ಫ್ಯಾಕ್ಟ್ಚೆಕ್: ಪುಣೆಯಲ್ಲಿ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ನ್ನು ಸವಾರನೊಡನೆ ಕ್ರೇನ್ ಮೂಲಕ ಮೇಲಕ್ಕೆತ್ತಿದರೆಂದು ನಾಗ್ಪುರದ ವಿಡಿಯೋ ಹಂಚಿಕೆ
ಪುಣೆಯಲ್ಲಿ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ನ್ನು ಸವಾರನೊಡನೆ ಕ್ರೇನ್ ಮೂಲಕ ಮೇಲಕ್ಕೆತ್ತಿದರೆಂದು ನಾಗ್ಪುರದ ವಿಡಿಯೋ ಹಂಚಿಕೆ

Claim :
ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಪುಣೆ ಪೊಲೀಸರು ಕ್ರೇನ್ ಬಳಸಿ ಸವಾರನ ಜೊತೆಗೆ ಮೇಲೆತ್ತಿದ್ದಾರೆFact :
ವೈರಲ್ ವಿಡಿಯೋ 2022ರಲ್ಲಿ ನಾಗ್ಪುರದಲ್ಲಿ ನಡೆದ ಘಟನೆಯದ್ದು
ಜನಸಂಖ್ಯೆಗಿಂತಲೂ ವಾಹನ ಸಂಖ್ಯೆ ಅತಿಯಾಗಿದ್ದು, ಟ್ರಾಫಿಕ್ ಜಾಮ್ ತಲ್ಲಣ ಹುಟ್ಟಿಸುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ದೇಶದಾದ್ಯಂತ ಸಂಚಾರ ವ್ಯವಸ್ಥೆಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಟ್ರಾಫಿಕ್ ಕಿರಿಕಿರಿ, ಅನಧಿಕೃತ ಪಾರ್ಕಿಂಗ್ ಹಾಗೂ ರಸ್ತೆ ಬದಿಯಲ್ಲಿ ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸುವ ಪ್ರವೃತ್ತಿ ದೇಶದಾದ್ಯಂತ ಪ್ರಮುಖ ಸಮಸ್ಯೆಗಳಾಗಿ ಬೆಳೆಯುತ್ತಿವೆ. ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವುದರಿಂದ ಪ್ರಮುಖ ರಸ್ತೆಗಳು, ಜಂಕ್ಷನ್ಗಳು ಹಾಗೂ ವ್ಯಾಪಾರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನಗಳು ಅಚಾನಕ್ ಕೆಟ್ಟು ನಿಂತಾಗ ಅಥವಾ ನಿಲುಗಡೆಗೆ ಅವಕಾಶವಿಲ್ಲದ ಸ್ಥಳಗಳಲ್ಲಿ ಪಾರ್ಕ್ ಮಾಡಿದಾಗ, ಇತರ ವಾಹನಗಳ ಚಲನವಲನಕ್ಕೆ ಭಾರೀ ಅಡ್ಡಿಯಾಗುತ್ತಿದೆ. ಈ ಪರಿಸ್ಥಿತಿ ಸಂಚಾರಿ ಪೊಲೀಸರಿಗೂ ವಾಹನ ಸಂಚಾರ ನಿಯಂತ್ರಣದಲ್ಲಿ ದೊಡ್ಡ ತಲೆನೋವಾಗುತ್ತಿದೆ.
ಇತ್ತಿಚಿಗೆ ಟೋಯಿಂಗ್ಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೆಬ್ರವರಿ 10, 2026ರಂದು ಫೇಸ್ಬುಕ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಟೋಯಿಂಗ್ ಮಾಡಲು ಬಂದ ಟ್ರಾಫಿಕ್ ಪೊಲೀಸರಿಗೆ ಸ್ಕೂಟರ್ ಬಿಡಲು ಸವಾರ ನಿರಾಕರಿಸಿದ್ದು. ಈ ವೇಳೆ ಪೊಲೀಸರು ಸ್ಕೂಟರ್ ಜೊತೆಗೆ ಮಾಲೀಕನನ್ನು ಕ್ರೇನ್ ನಲ್ಲಿ ಮೇಲಕ್ಕೆತ್ತಿರುವ ಘಟನೆ ಪುಣೆಯಲ್ಲಿ ನಡೆದಿದೆ. ಘಟನೆ ವೇಳೆ ಸವಾರ ಗಾಳಿಯಲ್ಲಿ ತೂರಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಫೆಬ್ರವರಿ 10, 2026ರಂದು ಪ್ರಮುಖ ವೆಬ್ಸೈಟ್ನಲ್ಲಿ ʼpune man refuses to step down from towed scooter, gets lifted by crane in viral videoʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ʼಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಚಿತ್ರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನವನ್ನು ಎಳೆಯುವುದನ್ನು ಪ್ರತಿಭಟಿಸಲು ಅಸಾಮಾನ್ಯ ಮತ್ತು ಅಪಾಯಕಾರಿ ಮಾರ್ಗವನ್ನು ಆರಿಸಿಕೊಂಡ. ಕ್ರೇನ್ ಅದನ್ನು ಗಾಳಿಯಲ್ಲಿ ಎತ್ತಿದರೂ ಅವನು ತನ್ನ ಸ್ಕೂಟರ್ನಲ್ಲಿ ಕುಳಿತು ಕೆಳಗಿಳಿಯಲು ನಿರಾಕರಿಸಿದನುʼ ಎಂದು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆದ ವರದಿಯ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಫೆಬ್ರವರಿ 07 ,2026ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼin a strange and risky incident involving an illegally parked scooter has gone viral online, after a man was reportedly towed along with his own vehicle when authorities attempted to remove it from a no parking zone. The video shows a towing crane lifting a scooter with the owner still sitting on it leaving bystanders shocked as the man clung stubbornly to the seat while suspended several feet above the groundʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇತ್ತೀಚೆಗೆ ಒಂದು ವಿಚಿತ್ರ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ತನ್ನ ಸ್ಕೂಟರ್ ಅನ್ನು ನೋ-ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ. ಅದನ್ನು ತೆಗೆದುಕೊಂಡು ಹೋಗಲು ಟೋಯಿಂಗ್ ವಾಹನ ಬಂದಾಗ, ಅವನು ಸ್ಕೂಟರ್ನಿಂದ ಇಳಿಯಲೇ ಇಲ್ಲ. ಅವನು ಜಿದ್ದಾಗಿ ಸ್ಕೂಟರ್ ಮೇಲೆಯೇ ಕುಳಿತುಕೊಂಡಿದ್ದ. ನಂತರ ಟೋಯಿಂಗ್ ಕ್ರೇನ್ ಸ್ಕೂಟರ್ ಅನ್ನು ಎತ್ತಿತುಆದರೆ ಅವನು ಇನ್ನೂ ಅದರ ಮೇಲೆಯೇ ಕುಳಿತಿದ್ದ. ವೀಡಿಯೊದಲ್ಲಿ ಸ್ಕೂಟರ್ ನೆಲದಿಂದ ಹಲವು ಅಡಿ ಎತ್ತರಕ್ಕೆ ಎತ್ತಲ್ಪಟ್ಟಿರುವುದು ಕಾಣಿಸುತ್ತದೆ. ಆ ವ್ಯಕ್ತಿ ತನ್ನ ಸೀಟ್ನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ, ಸುತ್ತಮುತ್ತಲಿನ ಜನರು ಅದನ್ನು ನೋಡಿ ಆಶ್ಚರ್ಯಪಟ್ಟರು. ಒಟ್ಟಿನಲ್ಲಿ, ಅವನು ಇಳಿಯದೆ ಇದ್ದುದರಿಂದ, ತನ್ನ ಸ್ಕೂಟರ್ ಜೊತೆಗೇ ಗಾಳಿಯಲ್ಲಿ ಎತ್ತಲ್ಪಟ್ಟ ಘಟನೆ ಇದುʼ ಎಂಬ ಶೀರ್ಷಿಕೆನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು (ಆರ್ಕೈವ್)
ಮತ್ತಷ್ಟು ವಿಡಿಯೋವನ್ನು ನೀವಿಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಈ ಘಟನೆ ನಡೆದಿದ್ದು ಪುಣೆಯಲ್ಲಿ ಅಲ್ಲ, ಈ ವಿಡಿಯೋವನ್ನು 2022ರಲ್ಲಿ ನಾಗ್ಪುರದಲ್ಲಿ ಚಿತ್ರೀಕರಿಸಲಾಗಿದ್ದು.
ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಜುಲೈ 26, 2022ರಂದು ʼಎನ್ಡಿಟಿವಿʼ ವೆಬ್ಸೈಟ್ನಲ್ಲಿ ʼकभी देखी है गलत पार्किंग की ऐसी सजा, ट्रैफिक पुलिस ने क्रेन से स्कूटी समेत मालिक को हवा में उठाया!ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಇಂಟರ್ನೆಟ್ನಲ್ಲಿ ಒಂದು ತಮಾಷೆಯ ಒಂದು ವೀಡಿಯೊ ವೇಗವಾಗಿ ವೈರಲ್ ಆಗುತ್ತಿದೆ, ಇದರಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಲಾದ ಸ್ಕೂಟರ್ ಅನ್ನು ಕ್ರೇನ್ ಸಹಾಯದಿಂದ ಗಾಳಿಯಲ್ಲಿ ನೇತುಹಾಕಲಾಗಿದೆ. ವಿಶೇಷ ಎಂದರೆ ಆ ಸ್ಕೂಟರ್ನ ಮಾಲೀಕ ಕೂಡ ಆ ಗಾಡಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ಘಟನೆ ನಾಗ್ಪುರದಲ್ಲಿ ನಡೆದಿದೆʼ ಎಂದು ಬರೆದಿರುವುದನ್ನು ನೋಡಬಹುದು
ಆಗಸ್ಟ್ 18, 2022ರಲ್ಲಿ ಎಬಿಪಿ ವೆಬ್ಸೈಟ್ನಲ್ಲಿ ʼहवा में स्कूटर और स्कूटर पर आदमी, देखिए क्या है ये चक्करʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಂಡಿದ್ದಾರೆ. ಈ ವರದಿಯಲ್ಲಿ ʼಈ ಘಟನೆ ನಾಗ್ಪುರದ ಸದರ್ ಬಜಾರ್ನ ಅಂಜುಮನ್ ಕಾಂಪ್ಲೆಕ್ಸ್ ಬಳಿಯ ನೋ ಪಾರ್ಕಿಂಗ್ ವಲಯದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಮೇಲೆ ಕುಳಿತಿರುವುದನ್ನು ನೋಡಬಹುದು, ಟೋಯಿಂಗ್ ಟ್ರಕ್ ಸ್ಕೂಟರ್ ಅನ್ನು ಎಳೆಯುತ್ತಿದ್ದರೆ, ಆ ವ್ಯಕ್ತಿ ಸ್ಕೂಟರ್ನಲ್ಲಿಯೇ ಇರುತ್ತಾನೆ. ರಿಕವರಿ ಟ್ರಕ್ನಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಾಗ ವಾಹನವನ್ನು ತೆಗೆದುಕೊಂಡು ಹೋಗಲು ಅವರು ನಿರಾಕರಿಸಿದರುʼ ಎಂದು ಬರೆದಿರುವುನ್ನು ನೋಡಬಹುದು
ಜುಲೈ 22, 2022 ರಂದು ಎಬಿಪಿ ಮರಾಠಿ ಭಾಷೆಯ ವರದಿಯಲ್ಲಿ ʼNagpur No Parking: नागपुरात नो पार्कींगची कारवाई, व्हीडिओ व्हायरल ABP Majhaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವರದಿಯ ಪ್ರಕಾರ, ನಾಗ್ಪುರದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ಕೂಟರ್ ಅನ್ನು ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ. ಪೊಲೀಸರು ಸ್ಕೂಟರ್ ಅನ್ನು ಎಳೆಯಲು ಪ್ರಾರಂಭಿಸಿದಾಗ, ಆ ವ್ಯಕ್ತಿ ಅದರ ಮೇಲೆ ಕುಳಿತಿ. ಇದರ ಹೊರತಾಗಿಯೂ, ಪೊಲೀಸರು ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ ಮತ್ತು ಸ್ಕೂಟರ್ ಅನ್ನು ತೆಗೆದುಕೊಂಡು ಹೋದರು ಎಂಬ ಮಾಹಿತಿ ಇದರಲ್ಲಿದೆ
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಪುಣೆಗೆ ಸಂಬಂಧಿಸಿದಲ್ಲ. ಈ ವಿಡಿಯೋ 2022ರಲ್ಲಿ ನಾಗ್ಪುರದಲ್ಲಿ ನಡೆದ ಘಟನೆಯಾಗಿದೆ.

