about as "impenetrable" has now been breached and neutralized.
● Serious questions arise on Indian air defence capabilities after this high-value Russian asset was successfully targeted.
● Indian media silent clearly scrambling to contain the fallout.ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ#BREAKING: ಆಡಂಪುರದಲ್ಲಿರುವ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯ ತಾಣದ ಮೇಲೆ ಅಪರಿಚಿತ ಕ್ಷಿಪಣಿಗಳು ಮತ್ತು ಡ್ರೋನ್ಗಳು ದಾಳಿ ನಡೆಸಿವೆ ಎಂದು ವರದಿಯಾಗಿದೆ.
● ಭಾರತ ಹೆಮ್ಮೆಪಡುತ್ತಿದ್ದ ವ್ಯವಸ್ಥೆಯನ್ನು ಈಗ ಉಲ್ಲಂಘಿಸಿ ತಟಸ್ಥಗೊಳಿಸಲಾಗಿದೆ.
● ಈ ಹೆಚ್ಚಿನ ಮೌಲ್ಯದ ರಷ್ಯಾದ ಆಸ್ತಿಯನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡ ನಂತರ ಭಾರತೀಯ ವಾಯು ರಕ್ಷಣಾ ಸಾಮರ್ಥ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ.
● ಭಾರತೀಯ ಮಾಧ್ಯಮಗಳು ಮೌನ ಈದೀಗ ಇನ್ನಷ್ಟು ಪರಿಣಾಮಕಾರಿಯಾಗಿದೆ. ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮತ್ತಷ್ಟು ವೈರಲ್ ಆದ ಪೊಸ್ಟ್ಗಳನ್ನು ನೀವಿಲ್ಲಿ (ಆರ್ಕೈವ್), ಇಲ್ಲಿ (ಆರ್ಕೈವ್) ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಆದಂಪುರದಲ್ಲಿ ಹಾನಿಗೊಳಗಾಗಿದೆ ಎಂದು 2023ರ ಕ್ರೈಮಿಯಾ ವಾಯುನೆಲೆ ಸ್ಫೋಟದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜುಲೈ 26, 2024 ರಂದು ಉಕ್ರೇನಿಯನ್ ಸುದ್ದಿ ಸಂಸ್ಥೆ ʼಆರ್ಬಿಸಿ ಉಕ್ರೇನ್ʼ ಎಂಬ ವೆಬ್ಸೈಟ್ನಲ್ಲಿ ʼConsequences of explosions at the airfield in Crimea: satellite imagesʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಜುಲೈ 24ರಂದು ಕ್ರೈಮಿಯಾದ ವೆಸೆಲೆ ಗ್ರಾಮದಲ್ಲಿನ ವಾಯುನೆಲೆಯ ಮೇಲೆ ನಡೆದ ದಾಳಿಯನ್ನು ಉಪಗ್ರಹ ಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ ಎಂದು ಕ್ರೈಮಿಯಾ ವರದಿ ಮಾಡಿದೆ. ಪತ್ರಕರ್ತರು ವೆಸೆಲೆ ಗ್ರಾಮದ ವಾಯುನೆಲೆಯಲ್ಲಿ ಸಂಭವಿಸಿದ ಸ್ಫೋಟದ ನಂತರದ ಪರಿಣಾಮಗಳನ್ನು Planet.com ತೆಗೆದ ಉಪಗ್ರಹ ಚಿತ್ರಗಳಲ್ಲಿ ತೋರಿಸಿದ್ದಾರೆ. ʼಜುಲೈ 24 ರ ಬೆಳಿಗ್ಗೆ, ವೆಸೆಲೆ ಗ್ರಾಮದಲ್ಲಿ ಮಿಲಿಟರಿ ವಾಯುನೆಲೆ ಮತ್ತು ಮದ್ದುಗುಂಡು ಡಿಪೋದಲ್ಲಿ ಸ್ಫೋಟಗಳು ಸಂಭವಿಸಿದ ವರದಿಗಳು ಬಂದವು. ರಷ್ಯಾದ ರಕ್ಷಣಾ ಸಚಿವಾಲಯವು 17 ಡ್ರೋನ್ಗಳು ಕ್ರೈಮಿಯಾ ಮೇಲೆ ದಾಳಿ ಮಾಡಿವೆ. ಕ್ರೈಮಿಯದ ಮೇಲಿನ ದಾಳಿಯಿಂದಾಗಿ ರಷ್ಯನ್ನರು ಒಡೆಸಾ ಮತ್ತು ಮೈಕೊಲೈವ್ ಪ್ರದೇಶಗಳ ಮೇಲೆ ಶೆಲ್ ದಾಳಿ ಮಾಡಲು ಬಳಸುವ "ಓನಿಕ್ಸ್" ಕ್ಷಿಪಣಿಗಳ ಒಂದು ಬ್ಯಾಚ್ ನಾಶವಾಗಿರಬಹುದೆಂದು ಕ್ರಿಮಿಯನ್ ಪಕ್ಷಪಾತಿಗಳು ವರದಿ ಮಾಡಿದ್ದಾರೆʼ ಎಂದು ವರದಿಯಾಗಿದೆ.
ವೈರಲ್ ಸ್ಫೋಟದ ಫೋಟೋ ಮತ್ತು RBC ಉಕ್ರೇನ್ ಸುದ್ದಿ ವರದಿಯಲ್ಲಿ ಕಾಣಿಸಿಕೊಂಡಿರುವ ಉಪಗ್ರಹ ಚಿತ್ರಣಗಳ ನಡುವಿನ ಗಮನಾರ್ಹ ಹೋಲಿಕೆಗಳನ್ನು ನೀವಿಲ್ಲಿ ನೋಡಬಹುದು.
ಇದನ್ನೇ ನಾವು ಸುಳಿವಾಗಿ ತೆಗೆದುಕೊಂಡು ಗೂಗಲ್ಲ್ಲಿ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜುಲೈ 20, 2023ರಂದು ʼಸಿಎನ್ಎನ್ʼ ವೆಬ್ಸೈಟ್ನಲ್ಲಿ ʼA plea for Russian spies, overnight strikes and other headlines you should knowʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯ ಪ್ರಕಾರ, ಈ ಸ್ಫೋಟದಿಂದಾಗಿ ಸಾವಿರಾರು ಜನರನ್ನು ಸ್ಥಳಾಂತರಿಸಬೇಕಾಯಿತು ಮತ್ತು ಹತ್ತಿರದ ಪ್ರದೇಶಗಳ ಸಾವಿರಾರು ನಿವಾಸಿಗಳು ಪಲಾಯನ ಮಾಡಬೇಕಾಯಿತು ಮತ್ತು ಅಲ್ಲಿನ ನಾಯಕರು ಸ್ಥಳೀಯ ಹೆದ್ದಾರಿಯಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಲು ಪ್ರೇರೇಪಿಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಲಾಗಿದೆ. ರಷ್ಯಾ ಬೆಂಬಲಿತ ಕ್ರೈಮಿಯ ನಾಯಕ ಸೆರ್ಗೆಯ್ ಅಕ್ಸಿಯೋನೊವ್ ಅವರ ಪ್ರಕಾರ, "ಮಿಲಿಟರಿ ತರಬೇತಿ ಮೈದಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ." ರಷ್ಯಾದ ರಾಜ್ಯ ಮಾಧ್ಯಮದ ಪ್ರಕಾರ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಎರಡು ದಿನಗಳು ತೆಗೆದುಕೊಳ್ಳಬಹುದು ಎಂದು ಕ್ರೈಮಿಯ ಸಂಸತ್ತಿನ ಮುಖ್ಯಸ್ಥರು ಹೇಳಿದ್ದಾರೆʼ ಎಂದು ವರದಿಯಾಗಿದೆ.
ಜುಲೈ 22, 2023ರಂದು ʼದಿ ಎಕನಾಮಿಕ್ಸ್ ಟೈಮ್ಸ್ʼ ವೆಬ್ಸೈಟ್ನಲ್ಲಿ ʼDrone hits Crimean ammunition depot as strikes kill, wound civilians and journalists in Ukraineʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼರಷ್ಯಾದಿಂದ ಭೂಪ್ರದೇಶವನ್ನು ಮರಳಿ ಪಡೆಯುವ ಉಕ್ರೇನ್ ಪ್ರಯತ್ನದಲ್ಲಿ ಭೀಕರ ಹೋರಾಟ ಮುಂದುವರಿದಂತೆ, ಶನಿವಾರ ರಷ್ಯಾದ ಶೆಲ್ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ವರದಿ ಮಾಡಿದ್ದಾರೆ. ಈಶಾನ್ಯ ಖಾರ್ಕಿವ್ ಪ್ರದೇಶದ ಕುಪಿಯಾನ್ಸ್ಕ್ ಪಟ್ಟಣದಲ್ಲಿ 52 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದರೆ, ನೆರೆಯ ಸುಮಿ ಪ್ರಾಂತ್ಯದ ಹಳ್ಳಿಯ ಮೇಲೆ ಗಡಿಯಾಚೆಗಿನ ರಷ್ಯಾದ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.ʼ ಎಂದು ವರದಿಯಾಗಿದೆ.
ಮತ್ತಷ್ಟು ವರದಿಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಆದಂಪುರದಲ್ಲಿ ಹಾನಿಗೊಳಗಾಗಿದೆ ಎಂದು 2023ರ ಕ್ರೈಮಿಯಾ ವಾಯುನೆಲೆ ಸ್ಫೋಟದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.